ಸದಭಿರುಚಿಯ ಪ್ರೇಮದ ಕೌಟುಂಬಿಕ ಚಿತ್ರ ಗೌತಮ್‌

ನೆನಪಿರಲಿ  ಪ್ರೇಮ್‌ ಗೆ ಗೌತಮ್‌ ಬಹು ನಿರೀಕ್ಷೆಯ ಚಿತ್ರ. ಲವ್ವರ್‌ ಬಾಯ್‌ ಇಮೇಜಿನ ಪ್ರೇಮ್‌ಗೆ ನೆನಪಿರಲಿ , ಜೊತೆ ಜೊತೆಯಲಿ, ಚಿತ್ರಗಳ ನಂತರ ಯಶಸ್ಸಿನ ಕೊರತೆ ಕಾಡುತ್ತಿತ್ತು. ಸ್ವಮೇಕ್‌ ಚಿತ್ರದಲ್ಲಿ ಮಾತ್ರ ನಟಿಸುವ ಮಾತುಗಳನ್ನಾಡುತ್ತಿದ್ದ ಪ್ರೇಮ್‌ ಅನಿವಾರ್ಯ ಪರಿಸ್ಥಿತಿಯಲ್ಲಿ ವೃತ್ತಿ ಬದುಕಿನ ಯಶಸ್ಸಿಗಾಗಿ ಗೌತಮ್‌ ನಂತಹ ರೀಮೇಕ್‌ ಚಿತ್ರದಲ್ಲಿ ನಟಿಸಿ ದ್ದಾರೆ. ಗೌತಮ್‌ ಸದಭಿರುಚಿಯ ಕೌಟುಂಬಿಕ ಕಥೆಯುಳ್ಳ, ಪ್ರೇಮದ ಲೇಪನ ಹೊಂದಿದ ಸೂಪರ್‌ ಚಿತ್ರ. ೮೦ರ ದಶಕದಲ್ಲಿ ಹಿಂದಿಯಲ್ಲಿ ಸಾಹೆಬ್‌ ಎಂಬ ಚಿತ್ರ ಬಂದಿತ್ತು. ಅದರಲ್ಲಿ ಅನಿಲ್‌ಕಪೂರ್‌, ಅಮೃತಾ ಸಿಂಗ್‌ ರ ಅಭಿನಯ ಮನೋಜ್ಞ ರಾಗಿತ್ತು. ಅದೇ ಕನ್ನಡದಲ್ಲಿ ಕರ್ಣ ಚಿತ್ರವಾಗಿ ಮೂಡಿ ಬಂತು. ಇದರಲ್ಲಿ ವಿಷ್ಣುವರ್ಧನ್‌ ನೀಡಿದ ಅಭಿನಯ ಮನಸೂರೆಗೊಂಡಿತ್ತು. ಮುಂಚೆ ಅದು ತಮಿಳಿಗೂ ರೀಮೇಕ್‌ ಆಗಿ ಆಹಾ ಚಿ ತ್ರವಾಯಿತು. ಈಗ ಮತ್ತೆ ಅದೇ ಕಥೆ ಕನ್ನಡದಲ್ಲಿ ಸನ್ನಿವೇಶದ ಬದಲಾ ವಣೆ Áೂಂ ದಿಗೆ ಗೌತಮ್‌ ಆಗಿ ಇದೆಲ್ಲಾ ಬಂದು ಬದಿಗಿರಿಸಿ ಚಿತ್ರ ನೋಡುವುದಾದರೆ ಸದ್ಯದ ಸಂದರ್ಭದಲ್ಲಿ ಘಿಫಗೌತಮ್‌ಘಿಫ ಉತ್ತಮ ಚಿತ್ರವಾಗಿ ಬಂದಿದೆಯೆನ್ನ ಬಹುದು. ತಮಿಳಿನ ಸೀಟಿವಿಟಿ ಯನ್ನು ಕನ್ನಡದ ಸೀಟಿವಿಟಿಗೆ ಬದಲಾಯಿ ಸಿದ್ದರೆ ಚಿತ್ರ ಇನ್ನೂ ಆಪ್ತವಾಗುತ್ತಿತ್ತೋ ಏನೋ. ಇದ್ದುದರಲ್ಲಿ ಕಥೆ ಹಳಿ ತಪ್ಪದಂತೆ ಉತ್ತಮವಾಗಿ ಮೂಡಿ ಬಂದಿದೆ. ಶ್ರೀಮಂತ ಕುಟುಂಬದ ಮೂವರು ಮಕ್ಕಳ ಪೈಕಿ ಗೌತಮ್‌ ಎರಡನೆಯವನು. ಮನೆ ಜನರೆಲ್ಲ ರಿಂದಲೂ ಕೆಲಸಕ್ಕೆ ಬಾರದವ ನೆಂದೇ ಬೈಸಿಕೊಳ್ಳುವ ಗೌತಮ್‌ಗೆ ಮನೆಯವರ ಪರವಾಗಿ ಮದುವೆ, ತಿಥಿ ಕಾರ್ಯಕ್ರಮಗಳಿಗೆ ಹಾಜರಾಗುವ ಉಸ್ತುವಾರಿ. ಹೀಗಿರುವಾಗ ಗೌತಮ್‌ ಕಣ್ಣಿಗೆ ಬೀಳುವ ಸುಂದರಿ, ಅಡುಗೆ ಭಟ್ಟರ ಮಗಳು. ಆಕೆಯ ಪ್ರೀತಿಗಾಗಿ ಸುಳ್ಳು ಹೇಳುವ ಗೌತಮ್‌ ಅದಕ್ಕಾಗಿ ಪಡಿಪಾಟಲು ಪಡುತ್ತಾನೆ. ಮೈದುನನ ಪ್ರೀತಿಗೆ ಸಾಥ್‌ ನೀಡುವ ಅತ್ತಿಗೆ ಸುಧಾರಾಣಿ) ಐಡಿಯಾಗಳನ್ನು ಕೊಡುತ್ತಾಳೆ. ಮತ್ತು ಪೋಷಿಸುತ್ತಾಳೆ. ಈ ನಡುವೆ ಕುಟುಂಬದ ಸದಸ್ಯರ ತಂಟೆ ತಕರಾರುಗಳಿಗೆ ಆಹಾರವಾಗುವ ಗೌತಮ್‌ ಎಲ್ಲವನ್ನು ನಿರ್ಭಾವುಕ ನಾಗಿಯೇ ಎದುರಿಸುತ್ತಾನೆ. ಪ್ರೇಮಿಯ ತಂದೆಗೆ (ರಮೇಶ್‌ ಭಟ್‌) ಸಹಾಯ ಮಾಡಿ ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾನೆ. ಮಧ್ಯೆ, ಅಣ್ಣನ (ಮೋಹನ್‌) ಗುಪ್ತ ಸಂಬಂಧದ ಎಳೆಯನ್ನು ಬಿಡಿಸಲು ಹೋಗಿ ತಾನೇ ಪರಿಸ್ಥಿತಿಯ ಕೈಗೊಂಬೆ ಯಾಗುತ್ತಾನೆ. ಇದರಿಂದ ಅಪ್ಪ (ಅನಂತನಾಗ್‌)ನ ಹೀಯಾಳಿಕೆಯ ಮಾತುಗಳನ್ನು ಕೇಳಬೇಕಾಗುತ್ತದೆ. ತಂಗಿಯ ಮದುವೆ ಸಂದರ್ಭ. ಅಣ್ಣ ಕಾಣೆಯಾದಾಗ ಎದುರಾಗುವ ಸನ್ನಿವೇಶ ಅವುಗಳನ್ನು ನಿಭಾಯಿಸುವ ಗೌತಮ್‌ ಸಂದಿಗಟಛಿಕ್ಕೆ ಸಿಲುಕೊ ತಂದೆಯಿಂದಲೇ ಮನೆ ಬಿಟ್ಟು ಹೋಗುವ ಸಂದರ್ಭ ತಂದುಕೊಳ್ಳು ತ್ತಾನೆ. ನಂತರದ್ದೆಲ್ಲಾ ಕ್ಲೈಮ್ಯಾಕ್ಸ್‌ನ ಸಿನಿಮೀಯ ದೃಶ್ಯಗಳು. ಬಹಳ ದಿನಗಳ ನಂತರ ನಟಿಸಿರುವ ಸುಧಾರಾಣಿ ಅತ್ತಿಗೆ ಯಾಗಿ, ಅಪ್ಪನ ಪಾತ್ರದಲ್ಲಿ ಅನಂತನಾಗ್‌ ಹಾಗೂ ಪ್ರೇಮ್‌ ತಮ್ಮ ಪಾತ್ರಗಳ ನಿರ್ವಹಣೆಯಲ್ಲಿ ನಿರೀಕ್ಷಿತ ಮಟ್ಟ ತಲುಪಿದ್ದಾರೆ. ಆ ಮಟ್ಟಿಗೆ ಮೂವರು ಔಟ್‌ ರೀಚ್‌ ಅಭಿನಯಕ್ಕೆ ಸರಿಸಾಟಿ ಎನ್ನುವಂತಿದೆ. ಅಷ್ಟೇ ಅಲ್ಲ. ನಿರ್ದೇಶಕ ರಾಜೀವ ಪ್ರಸಾದ್‌ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ವ ನೀಡಿ ಉತ್ತಮ ಅಭಿನಯ ಹೊರತೆಗೆದಿದ್ದಾರೆ. ವಿನಯಾ ಪ್ರಸಾದ್‌, ಶಿವರಾಂ, ಕೌಸಲ್ಯ, ಕೋಕಿಲಾ ಮೋಹನ್‌ ಅವರಿಗೆ ಸಿಕ್ಕ ಪಾತ್ರಗಳನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಗುರುಕಿರಣ್‌ರ ಸಂಗೀತದಲ್ಲಿ ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ. ಸುರೇಶ್‌ ಕೃಷ್ಣರ ಛಾಯಾಗ್ರಹಣ ಮತ್ತು ಸಂಕಲನ ಚಿತ್ರವನ್ನು ಸುಂದರವಾಗಿಸಿದೆ. ಚಿತ್ರದ ನಿರೂಪಣೆ ಮಧ್ಯೆ ತುಸು ನಿಧಾನವಾಯಿತು ಎನಿಸಿದರೂ ಮಧ್ಯಂತರದ ನಂತರ ಬಿರುಸಾಗಿದೆ. ಸಂಭಾಷಣೆ ಸೂಪರ್‌. ಚಿತ್ರದ ಹೀರೋ ಪ್ರೇಮ್‌ ಇದೇ ರೀತಿಯ ಪಾತ್ರವನ್ನು ರತ್ನಜರ ಹೊಂಗನಸು ನಲ್ಲಿ ಮಾಡಿದ್ದಾರಾದರೂ ಇಲ್ಲಿ ಕೊಂಚ ಬದಲಾವಣೆಯಾಗಿದೆ. ಅಭಿನಯದಲ್ಲಿ ಪ್ರೇಮ್‌ಗೆ ಫುಲ್‌ ಮಾರ್ಕ್ಸ್‌. ಚಿತ್ರದ ಕಾಸ್ಟ್ಯೂಮ್‌ ಹಾಗೂ ಕೊರಿಯಾಗ್ರμ ಕೂಡ ಹಿತಮಿತವಾಗಿದೆ. ಒಂದೇ ಮಾದರಿಯ ರೌಡಿಸಂ ಮತ್ತು ಪ್ರೇಮ ಕಥೆಯ ನಡುವೆ ಪ್ರೇಮ್‌ರ ಗೌತಮ್‌ ಬೇಸಿಗೆ ರಜೆಯಲ್ಲಿ ಕುಟುಂಬ ಸಮೇತ ನೋಡಬಹು ದಾದ ವಿಭಿನ್ನ ಕಥೆ.

No Comments to “ಸದಭಿರುಚಿಯ ಪ್ರೇಮದ ಕೌಟುಂಬಿಕ ಚಿತ್ರ ಗೌತಮ್‌”

add a comment.

Leave a Reply

You must be logged in to post a comment.