ಯೋಗೀಶ್‌ ಸಂಭಾವನೆ ದಿನಕ್ಕೆ ಸಾವಿರ ರೂಪಾಯಿ !

ಎರಡು ಹಿಟ್‌ ಚಿತ್ರಗಳ ನಾಯಕ ಯೋಗೀಶ್‌ ಕೈಯಲ್ಲಿ ಈಗ ಮೂರು ಚಿತ್ರಗಳಿವೆ. ಅವು ಯೋಗಿ, ಪ್ರೀತ್ಸೆ ಪ್ರೀತ್ಸೆ ಮತ್ತು ರಾವಣ. ಒಟ್ಟಿನಲ್ಲಿ ಯಶಸ್ಸಿನ ಉಯ್ಯಾಲೆಯಲ್ಲಿ ತೂಗುತ್ತಿರುವ ನಟ ಎನ್ನಬಹುದು. ಹೌದು ನೀವು ಚಿತ್ರ ವೊಂದಕ್ಕೆ ಎಷ್ಟು ಸಂಭಾವನೆ ಪಡೆಯು ತ್ತೀರಾ ಎಂದರೆ ಆ ವಿಚಾರ ನನಗೇ ಗೊತ್ತಿಲ್ಲ ಎನ್ನುತ್ತಾರೆ ಯೋಗೀಶ್‌. ಈ ಹಣಕಾಸು ವ್ಯವಹಾರ ಎಲ್ಲ ನಮ್ಮ ತಂದೆ ಮತ್ತು ತಾಯಿ ನೋಡಿಕೊಳ್ಳುತ್ತಾರೆ. ನಿರ್ಮಾಪಕರ ಬಳಿ ಅವರೇ ಎಲ್ಲಾ ವ್ಯವಹಾರ ಮಾತನಾಡಿಕೊಳ್ಳುತ್ತಾರೆ. ನನಗೆ ಎಷ್ಟು ಸಂಭಾವನೆ ಕೊಡುತ್ತಾರೆ ಎಂದು ಇದುವರೆಗೂ ಗೊತ್ತಿಲ್ಲ ಎನ್ನುತ್ತಾರೆ ಯೋಗೀಶ್‌. ಈಗ ಪೂರ್ಣವಾಗಿ ನಟನೆಗೆ ಸೀಮಿತವಾಗಿರುವ ಕಾರಣ ಯೋಗೀಶ್‌ ಓದಿಗೆ ಗುಡ್‌ ಬೈ ಹೇಳಿದ್ದಾರೆ. ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ದಿನಕ್ಕೆ ಪಾಕೆಟ್‌ ಮನಿ ಎಂದು ರೂ. ೧೦೦೦ ಕೊಡ್ತಾರಂತೆ. ಡೀಸೆಲ್‌ ಖರ್ಚಿಗೆ ಅಂತ ರೂ. ೫೦೦ ಖರ್ಚಾಗುತ್ತದೆ. ಉಳಿದ ಹಣ ನನ್ನ ಸಹಾಯಕರಿಗೆ ಹೋಗುತ್ತದೆ. ನನಗೆ ಹೆಚ್ಚಿಗೆ ಹಣ ಬೇಕು ಎಂದರೆ ನನ್ನ ತಂದೆ ಇಲ್ಲ ಎನ್ನುವುದಿಲ್ಲ. ನನ್ನ ಎಲ್ಲ ಬೇಕು ಬೇಡಗಳನ್ನು ಅವರೇ ನೋಡಿಕೊಳ್ಳುತ್ತಾರೆ. ಸದ್ಯಕ್ಕೆ ಯೋಗೀಶ್‌ ಒಮ್ಮೆಯಾದರೂ ರಮ್ಯಾ ಜತೆ ನಟಿಸಬೇಕು ಎಂದು ಕನಸು ಕಾಣುತ್ತಿದ್ದಾರೆ.

No Comments to “ಯೋಗೀಶ್‌ ಸಂಭಾವನೆ ದಿನಕ್ಕೆ ಸಾವಿರ ರೂಪಾಯಿ !”

add a comment.

Leave a Reply