ಅಂತರಂಗದ ಜ್ಯೋತಿ ಬೆಳಗುವ ವಚನ ಸಾಹಿತ್ಯ

ವಚನ ಸಾಹಿತ್ಯ ಕನ್ನಡದ ಆಧ್ಯಾತ್ಮಿಕ ಸಿರಿಸಂಪತ್ತು. ಅದರ ಮೌಲ್ಯ ಅರಿತು ಅನುಭವಿಸಿದವರಿಗೆ ಮಾತ್ರ ಗೊತ್ತು. ಅದರ ಆತಂರಿಕ ಬಾಹ್ಯ ಸಂಪತ್ತು ಅಪಾರ. ಈ ಸಾಹಿತ್ಯ ಸಂಪ್ರಾದಾಯದ ಹೊಲಸು ಕಳೆಕೀಳುತ್ತಾ. ಅನುಭವದ ಮತ್ತು ಜ್ಞಾನದ ಬೆಳಕು ಚೆಲ್ಲುತ್ತಾ ಮಾನವೀಯ ಮೌಲ್ಯಕ್ಕೆ ಪ್ರಥಮಾಧ್ಯತೆ ನೀಡುತ್ತಾ, ಓದುಗನ ಅಂತರಂಗದ ಜ್ಯೋತಿಯಾಗಿಸುತ್ತದೆ. ಅಷ್ಟೆ ಅಲ್ಲ ಓದಿದವನ ಬದುಕಿನ ಯಶಸ್ಸಿಗೆ ಬೆಳಕಾಗುತ್ತದೆ. ಎಂಬುದರಲ್ಲ ಅನುಮಾನ ವಿಲ್ಲ. ವಚನ ಸಾಹಿತ್ಯಕ್ಕೆ ಮೂಲ ವಚನಗಳು ಇವು ಗದ್ಯವೂ ಅಲ್ಲದ, ಪದ್ಯವೂ ಅಲ್ಲದ ನುಡಿಮುತ್ತುಗಳು. ಜ್ಞಾನ ಜ್ಯೋತಿಯ ಪಿಸುನುಡಿಗಳು. ಇವು ಛಂದದ ಬಂಧು ವಿಲ್ಲದೆ. ಶಿಷ್ಟ ಭಾಷೆಯ ಬಿಗುಮಾನವಿಲ್ಲದೆ ಮಡಿ ಮೈಲಿಗೆಗಳ ಭಾವವಿಲ್ಲದೆ ಹೃದಯ ಹೃದಯಗಳು ಮಿಡಿಯುವಂತೆ ಮಾಡುವ ವಜ್ರಕ್ಕಿಂತಲೂ ಅಧಿಕ ಬೆಲೆಯುಳ್ಳ ನುಡಿ ರತ್ನಗಳು. ಈ ವಚನಗಳನ್ನು ಬರೆದ ವಚನಕಾರರು ಬಂದು ಕುಲದವರಲ್ಲ ಬಂದು ಜಾತಿಯವರಲ್ಲ. ಒಂದು ಪಂಗಡದವರಲ್ಲ ಲೋಕಚಿಂತೆ ತೊಟ್ಟವರು, ಬದುಕಿನೊಳಗಿನ ಜೀವ, ಬೆಳಗಿನೊಳಗಿನ ಭಾವ, ಕ್ರಿಯೆ ಯೊಳಗಿನ ಜೀವ ಹೃದಯದೊಳಗಿನ ಭಾವ, ಹೀಗೆ ಜೀವ ಕಳೆಯನ್ನು ತುಂಬಿ, ಸಮಷ್ಟಿಯನ್ನು ನಂಬಿ ಸಮನ್ವಯತೆಯನ್ನು ಬಿತ್ತಿ, ಮಾನವತೆಯನ್ನು ಹುಟ್ಟುಹಾಕಿದ ಅಂಬಿಗರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಮಾನವತೆಯನ್ನು ಬೆಳಗಿದ. ಅರಿವಿನ ಸಮಷ್ಟಿಯ ಚಿಂತಕರು ಈ ವಚನ ಶ್ರೇಷ್ಟ ವಿಶ್ವಮಾನವರು. ವಚನಗಳ ಸೃಷ್ಟಿಗೆ ಹಾಗೂ ವಚನ ಸಾಹಿತ್ಯ ಬೆಳವಣಿಗೆಗೆ ಕಾರಣೀ ಭೂತರಾದ ವಚನಕಾರರ ಹುಟ್ಟು ಹಾಗೂ ಪರಿಸರವನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಂದರೆ ವಚನ ಸಾಹಿತ್ಯದ ಹುಟ್ಟಿಗೆ ಮುನ್ನ ಬಸವಪೂರ್ವದಲ್ಲಿ ಬುದಿಟಛಿವಂತರೆನಿಸಿಕೊಂಡ ಕೇಲವೆ ಜನರು ಶೇ. ೯೦ ಮುಗಟಛಿ ಜನರನ್ನು ನಾನಾ ರೀತಿಯಲ್ಲಿ ಸುಲಿಗೆ ಮಾಡಿ, ಧರ್ಮದ ಹೆಸರಿನಲ್ಲಿ ಮುಗಟಛಿರನ್ನು ಅಂಧಕಾರಕ್ಕೆ ತಳ್ಳಿದ್ದರು. ದೇಶದಲ್ಲಿ ಅನೈತಿಕತೆ, ಅಜ್ಞಾನ, ಅಸಮಾನತೆ, ಜಾತೀಯತೆ, ತುಂಬಿ ತುಳುಕಾಡುತ್ತಿತ್ತು. ಪುರೋಹಿತ ಶಾಹಿ ವರ್ಗ ಪ್ರಾಬಲ್ಯವಾಗಿ ಅಂತ್ಯಜರು, ಅಬಲರು, ದೀನದಲಿತರ ಶೋಷಣೆ, ಅಶಾಂತಿ, ಅತೃಪ್ತಿಯಿಂದ ಅನ್ಯಾಯ, ಅನೈತಿಕ ಅಚರಣೆಗಳಿಂದ ನೊಂದು ಹೋಗಿದ್ದರು. ಓಟ್ಟಾರೆ ಜನ ಸಾಮಾನ್ಯರ ಬದುಕು ದುಸ್ತರವಾಗಿತ್ತು. ಜಾತಿ, ಕುಲ ಭೇದಗಳು ಮನೆ ಮನೆಗಳನ್ನು ಛಿದ್ರಗೊಳಿಸಿದ್ದವು. ಊರಿಗೊಂದು ಮಾರಿ, ಕೇರಿಗೊಂದು ದುರ್ಗಿ. ಮನೆಗೊಂದು ಮಸಣೆಯ ಪೂಜೆ ಪುನಸ್ಕಾರಗಳಿಂದಾಗಿ ಜನ ಸಾಮಾನ್ಯರು ಧಾರ್ಮಿಕವಾಗಿ ಒಡೆದು ಹೋಗಿದ್ದರು. ಜನರಲ್ಲಿ ಭಾತೃಭಾವವಾಗಲೀ, ಸಹೃದಯತೆಯಾಗಲೀ ಹೊಂದಾಣಿಕೆ ಯಾಗಲೀ ಇರಲಿಲ್ಲ. ವರ್ಣಾಶ್ರಮ ಧರ್ಮ ಎಲ್ಲೆಲ್ಲೂ ಆಚರಣೆಯಲ್ಲಿತ್ತು. ಅದರ ಪರಿಣಾಮವಾಗಿ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ಬಹುದೇವತಾ ಪೂಜೆ ಉಪಾಸನೆಗಳೇ ವ್ಯಾಪಕಗೊಂಡು ಸಮಾಜ ನೆಮ್ಮದಿ ಶಾಂತಿಯನ್ನೇ ಕಳೆದುಕೊಂಡಿತ್ತು. ಉನ್ನತ ಕುಲದವರು ಶ್ರೂದ್ರಾತಿಶೂದ್ರರನ್ನು ಮನುಕುಲೋದಾಟಛಿರದ ಒಂದು ಧಾರ್ಮಿಕ ಆಂದೋಲನ ನಡೆಯಿತು. ಬಸವಾದಿ ಶರಣರು ಬದುಕಿನ ಮೌಲ್ಯಗಳನ್ನು ಗುರುತಿಸಿ ದರು,ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಿ ದೃಷ್ಟಾಂತವಾಗಿ ನಿಂತರು. ಕಾರಣ ಅಂದಿನ ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿತ್ತು. ಬಡವ-ಬಲ್ಲದರೆಂಬ ವರ್ಗಬೇಧ, ಹೆಣ್ಣು-ಗಂಡೆಂಬ ಲಿಂಗಬೇಧ ಎಂಬ ಸ್ಥಾನಭೇದಗಳಿಂದ ಸಮಾಜ ಹರಿದು ಹಂಚಿ ಹೋಗಿತ್ತು. ಸಮಾಜದ ಈ ವಿಷಮತೆಯನ್ನು ತೊಡೆದು ಸರ್ವಸಮಾನತೆ ಯನ್ನು ಸಾಧಿಸುವ ಹಂಬಲ ಅವರದಾಗಿತ್ತು. ಉಚ್ಚ ಕುಲದವರು, ಕೆಳ ವರ್ಗದವರನ್ನು ಶೋಷಣೆ ಮಾಡುತ್ತಿದ್ದು, ಕೆಳವರ್ಗದವರಿಗೆ ಅಸ್ತಿತ್ವವೇ ಇರಲಿಲ್ಲ ಅಸ್ಪೃಶ್ಯತೆಯಂತೂ ಭಯಾನಕವಾಗಿತ್ತು. ಈ ಇಡೀ ಸಮುದಾಯಕ್ಕೆ ಬಸವಾದಿ ಶರಣರು ದನಿಕೊಟ್ಟರು, ಎದೆಕೊಟ್ಟರು, ಅಭಿಮಾನ ನೀಡಿದರು. ಅವರ ಕೀಳರಿಮೆಯನ್ನು ನೀಗಿ ಆತ್ಮ ಗೌರವವನ್ನು ಜಾಗೃತಗೊಳಿಸಿದರು. ಈ ವಚನಕಾರರ ಸಂಪರ್ಕದಿಂದ ಅವರು ಪಷ ಸೋಂಕಿತ ಲೋಹದಂತೆ ಬಂಗಾರವಾದರು. ಈ ವಚನ ಶ್ರೇಷ್ಟರ ವಚನಗಳು ನಮ್ಮ ಬದುಕು ಹಸನಾಗಲು ಸಹಾಯವಾಯಿತು. ಮಾನವನ ಅಂತಃಶಕ್ತಿಯ ಪ್ರಕಾಶ ಮತ್ತು ವಿಕಾಸದಿಂದಾಗಿ ಸಮಾಜವು ತೇಜೋಮಯವಾಯಿತು. ಶರಣರು ಘಿ‘ಆಚಾರವೇ ಸ್ವರ್ಗ, ಅನಾಚಾರವೇ ನರಕಘಿ’ ಎಂದು ಸ್ವರ್ಗ-ನರಕಗಳ ಕಲ್ಪನೆಗೆ ಹೊಸಭಾಷ್ಯ ಬರೆದರು. ಸತ್ತ ಮೇಲೆ ಸಿಕ್ಕುವುದೆಂದು ಹೇಳಲಾದ ಸ್ವರ್ಗವನ್ನು ಇಹದಲ್ಲೇ, ಬದುಕಿರುವಾಗಲೇ ಅರಳಿಸುವ ಸಾರ್ಥಕ ಪ್ರಯತ್ನ ನಡೆಯಿತು. ಈ ಸಮಯದಲ್ಲಿ ವಚನ ಶ್ರೇಷ್ಟ ಸರ್ವಜ್ಞ ಕವಿಯ ವಚನಗಳು ನೆನಪಿಗೆ ಬರುತ್ತದೆ. ಘಿ‘ಘಿ‘ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲ. ಮುಟ್ಟಬೇಡೆಂದು ತೋಗುವ, ಹಾರುವನು ಹುಟ್ಟಿದನೆಲಿ ಸರ್ವಜ್ಞಘಿ’ಘಿ’. ಘಿ‘ಘಿ‘ಕುಲವಿಲ್ಲ- ಯೋಗಿಗೆ, ಫಲವಿಲ್ಲ ಜ್ಞಾನಿಗೆ ತೊಲೆಗಂಭವವಿಲ್ಲ ಗಗನಕ್ಕೆ, ಸ್ವರ್ಗದಲ್ಲಿ ಹೊಲೆಗೇರಿ ಇಲ್ಲ ಸರ್ವಜ್ಞಘಿ’ಘಿ’ ಎಂಬುದಾಗಿ ಸರ್ವಜ್ಞ ಮಹಾಕವಿಯು ತಿಳಿಸಿದ್ದಾರೆ. ೨೦ ನೇ ಶತಮಾನದಲ್ಲಿ ಪ್ರಾರಂಭವಾದ ಆಧುನಿಕ ವಚನ ಸಾಹಿತ್ಯ-ವಚನಗಳ ಸಂಗ್ರಹ ಸಂಶೋಧನೆ ಸಂಪಾದನೆ ಹಾಗೂ ಪ್ರಕಟಣೆಗಳು ಹೊಸ ದಿಕ್ಕಿನೆಡೆ ಹೆಜ್ಜೆ ಹಾಕಿತೆಂದರೆ ತಪ್ಪಾಗಲಾರದು. ವಚನ ಪಿತಾಮಹ ಡಾ।। ಹಳಕಟ್ಟೆ, ಡಾ।। ದಿವಾಕರ, ಎಂ.ಆರ್‌. ಡಾ।। ನಂದಿಪುರ, ಭೂಸನೂರು ಮಠ, ಡಾ।। ಹಿರೇಮಠ ಇನ್ನಿತರ ಆಧುನಿಕ ವಚನಕಾರರನ್ನು ನಾವಿಲ್ಲಿ ಮುಖ್ಯವಾಗಿ ಹೆಸರಿಸಬಹುದು.

No Comments to “ಅಂತರಂಗದ ಜ್ಯೋತಿ ಬೆಳಗುವ ವಚನ ಸಾಹಿತ್ಯ”

add a comment.

Leave a Reply

You must be logged in to post a comment.