ಪ್ರೇಮ್‌- ಅಮೂಲ್ಯ ಜೋಡಿಯಲ್ಲಿ ಪ್ರೇಮಿಸಮ್‌

ಅಮೂಲ್ಯ ಮತ್ತೆ ಸುದ್ದಿಗೆ ಬಂದಿದ್ದಾರೆ. ವಾರ್ಷಿಕ ರಜೆಯಲ್ಲಷ್ಟೇ ಸಿನಿಮಾ ಮಾಡಿದ ಅಮೂಲ್ಯ ಈಗ ಮತ್ತೆ ರಜೆಯಲ್ಲಿ ಸಿನಿಮಾ ಮಾಡಲು ಸಿದ್ದರಾಗಿದ್ದಾರೆ. ಹಾಗಾಂತ ಈ ಬಾರಿ ಎಸ್‌. ನಾರಾಯಣ್‌ ಮಗ ಪಂಕಜ್‌ ಜೊತೆ ಅಲ್ಲ. ಬದಲಾಗಿ ಘಿ‘ನೆನಪಿರಲಿಘಿ’ ಪ್ರೇಮ್‌ ಜೊತೆ. ಈ ಸುದ್ದಿ ಗಾಂಧಿನಗರದಲ್ಲಿ ಈಗಾಗಲೇ ಕೇಳಿ ಬರುತ್ತಿದೆ. ಘಿ‘ನೆನಪಿರಲಿಘಿ’ ಚಿತ್ರದಲ್ಲಿ ಗೆದ್ದು, ಘಿ‘ಹೊಂಗನಸುಘಿ’ ನಲ್ಲಿ ಸೋತ ರತ್ನಜ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಘಿ‘ಪ್ರೇಮಿಸಮ್‌ಘಿ’ ಎಂದ ಹೆಸರಿಡಲಾಗಿದೆ. ಘಿ‘ಚೆಲುವಿನ ಚಿತ್ತಾರಘಿ’ ದ ಮೂಲಕ ಬೆಳಕಿಗೆ ಬಂದ ಅಮೂಲ್ಯ ತನ್ನ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಘಿ‘ಚೈತ್ರದ ಪ್ರೇಮಾಂಜಲಿಘಿ’ ಚಿತ್ರ ಮಾತ್ರ ಇನ್ನಿಲ್ಲದಂತೆ ನೆಲಕಚ್ಚಿತ್ತು. ನಾನು ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ಕೊಡುತ್ತೇನೆ. ರಜೆಯಲ್ಲಷ್ಟೇ ಚಿತ್ರಗಳಲ್ಲಿ ನಟಿಸುತ್ತೇನೆ. ಶಾಲೆಗೆ ರಜಾ ಆಗುವ ರೀತಿಯಾದರೆ ಅದನ್ನು ಒಪ್ಪಿಕೊಳ್ಳು ವುದಿಲ್ಲ ಎನ್ನುತ್ತಾರೆ ಅಮೂಲ್ಯ. ಕಳೆದ ಬಾರಿ ಅಮೂಲ್ಯ ಚಿತ್ರ ನೋಡಲು ಜನ ಕಾದು ಕುಳಿತ್ತಿದ್ದರು. ಆದರೆ ಚಿತ್ರದ ಕಥೆ ಸೇರಿದಂತೆ ಅನೇಕ ಅಂಶಗಳಿಂದಾಗಿ ಚಿತ್ರ ಸೋತಿತ್ತು. ಈ ಬಾರಿ ಏನಾ ಗುತ್ತೋ ಕಾದು ನೋಡಬೇಕು. ಅಂದಹಾಗೆ ಅಮೂಲ್ಯ ಮೊನ್ನೆ ತಾನೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿದ್ದಾರೆ

No Comments to “ಪ್ರೇಮ್‌- ಅಮೂಲ್ಯ ಜೋಡಿಯಲ್ಲಿ ಪ್ರೇಮಿಸಮ್‌”

add a comment.

Leave a Reply

You must be logged in to post a comment.