ಹಳಸಾಗುತ್ತಿರುವ ಚಿಂತನೆ-ಅಭಿವೃದಿಟಛಿಯಾಗದ ಹಳ್ಳಿಗಳು

ನಮ್ಮ ನಾಡು, ನಮ್ಮ ಜನ ಹೇಗಿರಬೇಕು ಎಂಬುದನ್ನು ತುಮಕೂರಿನ ಸಿ.ಸಿ. ಪಾವಟೆ ಅವರು ವಿವರವಾಗಿ ಬಿಡಿಸಿ ಹೇಳಬಲ್ಲರು. ಸುಮಾರು ೭೦೦೦ ಹಳ್ಳಿಗಳನ್ನು ಸುತ್ತಾಡಿರುವ ಇವರು ೩೦೦೦ ಉಪನ್ಯಾಸಗಳನ್ನು ನೀಡಿದ್ದಾರೆ. ಈಚೆಗೆ ಹಾಸನ ಜಿಲ್ಲೆಯಲ್ಲಿ ಹಮ್ಮಿಕೊಂಡ ಸಮಾರಂಭಗಳಿಗೆ ಆಗಮಿಸಿದ್ದ ಪಾವಟೆ ಅವರು ಕೆಲವು ವಿವರಗಳನ್ನು ನೀಡಿದರು. ಅವರು ಗ್ರಾಮೀಣ ಜನರು ಸುಖವಾಗಿ ಬದುಕುವ ಮಾರ್ಗಗಳ ಬಗ್ಗೆ ಹೀಗೆ ಪ್ರಸ್ತಾಪಿಸುತ್ತಾರೆ. ಈಗ್ಗೆ ೨೫ ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಯಾರು ಸಾಲಗಾರರಾಗಿರಲಿಲ್ಲ. ಈಗ ಎಲ್ಲರೂ ಸಾಲಗಾರರಾಗಿದ್ದಾರೆ. ಸಾಲ ಮಾಡಿ ಮಾಡಿ ಶ್ರೀಮಂತರಾಗಿದ್ದಾರೆ. ಹೀಗಾಗಿ ಹಳ್ಳಿಗಳು ಅಭಿವೃದಿಟಛಿಯಾಗದೇ ಅವನತಿ ಆಗುತ್ತಿವೆ. ಸ್ವಾವಲಂಬನೆ ಎಂಬುದು ದೂರವಾಗಿದೆ. ಹಳ್ಳಿಗಳ ಪರಿಸ್ಥಿತಿಯು ಹದಗೆಡುತ್ತಿದೆ. ಇವತ್ತು ಹಳ್ಳಿಗಳಲ್ಲಿ ೩೫ ವರ್ಷದ ಒಳಗಿರುವ ಯುವಕರು ಕೃಷಿ ಕೆಲಸ ಮಾಡುತ್ತಿಲ್ಲ. ಯುವತಿಯರು ನಾಜೂಕಾಗುತ್ತಿದ್ದಾರೆ. ದುಡಿಯುವ ಜನ ಕೃಷಿಯಲ್ಲಿ ಕಮ್ಮಿಯಾಗುತ್ತಿರುವುದ ರಿಂದ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆಗೆ ತೊಂದರೆ ಆಗಲಿದೆ. ಎಲ್ಲೂ ಕಾಳುಗಳನ್ನು ಕಾರ್ಖಾನೆಗಳಲ್ಲಿ ಸೃಷ್ಟಿ ಮಾಡಲು ಆಗಲ್ಲ. ಇದಕ್ಕೆ ಮಣ್ಣೇ ಬೇಕು. ಹಳ್ಳಿಗಳಿಂದ ಇಂದು ಹಾಲು, ಹಣ್ಣು, ತರಕಾರಿ, ಕಾಳು ಮುಂತಾದವುಗಳೆಲ್ಲಾ ಪೇಟೆಗೆ ಹೋಗುತ್ತವೆ. ಆದರೆ ಹಳ್ಳಿಗೆ ಇಂದು ಏನೆಲ್ಲಾ ಪದಾರ್ಥಗಳು ಸೇರುತ್ತಿದ್ದು, ಇದು ಆರ್ಥಿಕ ಹೊರೆಗೆ ಕಾರಣವಾಗಿದೆ. ರಾಸಾಯನಿಕ ಗೊಬ್ಬರ, ವಿಷಗಳು, ಪೌಡರ್‌, ಶ್ಯಾಂಪು, ಸಾಬೂನು, ಹಲ್ಲುಜ್ಜುವ ಪೇಸ್ಟ್‌, ಬೀಡಿ, ಸಿಗರೇಟು, ಮದ್ಯ ಮುಂತಾದವು ಹಳ್ಳಿಗರ ಹಣವನ್ನು ಖಾಲಿ ಮಾಡುತ್ತಿವೆ ಎಂದಿರುವ ಸಿ.ಸಿ. ಪಾವಟೆ ಅವರು, ಇಂದು ಹಳ್ಳಿಗಳಲ್ಲಿ ಹಲವರು ಮದ್ಯ ಕುಡಿದು-ಕುಡಿದು ಹಾಳಾಗಿದ್ದಾರೆ. ಕುಡಿಸಿದವರು ಏಳ್ಗೆಯಾಗುತ್ತಿದ್ದಾರೆ. ಇದರಂತೆ ಗುಟ್ಕಾ, ತಂಬಾಕು, ಜಗಿದು-ಜಗಿದು ಆರೋಗ್ಯವನ್ನು ಹಳ್ಳಿಗರು ಕೆಡಿಸಿಕೊಳ್ಳುತ್ತಿದ್ದಾರೆ. ಇಂದು ಗುಟ್ಕಾದ ಬೆಲೆ ಎಷ್ಟು? ೨ ಗ್ರಾಂಗೆ ೨ ರೂಪಾಯಿ. ಅಂದರೆ ಒಂದು ಕಿ.ಗ್ರಾಂಗೆ ೧೦೦೦ ರೂಪಾಯಿ. ಆದರೆ ನಮ್ಮ ರೈತರ ಅಡಿಕೆಗೆ ಬೆಲೆ ಎಷ್ಟು? ೫೦ ಮಿಲಿ ಟಾನಿಕ್‌ನ ಬೆಲೆ ಎಷ್ಟು? ಇದೂ ಒಂದು ಲೀಟರ್‌ಗೆ ೪೦೦೦-೫೦೦೦ ರೂಪಾಯಿ ಆಗುತ್ತೆ. ಆದ್ರೆ ಅದ್ರಲ್ಲಿ ಏನು ಇರುತ್ತೆ? ನಮ್ಮಲ್ಲೇ ಸಿಗುವ ಹಾಲು, ಜೇನುತುಪ್ಪ, ತುಪ್ಪಕ್ಕೆ ಎಷ್ಟಿದೆ ಬೆಲೆ? ಆರೋಗ್ಯಕ್ಕೆ ಎಂದು ಸೇವಿಸುವ ಟಾನಿಕ್‌ಗಳಿಗಿಂತ ನಮ್ಮೂರಲ್ಲೇ ಲಭಿಸುವ ಶಕ್ತಿವರ್ಧಕಗಳನ್ನು ನಾವು ಬಳಸುವತ್ತಾ ಸರಿಯಾದ ಗಮನ ಕೊಡಬೇಕು. ಆಗಲೆ ನಮಗೆ ಬದುಕು ಹೊರೆ ಆಗುವುದಿಲ್ಲ ಎಂದು ಸಿ.ಸಿ.ಪಾವಟೆ ಅವರು ಹೇಳುತ್ತಾರೆ. ಹಿಂದೆಲ್ಲಾ ಹಳ್ಳಿಗಳಲ್ಲಿ ಯಾವಾಗ ಹೋದರೂ ಹಾಲು, ಮೊಸರು, ಮಜ್ಜಿಗೆ ಸಿಗುತ್ತಿತ್ತು. ಈಗ ಇವತ್ತು ಬೆಳಿಗ್ಗೆ ೮ ಗಂಟೆಯ ಬಳಿಕ ಹೋದ್ರೆ ಹಾಲೇ ಸಿಗಲಿಕ್ಕಿಲ್ಲ. ಹಣಕ್ಕಾಗಿ ಬೆಲೆ ಕೊಟ್ಟ ಹಳ್ಳಿಗರು ತಮ್ಮ ಆರೋಗ್ಯ ರಕ್ಷಿಸುವ ಹಾಲನ್ನೇ ಮಾರುತ್ತಾ ಬಂದು ಆರೋಗ್ಯವನ್ನು -ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಮಹಿಳೆಯರು ಮುಖಕ್ಕೆ ಹಚ್ಚಿಕೊಳ್ಳುವ ಕ್ರೀಮ್‌ಗಳ ಬೆಲೆ ಎಷ್ಟಾಗಿದೆ? ಎಂದು ಪ್ರಶ್ನಿಸಿರುವ ಸಿ.ಸಿ.ಪಾವಟೆ ಅವರು ಒಂದು ಕಿ.ಗ್ರಾಂ. ಕ್ರೀಮ್‌ಗೆ ಇಂದು ೨೦೦೦ ರೂಪಾಯಿ ಆಗುತ್ತದೆ. ಆದ್ರೆ ಹಳ್ಳಿಗಳಲ್ಲೇ ಲಭಿಸುವ ಕೆನೆ ಭರಿತ ಹಾಲನ್ನು ಮೊಸರು ಮಾಡಿ ನಾಲ್ಕಾರು ನಿಂಬೆ ಹನಿಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿಕೊಂಡ್ರೆ ಮುಖದ, ಮೈಯ ಕಾಂತಿಯು ಸುಧಾರಣೆಯಾಗುತ್ತದೆ. ಇದರಂತೆ ಇವತ್ತು ಒಂದು ಕಿ.ಗ್ರಾಂ. ಚಾಕಲೇಟ್‌ನ ಬೆಲೆ ೧೦೦೦ ರೂಪಾಯಿವರೆಗೂ ಆಗುತ್ತೆ. ಆದ್ರೆ ಕೊಬ್ಬರಿಯನ್ನು ಮಿಠಾಯಿ ಮಾಡಿ ಮಕ್ಕಳಿಗೆ ಕೊಟ್ರೆ ಆಗೋದಿಲ್ವೆ? ಇದರಂತೆ ತಲೆಗೆ ಹಚ್ಚಿಕೊಳ್ಳುವ ತೈಲ, ಅಡುಗೆಗೆ ಬಳಸುವ ಎಣ್ಣೆ ಮುಂತಾದವುಗಳಿಗೆ ಗ್ರಾಮೀಣ ಪ್ರದೇಶಗಳಲ್ಲೇ ಮೂಲಗಳಿವೆ. ತಂಪು ಪಾನೀಯಗಳ ಬದಲಿಗೆ ಮಜ್ಜಿಗೆ, ಅಂಬಲಿ, ಎಳನೀರು, ಹಣ್ಣಿನ ಶರಬತ್ತು ಮುಂತಾದವುಗಳ ಸೇವನೆಯು ಹಿತವಲ್ಲವೇ? ನಾನಾ ರೀತಿಯ ಕಾಳುಗಳನ್ನು ಮೊಳಕೆ ಭರಿಸಿ, ಹುರಿದು, ಪುಡಿ ಮಾಡಿ ಬೆಲ್ಲದೊಂದಿಗೆ ಬೆರಸಿ ಮಕ್ಕಳು, ಮನೆಮಂದಿಯಲ್ಲಾ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ಇದು ಬಿಟ್ಟು ಪೊಟ್ಟಣ, ಡಬ್ಬಿಗಳಲ್ಲಿ ಸಿಗುವ ಪುಡಿಗಳನ್ನು ಅಧಿಕ ಬೆಲೆ ಕೊಟ್ಟು ತಂದು ಬಳಸಿದರೆ ದುಡಿದ ಹಣ ಎಲ್ಲಿ ಹೋಗುತ್ತೆ? ಹಲ್ಲುಜ್ಜುವ ಪೇಸ್ಟ್‌, ಮೈಗೆ ಹಚ್ಚಿಕೊಳ್ಳುವ ಸಾಬೂನುಗಳಿಗೆ ನಮ್ಮಲ್ಲೇ ಪರ್ಯಾಯ ಪದಾರ್ಥಗಳಿವೆ. ಅವುಗಳತ್ತ ಜನ ಗಮನ ಕೊಡಬೇಕು ಎಂದು ಸಿ.ಸಿ.ಪಾವಟೆ ಅವರು ತಿಳಿಸಿದ್ದಾರೆ. ಹಳ್ಳಿಗಳಲ್ಲಿ ಈ ಹಿಂದೆ ಚರಂಡಿಗಳೇ ಇರಲಿಲ್ಲ. ಅಂದರೆ ಎಲ್ಲರ ಮನೆಯ ನೀರು ಅಲ್ಲಲ್ಲೇ ಇಂಗುತ್ತಿತ್ತು. ಅಲ್ಲಲ್ಲೇ ಗಿಡಗಳನ್ನು ಬೆಳೆದುಕೊಳ್ಳುತ್ತಿದ್ದರು. ಈಗ ಎಲ್ಲಿ ನೋಡಿದರೂ ಗಲೀಜು, ನೀರಿನ ದುರ್ಬಳಕೆ, ನಿತ್ಯವೂ ರಾಸಾಯನಿಕಗಳು ನೀರಲ್ಲಿ ಸೇರುತ್ತಿರುವುದರಿಂದ ಮಣ್ಣು ಮಲೀನವಾಗುತ್ತಿದೆ. ಎಷ್ಟೋ ಸಾರಿ ಸ್ನಾನ ಮಾಡುವಾಗ ಸೋಪೇ ಬೇಕಾಗಿಲ್ಲ. ನೀರೇ ಕೊಳೆಯ ಶುದಿಟಛೀಕಾರಕ ವಾಗಿರುವುದರಿಂದ ಇನ್ನೇನೂ ಬೇಡ. ಹೀಗೆ ನಮ್ಮ ಮನಸ್ಸು, ಮನೆಗಳು ಸ್ವಾಭಿಮಾನದತ್ತ ಸಾಗಬೇಕು. ಸ್ವಾವಲಂಬಿಗಳಾಗಬೇಕು. ಆಗ ನಮ್ಮ ದುಡಿಮೆಯ ದುಡ್ಡು ಎಲ್ಲೂ ಹೋಗಲ್ಲ. ನಮ್ಮ ಆರೋಗ್ಯ, ಶಕ್ತಿ ಬಹುಕಾಲ ಇರುತ್ತದೆ. ಈ ಮೂಲಕ ನಮ್ಮ ಮನಸ್ಸನ್ನು , ನಮ್ಮ ಮನೆಗಳನ್ನು , ನಮ್ಮ ನಾಡನ್ನು ಸಮೃದಟಛಿಗೊಳಿಸ ಬಹುದು ಎಂದು ವಿವರಿಸಿದರು.

No Comments to “ಹಳಸಾಗುತ್ತಿರುವ ಚಿಂತನೆ-ಅಭಿವೃದಿಟಛಿಯಾಗದ ಹಳ್ಳಿಗಳು”

add a comment.

Leave a Reply

You must be logged in to post a comment.