logo
Last updated: 2009-04-14 15:58:53
E-Paper
Archives
April 2009
M T W T F S S
« Mar   Jul »
 12345
6789101112
13141516171819
20212223242526
27282930  

ಹನುಮೇಗೌಡರಿಗೆ ಪಾರ್ಶ್ವವಾಯು ಸೆಳೆತ: ನಗರದಲ್ಲಿ ವದಂತಿ

ಹಾಸನ : ಮಾಜಿ ಸಚಿವ ಕೆ.ಹೆಚ್‌. ಹನುಮೇಗೌಡ ಅವರು ಪಾರ್ಶ್ವ ವಾಯು ಸೆಳೆತಕ್ಕೀಡಾಗಿದ್ದಾರೆಂಬ ವದಂತಿ ನಗರದಲ್ಲಿ ಸೋಮವಾರ ಹರಡಿತು. ಈ ಸುದ್ದಿ ಹೊರ ಬೀಳು ತ್ತಿದ್ದಂತೆಯೇ ಬಿ.ಜೆ.ಪಿ. ಪಾಳೆಯದಲ್ಲಿ ದಿಗ್ಭ್ರಮೆ ವ್ಯಕ್ತಗೊಂಡರೆ, ಜೆ.ಡಿ.ಎಸ್‌. ಮತ್ತು ಕಾಂಗ್ರೆಸ್‌ ಪಾಳೆಯದಲ್ಲಿ ಮುಂದಿನ ರಾಜಕೀಯ ಕುರಿತು ಬಿರುಸಿನ ಚರ್ಚೆ ಗಳು ನಡೆದವು. ಪತ್ರಿಕೆ ಕಾರ್ಯಾಲಯಕ್ಕೂ ಕೂಡ ಹಲವರು ದೂರವಾಣಿಯಲ್ಲಿ ಸಂಪ ರ್ಕಿಸಿ, ಹನುಮೇಗೌಡರ ಆರೋಗ್ಯ ಸರಿ ಯಿಲ್ಲವೇ? ಎಂದು ಪ್ರಶ್ನಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈ ಸಂಬಂಧ ವರದಿಗಾರರು ಬಿ.ಜೆ.ಪಿ. ಅಭ್ಯರ್ಥಿ ಕೆ.ಹೆಚ್‌.ಹನುಮೇ ಗೌಡರ ಮನೆಗೆ ತೆರಳಿದಾಗ ಅವರು ಬಳಲಿದಂತೆ ಕಂಡು ಬಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಪಾರ್ಶ್ವವಾಯುವಿಗೆ ತುತ್ತಾಗಿದ್ದೇನೆ ಎಂದು ಜೆ.ಡಿ.ಎಸ್‌. ಹಾಗೂ ಕಾಂಗ್ರೆಸ್‌ ಪಕ್ಷದ ಕೆಲವರು ವದಂತಿ ಹರಡುತ್ತಿದ್ದಾರೆ ಎಂದು ಆರೋ ಪಿಸಿದರು. ಕಳೆದ ಎರಡು ದಿನದ ಹಿಂದೆ ಪ್ರಚಾರಕ್ಕೆ ತೆರಳಿದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಕಾಲಿನ ನರವೊಂದಕ್ಕೆ ಪೆಟ್ಟಾಗಿದೆ. ವೈದ್ಯರು ಎರಡು ದಿವಸ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಹಾಗಾಗಿ ವಿಶ್ರಾಂತಿಯಲ್ಲಿ ದ್ದೇನೆ ಎಂದು ಸ್ಪಷ್ಟಪಡಿಸಿದರು. ಮಂಗಳವಾರದಿಂದಲೇ ಪ್ರಚಾರಕ್ಕೆ ತೆರಳುತ್ತೇನೆ. ಪಕ್ಷದ ಕಾರ್ಯಕರ್ತರಿಗೆ ಆತಂಕ ಬೇಡ. ತಾವು ಈ ಚುನಾವಣೆ ಯಲ್ಲಿ ಗೆದ್ದೇ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು. ಭಾರತೀಯ ಜನತಾ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ನಾಯಕರು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಎಲ್ಲೆಡೆ ಪ್ರವಾಸ ನಡೆಸಿ ದ್ದೇನೆ. ಮತದಾರರ ಪ್ರತಿಕ್ರಿಯೆ ಉತ್ತಮ ವಾಗಿದೆ ಎಂದರು. ನಾನು ಗಟ್ಟಿಯಾಗಿದ್ದೇನೆ. ಯಾವ ತೊಂದರೆಯೂ ಇಲ್ಲ. ಕಾಲಿನ ನರ ಎಳೆ ದಂತಾಗಿದೆ. ಇದರಿಂದ ಆರೋಗ್ಯ ಕ್ಕೇನೂ ತೊಂದರೆಯಿಲ್ಲ ಎಂದು ಹನುಮೇಗೌಡ ಹೇಳಿದರು.,


Tuesday, April 14th, 2009 at 3:58 pm

SocialTwist Tell-a-Friend

Be the first to write to Editor

Write to the Editor