ಜನತಾಧ್ವನಿ : ಕೆಲಸ ಮಾಡದೇ ಹಣ ಪಡೆದರು

ಮಾನ್ಯರೆ, ಕೋರವಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಜೋಡಿ ಕೃಷ್ಣಾಪುರ ಮತ್ತು ಹೆಚ್‌.ಮೈಲನಹಳ್ಳಿ ಮತ್ತು ಮೆಳಗೋಡು ಗ್ರಾಮ ಪಂಚಾಯತಿಗೆ ಸೇರಿದ ಮೆಳಗೋಡು,ಹಂಪನಹಳ್ಳಿ, ಕೆ.ಹೊನ್ನೇನಹಳ್ಳಿ, ಗ್ರಾಮ ಪಂಚಾಯಿತಿಗಳಿಗೆ ಸೇರಿದ ಕಾಮಗಾರಿಗಳ ರಸ್ತೆಗಳು ಮತ್ತು ಕೆರೆಗಳ ಕೆಲಸವನ್ನು ನಿರ್ವಹಿಸದೆ ಮತ್ತು ಒಂದು ಕೆಲಸಕ್ಕೆ ಎರಡು -ಮೂರು ಬಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾಮಗಾರಿಗಳಿಗೆ ಹಣ ಪಾವತಿಯಾಗಿರುತ್ತದೆ. ಆದುದರಿಂದ ಈ ಕಾಮಗಾರಿಗಳ ಹಗರಣವನ್ನು ಬಯಲಿಗೆಳೆದು ಇದಕ್ಕೆ ಸಂಬಂಧಪಟ್ಟ ಅಧಿ ಕಾರಿಗಳ ವಿರುದಟಛಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇವೆ. ಶಾಂತಿಗ್ರಾಮ ಅಲ್ಲದೇ ದುದ್ದ ಜಿಲ್ಲಾ ಪಂಚಾಯಿತಿಗೆ ಸೇರಿರುವ ಚಿಕ್ಕಕಡಲೂರು ಗ್ರಾಮ ಕೋರವಂಗಲ ಗೇಟಿನ ಸರ್ಕಾರಿ ಪ್ರೌಢಶಾಲೆಗೆ ೨ ಬಾರಿ ಬಿಲ್ಲು ಪಾವತಿಸಿದೆ. ಹಾಗೂ ಕೋರವಂಗಲ ಗೇಟು (ಚಿಕ್ಕಕಡಲೂರು) ರಂಗಮಂದಿರ ನಿರ್ಮಾಣ ಮತ್ತು ಕೋರವಂಗಲ ಗೇಟು (ಚಿಕ್ಕಕಡಲೂರು) ರಂಗಮಂದಿರ ನಿರ್ಮಾಣ, ಹೆಚ್‌.ಮೈಲನಹಳ್ಳಿ ರಸ್ತೆಯೆಂದು ೨ ಬಾರಿ ಬಿಲ್ಲು ಪಡೆದಿರುವುದು ಸೇರಿದಂತೆ ಹಲವಾರು ರೀತಿಯಲ್ಲಿ ಸರ್ಕಾರದ ಹಣ ದುರುಪಯೋಗವಾಗಿರುತ್ತದೆ. ಆದುದರಿಂದ ಲೋಕಾಯುಕ್ತರು ದಯಮಾಡಿ ತಪ್ಪಿತಸ್ತರ ವಿರುದಟಛಿ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಂಡು , ನಮಗೆ ನ್ಯಾಯ ದೊರಕಿಸಿಕೊಡಬೇಕು. -ಚನ್ನಕೇಶವ ಕೋರವಂಗಲ ಗೇಟ್‌

No Comments to “ಜನತಾಧ್ವನಿ : ಕೆಲಸ ಮಾಡದೇ ಹಣ ಪಡೆದರು”

add a comment.

Leave a Reply