ಸಚಿನ್‌, ಧೋನಿ, ಭಜ್ಜಿ ಅರ್ಧ ಶತಕ : ಭಾರತ ೩೭೫/೯

ವೆಲ್ಲಿಂಗ್ಟನ್‌ : ಟೀಮ್‌ ಇಂಡಿಯಾ ತನ್ನ ದಿಂಡುರುಳುವ ಪ್ರವೃತ್ತಿಯನ್ನೂ ಕೊನೆಯ ಟೆಸ್ಟ್‌ನಲ್ಲೂ ಮುಂದುವರಿಸಿದೆ. ಪ್ರಮುಖ ದಾಂಡಿಗರು ಬೇಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸುವ ಮೂಲಕ ಬೃಹತ್‌ ಕನಸನ್ನು ಚಿವುಟಿ ಹಾಕಿದರು. ಏಕದಿನ ಪಂದ್ಯದ ರೀತಿಯಲ್ಲಿ ಆಡಿದ ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಅರ್ಧಶತಕದ ಆಸುಪಾಸಿನಲ್ಲಿ ವೀರೇಂದ್ರ ಸೆಹ್ವಾಗ್‌ (೪೮) ಸುಳಿದರು. ಸಚಿನ್‌ ತೆಂಡೂಲ್ಕರ್‌ (೬೨), ಮಹೇಂದ್ರ ಸಿಂಗ್‌ ಧೋನಿ (೫೨), ಹರಭಜನ್‌ಸಿಂಗ್‌ (೬೦) ಅರ್ಧ ಶತಕ ಪೂರೈಸಿದರು. ಬಾಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಅಂತಿಮ ಪಂದ್ಯ ಶುಕ್ರವಾರ ಆರಂಭಗೊಂಡಿತು. ಟಾಸ್‌ ಗೆದ್ದ ನ್ಯೂಜಿಲೆಂಡ್‌ μಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲ ದಿನದಂತ್ಯಕ್ಕೆ ಭಾರತ ೯೦ ಓವರುಗಳಲ್ಲಿ ೯ ವಿಕೆಟ್‌ ನಷ್ಟಕ್ಕೆ ೩೭೫ ರನ್‌ ಗಳಿಸಿದೆ. ಎರಡನೇ ಟೆಸ್ಟ್‌ ಪಂದ್ಯದಿಂದ ಬೆನ್ನು ನೋವಿನ ಕಾರಣಕ್ಕೆ ಹೊರಗುಳಿದಿದ್ದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮೂರನೇ ಟೆಸ್ಟ್‌ಗಾಗಿ ಕಣಕ್ಕಿಳಿದರು. ಟೀಮ್‌ ಇಂಡಿಯಾ ಆರಂಭಿಕರಾಗಿ ಎಂದಿನಂತೆ ವೀರೇಂದ್ರ ಸೆಹ್ವಾಗ್‌ ಮತ್ತು ಗೌತಮ್‌ ಗಂಭೀರ್‌ ಅಂಕಣವನ್ನು ಆಳುವ ಮಹದಾಸೆ ಹೊಂದಿದ್ದರು. ಸೆಹ್ವಾಗ್‌ ಎಂದಿನ ಶೈಲಿಯಲ್ಲಿ ಬೀಡು ಬೀಸಾಗಿ ಆಡಿ ೪೮ ರನ್‌ ಗಳಿಸಿದ್ದಾಗ ಓಬ್ರಿಯನ್‌ ಎಸೆತವನ್ನು ವಿಕೆಟ್‌ ಕೀಪರ್‌ ಮೆಕಲಮ್‌ ಕೈಗಿತ್ತು ಪೆವಿಲಿಯನ್‌ ಸೇರಿಕೊಂಡರು. ಅವರು ಎದುರಿಸಿದ ೫೧ ಎಸೆತಗಳಲ್ಲಿ ೭ ಬೌಂಡರಿ ಮತ್ತು ಒಂದು ಸಿಕ್ಸರ್‌ ಕೂಡ ಸೇರಿತ್ತು. ಸೆಹ್ವಾಗ್‌ ಔಟಾದ ಮರು ಓವರಿನಲ್ಲಿಯೇ ಅವರ ಜೊತೆಗಾರ ಗೌತಮ್‌ ಗಂಭೀರ್‌ ಫ್ರಾಂಕ್ಲಿನ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಗಂಭೀರ್‌ ಆಗ ೪೭ ಎಸೆತಗಳಿಂದ ೨೩ ರನ್‌ ಗಳಿಸಿದ್ದರು. ೧೭ ಓವರುಗಳಲ್ಲಿ ೨ ವಿಕೆಟ್‌ ಕಳೆದುಕೊಂಡ ಭಾರತ ೭೫ ರನ್‌ ದಾಖಲಿಸಿತ್ತು. ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡರೂ ಮುಂದೆ ಬರುವ ದಾಂಡಿಗರು ಬೃಹತ್‌ ಇನ್ನಿಂಗ್ಸ್‌ ಕಟ್ಟುವ ಭರವಸೆ ಉಳಿದಿತ್ತು. ನಿರೀಕ್ಷೆಯಂತೆ ಮೂರನೇ ವಿಕೆಟ್‌ಗೆ ಜೊತೆಯಾದ ಸಚಿನ್‌ ತೆಂಡೂಲ್ಕರ್‌ ಮತ್ತು ರಾಹುಲ್‌ ದ್ರಾವಿಡ್‌ ೨೫.೫ ಓವರುಗಳಲ್ಲಿ ೯೦ ರನ್‌ ಕಲೆ ಹಾಕಿ ಕುಸಿತ ಕಂಡ ಭಾರತಕ್ಕೆ ಚೇತರಿಕೆ ತಂದಿತ್ತರು. ಆದರೆ ಸಚಿನ್‌ ತೆಂಡೂಲ್ಕರ್‌ ಅರ್ಧ ಶತಕ (೬೨) ದಾಖಲಿಸಿದ ಸ್ವಲ್ಪವೇ ಹೊತ್ತಿನಲ್ಲಿ ಮಾರ್ಟಿನ್‌ಗೆ ಮೊದಲ ತುತ್ತು ನೀಡಿದರು. ದ್ರಾವಿಡ್‌ ಬಹಳ ಹೊತ್ತು ಕ್ರೀಸಿಗಂಟಿಕೊಂಡದ್ದನ್ನು ಕೂಡ ಬೇರ್ಪಡಿಸಿದ್ದು, ಮಾರ್ಟಿನ್‌ ದ್ರಾವಿಡ್‌ ೩೫ ರನ್‌ ದಾಖಲಿಸಿದ್ದರು. ವಿ.ವಿ.ಎಸ್‌. ಲಕ್ಷ್ಮಣ್‌ ಮತ್ತು ಯುವರಾಜ್‌ ಸಿಂಗ್‌ ಅತ್ತ ಹಿರಿಯರ ಹಾದಿಯನ್ನೂ ತುಳಿಯದೆ ಆತುರಾತುರವಾಗಿ ಮರಳಿದರು. ಲಕ್ಷ್ಮಣ್‌ ೪ ರನ್‌ ಗಳಿಸಿದ್ದಾಗ ಟೀಮ್‌ ಸೌಥೀಗೆ ಹಾಗೂ ಯುವರಾಜ್‌ ೯ ರನ್‌ ಮಾಡಿದ್ದಾಗ ರೈಡರ್‌ಗೆ ಶರಣಾದರು. ಮಹೇಂದ್ರ ಸಿಂಗ್‌ ಧೋನಿ ಮತ್ತು ಹರಭಜನ್‌ ಸಿಂಗ್‌ ಜೊತೆಗಾರರು ೭ನೇ ವಿಕೆಟ್‌ಗೆ ೧೮.೫ ಓವರುಗಳಲ್ಲಿ ೭೯ ರನ್‌ ಕಲೆ ಹಾಕುವ ಮೂಲಕ ಕುಸಿತದ ನೋವನ್ನು ಕಡಿಮೆ ಮಾಡಲೆತ್ನಿಸಿದರು. ಧೋನಿ ೮೯ ಎಸೆತಗಳಿಂದ ೬ ಬೌಂಡರಿ, ೧ ಸಿಕ್ಸರ್‌ ಸಹಿತ ಅರ್ಧ ಶತಕ(೫೨) ಗಳಿಸಿ ಸೌಥೀಗೆ ಎರಡನೇ ಬಲಿಯಾದರೆ, ಹರಭಜನ್‌ ಸಿಂಗ್‌ ೭೮ ಎಸೆತಗಳಿಂದ ೭ ಬೌಂಡರಿ, ೧ ಸಿಕ್ಸರ್‌ ಸಹಿತ ೬೦ ರನ್‌ ಗಳಿಸಿ ಮಾರ್ಟಿನ್‌ಗೆ ಮೂರನೇ ಬಲಿಯಾದರು. ಎಲ್ಲರಿಗಿಂತ ಹೆಚ್ಚಾಗಿ ಭಜ್ಜಿ ಆಟ ಇಂದು ಗಮನ ಸೆಳೆಯಿತು. ಹರಭಜನ್‌ ಸಿಂಗ್‌ ಈ ಹಿಂದೆ ಟೆಸ್ಟ್‌ನಲ್ಲಿ ಆರು ಅರ್ಧಶತಕ ಬಾರಿಸಿದ್ದಾರೆ. ಅವುಗಳಲ್ಲಿ ಆಸ್ಟ್ರೇಲಿಯಾ ವಿರುದಟಛಿದ ಸಿಡ್ನಿಯ ೨೦೦೮ರ ಟೆಸ್ಟ್‌ ಹೊರತುಪಡಿಸಿ ಉಳಿದೆಲ್ಲವನ್ನೂ ಭಾರತ ಗೆದ್ದುಕೊಂಡ ದಾಖಲೆಯಿದೆ. ಇವತ್ತು ಅವರು ದಾಖಲಿಸಿದ್ದು ಏಳನೇ ಅರ್ಧಶತಕ. ಕೊನೆಗೆ ಜಹೀರ್‌ ಖಾನ್‌ ಸಿಡಿದು ನಿಂತರೂ ೩೩ಕ್ಕೇ ಸೀಮಿತವಾದರು. ಅವರು ೨೩ ಎಸೆತಗಳನ್ನು ಎದುರಿಸಿದ್ದರು. ಅದರಲ್ಲಿ ಆರು ಎಸೆತಗಳು ಬೌಂಡರಿ ಗೆರೆ ತಲುಪಿದ್ದವು. ದಿನದಂತ್ಯಕ್ಕೆ ಇಶಾಂತ್‌ ಶರ್ಮಾ ಮತ್ತು ಮುನಾಫ್‌ ಪಟೇಲ್‌ ಕ್ರೀಸಿನಲ್ಲಿದ್ದಾರೆ ಅವರು ಕ್ರಮವಾಗಿ ೧೫ ಮತ್ತು ೧೪ ರನ್‌ ಗಳಿಸಿದ್ದಾರೆ. ಒಟ್ಟಾರೆ ಭಾರತ ೯೦ ಓವರುಗಳಲ್ಲಿ ೩೭೫ ರನ್‌ ದಾಖಲಿಸಿದೆ. ನ್ಯೂಜಿಲೆಂಡ್‌ ಪರ ಕ್ರಿಸ್‌ ಮಾರ್ಟಿನ್‌ ೯೫ಕ್ಕೆ ೩ ವಿಕೆಟ್‌ ಪಡೆದು, ಸಂಭ್ರಮಿಸಿದರೆ, ಸೌಥೀ, ಓಬ್ರಿಯಾನ್‌ ತಲಾ ಎರಡೆರಡು ಹಾಗೂ ಫ್ರಾಂಕ್ಲಿನ್‌, ರೈಡರ್‌ ಒಂದೊಂದು ವಿಕೆಟ್‌ ಕಿತ್ತಿದ್ದಾರೆ. ಸ್ಕೋರ್‌ : ಭಾರತ : ಮೊದಲ ಇನ್ನಿಂಗ್ಸ್‌ ೩೭೫/೯ ಬ್ಯಾಟಿಂಗ್‌ : ಗೌತಮ್‌ ಗಂಭೀರ್‌ ೨೩, ವೀರೇಂದ್ರ ಸೆಹ್ವಾಗ್‌ ೪೮, ರಾಹುಲ್‌ ದ್ರಾವಿಡ್‌ ೩೫, ಸಚಿನ್‌ ತೆಂಡೂಲ್ಕರ್‌ ೬೨, ವಿವಿಎಸ್‌ ಲಕ್ಷ್ಮಣ್‌ ೪, ಯುವರಾಜ್‌ಸಿಂಗ್‌ ೯, ಮಹೇಂದ್ರ ಸಿಂಗ್‌ ಧೋನಿ ೫೨, ಹರಭಜನ್‌ ಸಿಂಗ್‌ ೬೦, ಜಹೀರ್‌ಖಾನ್‌ ೩೩, ಇಶಾಂತ್‌ ಶರ್ಮಾ ೧೫* ಮುನಾಫ್‌ ಪಟೇಲ್‌ ೧೪* ವಿಕೆಟ್‌ ಪತನ : ೧-೭೩ (ಸೆಹ್ವಾಗ್‌, ೧೫.೩ ಓವರ್‌), ೨-೭೫ (ಗಂಭೀರ್‌ ೧೭ ಓವರ್‌), ೩-೧೬೫ (ಸಚಿನ್‌ ೪೨.೫ ಓವರ್‌), ೪-೧೭೩ (ಲಕ್ಷ್ಮಣ್‌ ೪೮.೩ ಓವರ್‌), ೫-೧೮೨ (ಯುವರಾಜ್‌ ೫೧.೩ ಓವರ್‌), ೬-೨೦೪ (ದ್ರಾವಿಡ್‌ ೫೮.೧ ಓವರ್‌), ೭-೨೮೩ (ಧೋನಿ ೭೭ ಓವರ್‌), ೮-೩೧೫ (ಹರಭಜನ್‌ ೮೨ ಓವರ್‌), ೯-೩೪೭ (ಜಹೀರ್‌ ೮೬ ಓವರ್‌). ಬೌಲಿಂಗ್‌ : ಕ್ರಿಸ್‌ ಮಾರ್ಟಿನ್‌ ೨೪-೩-೯೫-೩, ಟಿಮ್‌ ಸೌಥೀ ೧೮-೧-೯೪-೨, ಇಯಾನ್‌ ಓಬ್ರಿಯಾನ್‌ ೨೧-೩-೮೮-೨, ಜೇಮ್ಸ್‌ ಫ್ರಾಂಕ್ಲಿನ್‌ ೧೪-೪-೩೮-೧, ಡೇನಿಯಲ್‌ ವೆಟ್ಟೋರಿ ೯-೧-೪೭-೦, ಜೆಸ್ಸಿ ರೈಡರ್‌ ೪-೨-೩-೧.

No Comments to “ಸಚಿನ್‌, ಧೋನಿ, ಭಜ್ಜಿ ಅರ್ಧ ಶತಕ : ಭಾರತ ೩೭೫/೯”

add a comment.

Leave a Reply

You must be logged in to post a comment.