ಜನತಾಧ್ವನಿ : ಹನುಮೇಗೌಡರಿಗೆ ದಲಿತರ ಮತ ಇಲ್ಲ

ಮಾನ್ಯರೆ, ಹಾಸನ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಸಮಯದಲ್ಲಿ ಕೆ.ಹೆಚ್‌. ಹನುಮೇಗೌಡರು ದಲಿತರ ಪರವಾದ ಅಭಿವೃದಿಟಛಿಯ ಕಡೆ ಕಿಂಚಿತ್ತು ಯೋಚಿಸಿದವರಲ್ಲ ? ಹಾಸನದ ಡೈರಿಯ ಅಧ್ಯಕ್ಷರಾಗಿದ್ದ ಅವಧಿ ಯಲ್ಲಿ ಹನುಮೇಗೌಡರು ದಲಿತರಿಗೆ ನೌಕರಿಯನ್ನು ಕೊಡಿಸಲಿಲ್ಲ. ಅವರ ಊರಿನ ಪಕ್ಕ ಬ್ಯಾಡರಹಳ್ಳಿಯ ದಾಸಯ್ಯ ಎಂಬ ನಿರ್ಗತಿಕ ದಲಿತನಿಗೆ ದರಖಾಸ್ತು ಮೂಲಕ ಮಂಜೂರಿಯಾಗಿದ್ದ ಸುಮಾರು ೪-೦೦ ಎಕರೆಯಷ್ಟು ಭೂಮಿಯನ್ನು ಇವರು ಲಪಟಾಯಿಸಿ ಕೊಂಡಿದ್ದು ಈ ಕಾರಣದಿಂದ ದಾಸಯ್ಯನ ಕುಟುಂಬ ಊರನ್ನೇ ತೊರೆದಿದೆ. ೮೦ ರ ದಶಕದಲ್ಲಿ ಎರಡನೇ ಬಾರಿ ಶಾಸಕರಾಗಿದ್ದ ಕಾಲಘಟ್ಟದಲ್ಲಿ ಬಸವಲಿಂಗಯ್ಯ ಎಂಬ ದಲಿತ ಅಧಿಕಾರಿ ಹಾಸನದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಅಧೀಕ್ಷಕರ ಇಂಜಿನಿಯರ್‌ರವರು ಶಾಸಕ ಹನುಮೇಗೌಡರು ಹೇಳಿದ ಜನವಿರೋಧಿ ಕೆಲಸವನ್ನು ಮಾಡಲಿಲ್ಲವೆಂಬ ಕಾರಣದಿಂದ ಸಾರ್ವಜನಿಕರು ತಿರುಗುವ ರಸ್ತೆಯಲ್ಲಿ ಪ್ರಾಮಾಣಿಕ ಅಧಿಕಾರಿ ಬಸವಲಿಂಗಯ್ಯನವರನ್ನು ಅಡ್ಡಗಟ್ಟಿ ಘಿ‘ ಹೇ ಘಿ’ ನಿನ್ನ ಜಾತಿ ಬುದಿಟಛಿಯ ತೋರಿಸಿ ಬಿಟ್ಟಾ ಘಿ’ ಎಂಬ ಜಾತಿ ನಿಂದಕ ಭಾಷೆಯಿಂದ ಹೀಯಾಳಿಸಿದ್ದು, ನಂತರದಲ್ಲಿ ದಲಿತ ಸಂಘರ್ಷ ಸಮಿತಿ ಮಾನಸಿಕವಾಗಿ ಅಘಾತಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದ ಅಧೀಕ್ಷಕ ಇಂಜಿನಿಯರ್‌ ಬಸವಲಿಂಗಯ್ಯನವರಿಗೆ ಧೈರ್ಯ ಸ್ಥೈರ್ಯ ತುಂಬಿ ಇವರ ಪರವಾಗಿ ಹೋರಾಟ ರೂಪಿಸಿ ನ್ಯಾಯ ದೊರಕಿಸಿಕೊಟ್ಟಿದ್ದು ಜಿಲ್ಲೆಯ ಒಂದು ಇತಿಹಾಸ. ನಂತರದಲ್ಲಿ ಬಸವಲಿಂಗಯ್ಯ ನವರು ೪-೫ ತಿಂಗಳ ನಂತರ ಹನುಮೇಗೌಡರ ಕಾಟ ತಾಳಾಲಾರದೆ ವರ್ಗಾವಣೆಯಾಗಿ ಹೋದರು. ೨೦೦೮ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಬಿ.ಎಸ್‌.ಪಿ.ಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಹನುಮೇಗೌಡರು ಸ್ವಜಾತಿ ಮತ್ತಿತರ ಪ್ರಲೋಬನೆಗೆ ಒಳಗಾಗಿ ಜೆ.ಡಿ.ಎಸ್‌.ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿ ತಾನು ಕೇವಲ ೨೦೦೦ ಮತಗಳನ್ನು ಗಳಿಸುವ ಮೂಲಕ ದಲಿತರ ಪರವಾಗಿ ಧ್ವನಿ ಮಾಡುವಂತಹ ಒಂದು ರಾಷ್ಟ್ರೀಯ ಪಕ್ಷದ ಮಾನ ಮಾರ್ಯಾದೆಯನ್ನು ಹರಾಜು ಹಾಕಿದರು ಅಲ್ಲದೇ ಅಪ್ಪಟ ದಲಿತ ವಿರೋಧಿ ರಾಜಕಾರಣಿ ಎಂಬುದನ್ನು ಅವರೇ ಸಾಬೀತು ಮಾಡಿದ್ದಾರೆ. ಒಟ್ಟಾರೆ ನಡೆ ಮತ್ತು ನುಡಿಗೆ ಭಾರಿ ದೂರದಲ್ಲಿರುವ ಮತ್ತು ದಲಿತ ಸಮುದಾಯದ ಬಗ್ಗೆ ಸ್ವಲ್ಪವೂ ಕಾಳಜಿ ಹೊಂದಿಲ್ಲದ ಹನುಮೇಗೌಡರಿಗೆ ದಲಿತ ದುರ್ಬಲ ವರ್ಗದವರು ಮತವನ್ನು ಹಾಕಬಾರದೆಂದು ದಸಂಸ ಮನವಿ ಮಾಡುತ್ತದೆ. -ಹೆಚ್‌.ಕೆ.ಸಂದೇಶ್‌, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರು ಹಾಸನ.

No Comments to “ಜನತಾಧ್ವನಿ : ಹನುಮೇಗೌಡರಿಗೆ ದಲಿತರ ಮತ ಇಲ್ಲ”

add a comment.

Leave a Reply

You must be logged in to post a comment.