ಯುವಜನ ಆಯೋಗದ ಪ್ರಚಾರಕ್ಕೆ ಧೋನಿ?

ರಾಂಚಿ: ಯುವ ಜನತೆ ತಮ್ಮ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ರಾಜಕೀಯ ನಂಟು ಹೊಂದಿಲ್ಲದ ಖ್ಯಾತ ಸಿನಿಮಾ ನಟರು ಮತ್ತು ಮಹೇಂದ್ರ ಸಿಂಗ್‌ ಧೋನಿ ಅವರಂತಹ ಕ್ರೀಡಾಪಟುಗಳನ್ನು ಬಳಸಿಕೊಳ್ಳುವ ಯೋಚನೆಯ ಲ್ಲಿದೆ. ಜನತೆ ತಮ್ಮ ಅಧಿಕಾರವನ್ನು ಚಲಾಯಿಸುವುದು ಕೇವಲ ಹಕ್ಕು ಮಾತ್ರವಲ್ಲ. ಅದು ಜನರ ಕರ್ತವ್ಯ ಕೂಡ ಹೌದು. ಅದಕ್ಕಾಗಿ ಚುನಾ ವಣಾ ಆಯೋಗವು ಖ್ಯಾತ ತಾರೆಗಳ ಸಹಕಾರದಿಂದ ಯುವ ಮತದಾರರನ್ನು ಆಕರ್ಷಿಸುವ ಯೋಚನೆಯಲ್ಲಿದೆ ಎಂದು ಚುನಾವಣಾ ಆಯುಕ್ತ ಎಸ್‌.ವೈ ಖುರೇಷಿ ತಿಳಿಸಿದ್ದಾರೆ. ಖ್ಯಾತ ತಾರೆಗಳಲ್ಲೊಬ್ಬರಾಗಿರುವ ಟೀಮ್‌ ಇಂಡಿಯಾ ಕಪ್ತಾನನ ಸಹಾಯವನ್ನೂ ಚುನಾವಣಾ ಆಯೋಗ ಬಳಸಿಕೊಳ್ಳತ್ತದೆಯೇ? ಎಂಬ ಪ್ರಶ್ನೆಗೆ ಘಿ‘ಆ ಸಾಲಿಗೆ ಧೋನಿ ಕೂಡ ಒಬ್ಬರಾಗಿ ಬರುವುದಾದರೆ ನಾವು ತುಂಬಾ ಸಂತೋಷ ಪಡುತ್ತೇವೆಘಿ’ ಎಂದು ಖುರೇಷಿ ಹೇಳಿದ್ದಾರೆ. ಚುನಾವಣಾ ಆಯೋಗವು ಧೋನಿಯವರನ್ನು ಮತ ರಾಯಭಾರಿ ಯನ್ನಾಗಿಸುತ್ತದೆಯೇ ಎಂಬುದಕ್ಕೆ ಉತ್ತರಿಸಿ ಘಿ‘ಧೋನಿ, ನಮ್ಮ ಹೀರೋ ಅಲ್ಲದೆ ಯುವ ಮತದಾರರು ಅವರಿಂದ ಪ್ರಭಾವಿತಗೊಂಡಿದ್ದಾರೆ. ಆದರೆ ಅವರೇ ಮೂದಲಾಗಿ ತಿಳಿಸಿದರೆ ಮಾತ್ರ ನಾವು ಪರಿಗಣಿಸು ತ್ತೇವೆ ಘಿ’ ಎಂದರು. ಅವರೆಲ್ಲಾ ಮತದಾರರಿಗೆ ಉತ್ತಮ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವಂತೆ ಒತ್ತಾಯಿಸಬೇಕು ಎಂದು ಚುನಾವಣಾ ಆಯುಕ್ತರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

No Comments to “ಯುವಜನ ಆಯೋಗದ ಪ್ರಚಾರಕ್ಕೆ ಧೋನಿ?”

add a comment.

Leave a Reply

You must be logged in to post a comment.