ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು

ವೆಲ್ಲಿಂಗ್ಟನ್‌ : ರಾಸ್‌ ಟೇಲರ್‌ ಅವರ ಶತಕ ಹಾಗೂ ಅನಿರೀಕ್ಷಿತ ವಾಗಿ ಬಂದ ಮಳೆ ಭಾರತ ತಂಡ ದವರ ನೂರನೇ ಕ್ರಿಕೆಟ್‌ ಟೆಸ್ಟ್‌ ಗೆಲು ವಿಗೆ ಅಡ್ಡಿಯಾಯಿತು. ಮಳೆ ಯಿಂದಾಗಿ ಮೂರನೇ ಟೆಸ್ಟನ್ನು ಡ್ರಾ ಎಂದು ಘೊಷಿಸಲಾಯಿತು. ಆದರೆ ಮೊದಲ ಟೆಸ್ಟ್‌ ಗೆದ್ದಿದ್ದ ಭಾರತ ತಂಡದವರು ಮೂರು ಪಂದ್ಯಗಳ ಸರಣಿಯನ್ನು ೧-೦ ಯಿಂದ ಗೆದ್ದು ಕೊಂಡರು. ಟೆಸ್ಟ್‌ನಲ್ಲಿ ಗೆಲುವಿನ ಶತಕ ಭಾರತಕ್ಕೆ ಕೈಗೆ ಬಂದ ತುತ್ತು ಬ ಾ À ು ಗಿ ಲ ್ಲ ದ ಂ ತ ಾ À ು ತ ು . ಮಳೆಯಿಂದಾಗಿ ಟೀ ವಿರಾಮದ ನಂತರ ಆಟ ಮುಂದುವರಿಯುವುದೇ ಎಂದು ಕಾಯುತ್ತಿದ್ದ ಭಾರತದ ಅಭಿಮಾನಿಗಳಿಗೆ ತೀವ್ರ ನಿರಾಸೆ ಯುಂಟಾಯಿತು. ಮನ್ಸೂರ್‌ ಆಲಿ ಖಾನ್‌ ಪಟೌಡಿ ನವಾಬ್‌ (ಜೂನಿಯರ್‌) ನಾಯಕತ್ವ ದಲ್ಲಿ ೧೯೬೭-೬೮ ರ ಸರಣಿ ಗೆದ್ದ ನಂತರ ಭಾರತ ನ್ಯೂಜಿಲೆಂಡ್‌ನಲ್ಲಿ ಸರಣಿ ಗೆಲ್ಲುತ್ತಿರುವುದು ಇದೇ ಮೊದಲು. ಆಗ ೫ ಟೆಸ್ಟ್‌ಗಳ ಸರಣಿಯನ್ನು ಭಾರತ ೨-೦ ಯಿಂದ ಗೆದ್ದಾಗ ಕರ್ನಾಟದ ಆಫ್‌ ಸ್ಪಿನ್ನರ್‌ ಇ.ಎ.ಎಸ್‌. ಪ್ರಸನ್ನ ೪೫೧ ರನ್‌ಗಳಿಗೆ ೨೪ ವಿಕೆಟ್‌ ಕಬಳಿಸಿದ್ದರು. ಪ್ರಸಕ್ತ ಸರಣಿಯಲ್ಲಿ ೩ ಟೆಸ್ಟ್‌ಗಳಿಂದ ಎರಡು ಶತಕಗಳನ್ನೊಳ ಗೊಂಡ ೪೪೫ ರನ್‌ಗಳನ್ನು ೮೯.೦೦ ಸರಾಸರಿಯಲ್ಲಿ ಗಳಿಸಿದ ಗೌತಮ್‌ ಗಂಭೀರ್‌ ಪಂದ್ಯದ ಪುರುಷೋತ್ತಮ ರಾದರು. ಇಶಾಂತ್‌ ಶರ್ಮ ಮಳೆಗಿಂತ ಹೆಚ್ಚಾಗಿ ತಮ್ಮನ್ನು ತಾವೇ ನಿಂದಿಸಿ ಕೊಳ್ಳುತ್ತಿರಬೇಕು. ಏಕೆಂದರೆ, ಲಂಚ್‌ ನಂತರ ಟಿಮ್‌ ಸೌಥೀ ನಿರ್ಗಮಿಸಿದ ಮೇಲೆ ಸಚಿನ್‌ಗೆ ಬೌಲಿಂಗ್‌ನಲ್ಲಿ ಇಯಾನ್‌ ಓಬ್ರಿಯಾನ್‌ ನೀಡಿದ ಕ್ಯಾಚನ್ನು ಇಶಾಂತ್‌ ಶರ್ಮ ಚೆಲ್ಲಿದ್ದರು. ಓಬ್ರಿಯಾನ್‌ ನಂತರ ಡೇನಿಯಲ್‌ ವೆಟೋರಿಗೆ ಮಳೆ ಬಂದು ಆಟವನ್ನು ಆಹುತಿ ತೆಗೆದುಕೊಳ್ಳುವವರೆಗೂ (೫.೨ ಓವರುಗಳು) ಜೊತೆ ನೀಡಿದರು. ರಾಸ್‌ ಟೇಲರ್‌ ಹಾಗೂ ಜೇಮ್ಸ್‌ ಫ್ರಾಂಕ್ಲಿನ್‌ ಅವರು ಬೆಳಿಗ್ಗೆ ನ್ಯೂಜಿಲೆಂಡ್‌ನ ಹೋರಾಟವನ್ನು ಮುಂದುವರಿಸಿ ೫ನೇ ವಿಕೆಟ್‌ಗೆ ೧೪೨ ರನ್‌ ಸೇರಿಸಿದರು. ಭಾರತಕ್ಕೆ ತಲೆ ನೋವಾಗಿದ್ದ ಈ ಜೊತೆಯಾಟನ್ನು ಹರಭಜನ್‌ಸಿಂಗ್‌ ಅವರೇ ಮುರಿಯ ಬೇಕಾಯಿತು. ೨೬೫ ನಿಮಿಷಗಳ ಕಾಲ ಭಾರತವನ್ನು ಕಾಡಿ ೧೬೫ ಎಸೆತಗಳಲ್ಲಿ ೧೬ ಬೌಂಡರಿಗಳ ನೆರವಿನಿಂದ ಟೆಸ್ಟ್‌ನಲ್ಲಿ ತಮ್ಮ ನಾಲ್ಕನೇ ಶತಕ ದಾಖಲಿಸಿದ ಟೇಲರ್‌ ಅಂತಿಮವಾಗಿ ಹರಭಜನ್‌ಸಂಗ್‌ ಮೋಡಿಗೆ ಬಲಿಯಾದರು. ನಂತರ ಬ್ರೆಂಡನ್‌ ಮೆಕಲಮ್‌ ವಿವಾದಾಸ್ಪದ ತೀರ್ಪಿಗೆ ಆಹುತಿಯಾದರು. ೭೬ ಓವರ್‌ಗಳ ನಂತರ ದಾಳಿಗಿಳಿದ ಸಚಿನ್‌ ತೆಂಡೂಲ್ಕರ್‌ ಬೌಲಿಂಗ್ನ್‌ಲ್ಲಿ ಡ್ರೆೃವ್‌ ಮಾಡಲು ಹೋದ ಮೆಕಲಮ್‌ ಅವರ ಬ್ಯಾಟ್‌ ನೆಲಕ್ಕೆ ಬಡಿಯಿತು ; ಆಫ್‌ ಸ್ಟಂಪ್‌ ಆಚೆ ತಿರುಗಿದ ದ್ರಾವಿಡ್‌ ಅವರ ಕೈ ಸೇರಿತು. ಟಿ.ವಿ. ಮರುದರ್ಶನದಲ್ಲಿ ಚೆಂಡು ಬ್ಯಾಟ್‌ಗೆ ತಗುಲಿದಂತೆ ಕಾಣಲಿಲ. ತೆಂಡೂಲ್ಕರ್‌ ಬೌಲಿಂಗ್‌ನಲ್ಲೇ ಮೆಕಲಮ್‌ ಅವರು ಇದಕ್ಕೆ ಮುನ್ನ ಮಿಡ್‌… ಆಫ್‌ನಲ್ಲಿದ್ದ ಮುನಾಫ್‌ ಪಟೇಲ್‌ ಅವರಿಂದ ಜೀವದಾನ ಪಡೆದಿದ್ದರು. ತೆಂಡೂಲ್ಕರ್‌ ಲಂಚ್‌ ವಿರಾಮಕ್ಕೆ ಮುನ್ನ ಫ್ರ್ಯಾಂಕ್ಲಿನ್‌ (೧೭೧ ಎಸೆತಗಳಲ್ಲಿ ೭ ಬೌಂಡರಿ ಗಳಿದ್ದ ೪೯) ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.

No Comments to “ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು”

add a comment.

Leave a Reply

You must be logged in to post a comment.