ಒಕ್ಕಲಿಗರ ಸಂಘ ಬೆಳೆದುಬಂದ ಹಾದಿ ಹಿನ್ನೋಟ

ಹಳೆ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಕೋಮಿನ ಜನ ಸಂಖ್ಯೆ ಪ್ರಾಬಲ್ಯವಿರುವ ಕಡೆ, ಒಕ್ಕಲಿಗರ ಸಂಘಗಳಿವೆ. ಅದರಲ್ಲೂ ಬೆಂಗಳೂರು ಒಕ್ಕಲಿಗರ ಸಂಘ, ತನ್ನ ಆರ್ಥಿಕ ವೈವಾಟಿನ ಪ್ರಾಮುಖ್ಯತೆ ಯಿಂದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ೧೯೦೬ ನೇ ಸಂವತ್ಸರ ಒಕ್ಕಲಿಗರ ಸಮಾಜದ ವಿದ್ಯಾಕ್ರಾಂತಿಗೆ ನಾಂದಿ ಯಾದ ವರ್ಷ. ಮನುಧರ್ಮ ಶಾಸ್ತ್ರ ವರ್ಣಭೇದ ದನ್ವಯ ಶೂದ್ರವರ್ಗಕ್ಕೆ ತಳ್ಳಲ್ಪಟ್ಟ ಹಿನ್ನೆಲೆಯಂತೆಯೂ ಮತ್ತು ಬಹುದಿನಗಳ ಪರಕೀಯರ ಆಳ್ವಿಕೆಯಲ್ಲಿ ತುಳಿತಕ್ಕೊಳಗಾಗಿ, ಶೈಕ್ಷಣಿಕ ಅಭಾವ ದಿಂದಲೂ ಆರ್ಥಿಕ ಕ್ಷೋಭೆಗೊಳಗಾಗಿ, ಸಾಮಾಜಿಕ ವಾಗಿ ತಲೆಯೆತ್ತ ದಂತಾಗಿದ್ದ ಒಕ್ಕಲಿಗರ ಸಮಾಜವು, ಹೀನಾಯ ಸ್ಥಿತಿಯಲ್ಲಿದ್ದು, ಬ್ರಿಟಿಷರ ಆಳ್ವಿಕೆಯ ಕೊನೆಯ ಹಂತದಲ್ಲಿ, ಕೆಲವೇ ಮಂದಿ ದಿಟ್ಟತನದಿಂದ ವೃತ್ತಿಯಲ್ಲಿ ಅನುಕೂಲ ಹೊಂದಿದವರ ಮಕ್ಕಳು. ಅಧಮ್ಯ ಸಾಹಸದಿಂದ ಶಿಕ್ಷಣ ಹೊಂದಿ ಬೌದಿಟಛಿಕ ಚಿಂತನ ಸಾಮರ್ಥ್ಯ ಹೊಂದಲು ಸಾಧ್ಯವಾಯಿತು. ಬ್ರಿಟಿಷರ ಔದಾರ್ಯದಿಂದ ಅಲ್ಲಲ್ಲಿ ಅಕ್ಷರ ಜ್ಞಾನ ಪಡೆಯಲು ಅವಕಾಶ ವಾಗಿದ್ದರೂ, ಆ ಕಾಲದ ಆರ್ಥಿಕ ದುಸ್ಥಿತಿಯಿಂದಾಗಿ ಒಕ್ಕಲಿಗರ ಸಮಾಜದಲ್ಲಿ ಶಿಕ್ಷಣ ಹೊಂದುವ ಅವಕಾಶದ ಸಾಮರ್ಥ್ಯವಿಲ್ಲದಿದ್ದರೂ, ಅಲ್ಲಲ್ಲಿ ಕೆಲವರು ಅಲ್ಪಸ್ವಲ್ಪ ಅಕ್ಷರ ಜ್ಞಾನ ಸಂಪಾದಿಸಿದ್ದು ೧೯೦೬ ನೇ ಇಸವಿಯಲ್ಲಿ, ಇಡೀ ಮೈಸೂರು ರಾಜ್ಯದಲ್ಲಿ ಐದು ಜನ ಪದವೀಧರರಿದ್ದು, ಇವರ ಪೈಕಿ ೩ ಜನ ಸರ್ಕಾರಿ ನೌಕರಿಯಲ್ಲಿದ್ದುದೇ ಒಂದು ವಿಶೇಷ. ಇವರುಗಳ ಪೈಕಿ ಕೆ.ಹೆಚ್‌. ರಾಮಯ್ಯ ನವರೂ, ಬಿ. ನಾಗಪ್ಪನವರು, ಬಿ. ಪುಟ್ಟಯ್ಯನವರು, ಮೈಸೂರು ಸರ್ಕಾರದಲ್ಲಿ ಕೆಲಸದಲ್ಲಿದ್ದರು, ಒಮ್ಮೆ ಕಛೇರಿ ಕಾರ್ಯ ನಿಮಿತ್ತ ಒಂದು ಮೀಟಿಂಗಿಗೆ ಬಂದಾಗ ಬಿಡುವಿನ ವಿರಾಮವೇಳೆಯಲ್ಲಿ ಸರ್‌ ಮಿರ್ಜಾ ಇಸ್ಮಾಯಿಲ್‌ರವರು, ಕೆ.ಹೆಚ್‌. ರಾಮಯ್ಯ ನವರೊಡನೆ ಲೋಕಾಭಿ ರಾಮವಾಗಿ ಮಾತನಾಡುತ್ತಾ, ಮಿಸ್ಟರ್‌ ರಾಮಯ್ಯ ನಿಮ್ಮ ಜನಾಂಗದಲ್ಲಿ, ನೀವು ಎರಡೋ ಮೂರು ಜನರಷ್ಟೆ ವಿದ್ಯಾವಂತರೆಂದು ಕಾಣುತ್ತದೆ ಎಂದು ವಾಡಿಕೆಯ ಮಾತನಾಡಿದಾಗ, ಕೆ.ಹೆಚ್‌. ರಾಮಯ್ಯನವರಿಗೆ ಸ್ವಾಭಿಮಾನ ಕೆರಳಿಂದಂತಾಗಿ, ಸರ್‌ ಮಿರ್ಜಾ ಸಾಹೇಬರೆ ರಾಜ್ಯದಲ್ಲಿ ನಾವು ಐದು ಜನ ಬಿ.ಎ. ಪದವೀಧರರಿದ್ದೇವೆ ಅದರಲ್ಲಿ ೩ ಜನ ಸರ್ಕಾರಿ ನೌಕರಿಯಲ್ಲಿದ್ದೇವೆ, ಅಲ್ಲದೆ ಅಲ್ಪಸ್ವಲ್ಪ ಓದಿದ ನಮ್ಮ ಜನಾಂಗದ ೨೩ ಜನ ಪುಟ್ಟ ನೌಕರಿಯಲ್ಲಿದ್ದಾರೆ ಎಂದಾಗ ಮಿರ್ಜಾರವರು ಘಿ‘ಗೊಳ್ಳ್‌ಘಿ’ ಎಂದು ನಕ್ಕು ರಾಮಯ್ಯ ರಾಜ್ಯದಲ್ಲಿ ತೀರಾ ಅಲ್ಪ ಸಂಖ್ಯಾತರಾದ ನಮ್ಮ ಜನಾಂಗದಲ್ಲಿ ನಿಮಗಿಂತ ಹೆಚ್ಚಿನ ವಿದ್ಯಾವಂತರೂ, ನೌಕರರೂ ಇದ್ದೇವೆ. ನೀವು ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿದ್ದೀರಿ, ಹಾಗೆ ಹೋಲಿಕೆ ಮಾಡಿದರೆ ನಿಮ್ಮಲ್ಲಿ ವಿದ್ಯಾವಂತರ ಸಂಖ್ಯೆ ತೀರಾ ಕಡಿಮೆ ಎಂದು ನಾನು ಹೇಳಿದ್ದು ಎಂದದ್ದು ರಾಮಯ್ಯನವರ ಮನಸ್ಸಿನಲ್ಲಿ ಸದಾ ಕೊರೆಯುತ್ತಿತ್ತು, ಜನಾಂಗದ ಬದುಕಿನ ಸುಧಾರಣೆಯ ಬಗೆಗೆ ಗೆಳೆಯರೊಂದಿಗೆ ಆಗಾಗ ಚಿಂತಿಸುತ್ತಲೂ, ಸರ್ಕೀಟ್‌ ಹೋದಾಗ, ಆಯಾ ಜಿಲ್ಲೆಯ ಸ್ಥಿತಿವಂತ ರೊಂದಿಗೂ ಈ ಬಗ್ಗೆ ಚರ್ಚಿಸುತ್ತಿದ್ದರು. ರಾಮಯ್ಯನವರು, ಬಿ. ನಾಗಪ್ಪನವರು ಒಂದೊಂದು ಭಾನುವಾರ ಒಂದೊಂದು ಜಿಲ್ಲೆಯ ತೀರಾ ಹಿಂದುಳಿದ ಗ್ರಾಮಗಳಿಗೆ ನಮ್ಮ ಜನಾಂಗದ ಸ್ಥಿತಿಗತಿ ಯನ್ನರಿಯಲು ಹೋಗಿ ಬರುತ್ತಿದ್ದರು. ಒಂದು ಭಾನುವಾರ ಚಿತ್ರದುರ್ಗದ ಕಡೆ ಹಳ್ಳಿಗೆ ಬರುವಂತೆ ಗೆಳೆಯ ಬಿ. ಪುಟ್ಟಯ್ಯನವರು ಆಹ್ವಾನಿಸಿದ್ದರು. ಬಿ. ಪುಟ್ಟಯ್ಯನವರು ಬೆಂಗಳೂರಿನವರು ಬಿ.ಎ. ಪದವಿ ಪಡೆದು ಚಿತ್ರದುರ್ಗದಲ್ಲಿ ಸರ್ಕಾರಿ ಹುದ್ದೆಯಲ್ಲಿದ್ದರು. ಬಿ. ನಾಗಪ್ಪನವರು ಮತ್ತು ಕೆ.ಹೆಚ್‌. ರಾಮಯ್ಯನವರಿಬ್ಬರೂ ಮನೆಗೆ ಬರುತ್ತಿರುವುದು ದೇವರೆ ಬರುತ್ತಿರುವ ರೆಂಬಷ್ಟು ಸಂತೋಷಗೊಂಡರು, ಗೆಳೆಯರಿಬ್ಬರೂ ಶನಿವಾರ ಸಂಜೆಯೇ ಬಂದು ಐ.ಬಿ. ಯಲ್ಲಿ ಉಳಿದಿದ್ದು, ರಾತ್ರಿ ಊಟ ಮತ್ತು ಭಾನುವಾರ ಬೆಳಗಿನ ಉಪಹಾರಗಳನ್ನು ಬಿ. ಪುಟ್ಟಯ್ಯನವರ ಮನೆಯಲ್ಲಿ ಮುಗಿಸಿ, ಹಳ್ಳಿಗಳಿಗೆ ಹೊರಟರು. ವ್ಯವಸ್ಥಿತ ರಸ್ತೆಗಳಿಲ್ಲದ ಹಳ್ಳಿಗಳು ಮನೆಯ ಮುಂದೆಯೇ ಹರಿಯುವ ನೀರು ಕೊಳೆತು ವಾಸನೆ ಬರುವ ಸ್ಥಿತಿ, ತೇಪೆ ಬಟ್ಟೆಯ ಅಂಗಿ, ಕೊಳಕು ಕೊಳಕಾಗಿದ್ದ ಮಕ್ಕಳುಗಳು ಮೂಗಿನ ಸಿಂಬಳಕ್ಕೆ ನೊಣಗಳು ಮುತ್ತಿಕೊಂಡಿದ್ದು, ಕೈಯಲ್ಲಿ ರೊಟ್ಟಿ ಚೂರು ಹಿಡಿದು ತಿನ್ನುತ್ತಿರುವ ದೃಶ್ಯ ಜೀವ ಕಳೆ ಇಲ್ಲದ ಹಳ್ಳಿಗಳು, ಸ್ವಚ್ಛತೆಯನ್ನೇ ಕಾಣದ ಕೇರಿ. ದನಕರು, ಎಮ್ಮೆ, ನಾಯಿ, ಆಡು- ಕುರಿಗಳು ಕಟ್ಟೆಯಲ್ಲೆ ನೀರು ಕುಡಿಯು ತ್ತವೆ. ಅವುಗಳ ಮೈತೊಳೆದ ಬಟ್ಟೆ ತೊಳೆದ ಕೊಳೆಯೂ ಸೇರಿದ ನೀರನ್ನೇ ಮನೆಗೆ ಕುಡಿಯಲು ತರುತ್ತಾರೆ. ಉತ್ತಮ ಆಹಾರದ ಕೊರತೆಯಿಂದ ಬಡಕಲಾದ ದೇಹದ ತರುಣರು, ಚಿಕಿತ್ಸೆ ಕಾಣದ ರೋಗಿಗಳು, ಮಳೆ, ಬೆಳೆಯನ್ನೇ ನಂಬಿ ಇದ್ದುದರಲ್ಲೆ ಬದುಕ ಹೊರೆಯುತ್ತಿರುವ ರೈತರು, ಹೇಗೆ ೯ ಜಿಲ್ಲೆಗಳನ್ನು ಸುತ್ತಾಡಿದರು. ಒಟ್ಟಾರೆ ಹಳ್ಳಿಗರ ಆರ್ಥಿಕ ಸ್ಥಿತಿ, ತೀರಾ ಚಿಂತಾಜನಕವೆಂದು, ಮಮ್ಮುಲ ಮರುಗುತ್ತಿದ್ದರು.

No Comments to “ಒಕ್ಕಲಿಗರ ಸಂಘ ಬೆಳೆದುಬಂದ ಹಾದಿ ಹಿನ್ನೋಟ”

add a comment.

Leave a Reply