ಗಂಭೀರ್‌ ಶತಕ : ಭಾರತ ೨೫೨ ಕ್ಕೆ ೨

ನೇಪಿಯರ್‌ : ಗೌತಮ್‌ ಗಂಭೀರ್‌ ಶತಕ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌ ಅಮೂಲ್ಯ, ತಾಳ್ಮೆಯುತ ಅರ್ಧಶತಕ ಗಳ ನೆರವಿನಿಂದ ಟೀಮ್‌ ಇಂಡಿಯಾ ಚೇತರಿಸಿಕೊಂಡಿದ್ದರೂ ಇನ್ನೂ ೬೨ ರನ್‌ಗಳ ಹಿನ್ನಡೆಯಲ್ಲಿದೆ. ಎರಡನೇ ಟೆಸ್ಟ್‌ ಉಳಿಸುವ ಭರವಸೆ ನೀಡುತ್ತಿ ರುವ ಭಾರತದ ಬ್ಯಾಟ್ಸ್‌ಮನ್‌ಗಳು ಕೊನೆಯ ದಿನದಾಟದಲ್ಲಿ ಮ್ಯಾಜಿಕ್‌ ನಿರೀಕ್ಷೆಯಲ್ಲಿದ್ದಾರೆ. ನ್ಯೂಜಿಲೆಂಡ್‌-ಭಾರತ ನಡುವಿನ ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಾಟ ಭಾನುವಾರ ನೇಪಿಯರ್‌ನ ಮೆಕ್‌ಲೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯಿತು. ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ ೯ ವಿಕೆಟ್‌ ನಷ್ಟಕ್ಕೆ ೬೧೯ ರನ್‌ ಗಳಿಸಿದ್ದಾಗ ಡಿಕ್ಲೇರ್‌ ಮಾಡಿ ಕೊಂಡಿದ್ದರೆ, ಭಾರತ ೩೦೫ ಕ್ಕೆ ಸರ್ವಪತನ ಕಂಡಿತ್ತು. ಫಾಲೋ- ಆ ನ ್‌ ನ ೆ ೂ ಂ ದಿ ಗ ೆ ಎರಡನೇ ಇನ್ನಿಂಗ್ಸ್‌ ಆ ರ ಂ ಭಿ ಸಿ ದ ್ದ ಟೀಮ್‌ ಇಂಡಿಯಾ ನ ಾ ಲ ್ಕ ನ ೆ  ದಿನದಂತ್ಯಕ್ಕೆ ಎರಡು ವಿ ಕ ೆ ಟ ್‌ ಕಳೆದುಕೊಂಡು ೨೫೨ ರನ್‌ ಗಳಿಸಿದೆ. ಮೂರನೇ ದಿನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ವೀರೇಂದ್ರ ಸೆಹ್ವಾಗ್‌ ರನ್ನು ಅಲ್ಪಮೊತ್ತಕ್ಕೆ ಕಳೆದುಕೊಂಡು ೪೭ ರನ್‌ ಗಳಿಸಿದ್ದಾಗ ದಿನದಾಟ ಅಂತ್ಯ ಗೊಳಿಸಿತ್ತು. ಭಾನುವಾರ ತಾಳ್ಮೆಯ ಪ್ರದರ್ಶನ ಮುಂದುವರಿಸಿದ ರಾಹುಲ್‌ ದ್ರಾವಿಡ್‌ ಟೆಸ್ಟ್‌ ಜೀವನದ ೫೬ ನೇ ಅರ್ಧಶತಕ ದಾಖಲಿಸಿ ವೆಟ್ಟೋರಿ ಎಸೆತಕ್ಕೆ ಬಲಿಯಾದರು. ದ್ರಾವಿಡ್‌ ೨೨೦ ಎಸೆತಗಳಿಂದ ೬ ಬೌಂಡರಿ, ೧ ಸಿಕ್ಸರ್‌ ಸಹಿತ ೬೨ ರನ್‌ ದಾಖಲಿಸಿದ್ದರು. ಅಂಪೈರ್‌ ತಪ್ಪು ನಿರ್ಣಯಕ್ಕೆ ದ್ರಾವಿಡ್‌ ಔಟಾದದ್ದು ಎದ್ದು ಕಾಣುತ್ತಿತ್ತು. ದ್ರಾವಿಡ್‌ ವಿಕೆಟ್‌ ಕಳೆದುಕೊಂಡಾಗ ಭಾರತ ೧೬೩ ರನ್‌ ದಾಖಲಿಸಿತ್ತು. ಗೌತಮ್‌ ಗಂಭೀರ್‌ ಅಮೋಘ ಐದನೇ ಟೆಸ್ಟ್‌ ಶತಕ ದಾಖಲಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ಕ್ರೀಸಿಗಂಟಿಕೊಂಡ ಗಂಭೀರ್‌ ಜತೆ ಸಚಿನ್‌ ತೆಂಡೂಲ್ಕರ್‌ ಸೇರಿಕೊಂಡು ೫೨ ನೇ ಅ ಧ ರ್ ಶ ತ ಕ ದಾಖಲಿಸಿದ್ದಾರೆ. ಗಂಭೀರ್‌ ೨೯೦ ಎಸೆತಗಳಿಂದ ೧೪ ಬೌಂಡರಿ ಸಹಿತ ೧೦೨ ಹಾಗೂ ಸಚಿನ್‌ ೧೧೩ ಎಸೆತಗಳಿಂದ ೮ ಬೌಂಡರಿ, ೧ ಸಿಕ್ಸರ್‌ ಸಹಿತ ೫೮ ರನ್‌ ಗಳಿಸಿದ್ದು, ಆಟವನ್ನು ಕೊನೆಯ ದಿನಕ್ಕೆ ಮುಂದೂಡಿದ್ದಾರೆ. ನಾಲ್ಕನೇ ದಿನದಂತ್ಯಕ್ಕೆ ೨೫೨ ರನ್‌ ಮಾಡಿರುವ ಭಾರತ ಇನ್ನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಲು ಇನ್ನೂ ೬೨ ರನ್‌ ಮಾಡಬೇಕಾ ಗಿದೆ. ಕೊನೆಯ ದಿನ ಎರಡೂ ತಂಡಗಳಿಗೆ ಅಮೂಲ್ಯವಾಗಿದ್ದು, ಪಂದ್ಯ ಡ್ರಾದತ್ತ ಸಾಗುವುದೋ ಅಥವಾ ಫಲಿತಾಂಶ ಕ್ಕಾಗಿ ಇತ್ತಂಡಗಳು ಪ್ರಯತ್ನಸಲಿವೆಯೋ ಎಂದು ಕಾದು ನೋಡಬೇಕಾಗಿದೆ. ಸ್ಕೋರ್‌ : ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ ೬೧೯/೯ (ಡಿಕ್ಲೇರ್‌) ಭಾರತ ಮೊದಲ ಇನ್ನಿಂಗ್ಸ್‌ ೩೦೫ ಭಾರತ ಎರಡನೇ ಇನ್ನಿಂಗ್ಸ್‌ ೨೫೨/೨ (ಫಾಲೋ-ಆನ್‌) ಬ್ಯಾಟಿಂಗ್‌ : ಗೌತಮ್‌ ಗಂಭೀರ್‌ ೧೦೨, ವೀರೇಂದ್ರ ಸೆಹ್ವಾಗ್‌ ೨೨, ರಾಹುಲ್‌ ದ್ರಾವಿಡ್‌ ೬೨, ಸಚಿನ್‌ ತೆಂಡೂಲ್ಕರ್‌ ೫೮. ವಿಕೆಟ್‌ : ಪತನ : ೧-೩೦(ಸೆಹ್ವಾಗ್‌, ೯.೨ ಓವರ್‌), ೨-೧೬೩ (ದ್ರಾವಿಡ್‌, ೭೨.೨ ಓವರ್‌) ಬೌಲಿಂಗ್‌ : ಕ್ರಿಸ್‌ ಮಾರ್ಟಿನ್‌ ೧೮-೫-೪೭-೦, ಇಯಾನ್‌ ಓಬ್ರಿಯಾನ್‌ ೨೧-೬-೫೦-೦, ಜೇಮ್ಸ್‌ ಫ್ರಾಂಕ್ಲಿನ್‌ ೧೧-೩-೨೩-೦, ಜೀತನ್‌ ಪಟೇಲ್‌ ೨೮-೬-೭೩-೧, ಜೆಸ್ಸಿ ರೈಡರ್‌ ೪-೩-೫-೦, ಡೇನಿಯಲ್‌ ವೆಟ್ಟೋರಿ ೨೪-೭-೪೮-೧, ರೋಸ್‌ ಟೇಲರ್‌ ೧-೧-೦-೦.

No Comments to “ಗಂಭೀರ್‌ ಶತಕ : ಭಾರತ ೨೫೨ ಕ್ಕೆ ೨”

add a comment.

Leave a Reply

You must be logged in to post a comment.