ಸಂಬಂಧದ ಸೃಷ್ಟಿಕರ್ತ ದೇವರು

ನಮಗೆ ತಿಳಿದಿರುವ ಹಾಗೆ ಅಣ್ಣ- ತಮ್ಮ, ಅಕ್ಕ- ತಂಗಿ, ಅಪ್ಪ-ಅಮ್ಮ, ಅತ್ತೆ-ಮಾವ, ಅಜ್ಜಿ-ಅಜ್ಜ , ಮುಂತಾದ ಸಂಬಂಧಗಳ ಸೃಷ್ಟಿಕರ್ತ ಆ ದೇವತೆ. ನಾವು ಹುಟ್ಟಿದಾಗಲೆ ಇಂತಹವರು ನಿನಗೆ ಇಂಥ ಸಂಬಂಧ ಅಂತ ಬರೆದು ಕಳಿಸುತ್ತಾನಂತೆ ಇದು ಪ್ರಕೃತಿಯ ನಮ್ಮ ನಂಬಿಕೆಯು ಹೌದು. ಆದ್ರೆ ಸ್ನೇಹವನ್ನ ನಮ್ಮ ಇಷ್ಟಕ್ಕೆ ಬಿಡ್ತನಂತೆ ಆ ದೇವರು ಗೆಳೆತನ ಮಾಡಿಕೊಳ್ಳುವಅವಕಾಶ ನಮ್ಮ ಪಾಲಿಗೆ ದೇವರು ಕೊಟ್ಟವರವಂತೆ. ಇಂತವರೆ ಸ್ನೇಹಿರು ಇವರೊಂದಿಗೆ ಮಾತ್ರ ಸ್ನೇಹವಿರಬೇಕು ಅಂತ ಯಾವುದೇ ನಿಬಂಧಗಳಿಲ್ಲ ಆದ್ರೆ ಸಂಬಂಧಗಳಿಗೆ ಒಂದು ನಿಯಮವಿದೆ. ಅದರಂತೆ ಸಂಬಂಧಗಳು ಬೆಳೆಯುತ್ತವೆ. ಸಂಬಂಧಗಳಲ್ಲಿ ೩ ವಿಧ ಅವುಗಳೆಂದರೆ ರಕ್ತ ಸಂಬಂಧ, ಪ್ರೀತಿ ಸಂಬಂಧ, ಸ್ನೇಹ ಸಂಬಂಧ, ಮುಖ್ಯ ಅದಕ್ಕೆ ಮುಂದಿನ ವಿವರಣೆ ಸ್ನೇಹದ ಬಗ್ಗೆನೆ ನೀಡ್ತಿನಿ. ಸನಿಹದಲ್ಲಿದ್ದು ಹಿತವನ್ನು ಬಯಸುವನೆ ಸ್ನೇಹಿತ. ನಾವು ಕೆಲವೊಮ್ಮೆ ಕಷ್ಟಕಾಲದಲ್ಲಿ ನಮ್ಮವರೆ ನಮಗಾಗಲ್ಲ ಕಷ್ಟ ಬಂದಾಗ ಮೊದಲು ನೆನಪಾಗೋದೆ ಸ್ನೇಹಿತರು. ನಾವು ನೇರವಾಗಿ ನಮ್ಮ ಕಷ್ಟಗಳನ್ನು ಅವರ ಬಳಿಯಲ್ಲೆ ಹೇಳಿಕೊಳ್ಳುತ್ತೇವೆ. ಸ್ನೇಹಿತರು ಮಾತಿಗೆ ನಿಂತ್ರೆ ಅಬ್ಬಾ ! ಲೆಕ್ಕವಿಲ್ಲದಷ್ಟು ಮಾತು, ಲೆಕ್ಕವಿಲ್ಲದಷ್ಟು ತರಲೆಗಳು ಸ್ಕೂಲಲ್ಲಿ ಪಾಠ ಮಾಡುವಾಗ ಕಾಲೇಜಿನಲ್ಲಿ ಉಪನ್ಯಾಸ ನೀಡುವಾಗ ಎಲ್ಲೆಂದರಲ್ಲೆ ಮಾತಿಗಿಳಿದು ಅವರ ಬೈಗಳಿಗೆ ತುತ್ತಾಗುವುದು ಸಾಮಾನ್ಯ. ನಮ್ಮ ನೆನಪುಗಳನ್ನು ಕೆದಕಿದಾಗ ಇವೆಲ್ಲ ಹೊರಬರುತ್ತವೆ. ಹಾಗೆ ಆಲೋಚಿಸಿ ನೋಡಿದರೆ ನಮಗೆ ಅಷ್ಟೊಂದು ಮಾತಿನ ಅಗತ್ಯ ಇದ್ಯಾ ? ಖಂಡಿತ ಇದೆ. ಮನೆಯಲ್ಲಿ ಹೆಚ್ಚು ಮಾತನಾಡಲಾಗಲಿಲ್ಲ. ಕಾರಣ ಓದು ಬರಿ ಅಂತ ಅಪ್ಪ-ಅಮ್ಮ ಮಾತಿಗೆ ಕಡಿವಾಣ ಹಾಕಿರುತ್ತಾರೆ. ಆದ್ರೆ ಸ್ನೇಹಿತರ ಬಳಿ ಏನು ಇಲ್ಲ ಎಲ್ಲಾ ವಿಷಯವನ್ನು ಮಾತಾಡುತ್ತೇವೆ. ನಾವು ಮನೆಯಲ್ಲಿ ಹಂಚಿಕೊಳ್ಳಲಾಗದ ಕೆಲವು ವಿಷಯಗಳಿರುತ್ತವೆ. ಅಂದ್ರೆ ನನಗೆ ಅನಿಸುತ್ತೆ. ತಂದೆ-ತಾಯಿಯರ ಜೊತೆ ಆಡುವ, ಬೇರೆ ಸ್ನೇಹತರೊಟ್ಟಿಗೆ ಮಾತಾಡೊ ವಿಷಯವೆ ಬೇರೆ. ಇವರತ್ರ ಮಾತಾಡೊ ವಿಷಯ ಅವರಿಗೆ ಅನ್ವಯಿಸಲ್ಲ. ಅವರತ್ರ ಮಾತಾಡೊ ವಿಷಯ ಇವರಿಗೆ ಅನ್ವಯಿಸಲ್ಲ. ಸ್ನೇಹಿತರ ವಿನಿಮಯ ಮಾಡಿ ಕೊಳ್ಳುವ ಮಾತುಗಳನ್ನ ವಿಷಯಗಳನ್ನ ಇನ್ಯಾರ ಬಳಿಯೂ ಮಾತನಾಡಲು ಆಗಲ್ಲ. ಅದಕ್ಕೆ ಕೂತ್ರೆ -ನಿಂತ್ರೆ ಮಾತು, ಫೋನ್‌ನಲ್ಲಿ ಮಾತು, ಕ್ಯಾಂಟಿನ್‌ನಲ್ಲಿ ಮಾತು, ಕ್ಲಾಸ್‌ ರೂಂನಲ್ಲಿ ಮಾತು, ಥಿಯೇಟರ್‌ನಲ್ಲಿ ಮಾತು, ಇದು ಸಾಕಾಗದೆ ಎಂ.ಬಿ.ಶ್ವೇತ ತೃತೀಯ ಬಿ.ಎ, ಎ.ವಿ.ಕೆ., ಹಾಸನ. ಈಗ ಎಸ್‌.ಎಮ್‌. ಎಸ್‌. ನ ದಾರಿ ಹಿಡಿದಿರುವುದು ಕಟು ಸತ್ಯ. ತುಂಬಾ ವಾಸ್ತವವಾಗಿ ಹೇಳಬೇಕು ಅಂದ್ರೆ ಅಪ್ಪ-ಅಮ್ಮ ನನಗೆ ಪ್ರೆಂಡ್ಸ್‌ ಇದ್ದ ಹಾಗೆ ಅಂತಾರೆ ಹೊರತು ಪ್ರೆಂಡ್ಸ್‌ ನನಗೆ ಅಪ್ಪ- ಅಮ್ಮರ ತರ ಇದ್ದಾರೆ ಅಂತ ಯಾರು ಹೇಳಲ್ಲ. ಇದೇ ಗೆಳೆತನ ಮಹತ್ವ. ಜಗತ್ತಿನಲ್ಲಿ ನನಗೆ ಸ್ನೇಹಿತರೇ ಇಲ್ಲ. ಸ್ನೇಹಿತರು ಬೇಕಾಗೆ ಇಲ್ಲ ಅನ್ನೋ ಯಾವೊಬ್ಬ ಮಾನವನು ಹುಟ್ಟಿಲ್ಲ ಹುಟ್ಟದೂ ಇಲ್ಲ. ಸ್ನೇಹ ಅನ್ನೋದು ಹುಟ್ಟಿನಿಂದ ಬಂದಿರದಿದ್ದರೂ ಬೆಳೆಯುತ್ತ ಬೆಳೆಯುತ್ತ ಬರುವ ಪವಿತ್ರ ಬಂಧನ. ಇದರಲ್ಲಿ ಪ್ರಾಣಿಗಳು ಒಂದು ಕೈ ಮೇಲೆ. ಯಾಕಾಂದ್ರೆ ಒಂದು ತುಂಡು ಆಹಾರ ಸಿಕ್ಕಿದ್ರೆ ಸಾಕು ತನ್ನ ಸ್ನೇಹಿತರನ್ನೆಲ್ಲಾ ಗುಡ್ಡೆ ಹಾಕಿಕೊಂಡು ತಿಂದು ತೇಗುತ್ತವೆ. ಸ್ನೇಹ ಅಂದ್ರೆ ಮೊದಲು ನೆನಪಿಗೆ ಬರೋದು ಕರ್ಣ- ದುರ್ಯೋದನರು. ಇವರು ಎಂಥ ಆತ್ಮೀಯ ಸ್ನೇಹಿತರೆಂದರೆ ಕರ್ಣ-ದುರ್ಯೋದನನ ಮಡದಿ ಯೊಟ್ಟಿಗೆ ಪಗಡೆಯಾಡಲು ಮುಂದಾದ. ಪಂದ್ಯಕ್ಕೆ ಆಕೆ ತನ್ನ ಮುತ್ತಿನ ಸರವನ್ನ ಪಣವಾಗಿಟ್ಟಳು. ಆಟದಲ್ಲಿ ಆಕೆಯೆ ಸೋತಳು. ತಕ್ಷಣ ಕರ್ಣ ಆಕೆಯು ಕೊರಳಿಗೆ ಕೈಹಾಕಿ ಮುತ್ತಿನ ಹಾರ ಕಸಿದುಕೊಂಡ. ಹಾರ ತುಂಡಾಗಿ ಮಣಿಗಳೆಲ್ಲಾ ನೆಲದಲ್ಲಿ ಚೆಲ್ಲಾಡಿದವು. ಅದೇ ಸಮಯಕ್ಕೆ ಬಂದ ದುರ್ಯೋದನ ಬಿದ್ದ ಮುತ್ತುಗಳನ್ನು ಎತ್ತಿ ಕೊಡಲೆ ಎಂದು ಕೇಳುತ್ತಾನೆ. ಇದು ಇವತ್ತಿಗೂ ನನ್ನ ಮನಸ್ಸನ್ನು ಪುಳಕಿತಳನ್ನಾಗಿಸುತ್ತದೆ. ಇಂತ ಸ್ನೇಹಿತರು ಈಗ ಸಿಗಲು ಅಸಾಧ್ಯದ ಮಾತು. ಇಷ್ಟು ಹೊತ್ತು ಸ್ನೇಹದ ಮಹತ್ವವನ್ನೇ ಕುರಿತು ಹೇಳಿದೆ ಸ್ನೇಹತರ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ. ಇಂದಿನ ಸ್ನೇಹಿತರು ಆಪ್ತರು ಆತ್ಮೀಯರು ಕೇವಲ ಮಾತಿಗಷ್ಟೆ. ತಮ್ಮ ಕೆಲಸ ಗಿಟ್ಟಿಸಿ ಕೊಳ್ಳಲಷ್ಟೆ ಅಂತ ಪ್ರಾಣ ಸ್ನೇಹಿತರು ಕೇವಲ ಬೆರಳಣಿಕೆಯಷ್ಟು ಮಾತ್ರ. ನನ್ನ ಅನುಭವದ ಪ್ರಕಾರ ಈಗ ಸ್ನೇಹಿತರು ಕಷ್ಟ ಬಂದಾಗ ಸಹಾಯ ಮಾಡಲು ಇರುವ ವ್ಯಕ್ತಿಗಳಷ್ಟೆ. ನಾನು ಹೀಗೆ ಸ್ನೇಹಿತೆಗೆ ಸ್ನೇಹಿತರ ಬಗ್ಗೆ ಹೇಳು ಅಂತ ಹೇಳಿದೆ. ಅವರು ಈ ರೀತಿ ಹೇಳಿದ್ರು ಸ್ನೇಹಿತರು ಮೊಳೆ ಹೊಡೆಸಿಕೊಳ್ಳಲಷ್ಟೆ ಮತ್ತೆನಿಲ್ಲ. ಎಷ್ಟು ಹೊತ್ತು ಕೊರೆದರೂ ಕೊರೆಸಿಕೊಳ್ಳಲು ಸ್ನೇಹಿತರು ಬೇಕು ಅಂತ ಹೇಳಿದರು. ಸ್ನೇಹಿತರು ಈ ರೀತಿಯಲ್ಲಿ ಕಾಣಸಿಗುತ್ತಾರೆ ಅಂತ ನನಗನಿಸುತ್ತೆ. ಜಸ್ಟ್‌ ಪ್ರೆಂಡ್‌ ಮತ್ತು ಬೆಸ್ಟ್‌ ಪ್ರೆಂಡ್‌ ಇದು ಇಂದಿನ ಸ್ನೇಹದ ವಿಶಾಲ ಅರ್ಥ. ಜಸ್ಟ್‌ ಪ್ರೆಂಡ್ಸ್‌ ಎಲ್ಲಾದ್ರೂ ಸಿಕ್ಕಾಗ ಹಾಯ್‌ ಬಾಯ್‌ ಅಷ್ಟೆ . ಮತ್ತೆ ಏನಾದ್ರು ಅವರಿಂದ ನಾವು ಕೆಲಸ ಗಿಟ್ಟಿಸಿಕೊಳ್ಳಲು. ಇಲ್ಲ ನಮ್ಮಿಂದ ಅವರು ಸಹಾಯ ಪಡೆಯಲು ಬೇಕಾದ ಗೆಳೆಯರು. ಬೆಸ್ಟ್‌ ಪ್ರೆಂಡ್ಸ್‌ ಅಂದ್ರೆ ಆತ್ಮೀಯ ಗೆಳೆಯರು ಎಲ್ಲಾ ಕಾಲದಲ್ಲೂ ನಮ್ಮ ಜೊತೆ ಇರೊ ಸ್ನೇಹಿತರು ಕಷ್ಟಕ್ಕೆ ನೇರವಾಗಿ ಇಷ್ಟಕ್ಕೆ ವರವಾಗೊ ಹಿತವೆಂದರೆ ತಪ್ಪಾಗಲಾರದು. ಇನ್ನು ಜಸ್ಟು ಅಲ್ಲ ಬೆಸ್ಟು ಅಲ್ಲ. ಅನ್ನೋ ಗುಂಪಿನ ಸ್ನೇಹಿತರಿರುತ್ತಾರೆ. ಅವರ ಬಳಿ ಹೀಗೊಂದು ಕಷ್ಟದ ಸಂಗತಿಯೆ ಸರಿ. ಇವರ ಮನಸ್ಥಿತಿ ಹೇಗಪ್ಪ ಅಂದ್ರೆ ಬೇರೆ ಸ್ನೇಹಿತರನ್ನು ಹೆಚ್ಚು ಮಾತಾಡಿಸಬಾರದು. ಅವರೊಟ್ಟಿಗೆ ಹೆಚ್ಚಾಗಿ ಇರಬೇಕು ಅವರನ್ನು ಬಿಟ್ಟು ಎಲ್ಲೂ ಹೋಗಬಾರದು. ಅವರ ತಪ್ಪನ್ನು ಎತ್ತಿ ತೋರಿಸ ಬಾರದು. ಅದು ಸರಿಯೋ-ತಪ್ಪೋ ಅರ್ಥವೋ ಅನರ್ಥವೋ ನೀನೆ ಸರಿ ಅಂತ ಹೇಳಿದರಾಯಿತು. ನಮ್ಮಿಂದ ಅವರಿಗೆ ಸಹಾಯ ಸಿಕ್ಕಿದರಾಯಿತು. ಅವರ ಇಷ್ಟ ಕಷ್ಟಗಳು ನೆರವೇರಿದರಾಯಿತು. ಒಟ್ಟಿನಲ್ಲಿ ಹೇಳಬೇಕಂದ್ರೆ ಸಮಯ ಬಂದಾಗ ಉಪಯೋಗಕ್ಕೆ ಬರುವಂತವರೆ ಸ್ನೇಹಿತರೆಂಬ ಭಾವನೆ ಇರಬಹುದು. ಇನ್ನು ಕೆಲವರು ಅಪರೂಪಕ್ಕೆ ಆಕಸ್ಮಿಕವಾಗಿ ಸಿಕ್ಕಿ ಅನಿರೀಕ್ಷಿತವಾಗಿ ಕಣ್ಮರೆಯಾಗುತ್ತಾರೆ ಅವರಂತೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿತಾರೆ. ಅವರು ನಮಗೆ ಸಹಾಯ ಮಾಡ ಬಹುದು, ಮಾಡದೆ ಇರಬಹುದು. ಆದರೆ ಅವರು ನಮ್ಮೊಟ್ಟಿಗೆ ಕಳೆದ ಅಲ್ಪಕಾಲ ಸದಾ ನೆನಪಿಗೆ ಬರುತ್ತದೆ. ಇವರೂ ಒಂಥರ ಒಳ್ಳೆ ಸ್ನೇಹತರೆ. ಆದ್ರೆ ಎಲ್ಲಾ ಸಮಯದಲ್ಲೂ ನಮ್ಮೊಟ್ಟಿಗೆ ಇರೊದಿಲ್ಲ. ಆದ್ರೆ ಅವರ ಮಾತುಗಳು ಅಥವಾ ಅವರ ಸಹಾಯ ಸದಾ ಮನಸ್ಸಿನೊಳಗಿರುತ್ತದೆ ಎಂಬುದು ಸತ್ಯ. ನಾವು ಒಬ್ಬರನ್ನು ಸ್ನೇಹಿತರನ್ನಾಗಿ ಸ್ವೀಕರಿಸಿ ತುಂಬಾ ಹಚ್ಚಿಕೊಂಡಿರುತ್ತೇವೆ ಅದು ಸಹಜ. ಕೆಲವೊಮ್ಮೆ ನಮ್ಮ ಆಯ್ಕೆ ತಪ್ಪಾಗಿ ಅವರಿಂದ ನಂಬಿಕೆ ದ್ರೋಹ ಆದ್ರೆ ಮನಸ್ಸು ಎಷ್ಟು ಪೇಚಾಡುತ್ತೆ. ಬಹಳ ಘಾಸಿಯಾಗುತ್ತೆ. ಈ ಸಮಯದಲ್ಲಿ ನಾವು ಅವರಿಂದ ದೂರವಾಗಲು ಪ್ರಯತ್ನಿಸಿ ಮಾತು ನಿಲ್ಲಿಸಿ ಬಿಡುವ ನಿರ್ಧಾರಕ್ಕೆ ಬರುತ್ತೇವೆ. ಅದು ಆ ಕ್ಷಣಕ್ಕೆ ಸರಿ. ಇರಬಹುದು. ಆದರೆ ಅದನ್ನು ಮುಂದುವರೆಸದೆ ವ್ಯಕ್ತಿಯ ಯೋಗ್ಯತೆ ತಿಳಿದಂತಾಯಿತು ಎಂದು ಕೊಂಡು ಮತ್ತೆ ಮಾತಿಗಿಳಿದರಾಯಿತು. ತುಂಬಾ ಜನ ಸ್ನೇಹಿತರು ಇದ್ದರೆ ಒಬ್ಬರಿಗೊಬ್ಬರು ಗುನುಗುಡುತ್ತಾ ಅವರಲ್ಲೆ ಭಿನ್ನಾಭಿಪ್ರಾಯಗಳು ಉದ್ಭವಿಸುತ್ತವೆ. ಅದರ ಬದಲು ಇಬ್ಬರೆ ಸ್ನೇಹಿತರಿದ್ದರೆ ಈ ರೀತಿಯ ಸಮಸ್ಯೆಗಳು ಬರುವುದಿಲ್ಲ. ಇಬ್ಬರು ಪ್ರಾಣ ಸ್ನೇಹಿತರು ಎನ್ನುತ್ತಾರೆ ಹೊರತು ಮೂರು ನಾಲ್ಕು ಜನರನ್ನು ಪ್ರಾಣ ಸ್ನೇಹಿತರು ಎನ್ನುವುದಿಲ್ಲ. ನಾವು ಯಾವತ್ತು ಸ್ನೇಹವನ್ನು ನಿಂದಿಸಬಾರದು. ಅದು ಪವಿತ್ರವಾದದ್ದು ನಿಷ್ಕಲ್ಮಶವೂ ಹೌದು. ಆದರೆ ನಾವು ಆಯ್ಕೆ ಮಾಡಿಕೊಳ್ಳುವ ಸ್ನೇಹಿತರು ಹೇಗೆ ಎಂಬುದನ್ನು ತಿಳಿಯಬೇಕು ಆದ್ರೆ ಇದು ಕಷ್ಟದ ಕೆಲಸ. ಸ್ನೇಹ ಯಾವತ್ತು ಅಂದ-ಚಂದ ಆಸ್ತಿ, ಅಂತಸ್ತು, ಜಾತಿ ಲಿಂಗ ಎಂಬ ತಾರತಮ್ಯದಿಂದ ಹುಟ್ಟುವುದಿಲ್ಲ. ಇಬ್ಬರು ವ್ಯಕ್ತಿಗಳ ದ್ವಿಮುಖ ಭಾವನೆಗಳು ಪರಸ್ಪರ ಬೆರೆತು ಏಕಮುಖವಾಗಿ ಹರಿಯುವುದೆ ಸ್ನೇಹದ ಮೂಲ ಅಂತ ನನ್ನ ಭಾವನೆ. ಪ್ರೇಮಿಗಳು ಸಾಮಾನ್ಯವಾಗಿ ಜಗತ್ತಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸ್ಮೇಹಿತರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೇ ಇಲ್ಲ. ಸ್ನೇಹ ವಿಶಾಲವಾದ ಅರ್ಥವನ್ನು ಹೊಂದಿದೆ. ಹೇಗೆ ಅಂದ್ರೆ ಪ್ರೀತಿ ಕೇವಲ ಒಬ್ಬರಿಗೆ ಮೀಸಲು. ಒಬ್ಬರನ್ನೇ ಪ್ರೀತಿಸಬೇಕು ಅಂತ ನಿರ್ಬಂಧಗಳಿವೆ. ಆದ್ರೆ ಸ್ನೇಹ ವಿಶಾಲವಾದದ್ದು ಎಷ್ಟು ಜನರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ನಾವು ಪ್ರಾರಂಭದಲ್ಲಿ ಕಾಲೇಜಿಗೆ ಸೇರುವಾಗ ನನ್ನ ಗೆಳತಿ ಸೇರಿರುವ ಕಾಲೇಜಿಗೆ ನನ್ನನ್ನು ಸೇರಿಸಿ ಅಂತ ಹಟ ಹಿಡಿದಿರುವುದು ಉಂಟು. ಆ ಕಾಲೇಜಿ ನಲ್ಲಿ ಸರಿಯಾದ ವ್ಯವಸ್ಥೆಗಳಿದೆಯೇ ಅದು ನಮಗೆ ಬೇಡದ ವಿಷಯ. ಪ್ರೆಂಡ್‌ ಅಲ್ಲಿ ಸೇರಿದ್ದಾಳೆ. ನಾನು ಅಲ್ಲೆ ಸೇರಬೇಕು ಇಷ್ಟೆ ನಮಗೆ ತಿಳಿಯೋದು ಇದು ಸ್ನೇಹದ ಸೆಳೆತ. ಜೀವನ ಅಂತ ಒಂದು ಸಮುದ್ರ ಇದೆ ಅಂದ್ರೆ ಅಲ್ಲಿ ಸಾಕಷ್ಟು ಮೀನುಗಳಿರುತ್ತವೆ. ಅವರೆ ನಮಗೆ ಸಿಗುವ ಸ್ನೇಹಿತರು. ನಾವು ಈಜಿ ದಡ ಸೇರುವುದರೊಳಗಾಗಿ ಅವರ ಸಂಖ್ಯೆ ಬೃಹತ್‌ ಪ್ರಮಾಣದಲ್ಲಿ ಸಿಗುತ್ತೆ. ಬಯಸುವವನು ಸದಾ ನಮ್ಮ ಹಿತ ಅವನೆ ಪ್ರಾಣ ಸ್ನೇಹಿತ. ಸ್ನೇಹವಾಗದು ಎಂದು ಸೀಮಿತ ಇದು ನಿತ್ಯ ಜೀವಂತ.

One Comment to “ಸಂಬಂಧದ ಸೃಷ್ಟಿಕರ್ತ ದೇವರು”

  1. Muralidhar says:

    ಒದಿ ಥುಮ್ಬ ಕುಶಿ ಐಥು

Leave a Reply

You must be logged in to post a comment.