ಟೀಮ್‌ ಇಂಡಿಯಾ ಗೆಲುವಿಗಿನ್ನು ಕೆಲವೇ ಹೆಜ್ಜೆ …!

ವೆಲ್ಲಿಂಗ್ಟನ್‌ : ಟೀಮ್‌ ಇಂಡಿ ಯಾದ ಬೃಹತ್‌ ಮೊತ್ತವನ್ನು ಕಾಣುತ್ತಲೇ ಆರಂಭಿಕ ಕುಸಿತಕ್ಕೊಳ ಗಾದ ನ್ಯೂಜಿಲೆಂಡ್‌ ಸದ್ಯ ಚೇತರಿಕೆಯ ಪ್ರದರ್ಶನ ನೀಡುತ್ತಿದೆ ಯಾದರೂ ಅದು ಗೆಲುವಿನ ಹಂತದ್ದಲ್ಲ. ಸರಣಿಯನ್ನು ೨-೦ ಯಿಂದ ಕಳೆದುಕೊಳ್ಳುವ ಹೊಸ್ತಿಲ ಲ್ಲಿದ್ದರೂ ಕಿವೀಸ್‌ ಪಂದ್ಯವನ್ನು ಡ್ರಾ ಮಾಡಿಕೊಂಡು ಮಾನ ಉಳಿಸಿ ಕೊಳ್ಳುವ ಯೋಚನೆಯಲ್ಲಿದೆ. ಭಾರತಕ್ಕೆ ಗೆಲುವಿನ ತುತ್ತು ತಯಾರಾಗಿದೆ ಎಂದು ಭವಿಷ್ಯ ನುಡಿಯಬಹು ದೇನೋ…? ಎಲ್ಲವನ್ನೂ ಕೊನೆಯ ದಿನದಾಟ ನಿರ್ಧರಿಸಲಿದೆ. ಇಲ್ಲಿನ ಬಾಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಕೊನೆಯ ಟೆಸ್ಟ್‌ನ ನಾಲ್ಕನೇ ದಿನದಾಟ ಇಂದು ನಡೆಯಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ೩೭೯ ಹಾಗೂ ನ್ಯೂಜಿಲೆಂಡ್‌ ೧೯೭ಕ್ಕೆ ಸರ್ವ ಪತನ ಕಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ೬೧೬ ರನ್‌ಗಳ ಮುನ್ನಡೆ ದಾಖಲಿಸಿದ ಭಾರತ ೪೩೪ಕ್ಕೆ ಏಳು ವಿಕೆಟ್‌ ಕಳೆದಕೊಂಡಿದಾದಗ ಡಿಕ್ಲೇರ್‌ ಮಾಡಿಕೊಂಡಿದೆ. ಬೃಹತ್‌ ಮೊತ್ತವನ್ನು ಬೆನ್ನತ್ತಲು ಹೊರಟಿರುವ ನ್ಯೂಜಿಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ ೧೬೭ಕ್ಕೆ ೪ ವಿಕೆಟ್‌ ಕಳೆದುಕೊಂಡಿದ್ದು, ಗೆಲುವು ದಾಖಲಿಸುವುದಾದರೆ ಇನ್ನೂ ೪೫೦ ರನ್‌ಗಳ ಅವಶ್ಯಕತೆ ಇದೆ. ಬೆಳಕಿನ ಕೊರತೆ ಕಂಡು ಬಂದ ಕಾರಣ ದಿನದಾಟದಲ್ಲಿ ಇನ್ನೂ ೨೧ ಓವರುಗಳು ಬಾಕಿ ಉಳಿದಿರುವಾಗಲೇ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮೂರನೇ ದಿನದಂತ್ಯಕ್ಕೆ ಭಾರತ ೯೭.೫ ಓವರುಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ ೩೪೯ ರನ್‌ ದಾಖಲಿಸಿತ್ತು. ಯುವರಾಜ್‌ ಸಿಂಗ್‌ ಮತ್ತು ಧೋನಿ ಕ್ರಮವಾಗಿ ೧೫ ಮತ್ತು ೧೬ ರನ್ನುಗಳೊಂದಿಗೆ ಅಜೇಯ ರಾಗುಳಿದು ಆಟವನ್ನು ಮುಂದೂ ಡಿದ್ದರು. ಇಂದು ಯುವರಾಜ್‌ ಸಿಂಗ್‌ ೪೦ ರನ್‌ ಗಳಿಸಿದ್ದಾಗ ಔಟಾಗಿದ್ದಾರೆ. ಧೋನಿ ೫೬ ಹಾಗೂ ಜಹೀರ್‌ ಖಾನ್‌ ೧೮ ರೊಂದಿಗೆ ಅಜೇಯರಾಗು ಳಿದರು. ಅದಕ್ಕೂ ಮೊದಲು ಹರಭಜನ್‌ ಸಿಂಗ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದಾರೆ. ಒಟ್ಟಾರೆ ೧೧೬ ಓವರುಗಳಲ್ಲಿ ೭ ವಿಕೆಟ್‌ ನಷ್ಟಕ್ಕೆ ೪೩೪ ರನ್‌ ಗಳಿಸಿದ್ದ ಟೀಮ್‌ ಇಂಡಿಯಾ ೬೧೬ ರನ್ನುಗಳ ಮುನ್ನಡೆಯೊಂದಿಗೆ ಡಿಕ್ಲೇರ್‌ ಘೊಷಿಸಿತು. ಎರಡನೇ ಇನ್ನಿಂಗ್ಸ್‌ ಆರಂಭಿ ಸಿದ ನ್ಯೂಜಿಲೆಂಡ್‌ ಆರಂಭದಲ್ಲೇ ಟಿಮ್‌ ವ ೆ ು ಕಿ ಂ ತ ೆ ೂ  ಶ ್‌ ರ ನ ು ್ನ ಕಳೆದುಕೊಂಡಿತು. ಅವರು ಕೇವಲ ೪ ರನ್‌ ಗಳಿಸಿದ್ದಾಗ ಜಹೀರ್‌ ಖಾನ್‌ಗೆ ಬಲಿಯಾದರು. ಮೆಕಿಂ ತೋಶ್‌ ಹೊಡೆತದ ಕ್ಯಾಚ್‌ ಪಡೆದದ್ದು, ರಾಹುಲ್‌ ದ್ರಾವಿಡ್‌. ಆ ಮೂಲಕ ಅವರು ಮಾರ್ಕ್‌ ವಾರವರ ೧೮೧ ಕ್ಯಾಚುಗಳ ವಿಶ್ವದಾಖಲೆಯನ್ನು ಮುರಿದರು. ನಂತರ ಡೇನಿಯಲ್‌ ಫ್ರೆೃನ್‌ ಕೂಡ ೧೯ರನ್‌ ಗಳಿಸಿದ್ದಾಗ ಜಹೀರ್‌ಖಾನ್‌ ಎಸೆತದಲ್ಲಿ ಬೌಲ್ಡ್‌ ಆದರು. ಆರಂಭದಲ್ಲೇ ಎರಡು ವಿಕೆಟ್‌ ಕಳೆದುಕೊಂಡ ನ್ಯೂಜಿಲೆಂಡ್‌ ಆಗ ೫೪ ರನ್‌ ಗಳಿಸಿತ್ತು. ೪೯ ರನ್‌ ಗಳಿಸಿದ್ದ ಮಾರ್ಟಿನ್‌ ಗುಪ್ತಿಲ್‌ ಮತ್ತು ಶೂನ್ಯಕ್ಕೆ ಜೆಸ್ಸಿ ರೈಡರ್‌ ಒಂದೇ ಓವರಿನಲ್ಲಿ ಹರಭಜನ್‌ ವಿಕೆಟ್‌ ಚೀಲವನ್ನ ಸೇರಿಕೊಂಡರು. ೮೪ಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡ ನ್ಯೂಜಿಲೆಂಡ್‌ ಪ್ರಮುಖ ದಾಂಡಿಗರನ್ನು ಕಳೆದು ಕೊಂಡರೂ ರೋಸ್‌ ಟೇಲರ್‌ ಮತ್ತು ಜೇಮ್ಸ್‌ ಫ್ರಾಂಕ್ಲಿನ್‌ ತಂಡಕ್ಕೆ ಇದೀಗ ಆಸರೆಯಾಗಿದ್ದಾರೆ. ಅವರು ಕ್ರಮವಾಗಿ ೬೯ ಮತ್ತು ೨೬ ರನ್‌ ಗಳಿಸಿದ್ದಾರೆ.

No Comments to “ಟೀಮ್‌ ಇಂಡಿಯಾ ಗೆಲುವಿಗಿನ್ನು ಕೆಲವೇ ಹೆಜ್ಜೆ …!”

add a comment.

Leave a Reply

You must be logged in to post a comment.