ಸಮಾನತೆಯ ಹರಿಕಾರ ಡಾ।। ಬಿ.ಆರ್‌.ಅಂಬೇಡ್ಕರ್‌

ಭಾರತದ ಸುಪುತ್ರರಲ್ಲಿ ಒಬ್ಬರಾದ ಭೀಮ ರಾವ್‌ ಅಂಬೇಡ್ಕರ್‌ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆಯಲ್ಲಿ ರಾಮ್‌ಜಿ ಸಕ್ಪಾಲ್‌ ಹಾಗೂ ಭೀಮಬಾಯಿ ದಂಪತಿಗಳ ೧೪ನೇ ಮಗನಾಗಿ ೧೮೧೯ರ ಏಪ್ರಿಲ್‌ ೧೪ರಂದು ಜನಿಸಿದರು. ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದಟಛಿ ಹೋರಾಡಿ ಜಯ ಗಳಿಸಿದ ಧೀರ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ ಪ್ರಸಿದಟಛಿರಾಗಿದ್ದರು. ಮೇಲಾಗಿ ಮಾನ ವತಾವಾದಿ ಸಂವಿಧಾನ ಶಿಲ್ಪಿ ಎಂದು ಪರಿ ಗಣಿತರಾದವರು. ಓದುವುದರಲ್ಲಿ ಅಪಾರ ಆಸಕ್ತಿ, ಚುರುಕು ತನದಿಂದ ಅಧ್ಯಾಪಕರ ಮೆಚ್ಚುಗೆಗೆ ಪಾತ್ರ ರಾಗಿದ್ದ ಅಂಬೇಡ್ಕರ್‌ ಅವರಿಗೆ ಅಸ್ಪೃಶ್ಯನೆಂಬ ಕಾರಣಕ್ಕಾಗಿ ಸವರ್ಣೀಯರು ನಡೆಸಿಕೊಳ್ಳು ತ್ತಿದ್ದ ರೀತಿ ಮನ ನೋಯಿಸಿತು. ಪ್ರಾಣಿ ಯಾದ ನಾಯಿಗೂ ಮನೆ ಒಳಗೆ ಪ್ರವೇಶಿಸುವ ಅವಕಾಶ ಉಂಟು. ಅನ್ಯ ಧರ್ಮೀಯರಾದ ಮುಸ್ಲಿಮ ರಿಗೂ ಅದು ಸಾಧ್ಯವಾಗುವುದಾದರೆ ಮಾನವ ನಾಗಿ ಹಿಂದೂ ಧರ್ಮೀಯನೇ ಆಗಿರುವ ನನಗೇಕೆ ಅವಕಾಶವಿಲ್ಲ? ಹಾಗಾ ದರೆ ಅಸ್ಪೃಶ್ಯರು ಪ್ರಾಣಿಗಳಿಗಿಂತಲೂ ಕೀಳೇ? ಎಂಬೆಲ್ಲಾ ಯೋಚನೆಗಳು ಅವರನ್ನು ಕಾಡ ತೊಡಗಿ ಮೂಕವೇದನೆ ಅನುಭವಿಸಿದರು. ಇವರ ಬುದಿಟಛಿವಂತಿಕೆ ಮೆಚ್ಚಿಕೊಂಡು ಪ್ರೀತಿ, ವಾತ್ಸಲ್ಯದಿಂದ ನೋಡುತ್ತಿದ್ದ ಬ್ರಾಹ್ಮಣ ಅಧ್ಯಾಪಕರೊಬ್ಬರು ಅಂಬೇಡ್ಕರ್‌ ಎಂಬ ಮನೆ ತನದವರು. ಈ ಅಂಬೇಡ್ಕರ್‌ ನಾಮಾಂಕಿತ ಆ ಗುರುಗಳ ಉಡುಗೊರೆಯಾಗಿ ಭೀಮರಾವ್‌ಗೆ ಲಭ್ಯವಾಯಿತು. ಬಾಂಬೆಯ (ಈಗಿನ ಮುಂಬೈ) ಎಲ್‌μನ್‌ ಸ್ಟನ್‌ ಕಾಲೇಜಿನಲ್ಲಿ ಬಿ.ಎ. ಪದವಿ ಗಳಿಸಿ ಬರೋಡ ರಾಜ್ಯದ ಸೇನೆಯಲ್ಲಿ ಕೆಲಸಕ್ಕೆ ಸೇರಿ ದರು. ಅಲ್ಲಿನ ರಾಜರ ನೆರವಿನಿಂದ ಉನ್ನತ ಶಿಕ್ಷಣ ಕ್ಕಾಗಿ ಅಮೆರಿಕಾಕ್ಕೆ ತೆರಳಿ ಎಂ.ಎ. ಹಾಗೂ ಪಿ.ಹೆಚ್‌.ಡಿ. ಪದವಿ ಗಳಿಸಿ ಕೀರ್ತಿವಂತರಾದರು. ೧೯೨೦ರಲ್ಲಿ ಕೊಲ್ಲಾಪುರದ ಮಹಾ ರಾಜರ ನೆರವು ಹಾಗೂ ಮಿತ್ರ ನವಲ್‌ ಬಥೇನಾನ ಸಹಾಯದಿಂದ ಲಂಡನ್‌ಗೆ ತೆರಳಿ ಕಾನೂನು ವಿಷಯವನ್ನು ಅಧ್ಯಯನ ಮಾಡಿ ಬ್ಯಾರಿಸ್ಟರ್‌ ಆಗಿ ತ ಾ ¿ ೂ ್ನ ಡಿ ಗ ೆ ಮರಳಿದರು. ಅಮೇರಿಕ ನ್ನರ ಜೀವನ ಕ್ರಮ ಹಾಗೂ ನೀಗ್ರೋ ಗಳಿಗೆ ಸ್ವಾತಂತ್ರ್ಯ ಒದಗಿಸಿರುವ ಅವರ ಸಂವಿ ಧಾನದ ೧೪ನೇ ತಿದ್ದು ಪಡಿಯು ಅಂಬೇಡ್ಕರರ ಮೇಲೆ ಗಾಢ ಪರಿಣಾಮ ಬೀರಿತು. ಪುಸ್ತಕ ಪ್ರೇಮಿಯಾದ ಇವರು, ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿದ್ದರು. ಹಿಂದೂ ಧಾರ್ಮಿಕ ಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿದರು. ಧಾರ್ಮಿಕ ವಾಗಿ, ಸಾಮಾಜಿಕವಾಗಿ ಎಷ್ಟೊಂದು ಅಂಧಾನುಕರಣೆಗಳಿವೆ ಎಂಬುದನ್ನು ಅರಿತರು. ಅದರಿಂದ ದೀನದಲಿತರು ಅನು ಭವಿಸಬೇಕಾಗಿರುವ ನೋವುಗಳನ್ನು ನೆನೆದು ದುಃಖಪಟ್ಟರು. ಕೊನೆಗೆ ಅವುಗಳನ್ನು ತೊಡೆದು ಹಾಕುವ ಬಗ್ಗೆೆ ಕುರಿತು ಚಿಂತಿಸತೊಡಗಿದರು. ಇದೇ ವೇಳೆಯಲ್ಲಿ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದ ಮುಂದಾಳಾಗಿದ್ದು, ಇಡೀ ಜನತೆಯ ಮೇಲೆ ಪ್ರಭಾವ ಉಳ್ಳ ವ್ಯಕ್ತಿಯಾಗಿದ್ದರು. ಸ್ವಾತಂತ್ರ್ಯ ಚಳುವಳಿ ಜೊತೆಗೆ ಸಮಾಜೋದಾಟಛಿರ ಕಾರ್ಯ ಕ್ರಮದಡಿ ಹರಿಜನೋದಾಟಛಿರಕ್ಕಾಗಿ ಕೂಡ ಶ್ರಮಿಸುತ್ತಿದ್ದರು. ಅವರನ್ನು ಸಂಪರ್ಕಿಸಿದ ಅಂಬೇಡ್ಕರ್‌ ಅಸ್ಪೃಶ್ಯತೆಯನ್ನು ನಿರ್ಮೂಲ ಮಾಡಲು ವ್ಯಾಪಕ ಆಂದೋಲನದ ಬಗ್ಗೆ ಚರ್ಚಿಸಿದರು. ೧೯೨೭ರಲ್ಲಿ ಮುಂಬೈ ಗವರ್ನರ್‌ ಡಾ।। ಅಂಬೇಡ್ಕರ್‌ರನ್ನು ಘಿಫಲೇಜಿಸ್ಲೇಟಿವ್‌ ಕೌನ್ಸಿಲ್‌ಘಿಫನ ಸದಸ್ಯರನ್ನಾಗಿ ನೇಮಿಸಿದರು. ೧೯೩೧ರಲ್ಲಿ ನಡೆದ ದುಂಡು ಮೇಜಿನ ಶಾಸನ ಸಭೆಗಳಲ್ಲಿ ಕೋಮು ವಾರು ಪ್ರಾತಿನಿಧ್ಯವಿರಬೇಕೆಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಭಾರತ ಸ್ವಾತಂತ್ರ್ಯ ಗಳಿಸಿದ ಮೇಲೆ (೧೯೪೭) ಹೊಸ ಮಂತ್ರಿ ಮಂಡಲದಲ್ಲಿ ಅಂಬೇಡ್ಕರರರು ಪ್ರಪ್ರಥಮ ಕಾನೂನು ಮಂತ್ರಿ ಯಾಗಿ ಅಧಿಕಾರ ಸ್ವೀಕಾರ ಮಾಡಿ ಸಂವಿಧಾನದ ಕರಡು ಪ್ರತಿ ತಯಾರಿ ಸಭೆಯ ಅಧ್ಯಕ್ಷರಾಗಿದ್ದು, ಅಮೂಲ್ಯ ಸಲಹೆಗಳ ನ್ನಿತ್ತರು. ಆ ಪ್ರಕಾರ ಅಸ್ಪೃಶ್ಯತೆ ಕಾನೂನು ಬಾಹಿರ, ಅದರ ಆಚರಣೆ ಶಿಕ್ಷಾರ್ಹ ಅಪರಾಧ ಎಂಬುದಾಗಿ ಸಂವಿಧಾನ ದಲ್ಲಿ ಸೇರಿಸಲಾಯಿತು. ತಮ್ಮ ಕಾರ್ಯ ಸಾಧನೆಯ ಹೋರಾಟದಲ್ಲಿ ಅವರು ಸ್ಥಾಪಿಸಿದ ಸಂಘ ಸಂಸ್ಥೆಗಳು ಹಾಗೂ ರಚಿಸಿದ ಕೃತಿಗಳು ಹೀಗಿವೆ. ೧. ಹಿತಕಾರಿಣಿ ಸಭಾ ಎಂಬ ದಲಿತ ವರ್ಗಗಳ ಒಕ್ಕೂಟ. ೨. ಅಸ್ಪೃಶ್ಯತಾ ವಿರೋಧಿ ಸಂಘ. ೩. ದಲಿತ ವರ್ಗಗಳ ಅಖಿಲ ಭಾರತೀಯ ಅಧಿ ವೇಶನ, ಇತ್ಯಾದಿ. ಗ್ರಂಥಗಳು : ೧. ಆರಿಜನ್‌ ಅಂಡ್‌ ಮೆಕ್ಯಾ ನಿಸಂ ಆಪ್‌ ಕ್ಯಾಸ್ಟ್‌, ೨.ಆನ್ಹಿಲೇಶನ್‌ ಆಫ್‌ ಕ್ಯಾಸ್ಟ್‌, ೩. ಹೂವರ್‌ ದಿ ಶೂದ್ರಾಸ್‌, ೪. ಹೂವರ್‌ ದಿ ಅನ್‌ಟಚ್‌ಬಲ್ಸ್‌, ೫.ದಿ ಪ್ರಾಬ್ಲಮ್‌ ಆಫ್‌ ರೂಪಿ, ೬.ಬುದಟಛಿ ಮತ್ತು ಅವನ ಧರ್ಮ. ನವೆಂಬರ್‌ ೧,೧೯೪೯ರಂದು ಸರ್ಕಾರ ಇವರ ಕರಡು ಪ್ರತಿಗೆ ಒಪ್ಪಿಗೆ ನೀಡಿ ಘಿಫಸಂವಿ ಧಾನಶಿಲ್ಪಿಘಿಫ ಎಂದು ಹೆಸರಿಸಿತು. ಬೌದಟಛಿ ಧರ್ಮದ ತತ್ವಗಳನ್ನು ಮೆಚ್ಚಿಕೊಂಡು ಪತ್ನಿಸಮೇತ ೧೯೫೬ ಅಕ್ಟೋಬರ್‌ ೧೪ರಂದು ನಾಗಪುರದಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ಬೌದಟಛಿ ಧರ್ಮಕ್ಕೆ ಮತಾಂತರ ಹೊಂದಿದರು. ಜನತೆ ಇವರನ್ನು ಪ್ರೀತಿಯಿಂದ ಘಿಫಬಾಬಾಸಾಹೇಬಘಿಫ ಎಂದರು. ತಮ್ಮ ಇಡೀ ಬದುಕನ್ನು ದೀನ ದಲಿತರ ಹಿತ ರಕ್ಷಣೆಗಾಗಿ ಸವೆಸಿದ ಅಂಬೇಡ್ಕರ್‌, ೧೯೫೬ ಡಿಸೆಂಬರ್‌ ೬ರಂದು ಇಹಲೋಕ ತೊರೆದರು. ಅಸಂಖ್ಯಾತ ಜನರ ಉದಾಟಛಿರಕ್ಕಾಗಿ ಹೋರಾ ಡಿದ ಡಾ.ಬಿ.ಆರ್‌.ಅಂಬೇಡ್ಕರ್‌ ಭಾರತದ ಕಣ್ಮಣಿಗಳಲ್ಲೊಬ್ಬರಾಗಿದ್ದಾರೆ. ಈ ಹಿನ್ನಲೆಯಲ್ಲಿ ಭಾರತ ಸರ್ಕಾರ ಅವರಿಗೆ ೧೯೮೯ರಲ್ಲಿ ಘಿಫಭಾರತ ರತ್ನ ಘಿಫ ನೀಡಿ ಗೌರವಿಸಿತು. ಅಂಬೇಡ್ಕರ್‌ ಕೇವಲ ದಲಿತರಿಗೆ ಮಾತ್ರ ಸೇರಿದವರಲ್ಲ. ಅವರಲ್ಲಿನ ಸಾಮಾಜಿಕ ಕಳಕಳಿ, ಉದಾತ್ತ ನಿಲುವಿನಿಂದ ಭಾರತೀಯರೆಲ್ಲರ ಕಣ್ಮಣಿಯಾಗಿದ್ದಾರೆ. ಮಾನವರಲ್ಲಿ ಭೇದ ಭಾವ ಗಳನ್ನು ತೊರೆದು ಸಮಾನತೆ ತರುವ ಪ್ರಯತ್ನ ಇನ್ನೂ ಸಾಗಬೇಕಿದೆ. ಹಲವು ಸಂಘ ಸಂಸ್ಥೆಗಳು ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸುತ್ತಿದ್ದರೂ ಮಾನವರಲ್ಲಿ ಮನಃ ಪರಿವರ್ತನೆ ಪೂರ್ಣವಾಗಿ ಬದಲಾಗಿಲ್ಲ. ಇಂದಿಗೂ ಅದೆಷ್ಟೋ ಹಳ್ಳಿಗಳಲ್ಲಿ ಸವರ್ಣೀಯರು ನೀರನ್ನು ಬಳಸುವಂತಿಲ್ಲ. ದೇವಾ ಲಯವನ್ನು ಪ್ರವೇಶಿಸಲೂ ನಿರ್ಬಂಧವಿದೆ. ಈ ಹೈಟೆಕ್‌ ಯುಗದಲ್ಲಿಯೂ ಇಂತಹ ಅದೆಷ್ಟೋ ಅನಿಷ್ಟ ಪದಟಛಿತಿಗಳು ಅನೇಕ ಹಳ್ಳಿ ಗಳಲ್ಲಿ ಜೀವಂತವಾಗಿದೆ. ಅಸ್ಪೃಶ್ಯತೆ ಕಾನೂನು ಬಾಹಿರ, ಶಿಕ್ಷಾರ್ಹ ಎಂದು ತಿಳಿದಿದ್ದರೂ ಈ ಆಚರಣೆ ಇನ್ನೂ ಚಾಲ್ತಿಯಲ್ಲಿವೆ. ಶಿಕ್ಷೆಗೆ ಒಳ ಪಡಿಸಬೇಕಾದ ಮೇಲಾಧಿಕಾರಿಗಳು ಸವ ರ್ಣೀಯರೆಂದೇ? ಕೆಲವೆಡೆ ಮೇಲ್ದ ರ್ಜೆಯ ಅಧಿಕಾರದಲ್ಲಿರುವ ತಮ್ಮವರಿಂದಲೂ ದಲಿ ತರು ಶೋಷಣೆಗೆ ಒಳಪಟ್ಟಿ ರುವ ಉದಾ ಹರಣೆಗಳು ಕಾಣ ಸಿಗುತ್ತದೆ. ಸಹಬಾಳ್ವೆಯನ್ನು ನಡೆಸುವವರಲ್ಲಿ ಜಾತಿ-ಧರ್ಮಗಳ ವಿಷ ಬೀಜ ಬಿತ್ತಿ ಜಾತಿ ರಾಜಕೀಯದಿಂದ ಅಧಿ ಕಾರದ ಗದ್ದುಗೆ ಏರಲು ಹುನ್ನಾರ ನಡೆಸುವ ಅಧಿ ಕಾರಿಗಳು, ರಾಜಕಾರಣಿಗಳನ್ನು ಅಸ್ಪೃಶ್ಯ ರೆಂದು ದೂರವಿಡಬೇಕಾಗಿದೆ. ಎಲ್ಲರೂ ಸಮಾನರೆಂದು ಭಾವಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ದೇಶದ ಸಮಗ್ರ ಅಭಿವೃದಿಟಛಿಗೆ ಚಿಂತನೆ ನಡೆಸುವತ್ತ ನಾವಿಂದು ಸಾಗಬೇಕಾಗಿದೆ. ಇಂತಹ ಮಹನೀಯರ ಜನ್ಮ ದಿನಾ ಚರಣೆಯಂದು ಭಾಷಣ, ಚರ್ಚೆಗಳು ನಡೆದು ವಿಡಿಯೋ ಕ್ಯಾಮೆರಾಗಳಿಗೆ ಭವ್ಯಾಲಂಕಾರದ ವೇದಿಕೆಯಲ್ಲಿ ಫೋಸ್‌ ಕೊಟ್ಟು ಕೆಲಸ ಮುಗಿ ಯಿತೆಂದು ಮರಳುವುದು ತರವಲ್ಲ. ಇಂತಹ ಅನೇಕ ಮಹಾನ್‌ ವ್ಯಕ್ತಿಗಳ ತತ್ವ , ಸಿದಾಟಛಿಂತಗಳು ಇಂದಿಗೂ ನಮಗೆ ಅನುಕರಣೀಯವಾದುದು ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ಒಂದೆರೆಡು ಹೆಜ್ಜೆಯನ್ನಾದರೂ ಹಾಕಿದಲ್ಲಿ ಜನ್ಮ ದಿನಾ ಚರಣೆಗೊಂದು ಭಾವಪೂರ್ಣ ಅರ್ಥವಿದ್ದೀತು.

No Comments to “ಸಮಾನತೆಯ ಹರಿಕಾರ ಡಾ।। ಬಿ.ಆರ್‌.ಅಂಬೇಡ್ಕರ್‌”

add a comment.

Leave a Reply

You must be logged in to post a comment.