ಮತ್ತೆ ಬಂತು ವಸಂತ

ಮಾಘದ ಕುಳಿರ್ಗಾಳಿಯಲ್ಲಿ ಅದೇನು ಛಳಿ ! ಸೂರ್ಯನೂ ಆಕಾಶ ದಲಿ ಪೂರ್ವದಿಕ್ಕನ್ನು ಬಿಟ್ಟು ಬೇಗ ಏಳಬೇಕು ಅಂದರೆ ಯೋಚನೆ ಮಾಡು ವನೋ ಏನೋ. ಹಕ್ಕಿಗಳಂತೂ ಗೂಡಿ ನಿಂದ ತಲೆ ಹೊರ ಹಾಕಿ ಸೂರ್ಯ ಇನ್ನೂ ಬಂದಿಲ್ಲ ಎಂದುಕೊಂಡು ಪುನಃ ಗೂಡಿನೊಳಗೆ ಸೇರಿಕೊಳ್ಳುತ್ತವೆ. ಈ ಶಿಶಿರನದಂತೂ ದಾಂಧಲೆ ಇದ್ದದ್ದೇ. ಅದೇನು ಆ ರೀತ್ರಿ ಎಲೆಗಳನ್ನು ಉದುರಿಸು ತ್ತಾನೆ ! ಇನ್ನು ಆ ಛಳಿ! ರಾತ್ರಿ ಬೇಗ ಮಲಗಬೇಕೆನಿಸು ವುದು. ಆದರೂ ಬೆಳಗ್ಗೆ ಬೇಗ ಏಳಲಾಗು ವುದಿಲ್ಲ. ಮಂಜಿನ ತೆರೆ ಭೂಮಿಯ ಮೇಲೆ ಹಾಸಿರುತ್ತದೆ. ರಾತ್ರಿ ಹುಣ್ಣಿಮೆಯ ಚಂದ್ರ, ಪಾಪ ! ಎಲೆ ಕಳಚಿದ ಆ ಬೋಳು ಮರಗಳ ಮಧ್ಯೆ ಹಣಿಕೆ ನೋಡುತ್ತಾನೆ. ನಡುವೆ ಉದು ರುವ ಹೂವಿನ ಪಕಳೆಗಳು ಭೂಮಿಗೆ ಬಣ್ಣದ ಜಮಖಾನ ಹಾಸುತ್ತವೆ. ಫಾಲ್ಗುಣದಲ್ಲಿ ಹೋಳಿಹಬ್ಬ. ಬಣ್ಣ ಎರಚುವ ಸಂಭ್ರಮ. ಹೋಳಿಹಬ್ಬದ -ಎಸ್‌.ಲಲಿತ, ಹಾಸನ. ಬಣ್ಣಗಳು ಬರಿಯ ಬಣ್ಣಗಳಲ್ಲ. ಭಾವನೆ ಗಳೇ ಬಣ್ಣಗಳಲ್ಲಿ ಮುಳುಗಿ ಎದ್ದಂತೆ, ಮನ ಮನಕ್ಕೆ ಬೆಸೆಯುವ ಅಂಟಿನಂತೆ ಕೃಷ್ಣ ಗೋಪಿಯರ ನಡುವಿನ ರಂಗಿನಾಟ, ಮನದಿಂಗಿತ ಮೌನದಿಂಗಿತ ಮೌನವಾಗಿ ದ್ದರೂ ಬಣ್ಣಗಳ ಮೂಲಕ ಮಾತನಾಡಿ ದಂತೆ ಹುಣ್ಣಿಮೆಯ ಆ ಅಲೌಕಿಕ ಬೆಳದಿಂಗಳಿನಲ್ಲಿ ಸಂಗಡಿರೊಡನೆ ಬಣ್ಣದ ಮಿಳಿತ ಒಂದು ಅಪೂರ್ವ ಭಾವರಾಗ ಬಿಂಬಿಸುತ್ತದೆ. ರಂಗನ್ನು ಚೆಲ್ಲಿ ವಸಂತನನ್ನು ಸ್ವಾಗತಿಸುತ್ತದೆ. ಆಗೊಮ್ಮೆ ಈಗೊಮ್ಮೆ ಉದುರುವ ಮಳೆ ಹನಿಗಳು ಕಾದ ಭೂಮಿಗೆ ತಂಪೆರೆದು ಆಕಾಶದ ಕ್ಷೇಮ ಸಮಾಚಾರ ತಿಳಿಸಿ ಮಣ್ಣಿನ ಕಂಪನ್ನು ಹರಡಿ, ಜೊತೆಗೆ ಮುಂಬರುವ ಹಸಿರಿಗೆ, ಚಿಗುರಿಗೆ ನಾಂದಿ ಹಾಡುತ್ತದೆ. ಅದೇ ಕಾಮನಬಿಲ್ಲು ಬಣ್ಣಗಳೇ ಭೂಮಿಗಿಳಿದು ಬಂದಿದೆಯೇನೋ ಎನ್ನುವಂತೆ ಚಿತ್ರ ಬಿಡಿಸಿದ ಆ ಕಲಾವಿದ ಎಲ್ಲಿಂದ ಬಂದ ? ಅವನೇ ವಸಂತ. ಮರದ ಕೊಂಬೆಗಳಲ್ಲೆಲ್ಲಾ ಹೊಸಚಿಗುರುಗಳು ಕವಲೊಡೆದಿವೆ. ಬೆಳಗಿನ ತಂಗಾಳಿಗೆ ಚಿಗುರಿದ ಹೊಸ ಎಲೆಗಳು ನಡುಗುತ್ತವೆ . ಸೂರ್ಯ ರಶ್ಮಿ ಬಿದ್ದರೆ ಎಲ್ಲ ಮರ-ಗಿಡ ಗಳು ಹಸಿರು ಅಂಗಿ ತೊಟ್ಟಂತೆ ಕಾಣುತ್ತವೆ. ಆಗಲೇ ಎಲ್ಲೋ ಕೋಗಿಲೆಯ ಕೂಗು ಕೇಳುತ್ತಿದೆ. ಯಾರನ್ನಾದರೂ ಕರೆಯುತ್ತಿ ದೆಯೋ ಅಥವಾ ನಾನು ಈ ಮರದ ಕೊಂಬೆಯಲ್ಲಿದ್ದೇನೆ ಎಂದು ಹೇಳುತ್ತಿ ದೆಯೋ ಯಾರಿಗೆ ಗೊತ್ತು ? ಎಲ್ಲಿಂ ದಲೋ ಬಂದ ಹಕ್ಕಿಗಳೆಲ್ಲಾ ಮರಗಳಲ್ಲಿ ಮನೆ ಮಾಡಿವೆ. ಬೆಳಗಿನ ಜಾವದಲ್ಲಿ ಮರದ ಎಲೆಗಳೇ ಗೆಜ್ಜೆ ಕಟ್ಟಿ ಕುಣಿದಂತೆ ಹಾಡಿನ ಶಬ್ದ. ಹುಣ್ಣಿಮೆಯ ಚಂದ್ರ ಕೂಡ ಈಗ ಮರದ ಎಲೆಗಳ ಮಧ್ಯದಿಂದ ಇಣುಕಿ ಭೂಮಿಯ ಕಡೆ ನೋಡುತ್ತಾನೆ. ಎಲ್ಲೆಲ್ಲೂ ಅರಳಿರುವ ಹೂಗಳ ಮುಗುಳ್ನಗೆ ಅವುಗಳ ಸುವಾಸನೆಗೆ ಆಕರ್ಷಿತವಾಗಿ ಮಕರಂದ ಹೀರುವ ದುಂಬಿಗಳು, ಚಿಟ್ಟೆಗಳು. ಇವುಗಳ ಕಾಲಿಗಂಟಿದ ಪರಾಗಗಳಿಂದ ಹೊಸ ಸಸ್ಯಗಳ ಸೃಷ್ಟಿ. ನಿಸರ್ಗದ ವಿಸ್ಮಯ ಪ್ರಕಟವಾಗುವುದೇ ವಸಂತದಲ್ಲಿ. ಇದು ಇಡೀ ಪ್ರಕೃತಿಯೇ ಚೇತನ ರೂಪಿಯಾಗಿ ಕಂಗೊಳಿಸುವ ಸಮಯ. ಜಡತೆಗೂ ಚೇತನ ಬರಿಸುವ ಇವನ ಜಾಣ್ಮೆ ವರ್ಣಿಸಲಸದಳ. ಪ್ರಕೃತಿಯೇ ಈ ಜಾತ್ರೆಯಲ್ಲಿ ಪಾಲ್ಗೊಳ್ಳು ವವರು ಎಂದರೆ ಹೊಸ ಚಿಗುರುಗಳು, ಹೂವು-ಹಣ್ಣುಗಳು, ದುಂಬಿ, ಹಕ್ಕಿಗಳು ಚಿಟ್ಟೆ, ಕೋಗಿಲೆಗಳು ಇತ್ಯಾದಿ. ಚೈತ್ರದ ಪ್ರಾರಂಭವೇ ಯುಗಾದಿ. ಬೇವು ಬೆಲ್ಲಗಳ ಸಮ್ಮಿಲನ. ಬಾಗಿಲಿಗೆ ಹಸಿರು ತೋರಣ ಕಟ್ಟಿ ಸಿಹಿ ತಿಂದು ಹಬ್ಬದ ಆಚರಣೆ. ಹೊಸಬಟ್ಟೆ ತೊಟ್ಟು, ಸಂಜೆ ದೇವರದರ್ಶನ ಮಾಡಿ ಪಂಚಾಂಗ ಶ್ರವಣವಾದರೆ ರಾತ್ರಿ ಭೂಮಿಗಿಳಿ ದಿರುತ್ತದೆ. ಚೈತ್ರದ ಹಿರಿಮೆ ಸಾರುವ ಈ ಕಾಲಾವಧಿ ಪೂರ್ತಿ ಪ್ರಕೃತಿಯ ಹಬ್ಬ ದಂತೆಯೇ ಕಂಗೊಳಿಸುತ್ತದೆ. ಪ್ರತಿಬಾರಿ ವಸಂತ ಬಂದಾಗಲೂ ಏನೋ ಹೊಸತನ. ಪ್ರಕೃತಿಯಲ್ಲಿ ಹೊಸ ಹಿಗ್ಗು, ನವಚೇತನ. ಈ ಚೇತನವೇ ಇತರರಿಗೂ ಪ್ರೇರಕಶಕ್ತಿ. ನಿರುತ್ಸಾಹಿಗಳಲ್ಲಿಯೂ ಜಡತ್ವವನ್ನೂ ಕಳೆದು ಉತ್ಸಾಹವನ್ನು ತುಂಬಿ ಜೀವನದ ಸಾರವನ್ನು ತುಂಬಿ ತುಂಬಿ ಕುಡಿಯುವಂತೆ ಪ್ರೇರೇಪಿಸುತ್ತದೆ. ಇಳೆಯೇ ಸೌಂದರ್ಯ ಪಡೆದು ಮತ್ತಳಾಗಿ ಉಯ್ಯಾಲೆಯಾಡಿದಂತೆ ಭಾಸವಾಗುತ್ತದೆ. ಈ ಎಲ್ಲ ಸಂಭ್ರಮದಲ್ಲಿ ಭಾಗಿ ಗಳಾಗಲು ನಾವು ಮಾಡಬೇಕಾದ ಕೆಲಸ ಎಂದರೆ ಸಸಿ ನೆಟ್ಟು ಹಸಿರನ್ನು ಪೋಷಿಸಿ ಶುದಟಛಿಗಾಳಿ ಪಡೆಯಲು ನೆರವಾಗುವುದು ಮತ್ತು ಪರಿಸರವನ್ನು ಶುಚಿಯಾಗಿಟ್ಟು ನೈರ್ಮಲ್ಯವನ್ನು ಕಾಪಾಡುವುದು. ಈ ಸಸಿಗಳು ಬೆಳೆದು ಹೆಮ್ಮರವಾಗಿ ಹೂವು, ಕಾಯಿ, ಹಣ್ಣು ಬಿಟ್ಟು ತೂಗಿ ನೆರಳು ಕೊಟ್ಟು ಹಕ್ಕಿಗಳಿಗೆ ಆಶ್ರಯವಾದಾಗ ಪ್ರಕೃತಿಯ ಹಬ್ಬದಲ್ಲಿ ನಾವೂ ಪಾಲ್ಗೊಂಡಂತೆ.

No Comments to “ಮತ್ತೆ ಬಂತು ವಸಂತ”

add a comment.

Leave a Reply

You must be logged in to post a comment.