ಗಂಡು ಮೆಟ್ಟಿದ ಕಲೆ ಬಯಲಾಟ

ಜನಪದ ರಂಗಭೂಮಿಯಲ್ಲಿ ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟಗಳು ಮೊದಲ ಸ್ಥಾನ ಪಡೆಯುತ್ತವೆ. ಇವುಗಳ ನಂತರ ಬಂದ ವಿಶಿಷ್ಟ ರಂಗ ಕಲೆಯೆಂದರೆ, ಬಯಲಾಟ. ಇದು ದ್ರಾವಿಡರ ಕಲ್ಪನೆ. ಆರ್ಯರು ಮೊದಲು ನಾಟಕದ ಕಲ್ಪನೆಯನ್ನು ಹೊಂದಿದ್ದರು. ಆದ್ದರಿಂದಲೇ ಸಂಸ್ಕೃತದಲ್ಲಿ ಕಾಳಿದಾಸಾದಿ ವಿದ್ವಾಂಸರು ನಾಟಕಗಳನ್ನು ರಚಿಸಿದರು. ಆದರೆ ದ್ರಾವಿಡರಲ್ಲಿ ಯಾವುದೇ ಒಂದು ಇಂತಹ ನಿರ್ದಿಷ್ಟ ನಾಟಕದ ಕಲ್ಪನೆಗಳು ಇರಲಿಲ್ಲವೆಂದು ಕಾಣುತ್ತದೆ. ಆದ್ದರಿಂದಲೇ ಯಾವುದೇ ನಾಟಕಗಳು ಇವರಲ್ಲಿ ರಚನೆಯಾಗಲಿಲ್ಲ. ಇಲ್ಲಿ ನಾಟಕದ ರಚನೆಯನ್ನು ಕಾಣುವುದು ಇಪ್ಪತ್ತನೇ ಶತಮಾನದಿಂದೀಚೆಗೆ. ಆದರೆ ಹಿಂದಿನಿಂದಲೂ ಬಯಲಾಗದ ಕಲ್ಪನೆ ದ್ರಾವಿಡರಲ್ಲಿ ಇದ್ದದ್ದು ಮಾತ್ರ ಸ್ಪಷ್ಟವಾಗಿದೆ. ಜನಪದ ರಂಗಭೂಮಿಯಲ್ಲಿ ತೊಗಲು ಗೊಂಬೆ, ಸೂತ್ರದ ಗೊಂಬೆಗಳನ್ನು ಬಿಟ್ಟರೆ ಬಯ ಲಾಟವೇ ಪ್ರಮುಖ. ಬಯಲಾಟವನ್ನು ದಾಸರಾಟ, ಸಣ್ಣಾಟ, ದೊಡ್ಡಾಟ, ಪಾರಿಜಾತ, ಯಕ್ಷಗಾನ ಎಂಬುದಾಗಿ ಐದು ವಿಧಗಳಲ್ಲಿರುವುದನ್ನು ಕಾಣಬಹುದು. ಇವುಗಳಲ್ಲಿ ದಾಸರಾಟಕ್ಕೆ ಆಂಧ್ರದ ಪ್ರಭಾವ ಇದೆ. ಸಣ್ಣಾಟ, ದೊಡ್ಡಾಟ, ಪಾರಿಜಾತ ಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಾಮುಖ್ಯತೆ, ಪ್ರಸಿದಿಟಛಿಯನ್ನು ಪಡೆದುಕೊಂಡಿವೆ. ಯಕ್ಷಗಾನ ಮಾತ್ರ ದಕ್ಷಿಣ ಕರ್ನಾಟಕದಲ್ಲಿ ಇದೆ. ಇದು ಕೂಡ ಪ್ರಾದೇಶಿಕ ಭಿನ್ನತೆಯನ್ನು ಹೊಂದಿದ್ದು ಇಲ್ಲಿ ಮೂಡಲಪಾಯ ಹಾಗು ಪಡುವಲಪಾಯ ಎಂಬುದಾಗಿ ಗುರುತಿಸಿಕೊಂಡಿದೆ. ಪಡುವಲ ಪಾಯ ಕರಾವಳಿಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದರೆ, ಮೂಡಲಪಾಯ ಬಯಲು ಸೀಮೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಬಯಲಲ್ಲಿ ರಂಗಸ್ಥಳವನ್ನು ನಿರ್ಮಾಣ ಮಾಡಿ ಕೊಂಡು ಆಡುವ ಆಟವಾದುದರಿಂದ ಬಯಲಾಟ ಎಂಬ ಹೆಸರನ್ನು ಉಳಿಸಿಕೊಂಡು ಬಂದಿರುವಂತೆ ಕಾಣುತ್ತದೆ. ಮೂಡಲಪಾಯ ಬಯಲಾಟ ಮುಖ್ಯವಾಗಿ ಹಾಸನ, ಮಂಢ್ಯ, ತುಮಕೂರು, ಬೆಂಗಳೂರು ಮುಂತಾದ ಜಿಲ್ಲೆಗಳಲ್ಲಿ ಕ್ಷೀಣಾವಸ್ಥೆಯ ಲ್ಲಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿ ನಲ್ಲಿ ಮಾತ್ರ ತಿಮ್ಮಪ್ಪಚಾರ್‌ ಎಂಬ ಭಾಗವತರು ಇಳಿಯವಯಸ್ಸಿನಲ್ಲಿಯೂ ಉಳಿಸಿಕೊಳ್ಳಲು ಶತಗತಾಯ ಪ್ರಯತ್ನ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಮಾತ್ರ ಇಂದಿಗೂ ಹಳ್ಳಿ ಹಳ್ಳಿಗಳಲ್ಲಿ ತಂಡಗಳನ್ನು ಕಟ್ಟಿ ಉಳಿಸಿಕೊಂಡು ಬರುತ್ತಿದ್ದಾರೆ. ನೂರಾರು ತಂಡಗಳು ಈ ಜಿಲ್ಲೆಯಲ್ಲಿ ಇವೆ. ಪಡುವಲ ಪಾಯ ದಕ್ಷಿಣಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದೆ. ಶಿವಮೊಗ್ಗ , ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಂತಹ ಉತ್ತಮ ಸ್ಥಿತಿಯಲ್ಲಿ ಇಲ್ಲ. ಸಾಗರದಲ್ಲಿ ಮಾತ್ರ ಘಿ‘ಸಂಕೇತಘಿ’ ಕಲಾವಿದರ ತಂಡ ಇದನ್ನು ಉಳಿಸಿ ಕೊಂಡು ಹೋಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಅಲ್ಲಿಯ ದಾಸರಾಟ , ಸಣ್ಣಾಟ ದೊಡ್ಡಾಟ ಪಾರಿ ಜಾತರು ಪ್ರಾದೇಶಿಕ ವೈಶಿಷ್ಟತೆಯನ್ನು ಉಳಿಸಿ ಕೊಳ್ಳುವ ಮೂಲಕ ಈ ಕಲೆಯನ್ನು ಜೀವಂತವಾಗಿ ಬಿಟ್ಟಿವೆ. ಕರಾವಳಿಯ ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂಬುದಾಗ ಎರಡು ಭಾಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲಿ ಅವರಲ್ಲಿಯೇ ಪರಸ್ಪರ ಪೈಪೋಟಿ ಇದೆ. (ಬಯಲಾಟ) ಯಕ್ಷಗಾನಕ್ಕೆ ಕೇರಳದ ಕಥಕ್ಕಳಿಯ ಪ್ರಭಾವವೂ ಇದೆ. ತೆಂಕುತಿಟ್ಟು ಬಯಲಾಟದಲ್ಲಿ ಸಾಹಿತ್ಯ ಪ್ರಾಧಾನ್ಯತೆಯನ್ನು ಪಡೆದು ಕೊಂಡಿದ್ದರೆ, ಬಡಗುತಿಟ್ಟು ಮಾತ್ರ ಇಂತಹ ಮುಕ್ತ ಅವಕಾಶಗಳನ್ನು ಹೊಂದಿಲ್ಲ. ಬಯಲಾಟದಲ್ಲಿ ಹಿಮ್ಮೇಳವೇ ಪ್ರಧಾನ ವಾಗಿರುತ್ತದೆ. ಜನಪದ ರಂಗಭೂಮಿಯಲ್ಲಿ ಪ್ರೇಕ್ಷಕ ಒಂದು ವರ್ಗವಾದರೆ ಇಡೀ ಮೇಳವೇ ಒಂದು ವರ್ಗವಾಗಿರುತ್ತದೆ. ಮೇಳ ಎಂದರೆ ಕಥೆಗಾರಿಕೆ ಮಾಡುವುದು. ಪಾರಿಜಾತ ಮತ್ತು ಪಡುವಲ ಪಾಯಗಳಲ್ಲಿ ಒಬ್ಬನೇ ಭಾಗವತ ಆಟ ಮುಗಿ ಯುವ ತನಕ ಕಥೆಗಾರಿಕೆ ಮಾಡುತ್ತಾನೆ. ದಾಸರಾಟ, ಸಣ್ಣಾಟ, ದೊಡ್ಡಾಟಗಳಲ್ಲಿ ಐದಾರು ಜನ ಸೇರಿ ಕಥೆಗಾರಿಕೆ ಮಾಡುತ್ತಾರೆ. ಹಿಮ್ಮೇಳನ ದಾಸರಾಟದಲ್ಲಿ ಮೂರು ಜನ, ಸಣ್ಣಾಟಗಳಲ್ಲಿ ಐದು ಜನ, ದೊಡ್ಡಾಟದಲ್ಲಿ ಏಳು ಜನ ಇರುತ್ತಾರೆ. ಮೂಡಲಪಾಯದಲ್ಲಿಯೂ ಕೂಡ ಒಬ್ಬನೆ ಭಾಗವತ ಇರುತ್ತಾರೆ. ಆದರೆ ಹಿಮ್ಮೇಳದವರು ಅಗತ್ಯಕನು ಗುಣವಾಗಿರುತ್ತಾರೆ. ಪಡುವಲ ಪಾಯದಲ್ಲಿ ತಾಳ ಮದ್ದಳೆಗಳನ್ನು, ವಾದ್ಯಗಳಾಗಿ ಬಳಸುತ್ತಾರೆ. ಮುಖವೀಣೆ ಮಾತ್ರ ಮೂಡಲ ಪಾಯದಲ್ಲಿ ಬಳಕೆಯಾಗುತ್ತದೆ. ಇನ್ನೆಲ್ಲಿಯೂ ಇರುವುದಿಲ್ಲ. ಮದ್ದಳೆ ಮುಖ ವೀಣೆಗಳೇ ಆಟ ವನ್ನು ನಿಯಂತ್ರಿಸುತ್ತಾ ಹೋಗುವುದು ವಿಶೆಷ. ಪಾತ್ರಧಾರಿಗಳು ಆಯಾ ಪ್ರಾದೇಶಿಕತೆಗೆ ಅನುಗುಣ ವಾಗಿ ತಮ್ಮದೇ ಆದ ಮಟ್ಟವನ್ನು ಬಳಸುತ್ತಾರೆ. (ಮುಂದುವರಿಯುವುದು)

No Comments to “ಗಂಡು ಮೆಟ್ಟಿದ ಕಲೆ ಬಯಲಾಟ”

add a comment.

Leave a Reply

You must be logged in to post a comment.