ಆಸಿನ್‌ಗೆ ಸಲ್ಮಾನ್‌ ಪ್ಯಾರಿಸ್‌ನಲ್ಲಿ ಐ ಲವ್‌ ಯೂ ಅದ್ನಂತೆ!

ತಮಿಳಿನಲ್ಲಿ ಘಜ್ನಿ ಚಿತ್ರದಲ್ಲಿ ನಟಿಸಿ ಹಿಂದಿಯಲ್ಲಿ ಅಮೀರ್‌ ಖಾನ್‌ ಜತೆಗೆ ಮತ್ತೆ ಘಜ್ನಿಯಲ್ಲಿ ಪತ್ರಕ್ಷಳಾಗಿದ್ದೇ ತಡ, ದಕ್ಷಿಣದ ಆಸಿನ್‌ ಈಗ ಜನಪ್ರಿಯತೆಯ ಅಲೆಯಲ್ಲಿ ಮಿಂಚುತ್ತಿದ್ದಾಳೆ. ಜತೆಗೆ ಬಾಲಿವುಡ್‌ನಲ್ಲಿ ಸ್ಥಿರವಾಗಿ ನೆಲೆಯೂರುವ ಎಲ್ಲ ಮುನ್ಸೂಚನೆಗಳೂ ಕಾಣುತ್ತಿವೆ. ಇಂತಿಪ್ಪ ಸ್ನಿಗಟಛಿ ಸುಂದರಿ ಆಸಿನ್‌ಳನ್ನು ಇತ್ತೀಚೆಗೆ ಸಲ್ಮಾನ್‌ ಖಾನ್‌ ಪ್ರೊಪೋಸ್‌ ಮಾಡಿದ್ನಂತೆ. ಅದೂ ವಿಶ್ವವಿಖ್ಯಾತ ಪ್ಯಾರಿಸ್‌ನ ಐಫೆಲ್‌ ಗೋಪುರದ ನೆರಳಿನಲ್ಲಂತೆ ! ಇದನ್ನು ಸ್ವತಃ ಆಸಿನ್‌ ಹೇಳಿದ್ದಾಳೆ. ಆಸಿನ್‌ ಹೇಳುವಂತೆ,ಘಿ‘ಘಿ‘ಮುಸ್ಸಂಜೆಯಾಗುತ್ತಾ ಬಂದ ಆ ಸನ್ನಿವೇಶದಲ್ಲಿ ಸಲ್ಮಾನ್‌ ನನಗೆ ಪ್ರೊಪೋಸ್‌ ಮಾಡಿದ್ದು ತುಂಬ ರೋಮಾಂಚಕ ಘಳಿಗೆ. ನನಗೆ ಆತನ ಗುಣ ತುಂಬ ಇಷ್ಟವಾಯಿತು. ಹಿತವಾದ ತಂಗಾಳಿಯಲ್ಲಿ ಸಲ್ಮಾನ್‌ನ ಘಿ‘ಐ ಲವ್‌ ಯೂಘಿ’ ಇನ್ನೂ ಹಿತವಾಗಿತ್ತು. ಅದೊಂದು ಮರೆಲಾಗದ ಅನುಭವಘಿ’ಘಿ’ ಅಂತೆಲ್ಲ ಈ ಘಿ‘ಘಜ್ನಿಘಿ’ ಯ ಘಿ‘ಕಲ್ಪನಾಘಿ’ ಯಾನೆ ಮಲೆಯಾಳಿ ಸುಂದರಿ ಆಸಿನ್‌ ಉಸುರಿದ್ದಾಳೆ. ಘಿ‘ಅತ್ತ ಕತ್ರಿನಾ – ಸಲ್ಮಾನ್‌ ಸಂಬಂಧ ಮುರಿಯುವ ಲಕ್ಷಣ ಕಾಣುತ್ತಿದ್ದಂತೆ ಇತ್ತ ಈ ಸಲ್ಮಾನ್‌ ಜಾಣನಂತೆ ಆಸಿನ್‌ಗೆ ಪ್ರೊಪೋಸ್‌ ಮಾಡಿದನಾ, ಕಳ್ಳಘಿ’ ಅಂತೆಲ್ಲಾ ಲೆಕ್ಕ ಹಾಕೋದು ಬೇಕಾಗಿಲ್ಲ. ಸಲ್ಮಾನ್‌ ಆಸಿನ್‌ಗೆ ಪ್ರೊಪೋಸ್‌ ಮಾಡಿದ್ದಂತೂ ಸತ್ಯ. ಅದೂ ಕೂಡಾ ಪ್ಯಾರಿಸ್‌ನ ಐಫೆಲ್‌ ಗೋಪುರದಷ್ಟೇ ಎಂಬುದೂ ಅಷ್ಟೇ ಸತ್ಯ. ಆದರೆ ಕತ್ರಿನಾ ಸಂಬಂಧದಿಂದ ರೋಸಿ ಹೋಗಿ ಈ ಸಲ್ಮಾನ್‌ ಹೀಗೆಲ್ಲಾ ಹೇಳಿಲ್ಲ. ಬದಲಾಗಿ ಘಿ‘ಲಂಡನ್‌ ಡ್ರೀಮ್ಸ್‌ಘಿ’ ಎಂಬ ಹೊಸ ಚಿತ್ರವೊಂದರ ಶೂಟಿಂಗ್‌ನಲ್ಲಿ ಹೇಳಿದ್ದು, ಅದೂ ಆ ಚಿತ್ರದ ಒಂದು ಸೀನ್‌ ಅಷ್ಟೇ.

No Comments to “ಆಸಿನ್‌ಗೆ ಸಲ್ಮಾನ್‌ ಪ್ಯಾರಿಸ್‌ನಲ್ಲಿ ಐ ಲವ್‌ ಯೂ ಅದ್ನಂತೆ!”

add a comment.

Leave a Reply

You must be logged in to post a comment.