ಖಾನ್‌,ಭಜ್ಜಿ, ಮ್ಯಾಜಿಕ್‌: ಕಿವೀಸ್‌೧೯೭ಕ್ಕೆ ಆಲೌಟ್‌

ವೆಲ್ಲಿಂಗ್ಟನ್‌:ಜಹೀರ್‌ಖಾನ್‌ ಐದು ಹಾಗೂ ಹರಭಜನ್‌ಸಿಂಗ್‌ ಮೂರು ವಿಕೆಟ್‌ ಪಡೆಯುವ ಮೂಲಕ ನ್ಯೂಜಿಲೆಂಡ್‌ ೧೯೭ಕ್ಕೆ ಆಲೌಟ್‌ ಆಗಿದೆ. ಆರಂಭದಿಂದಲೇ ಸಂಪೂರ್ಣ ನಿಯಂತ್ರಣ ಹೊಂದಿದ್ದ ಭಾರತೀಯ ಬೌಲರುಗಳ ಎಸೆತಗಳಿಗೆ ನ್ಯೂಜಿಲೆಂಡ್‌ ದಾಂಡಿಗರ ಬ್ಯಾಟುಗಳಲ್ಲಿ ಉತ್ತರಗಳೇ ಇರಲಿಲ್ಲ. ಇಲ್ಲಿನ ಬಾಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಅಂತಿಮ ಪಂದ್ಯದ ಎರಡನೇ ದಿನದಾಟ ನಡೆ ಯಿತು.ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ೩೭೯ಕ್ಕೆ ಸರ್ವಪತನ ಕಂಡರೆ,ನ್ಯೂಜಿಲೆಂಡ್‌ ೧೯೭ಕ್ಕೆ ತನ್ನ ಆಟವನ್ನು ಮುಗಿಸಿ ೧೮೭ ರನ್ನುಗಳ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ಒಂದು ವಿಕೆಟ್‌ ನಷ್ಟಕ್ಕೆ ೫೧ ರನ್‌ ಗಳಿಸಿದೆ.ಆ ಮೂಲಕ ೨೩೩ ರನ್‌ಗಳ ಮುನ್ನಡೆ ದಾಖಲಿಸಿದೆ. ಮೊದಲ ದಿನದಂತ್ಯಕ್ಕೆ ಇಶಾಂತ್‌ ಶರ್ಮಾ ಮತ್ತು ಮುನಾಫ್‌ ಪಟೇಲ್‌ ಕ್ರಮವಾಗಿ ೧೫ ಮತ್ತು ೧೪ ರನ್‌ ಗಳಿಸಿದ್ದರು. ಭಾರತ ೯೦ ಓವರುಗಳಲ್ಲಿ ೯ ವಿಕೆಟ್‌ ಕಳೆದುಕೊಂಡು ೩೭೫ ರನ್‌ ದಾಖಲಿಸಿತ್ತು. ಇಶಾಂತ್‌ ಶರ್ಮಾ ೧೮ ರಲ್ಲಿದ್ದಾಗ ಮಾರ್ಟಿನ್‌ ಎಸೆತಕ್ಕೆ ವಿಕೆಟ್‌ ಒಪ್ಪಿಸಿದರು. ೧೫ ರನ್‌ ಗಳಿಸಿದ ಮುನಾಫ್‌ ಅಜೇಯರಾಗುಳಿದಿದ್ದಾರೆ. ಆ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ೩೭೯ ಕ್ಕೆ ಸರ್ವಪತನ ಕಂಡಿತು. ಮೊದಲ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ಗೆ ಮರ್ಮಾಘಾತ ನೀಡಿದವರು ಜಹೀರ್‌ಖಾನ್‌ ಮತ್ತು ಹರಭಜನ್‌ ಸಿಂಗ್‌. ಇವರ ಎಸೆತಗಳನ್ನೆದುರಿಸ ಲಾರದೆ ಕಿವೀಸ್‌ ದಾಂಡಿಗರೆಲ್ಲ ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಸೇರಿ ಕೊಂಡರು. ಯಾವೊಬ್ಬ ಬ್ಯಾಟ್ಸ್‌ ಮನ್ನನೂ ಕೂಡ ಅರ್ಧಶತಕದ ಹತ್ತಿರ ಸುಳಿಯಲು ಭಾರತೀಯ ಬೌಲರುಗಳು ಅವಕಾಶ ನೀಡಲಿಲ್ಲ. ಜಹೀರ್‌ಖಾನ್‌ ೬೫ ರನ್‌ಗಳಿಗೆ ಪ್ರಮುಖ ಐದು ವಿಕೆಟ್‌ ಪಡೆದರೆ, ಹರಭಜನ್‌ಸಿಂಗ್‌ ೪೩ಕ್ಕೆ ೩ ವಿಕೆಟ್‌ ಪಡೆದರು. ಇಶಾಂತ್‌ ಶರ್ಮಾ ಮತ್ತು ಮುನಾಫ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇವತ್ತು ಪಡೆದ ಐದು ವಿಕೆಟ್‌ ಸೇರಿ ಜಹೀರ್‌ಖಾನ್‌ ಪಡೆದ ಐದು ವಿಕೆಟ್‌ಗಳ ಗೊಂಚಲುಗಳ ಸಂಖ್ಯೆ ಏಳು…! ಅದರಲ್ಲೂ ಇಂದಿನ ಪಂದ್ಯದ ವಿಶೇಷವೆಂದರೆ ವಿಕೆಟ್‌ ಕೀಪರ್‌ ಮಹೇಂದ್ರಸಿಂಗ್‌ ಧೋನಿ ಆರು ಕ್ಯಾಚುಗಳನ್ನು ಹಿಡಿದ್ದು. ಫ್ಲೈನ್‌, ಟೇಲರ್‌,ಮೆಕಲಮ್‌,ವೆಟ್ಟೋರಿ ಮತ್ತು ಓಬ್ರಿಯಾನ್‌ ಹೊಡೆತಗಳು ರಾಂಚಿ ಹುಡುಗನ ಕೈ ಸೇರಿದವು. ಮಾರ್ಟಿನ್‌ಗುಪ್ರಿಲ್‌ ೧೭, ಡೇನಿಯಲ್‌ ಫ್ಲೈನ್‌ ೨, ಟೆಮ್‌ಮೆಕಿಂತೋಶ್‌ ೩೨, ಜೆಸ್ಸಿರೈಡರ್‌ ೩ ರನ್‌ ಗಳಿಸಿದಾಗ ಜಹೀರ್‌ಖಾನ್‌ ಬೆನ್ನು ಬೆನ್ನಿಗೆ ಪೆವಿಲಿಯನ್‌ ದಾರಿ ತೋರಿಸುವ ಮೂಲಕ ಅಪಾಯಕಾರಿ ದಾಂಡಿಗರ ಆಟವನ್ನು ತಪ್ಪಿಸಿದರು. ಅವರು ಪಡೆದ ಮತ್ತೊಂದು ವಿಕೆಟ್‌ ೧೬ ರನ್‌ ಗಳಿಸಿದ್ದ ಟಿಮ್‌ ಸೌಥಿಯವರದ್ದು. ರೋಸ್‌ ಟೇಲರ್‌ ೪೨,ಜೇಮ್ಸ್‌ ಫ್ರಾಂಕ್ಲಿನ್‌ ೧೫ ಹಾಗೂ ಬ್ರೆಂಡನ್‌ ಮೆಕಲಮ್‌ ೨೪ ಮಾಡಿದ್ದಾಗ ಹರಭಜನ್‌ಸಿಂಗ್‌ ತನ್ನ ಪೌರುಷ ತೋರಿಸಿ ಬ್ಯಾಟ್‌ ಬೀಸುವುದನ್ನು ನಿಲ್ಲಿಸಿದರು. ೧೯ ರನ್‌ ಗಳಿಸಿದ್ದ ಇಯಾನ್‌ ಓಬ್ರಿಯಾನ್‌ ಮುನಾಫ್‌ ಪಟೇಲ್‌ ಹಾಗೂ ೧೧ ರನ್‌ ಗಳಿಸಿದ್ದ ನಾಯಕ ಡೇನಿಯಲ್‌ ವಟ್ಟೋರಿ ಇಶಾಂತ್‌ ಶರ್ಮಾ ಬಲೆಗೆ ಬಿದ್ದರು. ಒಟ್ಟಾರೆ ೬೫ ಓವರುಗಳಲ್ಲಿ ೧೯೭ ರನ್‌ ಗಳಿಸಿದ ಕಿವೀಸರು ಆಟ ಮುಗಿಸಿದರು. ಭಾರತ ೩೭೯ ರನ ಗಳಿಸಿದ್ದರಿಂದ ಅವರು ಮೊದಲ ಇನ್ನಿಂಗ್ಸ್‌ ನಲ್ಲಿ ೧೮೨ ರನ್‌ಗಳ ಹಿನ್ನಡೆ ಅನುಭವಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ವೀರೇಂದ್ರ ಸೆಹ್ವಾಗ್‌ರನ್ನು ಕಳೆದುಕೊಂಡಿದೆ. ತನ್ನ ಎಂದಿನ ಶೈಲಿಯಲ್ಲೇ ಆಡಿದ ಅವರು ೭ ಎಸೆತಗಳಿಂದ ೩ಬೌಂಡರಿ ಸಿಡಿಸಿ ೧೨ ರನ್‌ ಮಾಡಿದ್ದಾಗ ಮಾರ್ಟಿನ್‌ ಎಸೆತಕ್ಕೆ ಬಲಿಯಾದರು. ಗೌತಮ್‌ ಗಂಭೀರ್‌(೨೮) ಮತ್ತು ರಾಹುಲ್‌ದ್ರಾವಿಡ್‌(೯)ಆಟವನ್ನು ನಾಳೆಗೆ ಮುಂದೂದಿದ್ದಾರೆ. ದಿನದಂತ್ಯಕ್ಕೆ ಭಾರತ ೧೬ ಓವರುಗಳಲ್ಲಿ ಒಂದು ವಿಕೆಟ್‌ ನಷ್ಟ ಕ್ಕೆ ೫೧ರನ್‌ ದಾಖಲಿಸುವ ಮೂಲಕ ೨೩೩ ರನ್ನುಗಳ ಮುನ್ನಡೆ ಸಾಧಿಸಿದೆ. ಸ್ಕೋರ್‌ : ಭಾರತ ಮೊದಲ ಇನ್ನಿಂಗ್ಸ್‌ ೩೭೯ ಎರಡನೇ ಇನ್ನಿಂಗ್ಸ್‌ ೫೧ಕ್ಕೆ ೧ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌೧೯೭ ಬ್ಯಾಟಿಂಗ್‌: ಟಿಮ್‌ ಮೆಕಿತೋಶ್‌೩೨, ಮಾರ್ಟಿನ್‌ ಗುಪ್ತಿಲ್‌ ೧೭,ಡೇನಿಯಲ್‌ ಫ್ಲೈನ್‌೨, ರೋಸ್‌ ಟೇಲರ್‌೪೨,ಜೆಸ್ಸಿರೈಡರ್‌೩, ಜೇಮ್ಸ್‌ ಫ್ರಾಂಕ್ಲಿನ್‌ ೧೫,ಬ್ರೆಂಡನ್‌ ಮೆಕಲಮ್‌೨೪, ಡೇನಿಯಲ್‌ ವೆಟ್ಟೋರಿ ೧೧,ಟಿಮ್‌ ಸೌಥೀ ೧೬, ಇಯಾನ್‌ಓಬ್ರಿಯಾನ್‌ ೧೯, ಕ್ರಿಸ್‌ ಮಾರ್ಟಿನ್‌೪. ವಿಕೆಟ್‌ ಪತನ: ೧-೨೧(ಗುಪ್ತಿಲ್‌ ,೭ ಓವರ್‌),೨-೩೧(ಫ್ಲೈನ್‌,೧೦.೧ ಓವರ್‌),೩-೮೦ (ಮೆಕಿಂತೋಶ್‌, ೨೭ಓವರ್‌),೪-೯೮ (ರೈಡರ್‌,೩೨.೧ ಓವರ್‌),೫-೧೨೦ (ಟೇಲರ್‌,೪೧.೧ ಓವರ್‌),೬-೧೨೫(ಫ್ರಾಂಕ್ಲಿ ನ್‌,೪೩.೨ ಓವರ್‌),೭-೧೩೮(ವೆಟ್ಟೋರಿ,೪೬.೩ ಓವರ್‌), ೮-೧೬೦ (ಸೌಥೀ,೫೪.೪ ಓವರ್‌), ೯-೧೮೧ (ಮೆಕಲಮ್‌, ೬೧.೩ ಓವರ್‌), ೧೦-೧೯೭ (ಓಬ್ರಿಯಾನ್‌,೬೫ ಓವರ್‌). ಬೌಲಿಂಗ್‌: ಜಹೀರ್‌ಖಾನ್‌ ೧೮-೨-೬೫-೫, ಇಶಾಂತ್‌ಶರ್ಮಾ ೧೪-೩-೪೭-೧, ಮುನಾಫ್‌ ಪಟೇಲ್‌ ೮-೨-೨೦-೧, ಹರಭಜನ್‌ಸಿಂಗ್‌ ೨೩-೪-೪೩-೩, ಯುವರಾಜ್‌ಸಿಂಗ್‌ ೨-೦-೧೦-೦.

No Comments to “ಖಾನ್‌,ಭಜ್ಜಿ, ಮ್ಯಾಜಿಕ್‌: ಕಿವೀಸ್‌೧೯೭ಕ್ಕೆ ಆಲೌಟ್‌”

add a comment.

Leave a Reply

You must be logged in to post a comment.