ಜೀವನವೆಂಬ ಚಕ್ರದ ಭದ್ರತೆಗೆ : ಚಕ್ರಮುನಿ

ಕೃಷಿಕರು ತಮ್ಮ ಜಮೀನುಗಳಲ್ಲಿ, ತಮ್ಮ ಮನೆಯ, ತಮ್ಮೂರಿನ ಅಗತ್ಯತೆಗಳನ್ನು ಪೂರೈಸಿ ಪೇಟೆಯ ಜನರಿಗೆ ನೀಡುವಂತಾಗಲು ತರಕಾರಿ, ದವಸ-ಧಾನ್ಯ, ಹಣ್ಣು-ಹಂಪಲು, ಹೂವು, ಗಿಡಮೂಲಿಕೆ ಮುಂತಾದವು ಗಳನ್ನು ಆದ್ಯತೆ ಮೇರೆಗೆ ಬೆಳೆದುಕೊಳ್ಳುವುದು ಒಳ್ಳೆಯದು. ಆರೋಗ್ಯ ರಕ್ಷಿಸುವ ಈ ಕೃಷಿ ಉತ್ಪನ್ನಗಳು ಕ್ಷೇಮ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿಯಲ್ಲಿ ಇಂದು ವಾಣಿಜ್ಯ ಬೆಳೆಗಳಿಗೆ, ಏಕ ಬೆಳೆ ವ್ಯವಸ್ಥೆಗೆ ಹೆಚ್ಚು ಗಮನ ಕೊಡುವುದರಿಂದ ಪೌಷ್ಟಿಕಾಂಶಗಳ ಕೊರತೆ ಹಾಗೂ ವಿಷ ರಾಸಾಯನಿಕಗಳ ಸೇರ್ಪಡೆಯು ಹಲವರನ್ನು ಹಾಳು ಮಾಡುತ್ತಿದೆ. ಮಣ್ಣಿಗೆ ಹಾಕುವ ಸಾವಯವ ಗೊಬ್ಬರಗಳ ಪ್ರಮಾಣ ಇಂದು ಕಮ್ಮಿ ಆಗುತ್ತಿದ್ದು, ಇದು ಬೆಳೆ ಉತ್ಪಾದನೆಯಲ್ಲಿ ಅಡ್ಡ ಪರಿಣಾಮಗಳನ್ನು ಸೃಷ್ಟಿ ಮಾಡುತ್ತಿದೆ. ಇದರಂತೆ ರಾಸಾಯನಿಕ ಗೊಬ್ಬರ, ವಿಷಗಳ ಬಳಕೆಯೂ ಪರಿಸರದ ಮಾಲಿನ್ಯಕ್ಕೆ ಕಾರಣವಾಗಿ ಆರೋಗ್ಯ ಕೆಡುತ್ತಿದೆ. ಬಹು ಬೆಳೆ ವ್ಯವಸ್ಥೆಯನ್ನು ಅನುಸರಿಸದೇ ಇರುವುದರಿಂದ ನಮಗೆ ಅಪಾಯಗಳು ಹೆಚ್ಚುತ್ತಿವೆ. ಯಾವುದೇ ಪ್ರದೇಶದಲ್ಲಿ ಒಬ್ಬೊಬ್ಬ ಕೃಷಿಕ ಏನಿಲ್ಲವೆಂದರೂ ಕನಿಷ್ಟ ಒಂದು ನೂರು ಬಗೆಯ ಸಸ್ಯಗಳನ್ನು ಬೆಳೆದುಕೊಳ್ಳಬಹುದು. ಹೀಗಿರುವಾಗ ಪ್ರತಿಯೊಬ್ಬ ರೈತರೂ ಈ ನಿಟ್ಟಿನಲ್ಲಿ ಗಮನ ಹರಿಸುವುದು ಉತ್ತಮ. ಒಂದೊಂದು ಬಗೆಯ ಸಸ್ಯದಲ್ಲಿ ವಿಶೇಷವಾದ ನಾಲ್ಕಾರು ಗುಣಗಳಿರುತ್ತವೆ. ಇವು ನಮ್ಮ ಆರೋಗ್ಯವನ್ನು ರಕ್ಷಿಸಲು, ಇತರೇ ಜೀವಿ ಸಂಕುಲಕ್ಕೂ ನೆರವಾಗುತ್ತವೆ. ಘಿ‘ಚಕ್ರಮುನಿಘಿ’ ಎಂಬುದು ಒಂದು ವಿಶೇಷ ಬಗೆಯ ಸಸ್ಯ. ನಮ್ಮ ದೇಹದ ವಿಟಮಿನ್‌ ಘಿ‘ಎಘಿ’ ಬೇಡಿಕೆಯನ್ನು ಪರಿಣಾಮ ಕಾರಿಯಾಗಿ ಈಡೇರಿಸಬಲ್ಲ ಗುಣ ಇದಕ್ಕಿದೆ. ಹಸಿ ಎಲೆಯು ತುಸು ಸಿಹಿಯಾಗಿದ್ದು, ರುಚಿಕರವಾಗಿರುತ್ತದೆ. ಬಹು ವಾರ್ಷಿಕ ಸ್ವಭಾವದ ಚಕ್ರಮುನಿಯ ನಾಲ್ಕಾರು ಗಿಡಗಳು ಒಬ್ಬೊಬ್ಬ ಕೃಷಿಕರ ಜಮೀನಿನಲ್ಲಿ ಬೆಳೆದುಕೊಳ್ಳುವುದರಿಂದ ಅನುಕೂಲಗಳಾಗುತ್ತವೆ. ಶಾಲಾ-ಕಾಲೇಜು, ಕಛೇರಿಗಳ ಆವರಣಗಳಲ್ಲೂ ಇದನ್ನು ಬೆಳೆಸಬಹುದು. ದನಕರುಗಳೂ ಇದರ ಸೊಪ್ಪನ್ನು ತಿನ್ನುವುದರಿಂದ ರಕ್ಷಣೆ ಬೇಕು. ಇದರ ವೈಜ್ಞಾನಿಕ ಹೆಸರು ಖಟ್ಠ್ಟಟಟ್ಠಠ ಚ್ಞಛ್ಟಟಜಢ್ಞಟ್ಠಠ. ಕುಟುಂಬ: ಯುಪಬಿಯೇಸಿ. ಚಕ್ರಮುನಿಯನ್ನು ಭಾರತ, ಆಸ್ಟ್ರೇಲಿಯಾ, ಚೀನಾ, ಮಲೇಶಿಯಾ, ವಿಯಟ್ನಾಂ ಮುಂತಾದ ದೇಶಗಳಲ್ಲಿ ಬೆಳೆಯಲಾಗುತ್ತಿದೆ. ಸುಮಾರು ೨.೫ ಮೀಟರ್‌ ಎತ್ತರದ ವರೆಗೆ ಬೆಳೆಯುವ ಇದರ ಎಲೆಗಳು ಐದಾರು ಸೆಂಟಿ ಮೀಟರ್‌ ಉದ್ದವಿರುತ್ತವೆ. ಕರಿಬೇವಿನ ಎಲೆಯಂತೆ ಕಾಣುತ್ತವೆ. ಆಗಾಗ್ಗೆ ಚಿಗುರುವ ಸ್ವಭಾವ ಇದಕ್ಕಿದೆ. ಎಲೆಗಳ ಬಣ್ಣ ದಟ್ಟ ಹಸಿರಾಗಿರುತ್ತದೆ. ಎಲೆಗಳ ಸಂದುಗಳಲ್ಲಿ ಹೂವು ಆಗಾಗ್ಗೆ ಮೂಡುತ್ತವೆ. ಆದರೆ ಬೀಜ ಕಟ್ಟುವುದಿಲ್ಲ. ಪ್ರಪಂಚದ ಕೆಲವು ದೇಶಗಳಲ್ಲಿ ಚಕ್ರಮುನಿಯು ಬಹು ಜನಪ್ರಿಯ ಸೊಪ್ಪು. ಮಾಂಸಗಳೊಂದಿಗೆ ಇದನ್ನು ಹಾಕಿ ಅಡುಗೆ ಮಾಡುವುದಿದೆ. ಚಕ್ರಮುನಿಯ ಸೊಪ್ಪಿನಲ್ಲಿ ೪೭,೫೦೦ ಐ.ಯು. ವಿಟಾಮಿನ್‌ ಘಿ‘ಎಘಿ’ ಶೇ. ೪೯ ಪ್ರೋಟೀನ್‌, ಶೇ.೧೪-೧೮ ನಾರು, ಶೇ.೨.೭೭ ಪೋಟ್ಯಾಶಿಯಂ (ಒಣಗಿದ ಬಾಳೆ ಹಣ್ಣಿನಲ್ಲಿ ಶೇ.೧.೪೮), ಶೇ.೨.೭೭ ಕ್ಯಾಲ್ಸಿಯಂ (ಹಾಲಿನ ಪುಡಿಯಲ್ಲಿ ಶೇ.೧.೩), ಶೇ.೦.೬೧ ಪಾಸ್ಪರಸ್‌ (ರಂಜಕ) (ಒಣಗಿದ ಸೋಯಾ ಅವರೆಯಲ್ಲಿ ಶೇ.೦.೫೫), ಶೇ.೦.೫೫ ಮೆಗ್ನೇಶಿಯಂ, ೧೯೯ ಪಿಪಿಯಂ ಕಬ್ಬಿಣ, ಪಾಪವೆರಿನ್‌, ವಿಟಾಮಿನ್‌-ಕೆ ಮತ್ತು ಹೇರಳವಾದ ಕ್ಲೋರೋಪಿಲ್‌ ಇದೆ. ದಟ್ಟ ಹಸಿರಿನ ಚಕ್ರಮುನಿಯ ಸೊಪ್ಪನ್ನು ಸೇವಿಸು ವುದರಿಂದ ನಮ್ಮ ದೇಹದಲ್ಲಿ ರಕ್ತವು ವೃದಿಟಛಿಯಾಗುತ್ತದೆ. ಕೋಶಗಳನ್ನು ಚೈತನ್ಯಗೊಳಿಸುತ್ತದೆ. ಉದರದೊಳಗಿರುವ ಉಪಕಾರಿ ಜೀವಿಗಳನ್ನು ವೃದಿಟಛಿಸುವಲ್ಲಿ ಅವುಗಳ ಚಲನವಲನಕ್ಕೂ ಚಕ್ರಮುನಿಯ ಸೊಪ್ಪು ನೆರವಾಗುತ್ತದೆ. ಸರಾಗವಾಗಿ ಮಲವಿಸರ್ಜನೆಗೂ ಇದು ಸಹಕಾರಿ. ದೇಹದಲ್ಲಿರುವ ವಿಷವನ್ನು ನಿಷ್ಕಿೃಯಗೊಳಿಸುತ್ತದೆ. ಎಲೆಗಳಿಂದ ತಯಾರಿಸಿದ ರಸ/ಕಷಾಯವನ್ನು ಜ್ವರ ಮತ್ತು ಹಣ್ಣುಗಳ ನಿವಾರಣೆಗೆ ಬಳಸುತ್ತಾರೆ. ನಿದ್ದೆ ಮಾಡುವಾಗ ಗೊರಕೆಯನ್ನು ಮತ್ತು ಹಲ್ಲು ಕಡಿಯುವುದನ್ನು ಕಮ್ಮಿ ಗೊಳಿಸಲು ಇದನ್ನು ಆಗಾಗ್ಗೆ ಬಳಸುವುದು ಉತ್ತಮವಾಗಿ ಕಾಣಿಸಿದೆ. ಇದರ ಸಾಮರ್ಥ್ಯ, ವಿಶೇಷ ಗುಣಗಳಿಂದ ಘಿ‘ಮದುವೆ ಉಳಿಸುವಘಿ’ ಸೊಪ್ಪು ಎಂದೂ ಇದನ್ನು ಕರೆಯಲಾಗುತ್ತಿದೆ. ಆದರೆ ಅತೀಯಾಗಿ ಚಕ್ರಮುನಿಯ ಸೊಪ್ಪನ್ನು ತಿಂದರೆ ತೊಡೆ ನೋವು, ತಲೆನೋವು ಕಾಣಿಸುತ್ತದೆ. ಹಲವಾರು ಕಡೆ ಬೊಗಸೆಯಷ್ಟು ಸೊಪ್ಪನ್ನು ದಿನವೂ ತಿನ್ನುತ್ತಿರುವ ಜನ ಏನೂ ತೊಂದರೆಗಳನ್ನು ಅನುಭವಿಸದೇ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಒಂದು ಹಿಡಿಯಷ್ಟು ಸೊಪ್ಪಿನ ಸೇವನೆ ಸೂಕ್ತವಾದೀತು ಎನ್ನಲಾಗುತ್ತಿದೆ. ದೇಹದ ತೂಕವನ್ನು ಇಳಿಸಲೂ ಚಕ್ರಮುನಿ ಸೊಪ್ಪು ಸಹಕಾರಿ. ಮನೆಯ ಸುತ್ತ, ಮನೆಗಳ ಹಿಂದೆ-ಮುಂದೆ, ಬಿಸಿಲು ಸಿಗುವ ಕಡೆ ಇದನ್ನು ಹಾಕಿಕೊಳ್ಳಬಹುದು. ಆದರೆ ಹದವಾಗಿ ಇದಕ್ಕೆ ನೀರು ಕೊಡುತ್ತಿರಬೇಕು. ಹಸಿ ಶೇಂಗಾ ಬೀಜ ಅಥವಾ ಹಸಿ ತೊಗರಿ ಬೀಜದಂತೆ ಇದರ ರುಚಿ ಇರುತ್ತದೆ. ಸಮೃದಟಛಿ ಹಸಿರು ಬಣ್ಣದಲ್ಲಿರುವ ಸೊಪ್ಪನ್ನು ಎಲ್ಲಾ ತರಹದ ಅಡುಗೆ ತಯಾರಿಕೆಯಲ್ಲಿ ಉಪಯೋಗಿಸ ಬಹುದು. ಚಕ್ರಮುನಿಯ ಹಸಿ ಸೊಪ್ಪನ್ನು ಹಾಗೆಯೇ ಸೇವಿಸಬಹುದು. ಕೋಸಂಬರಿ, ಪಲ್ಲೆ, ಸಾರು, ಚಟ್ನಿ, ದೋಸೆ, ರೊಟ್ಟಿ, ಚಪಾತಿ, ಪಲಾವು, ಚಿತ್ರಾನ್ನ, ಉಪ್ಪಿಟ್ಟು ಇತ್ಯಾದಿಗಳಿಗೂ ಹಾಕಿಕೊಂಡು ಬಳಸಬಹುದು. ಸದಾ ಚಿಗುರುವ ಸ್ವಭಾವ ಇದಕ್ಕಿದೆ. ವರ್ಷದ ಎಲ್ಲಾ ಕಾಲಗಳಲ್ಲೂ ಇದರ ಹಸಿರೆಲೆ ಸಿಗುತ್ತದೆ. ಮರದಂತೆ ಇದು ಬೆಳೆಯುವುದಿಲ್ಲ. ಆರೇಳು ಅಡಿ ಎತ್ತರದವರೆಗೆ ಬೆಳೆಸಿ ಕೊಂಡರೆ ಸಾಕು. ಸೊಪ್ಪು ತೆಗೆದ ಬಳಿಕ ಕವಲುಗಳನ್ನು ಕತ್ತರಿಸುತ್ತಿದ್ದರೆ ಚಿಗುರು ಬರುತ್ತಿರುತ್ತದೆ. ಕಡ್ಡಿಗಳಿಂದ ಇದನ್ನು ಬೆಳೆಸಬಹುದು. ಗೇಣುದ್ದದ ಬಲಿತ ತುಂಡುಗಳನ್ನು ಫಲವತ್ತಾದ ಮಣ್ಣು ತುಂಬಿದ ಪ್ಲಾಸ್ಟಿಕ್‌ ಚೀಲದಲ್ಲಿ ನೆಡುವುದರಿಂದ ಚಿಗುರು ಮೂಡುತ್ತದೆ. ನಾಲ್ಕಾರು ಕವಲುಗಳು ಮೂಡಿದ ಬಳಿಕ ಜಮೀನಿನಲ್ಲಿ ಬೆಳೆಸಲು ನಾಟಿ ಮಾಡಬಹುದು. ಪ್ರಾರಂಭದಲ್ಲಿ ಗಿಡವು ನಿಧಾನವಾಗಿ ಬೆಳೆಯುವುದರಿಂದ ತುಸು ಕಾಳಜಿ ಬೇಕಾದೀತು. ಎರಡು-ಮೂರು ಅಡಿ ಎತ್ತರ ತಲುಪಿದಾಗ ಇದು ಅಂತಹ ಕಾಳಜಿಯನ್ನು ಕೇಳುವುದಿಲ್ಲ. ಗಿಡದಿಂದ -ಗಿಡಕ್ಕೆ ಆರೇಳು ಅಡಿ ಅಂತರ ಇಟ್ಟುಕೊಂಡರೆ ಸಾಕು. ಬಹು ಬೆಳೆ ವ್ಯವಸ್ಥೆಗೆ ಇದು ಸೂಕ್ತವಾದೀತು. ನೆರಳಿನಲ್ಲಿ ಸರಿಯಾಗಿ ಬೆಳೆಯುವುದಿಲ್ಲ. ಪೂರ್ಣ ಬಿಸಿಲು ಬೀಳುವ ಜಾಗ ಉತ್ತಮ. ಆಗಾಗ್ಗೆ ಸಗಣಿ ಗೊಬ್ಬರ, ನೀರು ಪೂರೈಸುತ್ತಿದ್ದರೆ ಒಳ್ಳೆಯದು. ಕೀಟ ರೋಗಗಳು ಹೆಚ್ಚಾಗಿ ಕಾಣಿಸುವುದಿಲ್ಲ. ಚಕ್ರಮುನಿಯ ಹಸಿ ಸೊಪ್ಪಿನಲ್ಲಿ ಅತ್ಯಧಿಕ ಪ್ರಮಾಣ ದಲ್ಲಿ ವಿಟಮಿನ್‌ ಘಿ‘ಎಘಿ’ ಇದೆ. ಇದು ಕಣ್ಣಿಗೆ, ರಕ್ತವೃದಿಟಛಿಗೆ, ಹಿಮೊಗ್ಲೋಬಿನ್‌ ಅಂಶದ ಹೆಚ್ಚಳಕ್ಕೂ, ರೋಗ ನಿರೋಧಕ ಶಕ್ತಿಯನ್ನು ವೃದಿಟಛಿಸಲು ಸಹಕಾರಿ. ಇತರೇ ಹಸಿ ಸೊಪ್ಪುಗಳಿಗಿಂತ ೧೦-೭೦ ಪಟ್ಟು ವಿಟಾಮಿನ್‌ ಘಿ‘ಎಘಿ’ ಇದೆ. ಇತರೆ ವಿಟಮಿನ್‌ಗಳು, ಪೋಷಕಾಂಶಗಳು ಇದರಲ್ಲಿವೆ. ಇದಕ್ಕಾಗಿಯೇ ಇದನ್ನು ವಿಟಮಿನ್‌ ಸೊಪ್ಪು, ಮಲ್ಟಿವಿಟಮಿನ್‌ ಪ್ಲಾಂಟ್‌ ಎನ್ನುತ್ತಾರೆ. ಯಥೇಚ್ಚವಾಗಿ ತಿನ್ನುವುದಕ್ಕಿಂತ ಆಗಾಗ್ಗೆ ಇತರೆ ಸೊಪ್ಪುಗಳೊಂದಿಗೆ ಹಿತವಾದ ಪ್ರಮಾಣದಲ್ಲಿ ಬಳಸುವುದು ಕ್ಷೇಮಕರ. ರಾಜ್ಯದ ಕೆಲವಾರು ಕಡೆ ಚಕ್ರಮುನಿಯ ಗಿಡಗಳನ್ನು ಕೃಷಿಕರು ಬೆಳೆಸಿ, ಬಳಸುತ್ತಿದ್ದಾರೆ. ಕೆಲವು ನರ್ಸರಿಗಳಲ್ಲೂ ಸಸಿಗಳು ಸಿಗುತ್ತವೆ. ವಿವರಗಳಿಗೆ ಸಂಪರ್ಕಿಸಿ: ಮೊ: ೯೪೪೮೯ ೯೬೪೯೫.

No Comments to “ಜೀವನವೆಂಬ ಚಕ್ರದ ಭದ್ರತೆಗೆ : ಚಕ್ರಮುನಿ”

add a comment.

Leave a Reply

You must be logged in to post a comment.