ಅನಂತ್‌ನಾಗ್‌ ಮತ್ತು ಸುಹಾಸಿನಿಗೆ ಎರಡನೇ ಮದುವೆ !

ನಟ ಅನಂತನಾಗ್‌ ಮತ್ತು ಸುಹಾಸಿನಿ ಎರಡನೇ ಮದುವೆಯಾಗಲು ಅಣಿಯಾಗಿದ್ದಾರೆ. ಇವರಿಗ್ಯಾಕಪ್ಪ ಈ ಬುದಿಟಛಿ ಬಂತು ಅಂದುಕೊಳ್ಳುತ್ತಿದ್ದೀರಾ ? ಏನಿಲ್ಲ ಇವರಿಬ್ಬರೂ ಘಿ‘ಎರಡನೇ ಮದುವೆಘಿ’ ಆಗುತ್ತಿರುವುದು ತೆರೆಯ ಮೇಲೆ ಅಷ್ಟೆ ! ಘಿ‘ಎರಡನೇ ಮದುವೆಘಿ’ಎಂಬ ಹೊಸ ಚಿತ್ರವನ್ನು ನಿರ್ದೇಶಕ ದಿನೇಶ್‌ ಬಾಬು ಕೈಗೆತ್ತಿಕೊಂಡಿದ್ದಾರೆ. ಸುರೇಶ್‌ ಆರ್ಟ್ಸ್‌ ಮತ್ತು ಒಬೇಷನ್ಸ್‌ ಲಾಂಛನದಲ್ಲಿ ಕೆ.ಎ. ಸುರೇಶ್‌ ಮತ್ತು ಕೆ. ರಾಜೀವ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಘಿ‘ಸುಪ್ರಭಾತ ಘಿ’, ಘಿ‘ಹೆಂಡ್ತಿಗ್ಹೇಳ್ಬೇಡಿಘಿ’, ಘಿ‘ಅಮೃತವರ್ಷಿಣಿಘಿ’, ಘಿ‘ಮಿ. ಗರಗಸಘಿ’, ಘಿ‘ಗಣೇಶ್‌ ಘಿ’ ಮೊದಲಾದ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ನಿರ್ದೇಶನದಿಂದ ದಿನೇಶ್‌ಬಾಬು ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಅವರ ಮತ್ತೊಂದು ಹೊಸ ಪ್ರಯೋಗವೇ ಘಿ‘ ಎರಡನೇ ಮದುವೆಘಿ’ ಮತ್ತೊಂದು ವಿಶೇಷವೆಂದರೆ, ಬಹಳ ದಿನಗಳ ನಂತರ ಅನಂತ್‌ನಾಗ್‌-ಸುಹಾಸಿನಿ ಈ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಅಭಿನಯದ ಹಿಂದಿನ ಚಿತ್ರ ಘಿ‘ಹೊಸನೀರುಘಿ’. ಏ. ೫ ರಿಂದ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ ೩೦ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮುಗಿಸಲಿದೆ. ಇದೊಂದು ಸಂಪೂರ್ಣ ಹಾಸ್ಯಭರಿತ, ಸಾಂಸಾರಿಕ, ಪ್ರೇಮ ಕಥಾಚಿತ್ರ. ಅನಂತ್‌ನಾಗ್‌- ಸುಹಾಸಿನಿಯಂಥ ಪ್ರತಿಭಾವಂತ ಜೋಡಿಯ ಜತೆಗೆ ಘಿ‘ನೆನಪಿರಲಿಘಿ’ ಪ್ರೇಮ್‌, ಜೆನಿಫರ್‌ ಯುವ ಜೋಡಿಯಾಗಿ ಕಾಣಿಸಿಕೊಳ್ಳಲಿ ದ್ದಾರೆ. ಇಂಥ ವಿಭಿನ್ನ ಹಾಸ್ಯ ಕಥಾನಕವನ್ನು ದಿನೇಶ್‌ಬಾಬು ಅವರೇ ಬರೆದಿದ್ದಾರೆ. ಚಿತ್ರಕಥೆ, ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್‌ ಬಾಬು ಅವರೇ ಹೊತ್ತಿದ್ದಾರೆ. ಜಯಪಾಲ್‌ ಅವರ ಸಂಗೀತ ಸಂಯೋಜನೆ, ರಾಜೇಂದ್ರ ಕಾರಂತರ ಸಂಕಲನ ಇದ್ದು, ಶರತ್‌, ತಾರಾ, ರಂಗಾಯಣ ರಘು, ಸಿಂಧು, ನವ್ಯ ಉಳಿದ ತಾರಾಗಣದಲ್ಲಿದ್ದಾರೆ.

No Comments to “ಅನಂತ್‌ನಾಗ್‌ ಮತ್ತು ಸುಹಾಸಿನಿಗೆ ಎರಡನೇ ಮದುವೆ !”

add a comment.

Leave a Reply

You must be logged in to post a comment.