ಅಮಿತಾಬ್‌ ಬಚ್ಚನ್‌ ಟಿವಿ ಚಾನಲ್‌ ಆರಂಭಿಸುತ್ತಾರಂತೆ !

ಟಿವಿ ಚಾನಲ್‌ಗಳು ಹಾಗೂ ಮಾಧ್ಯಮಗಳ ವಿರುದಟಛಿ ಘಿ‘ಬಿಗ್‌ ಅಡ್ಡಾ ಡಾಟ್‌ ಕಾಂಘಿ’ ನ ತಮ್ಮ ಬ್ಲಾಗ್‌ನಲ್ಲಿ ಹರಿಹಾಯ್ದಿದ್ದ ಘಿ‘ಬಿಗ್‌ ಬಿಘಿ’ ಅಮಿತಾಬ್‌ ಬಚ್ಚನ್‌ ಈಗ ಹೊಸ ನ್ಯೂಸ್‌ ಚಾನಲ್‌ ಒಂದನ್ನು ಆರಂಭಿಸುತ್ತಿದ್ದಾರಂತೆ ! ಅಮಿತಾಬ್‌ ಆಪ್ತವಲಯದ ಮೂಲಗಳ ಪ್ರಕಾರ, ಅಮಿತಾಬ್‌ ಬಚ್ಚನ್‌ ಅವರು ಘಿ‘ಇಂಡಿಯಾ ೨೪/೭ಘಿ’ ಎಂಬ ನ್ಯೂಸ್‌ ಚಾನಲ್‌ ಒಂದನ್ನು ತರುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಈಗಲೇ ಅದಕ್ಕೆ ಅಮಿತಾಬ್‌ ಪೂರಕ ತಯಾರಿಗಳನ್ನೂ ಮಾಡುತ್ತಿದ್ದು, ದೊಡ್ಡ ಕಾರ್ಪೋರೇಟ್‌ ಸಂಸ್ಥೆ ಜತೆಗೆ ಮಾಡಿಕೊಳ್ಳಲಿದೆ ಎಂದು ಗುಸುಗುಸು ಕೇಳಿಬರುತ್ತಿದೆ. ಆದರೂ ಘಿ‘ಶಂಖದಿಂದಲೇ ತೀರ್ಥಘಿ’ ಇನ್ನೂ ಅಧಿಕೃತವಾಗಿ ಬಂದಿಲ್ಲ. ಮೂಲಗಳ ಪ್ರಕಾರ, ಈ ಹೊಸ ಚಾನಲ್‌ ಆರಂಭಿಸುವ ಆಲೋಚನೆ ಅಮಿತಾಬ್‌ಗೆ ಬಂದಿದ್ದು ಅವರು ಸದ್ಯ ಅಭಿನಯಿಸುತ್ತಿರುವ ರಾಮ್‌ ಗೋಪಾಲ್‌ ವರ್ಮಾ ಘಿ‘ರಣ್‌ಘಿ’ ಚಿತ್ರದಿಂದಾಗಿ, ಈ ಚಿತ್ರದಲ್ಲಿ ಬಚ್ಚನ್‌ ಅವರು ಹರ್ಷವರ್ಧನ್‌ ಮಲ್ಲಿಕ್‌ ಎಂಬ ಪಾತ್ರ ಮಾಡುತ್ತಿದ್ದು, ಆತ ಚಿತ್ರದಲ್ಲಿ ಟಿವಿ ಚಾನಲ್‌ ಒಂದರ ಸಂಸ್ಥಾಪಕ. ಬಚ್ಚನ್‌ ಹಾಗೂ ವರ್ಮಾ ಅವರು ಸ್ಕಿೃಪ್ಟ್‌ ಬಗ್ಗೆ ಚರ್ಚಿಸುತ್ತಿದ್ದಾಗ ಬಚ್ಚನ್‌ ಅವರು ಚಿತ್ರದಲ್ಲಿ ಆ ಚಾನಲ್‌ ಹೆಸರನ್ನು ಘಿ‘ಇಂಡಿಯಾ ೨೪/೭ಘಿ’ ಎಂದು ಹೆಸರಿಡಲು ಸಲಹೆ ನೀಡಿದ್ದರಂತೆ. ವಿಚಿತ್ರವೆಂದರೆ, ಈಗ ಬಚ್ಚನ್‌ ಆರಂಭಿಸಲು ಹೊರಟಿರುವ ಚಾನಲ್‌ ಹೆಸರೂ ಘಿ‘ಇಂಡಿಯಾ ೨೪/೭ಘಿ’. ಆದರೆ ಇದು ಕಾಕತಾಳೀಯ ಬಿಡಿ. ಮೂಲಗಳ ಪ್ರಕಾರ, ಲೋಕಸಭಾ ಚುನಾವಣಾ ಸಮಯದಲ್ಲೇ ಬಚ್ಚನ್‌ ಟಿವಿ ಚಾನಲ್‌ ಕಾರ್ಯಾರಂಭಗೊಳ್ಳಲಿದೆ ಎಂದು ಸುದ್ದಿ ಹರಡಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಅನಿಸುತ್ತಿದೆ. ಆದರೂ ಚುನಾವಣಾ ಸಮಯದಲ್ಲಿ ಬರುತ್ತಿದ್ದರೆ, ಅದು ಬಚ್ಚನ್‌ ಅವರ ಅನಿಸಿಕೆಗಳನ್ನು ಹೇಳಲು ಸೂಕ್ತ ವೇದಿಕೆಯಾಗಬಹುದಿತ್ತು ಎಂಬುದು ಹಲವರ ಅನಿಸಿಕೆ. ಇವಿಷ್ಟು ಸುದ್ದಿ ಹರಡಿದರೂ, ಈ ಬಗ್ಗೆ ನೇರವಾಗಿ ಬಚ್ಚನ್‌ ಅವರನ್ನೇ ಕೇಳಿದರೆ ಅವರು, ಇದೊಂದು ಸುಳ್ಳು ಸುದ್ದಿ ಎಂದು ಉತ್ತರಿಸುತ್ತಾರೆ.

No Comments to “ಅಮಿತಾಬ್‌ ಬಚ್ಚನ್‌ ಟಿವಿ ಚಾನಲ್‌ ಆರಂಭಿಸುತ್ತಾರಂತೆ !”

add a comment.

Leave a Reply