ಕಾರ್ಗಿಲ್‌ ವಿಜಯ : ಹುತಾತ್ಮರಿಗೆ ದಶಕದ ನಮನ

ಅದು ಫೆಬ್ರವರಿ ಮಾಹೆ ೧೯೯೯ ಭಾರತದ ಪ್ರಧಾನಿ ಎ.ಬಿ. ವಾಜ ಪೇಯಿ, ಎರಡೂ ದೇಶಗಳ ಗಡಿ ಯಲ್ಲಿ ಅನಗತ್ಯವಾದ ಸೇನಾ ಜಮಾ ವಣೆ ಶೀತಲ ಸಮರಕ್ಕೆ ಕಾರಣವಾಗಿತ್ತು. ದೇಶದ ಗಡಿ ನಿಯಂತ್ರಣ ರೇಖೆ ಯಲ್ಲಿ ಜಮಾವಣೆಯಾಗುತ್ತಿದ್ದ ಮುಜಾಹಿದ್ದೀನ್‌ಗಳ ನಿಯಂತ್ರಣ ಸಹ ಮಾತುಕತೆಯ ಒಂದು ಭಾಗವಾಗಿತ್ತು. ಹಲವು ದಶಕಗಳಿಂದ ಎರಡೂ ದೇಶ ಗಳ ನಡುವೆ ಸ್ಥಗಿತವಾಗಿದ್ದ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಚಾಲನೆಗೊಳಿಸಿದ್ದರು. ನಂತರ ಲಾಹೋರ್‌ಗೆ ತೆರಳಿ ಶಾಂತಿ ಮಾತುಕತೆಯ ಲಾಹೋರ್‌ ಒಪ್ಪಂದಕ್ಕೆ ಸಹಿಯನ್ನು ಹಾಕಿದ್ದರು. ಎರಡೂ ದೇಶಗಳ ನಡುವಿನ ಭಿನ್ನಮತ ಸರಿದಾರಿಗೆ ಬರುತ್ತಿದೆ ಎಂದು ಭಾವಿ ಸುವ ಹೊತ್ತಿಗೆ ಬೆನ್ನಲ್ಲೇ ಚೂರಿ ಇರಿ ಯುವ ಕೆಲಸ ಮಾಡಿದ ಪಾಕಿಸ್ತಾನ, ಪಾಕ್‌ ಉಗ್ರರನ್ನು ಪಾಕ್‌ ಆಕ್ರಮಿತ ಕಾಶ್ಮೀರದ ಲೈನ್‌ ಆಫ್‌ ಕಂಟ್ರೋಲ್‌ ವಲಯಕ್ಕೆ ಕಳುಹಿಸುವ ಹೇಯ ಮತ್ತು ಹೇಡಿತನದ ಕೃತ್ಯಕ್ಕೆ ಕೈ ಹಚ್ಚಿತ್ತು. ಸಾಕಷ್ಟು ಮದ್ದು, ಗುಂಡು, ಆಯುಧ ಗಳನ್ನು ಸರಬರಾಜು ಮಾಡಿದ ಪಾಕೀ(ಪೀ) ಸ್ತಾನ ಮುಜಾಹಿದ್ದಿನ್‌ಗಳ ಬೆಂಬಲಕ್ಕೆ ಪಾಕೀ ಸೈನಿಕರನ್ನು ಮಫತ್ತಾಗಿ ಕಳುಹಿಸಿತ್ತು. ! ಮೇ-ಜೂನ್‌ ತಿಂಗಳಲ್ಲಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಆಸುಪಾಸಿನ ವಲಯದಲ್ಲಿ ಮೈ ಕೊರೆ ಯುವ ಹಿಮಪಾತ, ಚಳಿ ಇರುತ್ತದೆ. ಕಷ್ಟವೋ, ಸುಖವೋ ದೇಶ ಕಾಯುವ ಗಡಿ ಭದ್ರತಾ ಪಡೆಯ ಯೋಧರು ಅಲ್ಲಿ ನಿರ್ಮಿಸಲಾಗಿರುವ ಬಂಕರ್‌ಗಳಲ್ಲಿ ಪಾಳಿಯನುಸಾರ ಗಡಿ ಕಾವಲು ಕಾಯು ತ್ತಾರೆ ಚಳಿಯ ಆಗಾಧತೆ ಇರುವುದ ರಿಂದ ಸಹಜವಾಗಿಯೇ ಈ ಸಂದರ್ಭ ದಲ್ಲಿ ಎರಡೂ ಕಡೆಯ ಸೈನಿಕರು ಸ್ವಲ್ಪ ಸಡಿಲವಾಗಿಯೇ ಇರುತ್ತಾರೆ. ಇಂತಹ ದ್ದೊಂದು ಪರಿಸ್ಥಿತಿಯ ಲಾಭ ಪಡೆದ ಪಾಕೀಗಳು ಕಾರ್ಗಿಲ್‌ ವಲಯಕ್ಕೆ ನಿಧಾನ ವಾಗಿ ಸೇರಿಕೊಂಡರು. ಮೇ ಮಾಹೆಯಲ್ಲಿ ವಾಯು ಪಡೆಯ ಫ್ಲೈಟ್‌ ಲೆ.ನಚಿಕೆತ ಮತ್ತು ಸ್ಕ್ವಾ.ಲೀ. ಅಜಯ್‌ ಅಹುಜಾ ನಿಯಂತ್ರಣ ರೇಖೆಯ ಬಳಿ ಹಾರಾಟ ನಡೆಸಿದ್ದಾಗ ಮೊದಲ ಅಪಾಯದ ಸುಳಿವು ದೊರೆತಿತ್ತು. ಗಡಿ ಭದ್ರತಾ ಪಡೆ ಮತ್ತು ಸೇನೆ ಎಚ್ಚೆತ್ತುಕೊಳ್ಳುವ ವೇಳೆಗಾಗಲೇ ಮುಷ್ಕೋ ಕಣಿವೆ, ಡ್ರಾಸ್‌, ಕಾರ್ಗಿಲ್‌, ಇಂದೂಸ್‌ ನದಿಯ ಸನಿಹದ ಪೂರ್ವ ವಲಯ ಮತ್ತು ಸಿಯಾಚಿನ್‌ ಪ್ರದೇಶಗಳನ್ನು ಉಗ್ರರು ಮತ್ತು ಪಾಕೀ ಸೈನಿಕರು ಸುತ್ತುವರೆದಿದ್ದರು. ಆರಂಭದಲ್ಲಿ ಪ್ರತಿ ದಾಳಿ ನಡೆಸುವಾಗ ನಮ್ಮ ಸೈನಿಕರು ಸಾವು ನೋವಿಗೆ ಸಿಲುಕಿ ದರಾದರೂ, ಹಂತ ಹಂತ ವಾಗಿ ಟೈಗರ್‌ ಹಿಲ್‌, ಡ್ರಾಸ್‌, ಹೀಗೆ ಎಲ್ಲ ಪ್ರದೇಶ ಗಳಿಂದಲೂ ಉಗ್ರರನ್ನು, ಪಾಕೀ ಸೈನಿಕರನ್ನು ಹೊಡೆ ದಟ್ಟಿದರು. ಹಲವು ಮಂದಿ ಪಾಕಿಗಳನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡಿದರು. ಜುಲೈ ೨೬,೧೯೯ರಂದು ಸಂಪೂರ್ಣ ವಾಗಿ ಶತ್ರುಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್‌ನಲ್ಲಿ ವಿಜಯ ಪತಾಕೆ ಹಾರಿಸಿದರು. ಹಾಸನ ಜಿಲ್ಲೆಯ ವೀರ ಯೋಧ ಯೆಂಗಟ ಸಹ ಕಾರ್ಗಿಲ್‌ ಮೊದಲ ದಾಳಿಯಲ್ಲಿ ವೀರ ಬಲಿದಾನಗೈದಿದ್ದಾರೆ. ಈ ಯುದಟಛಿದಲ್ಲಿ ದೇಶದ ೫೨೩ ಮಂದಿ ಯೋಧರು, ಸೇನಾಧಿಕಾರಿಗಳು ವೀರ ಬಲಿದಾನ ಮಾಡಿದರು. ತದ ನಿಮಿತ್ತ ಈ ದಿನವನ್ನು ವಿಜಯ ದಿವಸವಾಗಿ ಆಚ ರಿಸಲಾಗುತ್ತದೆ. ಇಂದಿಗೆ ಕಾರ್ಗಿಲ್‌ ಯುದಟಛಿ ನಡೆದು ೧೦ ವರ್ಷಗಳು ಸಂದಿವೆ. ಕಾಲು ಕೆರೆದು ಆಗಾಗ ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ನಮ್ಮ ದೇಶದ ಸೈನಿಕರು ಸಮರ್ಥವಾಗಿ ಉತ್ತರಿಸಿದ್ದಾರೆ. ಪಾಕಿಸ್ತಾನಕ್ಕೆ ಅಂದು ಅಮೇರಿಕಾದ ಪರೋಕ್ಷ ಬೆಂಬಲ ವಿದ್ದಾಗ್ಯೂ ಭಾರತಕ್ಕೆ ಅಂತರಾಷ್ಟ್ರೀಯ ಸಮುದಾಯ ನೀಡುತ್ತಿರುವ ಬೆಂಬಲ ತಮ್ಮ ಸಾಮರ್ಥ್ಯಕ್ಕೆ ಸಾಮು ಹಿಡಿ ದಂತಾಗಿದೆ. ದೇಶದ ಆಂತರಿಕ ಕಲಹಗಳನ್ನು , ಅಭದ್ರತೆಯನ್ನು ನಿವಾರಿಸಿಕೊಳ್ಳುವ ಯೋಗ್ಯತೆಯಿಲ್ಲದ ಪಾಕ್‌ ಸರ್ಕಾರ ದೇ ಪದೇ ಇಂತಹ ಕೃತ್ಯಕ್ಕೆ ಕೈ ಹಾಕುತ್ತಲೇ ಇರುತ್ತದೆ. ೧೯೯೪ರ ಮುಂಬೈ ಸ್ಫೋಟ, ತಾಜ್‌ ಹೋಟೆಲ್‌ ದಾಳಿಯಂತಹ ಕೃತ್ಯಗಳನ್ನು ನಿರಾತಂಕವಾಗಿ ಮಾಡು ತ್ತಿದೆ. ಪ್ರತಿ ಬಾರಿಯೂ ತನ್ನ ಪಾತ್ರವಿಲ್ಲ ಎಂದು ಹೇಳುತ್ತಿದರೆ. ಆದರೆ ಪ್ರತಿ ಬಾರಿಯೂ ಪಾಕ್‌ ಕೃತ್ಯಕ್ಕೆ ಪುಟ್ಟಗಟ್ಟಲೇ ಸಾಕ್ಷ್ಯಗಳು ಸಿಗುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ ಮುಜುಗರ ಅನು ಭವಿಸುತ್ತಿದೆ. ಆದರೆ ನಮ್ಮ ದೇಶ ಎಲ್ಲ ರೀತಿಯಲ್ಲೂ ಪಾಕ್‌ಗೆ ಪ್ರತ್ಯುತ್ತರ ಕೊಡಲು ಸಮರ್ಥವಾಗಿದೆ. ದೇಶ ಕಾಯುವ ಸೈನಿಕರು ಇಂತಹದ್ದೊಂದು ನಿಲುವಿಗೆ ಸಾಥ್‌ ನೀಡಿದ್ದಾರೆ. ಇದು ಕಾರ್ಗಿಲ್‌ ವೀರ ಬಲಿದಾನ ಮಾಡಿದ ಹುತಾತ್ಮರಿಗೆ ನಾವು ತೋರಿಸಬಹು ದಾದ ಗೌರವ ಮತ್ತು ಸ್ಮರಣೆ.

No Comments to “ಕಾರ್ಗಿಲ್‌ ವಿಜಯ : ಹುತಾತ್ಮರಿಗೆ ದಶಕದ ನಮನ”

add a comment.

Leave a Reply

You must be logged in to post a comment.