ಸಕಲೇಶಪುರ : ಕಾಂಗ್ರೆಸ್‌ ನಾಯಕನ ದುರಂತ ಕಥೆ…

ಸಕಲೇಶಪುರ ತಾಲ್ಲೂಕಿನ ರಾಜಕಾರಣದ ೭೦-೮೦ರ ದಶಕದಲ್ಲಿ ಮಿಂಚಿದ್ದ ದಿ।। ಅನ್ವರ್‌ ಸಾಬ್‌, ಕಾಂಗ್ರೆಸ್‌ ಪಕ್ಷದ ಸಾಗರದಲ್ಲಿ ಬದುಕು ಕಳೆದುಕೊಂಡ ದುರಂತ ನಾಯಕ. ಈ ಚುನಾವಣೆ ಸಂದರ್ಭ ದಲ್ಲಿ ಅವರು ನೆನಪಾಗುತ್ತಾರೆ. ಕೆ. ಸೈಯದ್‌ ಹμಝ್‌ ಉರುಫ್‌ ಅನ್ವರ್‌ ಸಾಬ್‌ ಉರುಫ್‌ ಭಾಯಿಜಾನ್‌ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಇವರು ಸಕಲೇಶ ಪುರ ಕಾಂಗ್ರೆಸ್‌ ಪಕ್ಷದ ಪ್ರಮುಖ ರಾಗಿದ್ದರು. ಸಕಲೇಶಪುರದ ಪ್ರಮುಖ ಕಾಂಗ್ರೆಸ್‌ ನಾಯಕರಾಗಿದ್ದ ಅನ್ವರ್‌ ಸಾಬ್‌ರ ಹೆಸರು ದಾಖಲೆಗಳಲ್ಲಿ, ಕೆ. ಸಯ್ಯದ್‌ ಹμಝ್‌ ಎಂದಿದ್ದರೂ ಜನ ಅನ್ವರ್‌ ಸಾಬ್‌ ಎಂದೂ ಮುಸ್ಲಿಂ ಮುಖಂಡರು ಭಾಯಿ ಜಾನ್‌ ಎನ್ನುತ್ತಿದ್ದರು. ಮೂಲತಃ ಬೇಲೂರು ತಾಲ್ಲೂಕು ಬಿಕ್ಕೋಡು ಹೋಬ ಳಿಯ, ಕೆಸಗೋಡು ಗ್ರಾಮದ ವರಾ ಗಿದ್ದು, ಜಮೀನ್ದಾರ ಕೆ.ಸಯ್ಯದ್‌ ಕರೀಂರವರ ಹಿರಿಯ ಪುತ್ರರಾಗಿ ೧೯೩೫ ರಲ್ಲಿ ಜನ್ಮ ತಾಳಿದರು. ಸಕಲೇಶಪುರದ ನಝೀಮುನ್ನೀಸಾ ಇವರನ್ನು ವಿವಾಹವಾದ ನಂತರ ಇಲ್ಲಿಯವರೇ ಆದರು. ಇವರ ಸ್ಮರಣೀಯ ಸೇವೆಗಳಲ್ಲಿ ಪ್ರಮುಖವಾದದ್ದು, ಉರ್ದು ಶಾಲೆಯ ಕಟ್ಟಡ ನಿರ್ಮಾಣ ಮಾಡಿ ಮುಸ್ಲಿಂರ ಶೈಕ್ಷಣಿಕ ಅಭಿವೃದಿಟಛಿಗೆ ಒತ್ತು ನೀಡಿದ್ದು. ಚಂಪಕನಗರ ಬಡಾವಣೆಯ ಜನರನ್ನು ಒಕ್ಕಲೆಬ್ಬಿಸಿ ಅಲ್ಲಿ ಪೊಲೀಸ್‌ ಕ್ವಾರ್ಟಸ್‌ ನಿರ್ಮಿಸಲು ಸರ್ಕಾರ ಮುಂದಾದಾಗ ಪ್ರಬಲವಾಗಿ ವಿರೋ ಧಿಸಿ ಬಡಾವಣೆ ಉಳಿಸಿ ಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದರು. ಕುಶಾಲನಗರ ಬಡಾವಣೆಯಲ್ಲಿ ನೂರಾರು ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಅಭಿವೃದಿಟಛಿಗೆ ಶ್ರಮಿಸಿದ್ದರು. ಹೀಗೆ ಇವರ ಹಲವು ಸೇವೆಗಳನ್ನು ಜನ ನೆನಪಿಸಿಕೊಳ್ಳುತ್ತಾರೆ. ೫ ಬಾರಿ ಪುರಸಭೆಯ ಸದಸ್ಯ ರಾಗಿದ್ದ ಇವರು, ೨೦ ವರ್ಷಗಳ ಕಾಲ ಕಾಂಗ್ರೆಸ್‌ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡಿದ್ದರು. ತಾವು ಅಲ್ಪಸಂಖ್ಯಾತ ಎಂಬ ಸಂಕುಚಿತ ಮನೋಭಾವಕ್ಕೆ ಒಳಪಡಿಸಿಕೊಳ್ಳದೆ ರಾಜಕಾರಣ ಮಾಡಿದ್ದು, ಇವರ ವಿಶೇಷತೆಯಾಗಿತ್ತು. ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮ್ಮದ್‌, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಕೆಂಗಲ್‌ ಹನು ಮಂತಯ್ಯ, ಗುಂಡೂರಾವ್‌, ದೇವ ರಾಜ್‌ ಅರಸ್‌ ಸೇರಿದಂತೆ ಪ್ರಮುಖ ಮುಖಂಡ ರೊಂದಿಗೆ ಒಡನಾಟವಿತ್ತು. ರಾಜ್ಯದ ಶಾಸಕರು ಲೋಕಸಭಾ ಸದಸ್ಯರು ಇವರ ಬೇಡಿಕೆಗಳನ್ನು ಕ್ಷಣಾರ್ಧದಲ್ಲಿ ಈಡೇರಿಸುತ್ತಿದ್ದರು. ಅನ್ವರ್‌ ಸಾಬ್‌ ರಾಜಕೀಯಕ್ಕೆ ಬಂದಿದ್ದೇ ಒಂದು ಆಕಸ್ಮಿಕ ಘಟನೆ, ಇವರು ವಾಸಿಸುತ್ತಿದ್ದ ಕುಶಾಲನಗರ ಬಡಾವಣೆಯ ಮೇಗಲಕೊಪ್ಪಲಿಗೆ ಹೋಗುವ ದಾರಿ ಬಹಳ ಕಿರಿದಾಗಿತ್ತು ಪಕ್ಕದ ಕೆರೆಗೆ ಮಣ್ಣು ಹಾಕಿ ದಾರಿ ಯನ್ನು ಅಗಲಗೊಳಿಸುವಂತೆ ಅಂದಿನ ಪುರಪಿತೃಗಳಲ್ಲಿ ಕೇಳಿಕೊಂಡಾಗ, ಸ ಉಡಾಫೆಯಿಂದ ವರ್ತಿಸಿ ಆತ ನೀನೇ ಸದಸ್ಯನಾಗಿ ದಾರಿ ಮಾಡಿಸಿಕೋ ಎಂದು ಹೇಳಿದ್ದರಂತೆ. ಇದನ್ನು ಸವಾಲಾಗಿ ಸ್ವೀಕರಿಸಿದ ಅನ್ವರ್‌ ಸಾಬ್‌, ತಮ್ಮ ದರ್ಜಿ ವೃತ್ತಿಯಿಂದ ರಾಜಕಾರಣ ದತ್ತ ವಾಲತೊಡಗಿದರು. ೧೯೬೪ ರಲ್ಲಿ ನಡೆದ ಪುರಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದರು. ಹಣಕಾಸಿನ ತೊಂದರೆ ಕಾಡ ತೊಡಗಿತ್ತು. ಸ್ನೇಹಿತರೊಬ್ಬರಿಂದ ೪ ಸಾವಿರ ರೂ. ಕೈ ಸಾಲ ಪಡೆದು ಸಾಲವನ್ನು ೨೦ ವರ್ಷಗಳ ಅವಧಿಯಲ್ಲಿ ಹಿಂದಿರುಗಿಸಲಾಗದಿದ್ದರೆ ಬಡ್ಡಿ ಸಮೇತ ನೀಡುವುದಾಗಿ ಒಪ್ಪಂದವಾಗಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿ ಸಿದರು. ಆದರೆ ಸಾಲ ನೀಡಿದ ವ್ಯಕ್ತಿ ಇವರ ರಾಜಕೀಯಕ್ಕೆ ಮೂಗು ತೂರಿಸಿ, ತಮ್ಮ ಪರವಾದ ಪುರಸಭಾ ಅಧ್ಯಕ್ಷ ಅಭ್ಯರ್ಥಿಪರವಾಗಿ ಬೆಂಬಲ ನೀಡುವಂತೆ ಎಸ್‌.ಬಿ. ಸೋಮಪ್ಪ ಪುರಸಭಾ ಅಧ್ಯಕ್ಷ ಅಭ್ಯರ್ಥಿ ಪರವಾಗಿ ಬೆಂಬಲ ನೀಡುವಂತೆ ಒತ್ತಾಯಿಸ ತೊಡಗಿದರು. ಇದಕೆಕ ಬದಲಾಗಿ ೨೫ ಸಾವಿರ ಸಾಲ ನೀಡುವುದಾಗಿ ಭರವಸೆ ನೀಡಿದದರು. ಅದರಂತೆ ಎಸ್‌.ಬಿ. ಸೋಮಪ್ಪ ಪುರಸಭಾ ಅಧ್ಯಕ್ಷರಾದರು. ನಂತರ ನಡೆದ ಬೆಳವಣಿಗೆಯಲ್ಲಿ ಅನ್ವರ್‌ ಸಾಬ್‌ ಸೇರಿದಂತೆ ಆರ್‌. ಮಂಜುನಾಥ್‌, ವಿಶ್ವನಾಥ ನಾಯ್ಡು, ಬಿ.ಎನ್‌. ವೆಂಕಟೇಶ್‌ ಪುರಸಭೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಎಸ್‌.ಬಿ. ಸೋಮಪ್ಪ ರವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ಪ್ರಯತ್ನಿಸಿದರು. ಮರು ಚುನಾವಣೆಯಲ್ಲಿ ಅನ್ವರ್‌ ಸಾಬ್‌ ಮಾತ್ರ ಜಯ ಗಳಿಸುವಲ್ಲಿ ಯಶಸ್ವಿಯಾದರು. ನಂತರ ಭಾರೀ ಬದಲಾವಣೆ ನಡೆದು ಪುರಸಭೆ ಅಧ್ಯಕ್ಷರಾಗಿ , ಜೆ.ಡಿ ಸೋಮಪ್ಪ ಆಯ್ಕೆಯಾದರು. ಈ ಬೆಳವಣಿಗೆ ಯಿಂದ ರಾಜಕೀಯ ಜೀವನದಲ್ಲಿ ಅನ್ವರ್‌ ಸಾಬ್‌ ವರ್ಚಸ್ಸು ಹೆಚ್ಚಾಗುವ ಮೂಲಕ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಬಹಳ ನೋವಿ ಗೀಡು ಮಾಡಿತ್ತು. ಇವರ ೧೩ ಎಕರೆ ಕಾμ ತೋಟಕ್ಕೆ ರಾಜಕೀಯ ದುರು ದ್ದೇಶದಿಂದ ಬೆಂಕಿ ಇಡಲಾಯಿತು. ಮನುಷ್ಯ ಸಹಜ ದೌರ್ಬಲ್ಯಗಳು ಇವರನ್ನು ಕಾಡದೇ ಇರಲಿಲ್ಲ. ಜೀವನವೆಲ್ಲಾ ರಾಜಕೀಯಕ್ಕೆ, ಮೀಸಲಿಟ್ಟರೂ ಆರ್ಥಿಕವಾಗಿ ಸಬಲ ರಾಗಲಿಲ್ಲ. ಕುಶಾಲನಗರ ಬಡಾ ವಣೆಯ ಮನೆ ಹೊರತುಪಡಿಸಿದರೆ ಇವರಿಗೆ ಆಸ್ತಿಯಾಗಿ ಬೇರೇನೂ ಉಳಿಯಲಿಲ್ಲ. ಮುಸ್ಲಿಂ ಸಮುದಾಯ ದಲ್ಲಿ ಇವರ ಮಾತೇ ಅಂತಿಮವಾಗಿತ್ತು. ನಿರ್ಣಯಗಳನ್ನು ಯಾರು ಪ್ರಶ್ನಿಸುತ್ತಿ ರಲಿಲ್ಲ. ರಾಜಕೀಯ ನಿಂತ ನೀರಾಗಲಿಲ್ಲ. ಅನ್ವರ್‌ ಸಾಬ್‌ರನ್ನು ಪಕ್ಕಕ್ಕೆ ತಳ್ಳಿ ಕಾಂಗ್ರೆಸ್‌ ಹರಿಯಲಾರಂಭಿಸಿತು. ಕಾಂಗ್ರೆಸ್‌ ಸಾಗರದಲ್ಲಿ ಅನ್ವರ್‌ ಸಾಬ್‌ ಮುಳುಗಿ ಹೋಗುತ್ತಿರುವುದನ್ನು ಯಾರೂ ಗಮನಿಸಲಿಲ್ಲ. ಕಾಂಗ್ರೆಸ್‌ ಮುಖಂಡರು ಜಾಣಕುರುಡರಂತೆ ವರ್ತಿಸುತ್ತಿದ್ದರು. ಕಾಂಗ್ರೆಸ್‌ ಪಕ್ಷ ಬಲಪಡಿಸುವ ಸಂದರ್ಭದಲ್ಲಿ ನಡೆಸಿದ ಸಂಘರ್ಷದಿಂದಾಗಿ ಅನೇಕ ತಪ್ಪುಗಳು ಇವರಿಂದ ನಡೆದಿದ್ದವು. ಇದನ್ನೇ ದೊಡ್ಡದು ಮಾಡಿದ ನಾಯಕರು ಅನ್ವರ್‌ ಸಾಬ್‌ರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿದರು. ಅನ್ವರ್‌ ಸಾಬ್‌ ೧೯೯೩ ಡಿಸೆಂಬರ್‌ ೩೧ ರಂದು ಇಹಲೋಕ ತ್ಯಜಿಸಿದರು. ಇದರೊಂದಿಗೆ ತಾಲ್ಲೂಕಿನ ಒಬ್ಬ ಪ್ರಮುಖ ಮುಸ್ಲಿಂ ರಾಜಕಾರಣಿಯ ಅಧ್ಯಾಯ ಕೊನೆಗೊಂಡಿತು. ಅನ್ವರ್‌ ಸಾಬ್‌ರ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ಇಂದಿಗೂ ಹಿರಿಯ ಕಾಂಗ್ರೆಸ್ಸಿಗರು ಕೆಲವು ಸಂದರ್ಭಗಳಲ್ಲಿ ಸ್ಮರಿಸಿಕೊಳ್ಳು ತ್ತಾರೆ. ಭ್ರಷ್ಟ ಅಧಿಕಾರಿಗಳ ವಿರುದಟಛಿ ಸಿಡಿದೇಳುತ್ತಿದ್ದರು. ಪೊಲೀಸರು ಅಮಾಯಕರಿಗೆ ಕಿರುಕುಳ ನೀಡಿದರೆ, ಠಾಣೆಗೆ ತೆರಳಿ ಮುಲಾಜಿಲ್ಲದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಪಕ್ಷದ ನಾಯಕರ ಮುಂದೆ ನಾಯಕ ನಂತೆಯೇ ನಿರ್ಭಯವಾಗಿ ಮಾತನಾಡುತ್ತಿದ್ದುದು ಅವರ ಪಕ್ಷನಿಷ್ಠ ಇಂದಿಗೂ ಮಾದರಿ ಎನ್ನುತ್ತಾರೆ. ಅನ್ವರ್‌ ಸಾಬ್‌ರ ಬಗೆಗೆ ಅವರ ಸಹೋದರ ಎಕ್ಬಾಲ್‌ ಹೇಳುವ ಮಾತುಗಳು ಹೃದಯ ಕಲುಕುತ್ತದೆ. ಘಿ‘ಯಾರು ನಮ್ಮ ಅಣ್ಣನಂತೆ ರಾಜ ಕಾರಣ ಮಾಡಬಾರದು. ಮನೆ ಉದಾಟಛಿರ ಮಾಡದ ರಾಜಕಾರಣ ಯಾರಿಗೆ ಬೇಕು ಎನ್ನುತ್ತಾರೆ.

One Comment to “ಸಕಲೇಶಪುರ : ಕಾಂಗ್ರೆಸ್‌ ನಾಯಕನ ದುರಂತ ಕಥೆ…”

  1. ಅಶ್ರಫ್ ಮಂಜ್ರಾಬಾದ್ says:

    ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ದಿ: ಅನ್ವರ್ ಸಾಬ್ ರವರ ಕುರಿತಾದ ಲೇಖನ ಬಹಳ ಉತ್ತಮವಾಗಿ ಮೂಡಿಬಂದಿದೆ. ಈಗಿನ ನವ ಪೀಳಿಗೆಗೆ ಹೆಚ್ಚಾಗಿ ಗೊತ್ತಿರದ ಈ ಮಹಾನ್ ನಾಯಕನ ಬಗ್ಗೆ ಈ ಲೇಖನ ಬರೆದು ಅವರ ಜೀವನ ಚರಿತ್ರೆಯನ್ನು ಪರಿಚಯಿಸಿದ ಶ್ರೀಯುತ ಮಲ್ನಾಡ್ ಮಹಬೂಬ್ ಅಭಿನಂದನಾರ್ಹರು. ತನ್ನ ಜೀವನವನ್ನು ದಮನಿತರ ಉದ್ಧಾರಕ್ಕಾಗಿ ಸವೆಸಿದ, ರಾಜಕೀಯದಲ್ಲಿದ್ದರೂ ತನಗಾಗಿ ಏನೂ ಮಾಡದೆ ಪಕ್ಷದ ಹಿತಕ್ಕಾಗಿ ಕೆಲಸ ಮಾಡಿದ ಅನ್ವರ್ ಸಾಬ್ ಒಬ್ಬ ನಿಷ್ಠಾವಂತ ಜನಸೇವಕ ಎಂಬುವುದನ್ನು ಈ ಉದಾಹರಣೆಗಳ ಮೂಲಕವೇ ತಿಳಿಯಬಹುದು. “ಯಾರು ನಮ್ಮ ಅಣ್ಣನಂತೆ ರಾಜ ಕಾರಣ ಮಾಡಬಾರದು. ಮನೆ ಉದ್ಧಾರ ಮಾಡದ ರಾಜಕಾರಣ ಯಾರಿಗೆ ಬೇಕು” ಎನ್ನುವ ಅವರ ತಮ್ಮ ಎಕ್ಬಾಲರ ಮಾತುಗಳನ್ನು ಕೇಳುವಾಗ ಬೇಸರ ಎನಿಸಿದರೂ ಅನ್ವರ್ ಸಾಬ್ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದರು ಎಂಬುವುದು ಮಾತ್ರ ಸತ್ಯ.
    – ಅಶ್ರಫ್ ಮಂಜ್ರಾಬಾದ್.
    ತಬೂಕ್. ಸೌದಿ ಅರೇಬಿಯಾ.

Leave a Reply

You must be logged in to post a comment.