ನಿಮ್ಮ ನಿದ್ರೆಯಲ್ಲಿ ನಿಯಂತ್ರಣವಿರಲಿ

ನೀವು ಕಳೆದ ರಾತ್ರಿ ಸರಿಯಾಗಿ ನಿದ್ರಿಸಿಲ್ಲ ಎಂದಾದರೆ ಅಥವಾ ಇಡೀ ದಿನ ನಿತ್ರಾಣಗೊಂಡಂತಾಗಿದ್ದೀರಿ ಎಂದಾದರೆ ನೀವೂ ಸಹ ನಿದಿರಾ ಅಸ್ವಸ್ಥತೆಯಿಂದ ಬಳಲುತ್ತಿರುವ ಸಾವಿರಾರು ಮಂದಿಯಲ್ಲಿ ಒಬ್ಬರು ಎಂದು ಅರ್ಥ. ಉದ್ವಿಗ್ನತೆ, ಅಸಿಡಿಟಿ ಹಾಗೂ ಇತರ ಹಲವಾರು ಲೈಫ್‌ಸ್ಟೈಲ್‌ ಕಾಯಿಲೆಗಳು ನಿಮ್ಮ ನಿದ್ದೆಗೆ ಹಾವಳಿ ಮಾಡುವ ಸಂಭವವೂ ಇದೆ. ಉತ್ತಮ ನಿದ್ರೆಯು ನಿಮ್ಮನ್ನು ದಿನ ಪೂರ್ತಿ ಜಾಗೃತವಾಗಿ ಎಚ್ಚರದಿಂದ ಮತ್ತು ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಹಾಗಾಗಿ ರಾತ್ರಿಯಲ್ಲಿ ಉತ್ತಮವಾಗಿ ನಿದ್ರಿಸುವ ಉತ್ತಮ ಆರೋಗ್ಯಕ್ಕೆ ನಾಂದಿ ಎಂಬುದಾಗಿ ತಜ್ಞರು ಹೇಳುತ್ತಾರೆ. ನಿದ್ರೆಯು ನಮ್ಮ ಆರೋಗ್ಯ ಹಾಗೂ ಶ್ರೇಯಸ್ಸಿಗೆ ಅತಿಮುಖ್ಯ ವಾಗಿದೆ. ನಿದ್ರಾಹೀನತೆಯಿಂದ ಕಡಿಮೆಯಾಗುವ ನಿದ್ರಾ ಪ್ರಮಾಣಕ್ಕೆ ನಾವು ಕತ್ತರಿ ಹಾಕಬಾರದು. ನಿಮ್ಮನ್ನು ಅದು ನಿಯಂತ್ರಿಸುವ ಮುನ್ನ ನಿದ್ರೆಯ ಮೇಲೆ ನಿಯಂತ್ರಣ ಹೊಂದಿ ಎಂಬುದಾಗಿ ರಾಮನಾಥನ್‌ ಐಯ್ಯರ್‌ ಹೇಳುತ್ತಾರೆ. ಐಯ್ಯರ್‌ ಅವರು ನಿದ್ರಾ ಅಸ್ವಸ್ಥತೆ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ನಿದ್ರಾಹೀನತೆ ಅಥವಾ ಇನ್ಸೋಮ್ನಿಯಾ ಕಾಯಿಲೆಯು ನಿದ್ರೆಗೆ ಜಾರುವ ಸಮಸ್ಯೆ, ನಿರ್ವಹಣೆ ಮತ್ತು ಅವಧಿ ಹಾಗೂ ನಿದ್ದೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿರುವವರು ಕಳಪೆ ಏಕಾಗ್ರತೆ, ಕಡಿಮೆ ಉತ್ಪಾದಕತೆ ಮತ್ತು ತಮ್ಮ ಕೆಲಸದಲ್ಲಿ ಕಳಪೆ ಗುಣಮಟ್ಟಕ್ಕೆ ಕಾರಣವಾಗುತ್ತಾರೆ. ಇದಲ್ಲದೆ ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಆಯಾಸ, ಬಳಲಿಕೆ, ಕಿರಿಕಿರಿಗೊಳಗಾಗುವಿಕೆ ಮತ್ತು ಮರೆಗುಳಿತನ ಕಾಣಿಸಿಕೊಳ್ಳ ಬಹುದಾಗಿದ್ದು, ಇದು ಸಂಬಂಧಗಳು ಹಳಸಲೂ ಕಾರಣವಾಗುವ ಸಂಭವವಿದೆ ಎಂದು ಅಪಾಯದ ಗಂಟೆಯನ್ನೂ ಅಧ್ಯಯನ ಬಾರಿಸಿದೆ. ನಿದ್ರಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮತ್ತು ನಿದ್ರೆಯ ಸುರಕ್ಷತೆಗಾಗಿ ನಿದ್ರೆಯನ್ನು ಅತ್ಯಂತ ವಿಶ್ರಾಂತಿದಾಯಕವಾಗಿ ಮತ್ತು ಆನಂದದಾಯಕವಾಗಿಸುವುದು ಆರೋಗ್ಯಕರ ನಿದ್ರೆಯ ಅಭ್ಯಾಸಕ್ಕೆ ಸಹಾಯ ಮಾಡುತ್ತದೆ ಎಂಬುದಾಗಿ ಮುಂಬೈ ಮೂಲಕ ಮನಃಶಾಸ್ತ್ರಜ್ಞ ಮನೋಜ್‌ ಭಟವಾಡೇಕರ್‌ ಹೇಳುತ್ತಾರೆ.

No Comments to “ನಿಮ್ಮ ನಿದ್ರೆಯಲ್ಲಿ ನಿಯಂತ್ರಣವಿರಲಿ”

add a comment.

Leave a Reply

You must be logged in to post a comment.