ಚುನಾವಣೆ ನೀತಿಸಂಹಿತೆ : ಒಂದು ಕಣ್ಣಿಗೆ ಸುಣ್ಣ , ಇನ್ನೊಂದಕ್ಕೆ ಬೆಣ್ಣೆ

ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ? ಹೌದು, ಇಂತಹದೊಂದು ಪ್ರಶ್ನೆ ಈಗ ಜಿಲ್ಲೆಯ ಜನರಿಗೆ ಎದುರಾಗಿದೆ. ಚುನಾವಣೆ ನೀತಿಸಂಹಿತೆ ನೆಪದಲ್ಲಿ ಸಾರ್ವಜನಿಕರ ಖಾಸಗಿ ಕಾರ್ಯಕ್ರಮಗಳಿಗೂ ಸಾರ್ವಜನಿಕರು ಚುನಾ ವಣಾಧಿಕಾರಿಗಳ ಅನುಮತಿ ಪಡೆಯಬೇಕಾದ ಸಂದರ್ಭ ಬಂದಿದೆ. ಇಂತಹ ದೊಂದು ಫರ್ಮಾನು ಹಾಸನ ಜಿಲ್ಲಾಡಳಿತದಿಂದ ಹೊರ ಬಿದ್ದಿದೆ. ಈ ವಿಷಯವನ್ನು ಪತ್ರಿಕೆಗಳ ಮೂಲಕ ತಿಳಿದವರು ಮಾತ್ರ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಜಿಲ್ಲಾಧಿಕಾರಿಗಳ ಕಛೇರಿಗೆ ಎಡ ತಾಕಬೇಕಾಗಿದೆ. ಸದರಿ ನೀತಿಸಂಹಿತೆಯ ಅರಿವಿಲ್ಲದ ಮಂದಿ ನಿರಾತಂಕವಾಗಿ ಖಾಸಗಿ ಕಾರ್ಯಕ್ರಮವನ್ನು ನಡೆಸುತ್ತಲೇ ಇದ್ದಾರೆ. ಇದು ಅರಕಲಗೂಡು ತಾಲ್ಲೂಕಿನಲ್ಲಿ ಕಾಣ ಬರುತ್ತಿರುವ ಚಟುವಟಿಕೆ. ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭ ದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕಟ್ಟು ನಿಟ್ಟಾದ ನೀತಿಸಂಹಿತೆ ಜಾರಿಯಲ್ಲಿತ್ತು. ಅಧಿಕಾರಿಗಳು ಅದನ್ನು ಪಾಲಿಸಿದ್ದರು. ಆದರೆ ಈಗ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಈಗಿನಂತೆ ಸಾರ್ವಜನಿಕರ ಖಾಸಗಿ ಬದುಕಿನ ಕಾರ್ಯಕ್ರಮಕ್ಕೆ ಅಡ್ಡಿ ಆತಂಕ ಎದು ರಾಗಿರಲಿಲ್ಲ. ಸಾರ್ವಜನಿಕರ ಮೇಲೆ ನೀತಿ ಸಂಹಿತೆ ಹೇರುತ್ತಿರುವ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಬಗ್ಗೆ ಮಾತ್ರ ಸಡಿಲ ನೀತಿ ಅನುಸರಿಸಿದ್ದಾರೆ. ಕಳೆದ ವಾರವಷ್ಟೇ ಪಟ್ಟಣದಲ್ಲಿ ವಿವಿಧ ಪಕ್ಷಗಳ ಮುಖಂಡರ ಮತ ಯಾಚನೆ ಮತ್ತು ಸಮಾವೇಶಗಳಲ್ಲಿ ಯಾವ ಎಗ್ಗು ಸಿಗ್ಗು ಇಲ್ಲದೆ ಜನರನ್ನು ಕರೆತರಲು ವಾಹನ ಬಳಸ ಲಾಗುತ್ತಿತ್ತು. ಈಗ ಬಳಸಲಾಗುತ್ತಿದೆ. ಮತ ಯಾಚನೆಗೆ ಹೊರಡುವ ಕಾರ್ಯ ಕರ್ತರು ಬಳಸುವ ವಾಹನಗಳಿಗೂ ಸಹ ಚುನಾ ವಣಾಧಿಕಾರಿಗಳು ಅನುಮತಿ ಪತ್ರ ನೀಡಿದಂತಿಲ್ಲ. ಏಕೆಂದರೆ ಅಂತಹದೊಂದು ಅನುಮತಿ ಪತ್ರ ರಾಜಕೀಯ ಪಕ್ಷಗಳ ವಾಹನಗಳ ಮೇಲೆ ಕಾಣು ತ್ತಿಲ್ಲ. ಪಟ್ಟಣ ಸನಿಹದ ತೋಟಗಳಲ್ಲಿ ವ್ಯಾಪಕ ವಾಗಿ ಅಕ್ರಮ ಮದ್ಯ ಸಂಗ್ರಹಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ತಾಲ್ಲೂಕಿನ ವಿವಿಧ ಹೋಬಳಿ ಕೇಂದ್ರಗಳಲ್ಲಿ ಮತದಾರರಿಗೆ ಆಮಿಷ ವೊಡ್ಡುವ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ವರದಿಗಳಿದ್ದರೂ ಈ ಸಂಬಂಧ ಯಾವುದೇ ಕ್ರಮಕ್ಕೆ ಮುಂದಾಗದ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನಡೆಯು ತ್ತಿರುವ ರಾಮೋತ್ಸವ, ರಾಮನವಮಿ, ಜಾತ್ರೋ ತ್ಸವದಂತಹ ಕಾರ್ಯಕ್ರಮಗಳಿಗೆ ರಾಜಕೀಯ ಪಕ್ಷಗಳ ಮುಖಂಡರ ಭೇಟಿ ನೀಡಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದರೂ ಚುನಾವಣಾಧಿಕಾರಿಗಳು ಗೊತ್ತಿಲ್ಲದವರಂತೆ ನಡೆದುಕೊಳ್ಳುತ್ತಿರುವುದು ಸಂದೇಹಕ್ಕೆ ಆಸ್ಪದ ನೀಡಿದೆ. ಕಳೆದ ವಾರ ಪಟ್ಟಣದಲ್ಲಿ ನಡೆದ ಪಕ್ಷ ವೊಂದರ ಸಭೆಗೆ ಅನುಮತಿ ನೀಡಿದ್ದ ತಾಲ್ಲೂಕು ಆಡಳಿತ, ಸದರಿ ಪಕ್ಷದ ಕಾರ್ಯಕರ್ತರು ಬ್ಯಾನರ್‌, ಬಂಟಿಂಗ್ಸ್‌ ಅನ್ನು ಮುಖ್ಯ ವೃತ್ತದವರೆಗೆ ಕಟ್ಟು ವವರೆಗೂ ಸುಮ್ಮನಿದ್ದು, ಎಷ್ಟೋ ಹೊತ್ತಿನ ನಂತರ ಎಚ್ಚೆತ್ತುಕೊಂಡು ನೋಟಿಸ್‌ ಜಾರಿ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ನಗೆ ಪಾಟಲಿಗೀಡಾಗಿದೆ. ಇನ್ನು ತಾಲ್ಲೂಕಿನಲ್ಲಿ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಗಳು ಹಾಗೂ ಮತದಾರರ ಮಾಹಿತಿಯನ್ನು ಸಾರ್ವಜನಿಕ ಅವಗಾಹನೆಗೆ ನೀಡದೆ ಕತ್ತಲೆಯಲ್ಲಿಟ್ಟಿರುವ ಚುನಾವಣಾಧಿ ಕಾರಿಗಳು ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಫರ್ಮಾನಿನಂತೆ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ಎಡ ತಾಕುವ ಸಾರ್ವಜನಿಕರ ಅರ್ಜಿಗಳನ್ನು ತಾಲ್ಲೂಕು ಕಛೇರಿಯಲ್ಲಿರುವ ಚುನಾವಣೆಯ ಸಹಾಯಕ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ. ಹಾಸನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವಂತೆ ಸೂಚಿಸುತ್ತಿದ್ದಾರೆ. ಪ್ರತಿಯೊಂದು ಕಾರ್ಯ ಕ್ರಮಕ್ಕೂ ಹಾಸನಕ್ಕೆ ತೆರಳಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲು ಸಾಧ್ಯವೇ? ಇಂತಹದೊಂದು ಪ್ರಶ್ನೆ ಇಟ್ಟುಕೊಂಡು ಪತ್ರಿಕೆ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿದಾಗ ಅರ್ಜಿ ಸ್ವೀಕರಿಸಲು ನಿರಾಕರಿಸಿ ದರು.

No Comments to “ಚುನಾವಣೆ ನೀತಿಸಂಹಿತೆ : ಒಂದು ಕಣ್ಣಿಗೆ ಸುಣ್ಣ , ಇನ್ನೊಂದಕ್ಕೆ ಬೆಣ್ಣೆ”

add a comment.

Leave a Reply

You must be logged in to post a comment.