ಡಾ. ರಾಜ್‌ಕುಮಾರ್‌ ತೃತೀಯ ಪುಣ್ಯತಿಥಿ

ಬೆಂಗಳೂರು : ಕನ್ನಡ ಚಿತ್ರರಂಗವನ್ನು ಅರ್ಧಶತಮಾನಕ್ಕೂ ಹೆಚ್ಚು ಕಾಲ ಆಳಿದ್ದ ಕನ್ನಡಿಗರ ಕಣ್ಮಣಿ ನಟಸಾರ್ವಭೌಮ ಡಾ. ರಾಜ್‌ ಕುಮಾರ್‌ ಕಾಲವಾಗಿ ಭಾನುವಾರಕ್ಕೆ ಮೂರು ವರ್ಷ ಸಂದ ಹಿನ್ನಲೆಯಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿ ಗಳು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸಮಾಧಿಗೆ ತೆರಳಿ ಅಗಲಿದ ಕಲಾವಿದನಿಗೆ ನಮನ ಸಲ್ಲಿಸಿದರು. ಇದೇ ವೇಳೆ ರಾಜ್‌ ನಿವಾದಲ್ಲಿ ಅನ್ನ ಸಂತರ್ಪಣೆ ಕಾರ್ಯವೂ ನಡೆಯಿತು. ೭೭ ವರ್ಷಗಳ ತುಂಬು ಜೀವನ ನಡೆಸಿದ್ದ ಮುತ್ತುರಾಜ್‌ ಜನ ಮಾನಸದ ಕಲಾವಿದ. ಅವರು ನಟಿಸಿದ ಚಿತ್ರಗಳಿಂದ ಹಾಗೂ ಸರಳ ಸಜ್ಜನಿಕೆಯ ನಡೆ ನುಡಿಯಿಂದಾಗಿ ಅವರ ನೆನಪು ಎಂದಿಗೂ ಶಾಶ್ವತವೇ. ರಾಜ್‌ಕುಮಾರ್‌ ಅವರ ಅಪಾರ ಅಭಿಮಾನಿ ದೇವರುಗಳು, ಅವರ ಪತ್ನಿ ಪಾರ್ವತಮ್ಮ, ಪುತ್ರರಾದ ಶಿವರಾಜ್‌, ಪುನೀತ್‌, ರಾಘವೇಂದ್ರ ಮತ್ತು ಕುಟುಂಬದವರು ರಾಜ್‌ ಸಮಾಧಿಗೆ ಆರತಿ ಬೆಳಗಿದರು. ಕನ್ನಡ ಚಿತ್ರರಂಗದ ಅನೇಕ ಗಣ್ಯರು, ಬಂಧುಗಳು, ಸ್ನೇಹಿತರು ಕೂಡ ರಾಜ್‌ ಮೂರನೇ ಪುಣ್ಯತಿಥಿಯಂದು ಪುಷ್ಪಾರ್ಚನೆ ಸಲ್ಲಿಸಿದರು. ನೆರೆದವರಲ್ಲಿ ಕೆಲವರು ಕಂಬನಿ ಮಿಡಿದು ಅದ್ಭುತ ಕಲಾವಿದನನ್ನು ಸ್ಮರಿಸಿದರು. ಎಲ್ಲೆಲ್ಲೂ ರಾಜ್‌ ಜಯಘೊಷ ಮನೆ ಮಾಡಿತ್ತು.

No Comments to “ಡಾ. ರಾಜ್‌ಕುಮಾರ್‌ ತೃತೀಯ ಪುಣ್ಯತಿಥಿ”

add a comment.

Leave a Reply

You must be logged in to post a comment.