ಜನತಾಧ್ವನಿ : ಶಿವಪ್ಪ ರಾಜಕೀಯ ಬಿಡಲಿ

ಮಾನ್ಯರೆ, ದಿನಾಂಕ : ೩-೪ ೨೦೦೯ ರ ತಮ್ಮ ಪತ್ರಿಕೆಯಲ್ಲಿ ಘಿ‘ಘಿ‘ಸಿದಟಛಿಗಂಗಾ ಸ್ವಾಮೀಜಿಗೆ ರಾಜಕಾರಣ ಏಕೆ ಘಿ’ಘಿ’ ಎಂಬ ತಲೆಬರಹದಲ್ಲಿ ಬರೆದ ವಿಚಾರವು ನಮಗೆ ತುಂಬಾ ಖೇದ ಉಂಟಾಗಿದೆ. ಇದು ನನಗೊಬ್ಬಳಿಗೆ ಅಲ್ಲ ಜಾತಿ ಮತ ಬೇಧವಿಲ್ಲದೇ ಸ್ವಾಮೀಜಿಯ ಭಕ್ತ ಸಮೂಹಕ್ಕೆ ಉಂಟಾಗಿರುವ ನೋವು. ನೀವಾದರೂ ಘಿ‘ಘಿ‘ ರಾಜಕಾರಣ ಏಕೆ ಘಿ’ಘಿ’ ಎಂದು ಎದೆಗೆ ಗುಂಡಿಕ್ಕು ವಂತಹ ಪದ ಬಳಸುವ ಬದಲಾಗಿ, ರಾಜಕೀಯ ಮಾಡುತ್ತಿದ್ದಾರೆಯೇ ಎಂದು ಸ್ವಲ್ಪ ಮೃದುವಾಗಿ ಬರೆಯಬಹುದಾಗಿತ್ತು. ಪತ್ರಿಕೆಯಲ್ಲಿ ಬರೆದಿರುವ ವಿಚಾರ ಸರ್ವಮಾನ್ಯವಾಗಿದೆ. ಬಿ.ಬಿ.ಶಿವಪ್ಪ ಅವರು ಸ್ವಾಮೀಜಿ ರಾಜಿ ಮಾಡಿಸುವುದಾಗಿ ಹೇಳಿದ್ದಾರೆಂದು ಹೇಳಿಕೊಂಡಿದ್ದಾರೆ ಎಂಬುದು ನಿಜವೇ ಆಗಿದ್ದರೆ ಅವರ ಬಗ್ಗೆ ಬೇಸರವಾಗುತ್ತದೆ ಎಂದಿದ್ದೀರಾ. ನೀವು ಇಷ್ಟೊಂದು ಜನ ಸಮೂಹದವರೊಂದಿಗೆ ಹಾಗೂ ಸ್ವಾಮಿಗಳ ಬಗ್ಗೆ ಅಷ್ಟೊಂದು ಗೌರವ ಇಟ್ಟುಕೊಂಡಿದ್ದರೂ ಒಂದು ಘಳಿಗೆ ನೀವು ಸ್ವಾಮಿಯನ್ನು ಅನುಮಾನವಾಗಿ ನೋಡುತ್ತೀರಾ. ರಾಜಕೀಯದಲ್ಲಿ ಜಾತಿ ರಾಜಕೀಯ ರಾಜಕೀಯ ಮಾಡುತ್ತಿದ್ದಾರೆಂದು ಕೆಟ್ಟ ಮಾತುಗಳನ್ನಾಡುವುದು ಸಹಜ. ಆದರೆ ನೀವು ಸಿದಟಛಿಗಂಗಾ ಸ್ವಾಮಿಯವರು ಧರ್ಮಕ್ಕೆ ಕಳಂಕವನ್ನು ಉಂಟು ಮಾಡಿದ್ದಾರೆ ಎಂದು ಬರೆದಿರುವುದು ಬಹಳ ಶೋಚನೀಯ. ಸ್ವಾಮೀಜಿ ಧರ್ಮಕ್ಕೆ ಕಳಂಕವನ್ನುಂಟು ಮಾಡುವುದಾಗಿದ್ದರೆ ಮುಸ್ಲಿಮರುಗಳಂತೆ ಲಿಂಗಾಯಿತರುಗಳಿಗಾಗಿಯೇ ಅಲಾಯಿದವಾಗಿ ಕಾಲೇಜು, ಸಂಘ ಸಂಸ್ಥೆ , ಕಟ್ಟಿ ಲಿಂಗಾಯಿತರ ಭದ್ರಕೋಟೆಯನ್ನು ಕರ್ನಾಟಕದಲ್ಲಿ ನಿರ್ಮಿಸಿ ಸರ್ವಾಧಿಕಾರ ಸ್ಥಾಪಿಸುವಂತಹ ಶಕ್ತಿ ಅವರಿಗಿತ್ತು. ಆದರೆ ಅಂತಹ ಕೇವಲ ವ್ಯಕ್ತಿಯಾಗದೇ ವಿಶ್ವ ಮಾನವರಾಗಿದ್ದಾರೆ. ಶಿವಪ್ಪನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸ್ವಾಮಿಯವರ ಹೆಸರು ತಂದಿದ್ದಾರೆ. ಶಿವಪ್ಪನವರು ಬಿ.ಜೆ.ಪಿ.ಯನ್ನು ಬೆಳೆಸಿದವರು ಎಂಬ ಮಾತು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಆದರೆ ವಿರೋಧ ಪಕ್ಷದ ನಾಯಕತ್ವ ದೊರೆಯಲಿಲ್ಲವೆಂದು ಕಾಂಗ್ರೆಸ್ಸಿಗೆ ಹೋದರು. ಕಾಂಗ್ರೆಸ್ಸಿಗೆ ಹೋದ ಮಾತ್ರಕ್ಕೆ ಅಲ್ಲಿ ಅವರಿಗೆ ಸಿಗಬೇಕಾದ್ದು, ಪ್ರಾಥಮಿಕ ಸದಸ್ಯತ್ವ .ಅಲ್ಲಿ ಅವರಿಗೆ ಉತ್ತುಂಗಕ್ಕೆ ಏರಲು ಅವಕಾಶವಿಲ್ಲ. ಅವರಿಗಿಂತ ಮೊದಲಿನಿಂದ ದುಡಿದಿದ್ದವರನ್ನು ಬಿಟ್ಟು ಆಗ ತಾನೇ ಬಂದವರಿಗೆ ಯಾರೂ ಮಣಿಯನ್ನು ಹಾಕಿದರೂ ಯಾರೂ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಹಾಗೂ ಗುರುತಿಸಲು ಸಹ ಬೆಳೆದು ನಿಂತವರು ಬಿಡುವುದಿಲ್ಲ. ಶಿವಪ್ಪನವರು ಬಿ.ಜೆ.ಪಿ.ಯಲ್ಲಿ ಹೆಮ್ಮರವಾಗಿ ಬೆಳೆದು , ಆ ಮರವನ್ನು ಕಿತ್ತು , ಕಾಂಗ್ರೆಸ್ಸಿನಲ್ಲಿ ನೆಡಲು ಹೋದರು. ಬೆಳೆದು ನಿಂತ ಮರ ಬೆಳೆದಲ್ಲಿಯೇ ಇರಬೇಕೆ ಹೊರತು ಬೇರೆ ಕಡೆ ನೆಡಲು ಹೋದರೆ ಪೂರ್ಣ ಒಣಗಿ ಹೋಗುತ್ತದೆ. ಹಾಗೆಯೇ ಶಿವಪ್ಪನವರ ಬೆಳವಣಿಗೆ ಅಂತಿಮಗೊಂಡಿರುತ್ತದೆ. ಪುನ: ಬಿ.ಜೆ.ಪಿ.ಗೆ ಬಂದು ಹೊಸ ಸದಸ್ಯತ್ವವನ್ನು ಹೊಂದಿ ಎಲ್‌.ಕೆ.ಜಿ. ಮಗುವಿನ ಸ್ಥಾನಕ್ಕೆ ಸೇರಿದ್ದಾರೆ. ಆದಕಾರಣ ಅವರಿಗೆ ಪಕ್ಷದಲ್ಲಿ ಅವಕಾಶ ಇರುವುದಿಲ್ಲ. ಅವರು ಮಾಡಿದ್ದ ತಪ್ಪೇ ಅವರಿಗೆ ಮುಳುವಾಗಿದೆ. ಶಿವಪ್ಪನವರೇನೂ ತಮಗೆ ಭಾರಿ ವರ್ಚಸ್ಸು ಇದೆ ಎಂದು ಭಾವಿಸಿದ್ದಾರೆ ಎಂದು ಕಾಣುತ್ತದೆ. ಹಾಗೇನಾದರೂ ವರ್ಚಸ್ಸು ಇದ್ದಿದ್ದರೆ ಬಿ.ಜೆ.ಪಿ.ಯ ಕಿತ್ತಾಟವನ್ನು ಮನಗಂಡು ಶಿವಪ್ಪನವರನ್ನು ಜೆ.ಡಿ.ಎಸ್‌. ನವರು ಬಿಡುತ್ತಿದ್ದರೆ ? ರಾಜಕೀಯದ ಗುಟ್ಟು ಹುಟ್ಟಿದಂದಿನಿಂದ ಕೊನೆಯವರೆಗೆ ಒಂದೇ ಪಕ್ಷದಲ್ಲಿ ಅಥವಾ ಒಬ್ಬ ನಾಯಕನ ಹಿಂಬಾಲಕನಾಗಿದ್ದರೆ ಮಾತ್ರ ಬೆಳೆಯಲು, ಉಳಿಯಲು ಸಾಧ್ಯ. ನಿನ್ನೆ ತಾನೆ ಎಸ್‌.ಎಂ ಆನಂದ್‌ರವರು ನಾನು ರಾಜಕೀಯದಲ್ಲಿ ಇರುವವರೆಗೆ ಕಾಂಗ್ರೆಸ್ಸಿನಲ್ಲಿ ಇರುತ್ತೇನೆಂದು ಹೇಳಿದರು. ಅದು ಸರಿಯಾದ ರಾಜಕೀಯ ವ್ಯಕ್ತಿಯ ಧ್ಯೇಯ.ಹೆಚ್‌.ಕೆ.ಜವರೇಗೌಡರು ಒಂದು ಬಾರಿ ಮಾತನಾಡುವಾಗ ನಾನು ದೇವೇಗೌಡರ ನಾಯಕತ್ವ ಒಪ್ಪಿಕೊಂಡಿದ್ದೇನೆ. ಇರುವವರೆಗೆ ಅವರ ನಾಯಕತ್ವದಲ್ಲಿ ಇರುತ್ತೇನೆ. ಎಂತಹ ಕಷ್ಟವನ್ನು ಸಹಿಸುತ್ತೇನೆಂದರು. ಅಂತಹ ಧ್ಯೇಯವಿದ್ದರೂ ಮಾತ್ರ ರಾಜಕೀಯದಲ್ಲಿ ಬೆಳೆಯಲು ಸಾಧ್ಯ. ಶಿವಪ್ಪನವರು ಸ್ವಾಮೀಜಿಯವರ ಹೆಸರನ್ನು ಅಲ್ಲ. ಅವರ ನಾಮಸ್ಮರಣೆಗೂ ಯೋಗ್ಯರಲ್ಲ. ಸ್ವಾಮೀಜಿ ಅವರು ತಮ್ಮ ಜನ್ಮ ದಿನವನ್ನು ಸರ್ಕಾರದ ಹಣದಿಂದ ಮಾಡಬಾರದೆಂದು ಯಡಿಯೂರಪ್ಪನವರ ಬೇಡಿಕೆ ತಿರಸ್ಕರಿಸಿದಾಗ ಪ್ರಪಂಚದಾದ್ಯಂತ ಜನ ಜಾತಿ ಬೇಧ ಮರೆತು ಅವರ ಪಾದಕ್ಕೆ ಹಣ ತಂದು ಸುರಿದು, ಅವರ ಜನ್ಮ ದಿನ ಸಂಭ್ರಮವನ್ನು ಎಲ್ಲರೂ ಹಂಚಿಕೊಂಡರು. ಎಲುಬಿಲ್ಲದ ನಾಲಗೆಯ ಜನ ಮನ ಬಂದಂತೆ ಮಾತನಾಡಿಕೊಳ್ಳುತ್ತಿದ್ದರೆ, ಉರಿಯುತ್ತಿರುವುದಕ್ಕೆ ತುಪ್ಪ ಸುರಿಯುವಂತಹ ಕೆಲಸ ಮಾಡಬೇಡಿ. ಶಿವಪ್ಪನವರಿಗೆ ರಾಜಕೀಯ ಸಲ್ಲದು. ಗಂಭೀರವಾಗಿ ರಾಜಕೀಯ ತೊರೆದು ಶಾಂತವಾಗಿರಲಿ. -ಪುಷ್ಪ ಕೆಂಚಪ್ಪ, ವಕೀಲರು , ಹಾಸನ

No Comments to “ಜನತಾಧ್ವನಿ : ಶಿವಪ್ಪ ರಾಜಕೀಯ ಬಿಡಲಿ”

add a comment.

Leave a Reply

You must be logged in to post a comment.