ಕುಸಿದ ಟೀಮ್‌ ಇಂಡಿಯಾಕ್ಕೆ ಫಾಲೋ-ಆನ್‌ : ಸೋಲಿನ ಭೀತಿ

ನೇಪಿಯರ್‌ : ಟೀಮ್‌ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ೩೦೫ ಕ್ಕೆ ಸರ್ವಪತನ ಕಂಡಿದ್ದು ನಿರೀಕ್ಷೆಯಂತೆ ನ್ಯೂಜಿಲೆಂಡ್‌ ಫಾಲೋ ಆನ್‌ ಹೇರಿದೆ. ರಾಹುಲ್‌ ದ್ರಾವಿಡ್‌ (೮೩), ಸಚಿನ್‌ ತೆಂಡೂಲ್ಕರ್‌ (೪೯) ಮತ್ತು ವಿವಿಎಸ್‌ ಲಕ್ಷ್ಮಣ್‌(೭೬) ಹೊರತುಪಡಿಸಿ ಉಳಿದ ದಾಂಡಿಗರು ಅಲ್ಪ ಮೊತ್ತಕ್ಕೆ ಕೈ ಕೊಟ್ಟ ಕಾರಣ ಭಾರತಕ್ಕೆ ಚೇತರಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. ಶನಿವಾರ ಕೂಡ ನೇಪಿಯರ್‌ನ ಅಂಗಳದಲ್ಲಿ ನಡೆದದ್ದು ಕಿಮೀಸ್‌ ಬೌಲರುಗಳದ್ದೇ ಆಟ. ನ್ಯೂಜಿಲೆಂಡ್‌- ಭಾರತ ನಡುವಿನ ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನ ಮೂರನೇ ದಿನದಾಟ ಶನಿವಾರ ನೇಪಿಯರ್‌ನ ಮೆಕ್‌ಲೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯಿತು. ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ ೯ ವಿಕೆಟ್‌ ನಷ್ಟಕ್ಕೆ ೬೧೯ ರನ್‌ ಗಳಿಸಿದ್ದಾಗ ಡಿಕ್ಲೇರ್‌ ಮಾಡಿಕೊಂಡಿತ್ತು. ಬೃಹತ್‌ ಮೊತ್ತದ ಹಿಂದೆ ಬಿದ್ದ ಟೀಮ್‌ ಇಂಡಿಯಾ ೩೧೪ ರನ್‌ಗಳ ಹಿನ್ನಡೆ ಅನುಭವಿಸಿದ್ದು, ಎರಡನೇ ಇನ್ನಿಂಗ್ಸ್‌ ಫಾಲೋ-ಆನ್‌ನೊಂದಿಗೆ ಆಟ ಆರಂಭಿಸಿದೆ. ಇಲ್ಲೂ ಪತನದ ಹಾದಿಯನ್ನು ಮುಂದುವರಿಸಿರುವ ಭಾರತ ವೀರೇಂದ್ರ ಸೆಹ್ವಾಗ್‌ ವಿಕೆಟ್‌ ಕಳೆದುಕೊಂಡು ೪೭ ರನ್‌ಗಳಿಸಿದೆ. ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಇನ್ನೂ ೨೬೭ ರನ್‌ಗಳ ಅಗತ್ಯವಿದೆ. ರಾಹುಲ್‌ ದ್ರಾವಿಡ್‌ (೨೧) ಮತ್ತು ಸಚಿನ್‌ ತೆಂಡೂಲ್ಕರ್‌ (೦) ಶುಕ್ರವಾರ ದಿನದಾಟ ಅಂತ್ಯಗೊಳಿಸಿದಾಗ ಭಾರತ ೭೯ ಕ್ಕೆ ೩ ವಿಕೆಟ್‌ ಕಳೆದು ಕ ೆ ೂ ಂ ಡಿ ತ ು ್ತ . ದ್ರಾವಿಡ್‌ ಮತ್ತು ಸಚಿನ್‌ ತಾಳ್ಮೆಯುತ ಪ್ರದರ್ಶನ ನೀಡಿದ ರಾದರೂ ಶತಕದತ್ತ ಸಾಗಲು ಸಾಧ್ಯ ವ ಾ ಗ ಲಿ ಲ ್ಲ . ದ್ರಾವಿಡ್‌ ೨೦೬ ಎಸೆತಗಳಿಂದ ೮೩ ಹಾಗೂ ಸಚಿನ್‌ ೬೫ ಎಸೆತಗಳಿಂದ ೪೯ ರನ್‌ ದಾಖಲಿಸಿ ದ್ದಾಗ ಕ್ರಮವಾಗಿ ಜೆಸ್ಸಿ ರೈಡರ್‌ ಮತ್ತು ಜೀತನ್‌ ಪಟೇಲ್‌ ಎಸೆತಕ್ಕೆ ವಿಕೆಟ್‌ ಒ ಪಿ ್ಪ ಸಿ ದ ರ ು ದಿನೇಶ್‌ ಕಾರ್ತಿಕ್‌ ೬ರನ್‌ ಮಾಡಿದ್ದಾಗ ಹಾಗೂ ಯುವರಾಜ್‌ ಖಾತೆ ತೆರೆಯುವ ಮೊದಲೇ ಕ್ರಿಸ್‌ ಮಾರ್ಟಿನ್‌ ಎಸೆತಕ್ಕೆ ಬಲಿಯಾದರು. ಅರ್ಧ ಶತಕ ದಾಖಲಿಸಿ (೭೬) ತಂಡಕ್ಕೆ ಆಸರೆಯಾಗಿದ್ದ ಲಕ್ಷ್ಮಣ್‌ ಕೂಡ ಔಟಾದರು. ನಂತರ ಬಂದ ಬಾಲಂಗೋಚಿಗಳಾದ ಹರಭಜನ್‌ (೧೮), ಜಹೀರ್‌ ಖಾನ್‌ (೮) ಅವರನ್ನು ಓಬ್ರಿಯಾನ್‌ ಔಟ್‌ ಮಾಡಿದರು. ಭಾರತ ೯೩.೫ ಓವರುಗಳಲ್ಲಿ ೩೦೫ ರನ್‌ ಗಳಿಸಿ ಸರ್ವಪತನ ಕಂಡಿತು. ಆ ಮೂಲಕ ಸೆಹ್ವಾಗ್‌ ಪಡೆ ೩೧೪ ರನ್‌ಗಳ ಹಿನ್ನಡೆ ಅನುಭವಿಸಿತು. ೧೧೫ ರನ್‌ಗಳ ಅಂತರದಿಂದ ನ್ಯೂಜಿಲೆಂಡ್‌ ಟೀಮ್‌ ಇಂಡಿಯಾದ ಮೇಲೆ ಫಾಲೋಆನ್‌ ಹೇರಿದೆ. ಫಾಲೋಆನ್‌ ತಪ್ಪಿಸಿ ಕೊಳ್ಳಲು ಭಾರತ ೪೧೯ ರನ್‌ ಗಳಿಸಬೇಕಿತ್ತು. ನ್ಯೂಜಿಲೆಂಡ್‌ ಪರ ಕ್ರಿಸ್‌ ಮಾರ್ಟಿನ್‌ ೩, ವೆಟ್ಟೋರಿ, ಓಬ್ರಿಯಾನ್‌, ಪಟೇಲ್‌ ತಲಾ ಎರಡೆ ರಡು ಹಾಗೂ ರೈಡರ್‌ ಒಂದು ವಿಕೆಟ್‌ ಪಡೆದರು. ಫಾಲೋ-ಆನ್‌ ಪಡೆದು ಕೊಂಡು ಬ್ಯಾಟಿಂಗ್‌ ಆರಂಭಿಸಿರುವ ಭಾರತ ಆರಂಭದಲ್ಲೇ ವೀರೇಂದ್ರ ಸೆಹ್ವಾಗ್‌ರನ್ನು ಕಳೆದುಕೊಂಡಿತು. ಅವರು ೨೨ ರನ್‌ ಗಳಿಸಿದ್ದಾಗ ಜೀತನ್‌ ಪಟೇಲ್‌ ಎಸೆತಕ್ಕೆ ಬಲಿಯಾದರು. ಗೌತಮ್‌ ಗಂಭೀರ್‌ (೧೪) ರಾಹುಲ್‌ ದ್ರಾವಿಡ್‌ (೧೧) ಕ್ರೀಸಿನಲ್ಲಿದ್ದಾರೆ. ದಿನದಂತ್ಯಕ್ಕೆ ಭಾರತ ೧೭ ಓವರುಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ ೪೭ ರನ್‌ ಗಳಿಸಿದೆ. ಸ್ಕೋರ್‌ : ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ ೬೧೯/೯ (ಡಿಕ್ಲೇರ್‌) ಭಾರತ ಮೊದಲ ಇನ್ನಿಂಗ್ಸ್‌ ೩೦೫ ಬ್ಯಾಟಿಂಗ್‌ : ಗೌತಮ್‌ ಗಂಭೀರ್‌ -೧೬, ವೀರೇಂದ್ರ ಸೆಹ್ವಾಗ್‌ -೩೪, ರಾಹುಲ್‌ ದ್ರಾವಿಡ್‌- ೮೩, ಇಶಾಂತ್‌ ಶರ್ಮಾ- ೦, ಸಚಿನ್‌ ತೆಂಡೂಲ್ಕರ್‌ -೪೯, ವಿವಿಎಸ್‌ ಲಕ್ಷ್ಮಣ್‌ -೭೬, ಯುವರಾಜ್‌ ಸಿಂಗ್‌-೦, ಕಾರ್ತಿಕ್‌-೬, ಹರಭಜನ್‌ ಸಿಂಗ್‌ -೧೮, ಜಹೀರ್‌ ಖಾನ್‌ -೮, ಮುನಾಪ್‌ ಪಟೇಲ್‌ -೦. ವಿಕೆಟ್‌ ಪತನ : ೧-೪೮ (ಸೆಹ್ವಾಗ್‌, -೯ ಓವರ್‌), ೨-೭೩ (ಗಂಭೀರ್‌, ೧೭ ಓವರ್‌), ೩-೭೮ (ಇಶಾಂತ್‌, ೨೧.೨ ಓವರ್‌), ೪-೧೬೫ (ಸಚಿನ್‌, ೪೫.೧ ಓವರ್‌), ೫-೨೪೬ (ದ್ರಾವಿಡ್‌, ೭೮ ಓವರು), ೬-೨೫೩ (ಯುವರಾಜ್‌, ೮೨.೨ ಓವರು), ೭.೨೭೦ (ಕಾರ್ತಿಕ್‌, ೯೦.೧ ಓವರು), ೮-೨೯೧ (ಲಕ್ಷ್ಮಣ್‌, ೯೨.೩ ಓವರು), ೯-೩೦೫ (ಹರಭಜನ್‌, ೯೩.೪ ಓವರು), ೧೦ (ಜಹೀರ್‌, ೯೩.೫ ಓವರು) ಬೌಲಿಂಗ್‌ : ಕ್ರಿಸ್‌ ಮಾರ್ಟಿನ್‌ ೨೪-೫-೮೯-೩, ಫ್ರಾಂಕ್ಲಿನ್‌ ೧೫-೪- ೩೪-೦. ಡೇನಿಯಲ್‌ ವೆಟ್ಟೋರಿ ೧೯-೫-೪೫-೨, ಇಯಾನ್‌ ಓಬ್ರಿ ಯಾನ್‌ ೧೩.೫-೪-೬೬-೨, ಜೀತನ್‌ ಪಟೇಲ್‌ ೧೯-೨-೬೦-೨, ರೈಡರ್‌ ೩-೧-೩-೧.

No Comments to “ಕುಸಿದ ಟೀಮ್‌ ಇಂಡಿಯಾಕ್ಕೆ ಫಾಲೋ-ಆನ್‌ : ಸೋಲಿನ ಭೀತಿ”

add a comment.

Leave a Reply

You must be logged in to post a comment.