ರ್ಯಾಂಕಿಂಗ್‌ ಪಟ್ಟಿಯ ೨೦ ರೊಳಗೆ ಲಕ್ಷ್ಮಣ್‌, ಇಶಾಂತ್‌ ಸೇರ್ಪಡೆ

ದುಬೈ : ನ್ಯೂಜಿಲೆಂಡ್‌ ವಿರುದಟಛಿದ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿವಿಎಸ್‌ ಲಕ್ಷ್ಮಣ್‌ ಐಸಿಸಿ ಟೆಸ್ಟ್‌ ಬ್ಯಾಂಟಿಂಗ್‌ ರ್ಯಾಂಕಿಂಗ್‌ ಪಟ್ಟಿಯ ಅಗ್ರ ೨೦ ರೊಳಗೆ ಮರಳಿ ದ್ದಾರೆ. ಗೌತಮ್‌ ಗಂಭೀರ್‌ ಭಾರತದ ಅಗ್ರ ದಾಂಡಿನನಾಗಿ ೫ನೇ ಸ್ಥಾನದಲ್ಲಿ ಮುಂದುವರಿದರೆ, ಸೆಹ್ವಾಗ್‌ ೧೭ ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲಿಂಗ್‌ ಪಟ್ಟಿಯಲ್ಲಿ ಇಶಾಂತ್‌ ಶರ್ಮಾ ೧೭ ನೇ ಸ್ಥಾನಕ್ಕೇರಿ ರುವುದು ಬಿಟ್ಟರೆ, ಹರಭಜನ್‌ ಸಿಂಗ್‌ (೬) ಮತ್ತು ಜಹೀರ್‌ (೧೪) ಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ನ್ಯೂಜಿಲೆಂಡ್‌ ವಿರುದಟಛಿದ ೨ನೇ ಟೆಸ್ಟ್‌ನಲ್ಲಿ ಶತಕ ದಾಖಲಿಸಿ ಪಂದ್ಯ ವನ್ನುಳಿಸಿದ ವಿವಿಎಸ್‌ ಲಕ್ಷ್ಮಣ್‌ ೨೧ ನೇ ಸ್ಥಾನದಿಂದ ೧೫ ಕ್ಕೆ ಏರಿದ್ದಾರೆ. ೩೦೫ ಕ್ಕೆ ಸರ್ವಪತನ ಕಂಡಿದ್ದ ಮೊದಲ ಇನ್ನಿಂಗ್ಸ್‌ನಲ್ಲಿ ೭೬ ರನ್‌ ಹಾಗೂ ಫಾಲೋ-ಆನ್‌ ಜತೆ ಹೊರಟಿದ್ದ ಭಾರತ ೪೭೬ ಕ್ಕೆ ೪ ವಿಕೆಟ್‌ ಕಳೆದು ಕೊಂಡಾಗ ಡ್ರಾ ಮಾಡಲು ಸಹಕರಿ ಸಿದ ಅಜೇಯ ೧೨೪ ರನ್ನುಗಳು ವಿವಿ ಎಸ್‌ ಲಕ್ಷ್ಮಣ್‌ ಬ್ಯಾಟಿಂಗ್‌ ರ್ಯಾಂಕಿಂಗ್‌ನಲ್ಲಿ ಮೇಲೇರಲು ಸಹಕಾರಿಯಾಗಿದೆ. ನ್ಯೂಜಿಲೆಂಡ್‌ ವಿರುದಟಛಿದ ಎರಡು ಇನ್ನಿಂಗ್ಸ್‌ಗಳಲ್ಲಿ ೪೯ ಹಾಗೂ ೬೪ ರನ್‌ ಗಳಿಸಿದ್ದ ಸಚಿನ್‌ ತೆಂಡೂಲ್ಕರ್‌ರವರು ಲಕ್ಷ್ಮಣ್‌ಗಿಂತ ಒಂದು ಸ್ಥಾನ ಮುಂದಿ ದ್ದಾರೆ. ಆರಂಭಿಕ ಆಟಗಾರ ಗೌತಮ್‌ ಗಂಭೀರ್‌ ಬ್ಯಾಟಿಂಗ್‌ ರ್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಅಗ್ರ ದಾಂಡಿಗ ನಾಗಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಸುದೀರ್ಘ ಕಾಲ ಕ್ರೀಸಿಗಂಟಿಕೊಂಡು ೧೩೭ ರನ್‌ ದಾಖಲಿಸುವ ಮೂಲಕ ಟೆಸ್ಟ್‌ನ್ನು ಬದುಕಿಸಿದ ಗಂಭೀರ್‌ ತನ್ನ ಐದನೇ ಸ್ಥಾನವನ್ನು ಉಳಿಸಿಕೊಂಡದ್ದು ಮಾತ್ರವಲ್ಲ, ಅವರ ಮುಂದಿನ ಸ್ಥಾನ ದಲ್ಲಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ ಕುರ್ಚಿ ಅಲುಗಾಡು ವಷ್ಟು ರ್ಯಾಂಕಿಂಗ್‌ ಅಂಕಗಳನ್ನು ಗಳಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೀರಾ ಹತ್ತಿರವಾಗಿದ್ದಾರೆ. ಎರಡೂ ಇನ್ನಿಂಗ್ಸ್‌ನಲ್ಲಿ ೩೪ ಮತ್ತು ೨೨ ರನ್‌ ಮಾತ್ರ ಗಳಿಸಿದ್ದ ಮತ್ತೊಬ್ಬ ಹೊಡೆಬಡಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ಎರಡು ಸ್ಥಾನ ಕುಸಿದು ೧೭ ಕ್ಕೆ ತಲುಪಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ನಾಯಕನಾಗಿಯೂ ಕಾರ್ಯ ನಿರ್ವಹಿಸಿದ್ದ ಸೆಹ್ವಾಗ್‌ ಬ್ಯಾಟಿಂಗ್‌ ಪ್ರದರ್ಶನ ನೀರಸ ವಾಗಿತ್ತು. ಹಾಗಾಗಿ ೧೫ ನೇ ಸ್ಥಾನದಿಂದ ಕೆಳಕ್ಕಿಳಿದಿದ್ದಾರೆ. ಬ್ಯಾಟಿಂಗ್‌ ವಿಭಾಗವನ್ನು ವೆಸ್ಟ್‌ಇಂಡೀಸ್‌ನ ಶಿವನಾರಾಯಣೆ ಚಂದರ್‌ಪಾಲ್‌ ಆಳುತ್ತಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಪಾಕಿಸ್ಥಾನದ ನಾಯಕ ಯೂನಿಸ್‌ ಖಾನ್‌ ಹಾಗೂ ಮೂರನೇ ಸ್ಥಾನದಲ್ಲಿ ಶ್ರೀಲಂಕಾ ಕಪ್ತಾನ ಕುಮಾರ ಸಂಗಕ್ಕರ ಮುಂದುವರಿದಿ ದ್ದಾರೆ. ಡ್ರಾಗೊಂಡ ಟೆಸ್ಟ್‌ನಲ್ಲಿ ೯೫ ಕ್ಕೆ ೩ ವಿಕೆಟ್‌ ಪಡೆದಿದ್ದ ವೇಗಿ ಇಶಾಂತ್‌ ಶರ್ಮಾ ಬೌಲರುಗಳ ವಿಭಾಗದಲ್ಲಿ ದಕ್ಷಿಣ ಆμ್ರಕಾದ ಜಾಕ್ವಾಸ್‌ ಕ್ಯಾಲಿಸ್‌, ಪಾಕಿಸ್ತಾನದ ದನೀಷ್‌ ಕನೇರಿಯಾ ಹಾಗೂ ಇಂಗ್ಲೆಂಡ್‌ನ ಮೋಂಟಿಪನೇಸರ್‌ ರನ್ನು ಹಿಂದಿಕ್ಕಿ ೧೭ ನೇ ಸ್ಥಾನವನ್ನು ಏರಿ ಕುಳಿತಿದ್ದಾರೆ. ಈ ಹಿಂದಿನ ರ್ಯಾಂಕಿಂಗ್‌ ಪಟ್ಟಿಯಲ್ಲಿ ಅವರು ೨೦ ನೇ ಸ್ಥಾನ ದಲ್ಲಿದ್ದರು. ಭಾರತದ ಅಗ್ರ ಬೌಲರ್‌ ಹರಭಜನ್‌ ಸಿಂಗ್‌ ಮತ್ತು ಜಹೀರ್‌ ಖಾನ್‌ ರ್ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿತ ಕಾಣದೆ ಸ್ಥಿರವಾಗಿದ್ದಾರೆ. ಭಜ್ಜಿ ಆರನೇ ಸ್ಥಾನದಲ್ಲಿ ಕೊಂಚ ರ್ಯಾಂಕಿಂಗ್‌ ಅಂಕ ಕಳೆದುಕೊಂಡರೂ ಸ್ಥಾನ ಭದ್ರವಾಗಿದೆ. ಜಹೀರ್‌ ಕಾನ್‌ ೧೪ ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಶ್ರೀಲಂಕಾದ ಖ್ಯಾತ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ ಬೌಲರುಗಳ ಪಟ್ಟಿಯ ಮುಂಚೂಣಿ ಸ್ಥಾನ ಬಿಟ್ಟುಕೊಟ್ಟಿಲ್ಲ ಅವರ ಹಿಂದೆ ದಕ್ಷಿಣ ಆμ್ರಕಾದ ಡೇಲ್‌ ಸ್ಟೈನ್‌ ಹಾಗೂ ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಿಚ್ಚೆಲ್‌ ಜಾನ್ಸನ್‌ ಭದ್ರವಾಗಿದ್ದಾರೆ. ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ ಪಟ್ಟಿಯಲ್ಲಿ ಭಾರತವು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಕಾಗಳ ಹಿಂದೆ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ವೆಲ್ಲಿಂಗ್ಟನ್‌ಲ್ಲಿನ ಟೆಸ್ಟ್‌ನಲ್ಲಿ ಜಯ ಗಳಿಸುತ್ತಿದ್ದರೆ ಟೀಮ್‌ ಇಂಡಿಯಾ ಸ್ಥಾನ ಬದಲಾಗುತ್ತಿತ್ತು. ಕೊನೆಯ ಟೆಸ್ಟ್‌ ಭಾರತ ಗೆದ್ದುಕೊಂಡರೆ ೨-೦ ಅಂತರದಲ್ಲಿ ಸರಣಿ ಗೆದ್ದಂತಾಗುತ್ತದೆ. ಹಾಗಾದಲ್ಲಿ ಭಾರತ ಹೊಂದಿರುವ ೧೧೮ ಅಂಕಗಳಲ್ಲಿ ಬದಲಾವಣೆಯಾಗದು ಮತ್ತು ನ್ಯೂಜಿಲೆಂಡ್‌ ಕೂಡ ೮೧ ಅಂಕಗಳೊಂದಿಗೆ ಸ್ಥಿರವಾಗುತ್ತದೆ. ಆದರೆ ನ್ಯೂಜಿಲೆಂಡ್‌ ಕೊನೆಯ ಟೆಸ್ಟನ್ನು ಗೆದ್ದುಕೊಂಡಲ್ಲಿ ಭಾರತ ೧೧೫ ಅಂಕಗಳಿಗೆ ಇಳಿಯಲ್ಪಡುತ್ತದೆ ಮತ್ತು ನ್ಯೂಜಿಲೆಂಡ್‌ ೮೫ ಕ್ಕೆ ತನ್ನ ಅಂಕಗಳನ್ನು ಹೆಚ್ಚಿಸಿಕೊಳ್ಳಲಿದೆ.

No Comments to “ರ್ಯಾಂಕಿಂಗ್‌ ಪಟ್ಟಿಯ ೨೦ ರೊಳಗೆ ಲಕ್ಷ್ಮಣ್‌, ಇಶಾಂತ್‌ ಸೇರ್ಪಡೆ”

add a comment.

Leave a Reply