ಜನತಾಧ್ವನಿ : ಗ್ರಾಮೀಣರ ನಿರ್ಲಕ್ಷ್ಯ ಸಲ್ಲ

ಮಾನ್ಯರೆ, ಭಾರತ ದೇಶವು ಪುರಾಣ ಪ್ರಸಿದಟಛಿವಾದ ಧಾರ್ಮಿಕತೆಯ ನೆಲೆಬೀಡಾದ ಭವ್ಯ ಪರಂಪರೆಯುಳ್ಳ ರಾಷ್ಟ್ರ. ಇದರ ಸರ್ವತೋಮುಖ ಅಭಿವೃದಿಟಛಿಗೆ ಬೇಕಾಗಿರುವ ಅದ್ಯತಾ ಕ್ರಮಗಳ ಬಗ್ಗೆ ಸಮಗ್ರ ಚಿಂತನೆಗಳು ಹೊರಬರಬೇಕು. ಅದರಿಂದ ಪಂಚವಾರ್ಷಿಕ ಯೋಜನೆಗಳು ಅಮೂಲ್ಯವಾದಂತಹ ಸಲಹೆಗಳನ್ನು ಕಾರ್ಯ ರೂಪಕ್ಕೆ ತರುವ ವ್ಯವಸ್ಥೆಯಾಗಬೇಕಷ್ಟೆ. ಸ್ವಾತಂತ್ರ ನಂತರ ಇಲ್ಲಿಯವರೆಗೆ ಅಭಿವೃದಿಟಛಿ ಪರ ಕೆಲಸಗಳು ನಡೆಯುತ್ತಿವೆಯಾದರೂ ಸಹ ಅದರಿಂದ ಆಗಿರುವ ಅನುಕೂಲಗಳ ಜೊತೆಯಲ್ಲಿಯೇ ನಮ್ಮ ವ್ಯವಸ್ಥೆಯಲ್ಲಿನ ಅಶಿಸ್ತು, ಅನೈತಿಕತೆಗಳು ಬೆಳೆಯುತ್ತಲೇ ಇವೆ ಎಂಬುದು ನಿರ್ವಿವಾದ. ಇದರಿಂದ ಅಭಿವೃದಿಟಛಿಗಳು ಗೌಣವಾಗಿರುವುದು ಸಹಜ. ನಮ್ಮ ದೇಶ ಕೃಷಿ ಪ್ರಧಾನವಾದ ದೇಶ. ಶೇಕಡ ೬೦-೭೦ ಭಾಗ ಹಳ್ಳಿಗಳಿಂದ ಕೂಡಿರುವ ದೇಶ. ಆದರೆ ಹಳ್ಳಿಗಳ ಸಮಗ್ರ ಅಭಿವೃದಿಟಛಿಯ ಚಿಂತನೆಗಳು, ಕಾರ್ಯಕ್ರಮಗಳು ಯಾವುದೇ ರೀತಿಯ ಗಣನೀಯ ಬದಲಾವಣೆ ತರುವಲ್ಲಿ ಯಶಸ್ವಿಯಾಗಿಲ್ಲವೆಂದೇ ಹೇಳಬೇಕು. ಅಂದರೆ ಅಲ್ಲಿನ ಜನಗಳ ವಿದ್ಯಾಭ್ಯಾಸಕ್ಕೆ ಶುಚಿತ್ವಕ್ಕೆ, ಆರೋಗ್ಯ ಸುಧಾರಣೆಗೆ, ಸಂಪರ್ಕ ವ್ಯವಸ್ಥೆಗೆ, ವ್ಯವಸಾಯ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿ ಮಾಡುವಲ್ಲಿ ಮತ್ತು ಅದನ್ನು ಅದೇ ಬೆಲೆಯಲ್ಲಿ ಖರೀದಿಸುವ ಸೌಲಭ್ಯ ಅದಕ್ಕೆ ಬೇಕಾದ ವೈಜ್ಞಾನಿಕ ಮತ್ತು ಆರ್ಥಿಕ, ತಾಂತ್ರಿಕ ನೆರವಿನ ಸೌಲಭ್ಯ ದೊರೆಯುವಂತಾಗಬೇಕು. ಕುಶಲತೆ ವೃದಿಟಛಿಗೆ, ಕ್ರೀಡಾಚಟುವಟಿಕೆಗಳಿಗೆ ಸಿಕ್ಕುತ್ತಿರುವ ಪ್ರೋತ್ಸಾಹ ಎಷ್ಟರ ಮಟ್ಟಿನದು ಎಂಬುದನ್ನು ನಗರ ಪ್ರದೇಶಗಳಿಗೆ ಹೋಲಿಸಿದಾಗ ನಮಗೆ ತಿಳಿಯುತ್ತದೆ. ಗ್ರಾಮೀಣರನ್ನು ಸಂಪೂರ್ಣವಾಗಿ ನಿರ್ಲ ಕ್ಷಿಸಿರುವುದು ಕಂಡು ಬರುವ ಸತ್ಯ. ಇಲ್ಲಿ ನನ್ನ ಅಭಿಪ್ರಾಯ ಯಾರೊಬ್ಬರ ಮೇಲಿನ ಪ್ರಶ್ನೆಯಲ್ಲ. ಅಧಿಕಾರರೂಢರಲ್ಲಿನ ಬಹುಸಂಖ್ಯಾತರು ಇಂತಹ ಚಿಂತನೆಗಳನ್ನೇ ನಡೆಸುತ್ತಿಲ್ಲವೇನೋ ಎಂಬ ಅನುಮಾನ ಸ್ಪಷ್ಟವಾಗುತ್ತಿದೆ. ಇನ್ನು ಮುಂದಾದರೂ ಗ್ರಾಮೀಣರ ಬದುಕನ್ನು ಹಸನಾಗಿಸುವ ಪ್ರಯತ್ನಗಳು ಪ್ರಾಮಾಣಿಕವಾಗಿ ನಡೆಯದಿದ್ದ ಪಕ್ಷದಲ್ಲಿ ನಮ್ಮ ದೇಶದ ಎಲ್ಲರೂ ಸಹ ಅದರ ಫಲವನ್ನು ಅನುಭವಿಸಬೇಕಾದ ಕಾಲ ಇನ್ನು ಕೇವಲ ಐದು ಹತ್ತು ವರ್ಷಗಳಲ್ಲಿಯೇ ಎದುರಾದರೆ ಆಶ್ಚರ್ಯವಿಲ್ಲ. -ಬಿ.ಬೋರೇಗೌಡ ನಿವೃತ್ತ ಅಧೀಕ್ಷಕ ಇಂಜಿನಿಯರ್‌, ಹಾಸನ.

No Comments to “ಜನತಾಧ್ವನಿ : ಗ್ರಾಮೀಣರ ನಿರ್ಲಕ್ಷ್ಯ ಸಲ್ಲ”

add a comment.

Leave a Reply

You must be logged in to post a comment.