ರಘುವೀರ್‌ ಮರಳಿ ಗೂಡಿಗೆ

ಚೈತ್ರದ ಪ್ರೇಮಾಂಜಲಿ ಖ್ಯಾತಿಯ ರಘುವೀರ್‌ ವಾಪಸ್ಸಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅವರು ಕನ್ನಡ ಚಿತ್ರರಂಗದಿಂದ ಕಾಣೆಯಾಗಿದ್ದರು. ಈಗ ಘಿ‘ಯಾರಿಗೋಸ್ಕರ ಈ ಪ್ರೀತಿಘಿ’ ಎಂಬ ಚಿತ್ರವನ್ನು ಕೈಗೆತ್ತಿಕೊಂಡು ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ಎಸ್‌. ರಾಜ ಎನ್ನುವವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರಿನ ರವಿಕುಮಾರ್‌ ನಿರ್ಮಾಪಕರು. ರಘುವೀರ್‌ ನಟಿಸಿದ ಮೊದಲ ಚಿತ್ರ ಚೈತ್ರದ ಪ್ರೇಮಾಂಜಲಿ. ಆ ಚಿತ್ರ ಸೆಟ್ಟೇರಿದ ದಿನದಂದೇ ಅಂದರೆ ಏಪ್ರಿಲ್‌ ನಾಲ್ಕದಂರು ಘಿ‘ಯಾರಿ ಗೋಸ್ಕರ ಈ ಪ್ರೀತಿಘಿ’ ಚಿತ್ರವೂ ಸೆಟ್ಟೇರಲಿದೆ. ರಾಮ್‌ಕುಮಾರ್‌ ಎಂಬ ಹೊಸಬರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಪಿಕೆಎಚ್‌ ದಾಸ್‌ ಛಾಯಾಗ್ರಹಣ ಚಿತ್ರಕ್ಕಿದೆ. ರಘುವೀರ್‌ ಎದುರು ಜೋಡಿಯಾಗಿ ಶಿಲ್ಪಾ ನಾಯಕಿಯಾಗಿದ್ದಾರೆ. ಮಿಕ್ಕಂತೆ ಚಿತ್ರದ ತಾರಾಗಣದಲ್ಲಿ ರಾಮಕೃಷ್ಣ, ವಿಜಯಕಾಶಿ, ಶ್ರೀಲಲಿತಾ ಮುಂತಾದ ವರು ಇದ್ದಾರೆ. ರಘುವೀರ್‌ನ ಹಿಂದಿನ ಚಿತ್ರ ಘಿ‘ಮುಗಿಲ ಮಲ್ಲಿಗೆಘಿ’ ಗ್ರ್ಯಾಂಡ್‌ ಆಗಿ ಪ್ರಾರಂಭವಾದರೂ ನಂತರ ಕಾರಣಾಂತರಗಳಿಂದ ನಿಂತು ಹೋಗಿತ್ತು. ಈ ಭಾರಿ ಹಾಗಾಗದಿರಲಿ.

No Comments to “ರಘುವೀರ್‌ ಮರಳಿ ಗೂಡಿಗೆ”

add a comment.

Leave a Reply