ಕ್ಯಾಚ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ದ್ರಾವಿಡ್‌

ನ್ಯೂಜಿಲೆಂಡ್‌ ವಿರುದ್ದದ ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು ಜಹೀರ್‌ ಖಾನ್‌ ಎಸೆತವನ್ನು ಟಿಮ್‌ ಮೆಕಿಂತೋಶ್‌ ರವರು ರಾಹುಲ್‌ ದ್ರಾವಿಡ್‌ ಕೈಗಿಡುವ ಮೂಲಕ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಕ್ಯಾಚ್‌ ಪಡೆದ ಹೆಗ್ಗಳಿಕೆ ದ್ರಾವಿಡ್‌ ಮುಡಿಗೇರಿದೆ. ತನ್ನ ೧೩೪ನೇ ಟೆಸ್ಟ್‌ನಲ್ಲಿ ೧೮೨ನೇ ಕ್ಯಾಚ್‌ ಪಡೆದ ದ್ರಾವಿಡ್‌ ಈ ಹಿಂದೆ ಆಸ್ಟ್ರೇಲಿ ಯಾದ ಬ್ಯಾಟ್ಸ್‌ಮನ್‌ ಮಾರ್ಕ್‌ ವಾಗ್‌ ೧೨೮ ಟೆಸ್ಟ್‌ಗಳಿಂದ ೧೮೧ ಕ್ಯಾಚ್‌ ಪಡೆದಿದ್ದ ದಾಖಲೆಯನ್ನು ಮುರಿದು ಮೇಲ್ದರ್ಜೆಗೇರಿದರು. ಇದೇ ಪಂದ್ಯದಲ್ಲಿ ಮತ್ತೊಂದು ಕ್ಯಾಚ್‌ ಪಡೆಯುವ ಮೂಲಕ ದ್ರಾವಿಡ್‌ ಇದೀಗ ೧೮೩ ಕ್ಯಾಚ್‌ ಪಡೆದಂತಾಗಿದೆ. ಇದು ಅವರಾಡುತ್ತಿದ್ದ ೨೪೭ನೇ ಇನ್ನಿಂಗ್ಸ್‌. ಒಂದು ಪಂದ್ಯದಲ್ಲಿ ಅತೀ ಹೆಚ್ಚೆಂದರೆ ಮೂರು ಕ್ಯಾಚ್‌ ಪಡೆದ ದಾಖಲೆ ದ್ರಾವಿಡರದ್ದು. ರಾಹುಲ್‌ ದ್ರಾವಿಡ್‌ ೧೯೯೬ ರಿಂದ ೨೦೦೯ ರ ಅವಧಿಯಲ್ಲಿ ೧೩೪ ಟೆಸ್ಟ್‌ಗಳಿಂದ ೧೮೩ ಕ್ಯಾಚ್‌ ಪಡೆದರೆ, ಮಾರ್ಕ್‌ ವಾ ೧೯೯೧ ರಿಂದ ೨೦೦೨ ರೊಳಗೆ ೧೨೮ ಟೆಸ್ಟ್‌ಗಳಿಂದ ೧೮೧ ಕ್ಯಾಚ್‌ ಗಿಟ್ಟಿಸಿದ್ದರು. ನ್ಯೂಜಿಲೆಂಡ್‌ ಮಾಜಿ ಕಪ್ತಾನ ಸ್ಟೀಫನ್‌ ಫ್ಲೆಮಿಂಗ್‌ ೧೯೯೪ ರಿಂದ ೨೦೦೮ ರ ಅವಧಿಯಲ್ಲಿ ೧೧೧ ಟೆಸ್ಟ್‌ ಪಂದ್ಯಗಳಿಂದ ೧೭೧, ವೆಸ್ಟ್‌ ಇಂಡೀಸ್‌ ಖ್ಯಾತ ಬ್ರಿಯಾನ್‌ ಲಾರಾ ೧೯೯೦ ರಿಂದ ೨೦೦೬ ರೊಳಗೆ ೧೩೧ ಟೆಸ್ಟ್‌ ಪಂದ್ಯಗಳಿಂದ ೧೬೪ ಹಾಗೂ ಆಸ್ಟ್ರೇಲಿಯಾದ ಮಾರ್ಕ್‌ ಟೇಲರ್‌ ೧೯೮೯ ರಿಂದ ೧೯೯೯ ರ ಅವಧಿಯಲ್ಲಿ ೧೦೪ ಪಂದ್ಯಗಳಿಂದ ೧೫೭ ಕ್ಯಾಚ್‌ ಪಡೆದಿದ್ದರು. ಜಾವಗಲ್‌ ಶ್ರೀನಾಥ್‌ ಎಸೆತ ವನ್ನು ನಾಸಿನ್‌ ಹುಸ್ಕೆನ್‌ ದ್ರಾವಿಡ್‌ ಕೈಗಿಡುವ ಮೂಲಕ ಅವರು ಕ್ಯಾಚ್‌ ಅಭಿಯಾನ ಆರಂಭಿಸಿದ್ದರು. ಇದೀಗ ಪ್ರಸಕ್ತ ಆಡುವ ಕ್ರಿಕೆಟಿಗರಲ್ಲಿ ರಿಕಿ ಪಾಂಟಿಂಗ್‌ ೧೩೧ ಟೆಸ್ಟ್‌ಗಳಿಂದ ೧೪೮ ಕ್ಯಾಚ್‌ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನ ದಕ್ಷಿಣ ಆμ್ರಕಾದ ಜಾಕ್ವಾಸ್‌ ಕ್ಯಾಲಿಸ್‌ರದ್ದು. ಅವರು ೧೩೧ ಟೆಸ್ಟ್‌ ಗಳಿಂದ ೧೪೭ ಕ್ಯಾಚ್‌ ಪಡೆದಿದ್ದಾರೆ. ಮಹೇಲಾ ಜಯವರ್ಧನ ೧೦೨ ಪಂದ್ಯಗಳಿಂದ ೧೪೨ ಕ್ಯಾಚ್‌ ಪಡೆಯು ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಶ್ವದಾಖಲೆ ನಿರ್ಮಾಣವಾಗು ತಿದ್ದಂತೆ ದ್ರಾವಿಡ್‌ರವರು ಮೈದಾನಕ್ಕೆ ಮುತ್ತಿಕ್ಕುವ ಮೂಲಕ ಕ್ರೀಡೆ ಯೊಂದಿಗಿನ ತನ್ನ ಭಾವನಾತ್ಮಕ ಸಂಬಂಧವನ್ನು ಪ್ರಚುರಪಡಿಸಿದರು. ಈ ಸಂದರ್ಭದಲ್ಲಿ ಟೀಮ್‌ ಇಂಡಿಯಾ ಸದಸ್ಯರೆಲ್ಲರೂ ದ್ರಾವಿಡರನ್ನು ಮುತ್ತಿಕೊಂಡು ಅಭಿನಂದಿಸಿದರು. ಘಿ‘ಘಿ‘ನಾನು ಬ್ಯಾಟಿಂಗ್‌ ಮಾಡಿದ ರೀತಿಯಲ್ಲಿ ಪ್ರತಿ ಟೆಸ್ಟ್‌ನಲ್ಲೂ ಶತಕ ದಾಖಲಿಸಬೇಕಿತ್ತು ಘಿ’ಘಿ’ ಎಂದು ಅತೀ ಹೆಚ್ಚು ಕ್ಯಾಚ್‌ ಪಡೆದ ಸಂಭ್ರಮ ದಲ್ಲೂ ಸರಣಿಯಲ್ಲಿ ಶತಕ ಗಳಿಸ ಲಾಗದ ನೋವಿದೆ ಎಂಬುದನ್ನು ತೋರಿಸಿ ಕೊಂಡರು. ಆದರೆ ಹತಾಶೆಯನ್ನು ಈ ಸಾಧನೆ ಮರೆ ಸಲು ಸಾಕಷ್ಟು ಸಹಾಯ ಮಾಡಿದೆ ಎನ್ನುವುದು ಅವರ ಮಾತಿನ ತಾತ್ಪರ್ಯವಾಗಿತ್ತು. ಅವರು ಮೂರು ಟೆಸ್ಟ್‌ಗಳಿಂದ ಕ್ರಮವಾಗಿ ೬೬.೮ ಅಜೇಯ,, ೮೩, ೬೨, ೩೫ ಮತ್ತು ೬೦ ರನ್‌ ಗಳಿಸುವ ಮೂಲಕ ನಾಲ್ಕು ಅರ್ಧ ಶತಕ ದಾಖಲಿಸಿದರೂ ಯಾವುದನ್ನೂ ಶತಕಕ್ಕೆ ಪರಿವರ್ತಿಸಲು ಸಾದ್ಯ ವಾಗಿರಲಿಲ್ಲ.

No Comments to “ಕ್ಯಾಚ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ದ್ರಾವಿಡ್‌”

add a comment.

Leave a Reply

You must be logged in to post a comment.