ಮೂರು ರೂ.ಗೆ ಕೆ.ಜಿ. ಅಕ್ಕಿ : ಒಳಿತೋ, ಕೆಡುಕೋ-ಚರ್ಚೆ-೩

ಹಾಸನ: ಬಡತನ ರೇಖೆಗಿಂತ ಕೆಳ ಗಿರುವ ಕುಟುಂಬಗಳಿಗೆ ೩ ರೂ. ದರ ದಲ್ಲಿ ಅಕ್ಕಿ, ಗೋಧಿ ಹಂಚುವುದು ಸರಿಯೇ? ಅಥವಾ ತಪ್ಪೇ? ಇದರಿಂದ ಮುಂದೆ ಅನಾಹುತವಾಗಬಹುದೇ? ಎನ್ನುವ ಪ್ರಶ್ನೆಗಳನ್ನು ವಿವಿಧ ವರ್ಗದ ಜನರ ಮುಂದೆ ಇಟ್ಟು ಚರ್ಚೆ ಮುಂದು ವರೆಸಲಾಗಿದೆ. ಅವರಿಂದ ಸಿಕ್ಕ ಪ್ರತಿ ಕ್ರಿಯೆಗಳನ್ನು ಇಲ್ಲಿ ಕೊಡಲಾಗಿದೆ. ಸಮೀರ್‌, ಬಾಳೆಹಣ್ಣು ವರ್ತಕ. ಅವಶ್ಯಕವಾಗಿ ನೀಡಬೇಕು. ಇತರ ವಸ್ತುಗಳನ್ನು ಕೂಡ ನೀಡಬೇಕು. ಚೀಟಿ ಯಲ್ಲಿ ನಮೂದಿಸಿರುವ ಎಲ್ಲಾ ವಸ್ತು ಗಳು ಕೂಡ ಎಲ್ಲರಿಗೂ ದೊರೆಯು ವಂತಾಗಬೇಕು. ಜೊತೆಗೆ ಬೆಲೆ ಏರಿಕೆ ಯನ್ನು ನಿಯಂತ್ರಿಸಬೇಕು. ಸಣ್ಣರಂಗಯ್ಯ, ಕೃಷಿಕ. ಇವೊತ್ತಿನ ಬೆಲೆ ಏರಿಕೆ ಸಂದರ್ಭ ದಲ್ಲಿ ಅಕ್ಕಿ ೩ ರೂ.ಗೆ ನೀಡಬೇಕು. ಇದ ರಿಂದ ಅನಾಹುತ ಏನೂ ಇಲ್ಲ. ಬದಲಿಗೆ ಬಡವರನ್ನು ಹಸಿವಿನಿಂದ ತಪ್ಪಿಸ ಬಹುದು. ಆದರೆ ಹೋಟೆಲ್‌ಗೆ ಮಾರು ವುದನ್ನು ತಪ್ಪಿಸಿ ಸರಿಯಾಗಿ ನೀಡಿದರೆ ಸಾಕು. ಮಂಜುನಾಥ, ತೋಟ ಕಾರ್ಮಿಕ ಮುಖಂಡರು. ಎಲ್ಲಾ ಬಡವರಿಗೂ ಕೊಡಬೇಕು. ಜೀವನಾಶ್ಯಕವಾದ ಎಲ್ಲಾ ವಸ್ತುಗಳು ಸಿಗಬೇಕು. ಕುಟುಂಬಕ್ಕೆ ಅವಶ್ಯವಿರು ವಷ್ಟನ್ನು ಕೊಡಬೇಕು. ಜೀವನಾಶ್ಯಕ ವಸ್ತು ಗಳನ್ನು ನೀಡದ್ದಿಲ್ಲಿ ಅವರ ಜೀವಿಸುವ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಹಾಗಾಗಿ ಇದು ಸಮರ್ಪಕವಾಗಿ ಜಾರಿಯಾಗಬೇಕು. ಶಶಿರೇಖಾ ಕೆ.ಎಂ., ವಿದ್ಯಾರ್ಥಿ. ಬಡವರಿಗೆ ಅನುಕೂಲವಾಗುತ್ತದೆ. ಬೇರೆ ವಸ್ತುಗಳನ್ನು ಕೊಳ್ಳಲು ಬೇರೆ ಕೆಲಸಕ್ಕೆ ಹೋಗಲೇಬೇಕು. ಹಾಗಾಗಿ ಬೇರೆ ಕೆಲಸಕ್ಕೆ ಹೋಗುವುದಿಲ್ಲ ಎಂಬ ಅಭಿಪ್ರಾಯ ತಪ್ಪು. ಅದೂ ಇಂತಹ ಬೆಲೆ ಏರಿಕೆ ಸಂದರ್ಭದಲ್ಲಿ ಹಾಗೆಲ್ಲಾ ಹೇಳಲಾಗದು. ಈ ಯೋಜನೆಯ ಹಿಂದೆ ದೊಡ್ಡ ಹೋರಾಟವೇ ಇದೆ. ಹಾಗಾಗಿ ಇದನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.

No Comments to “ಮೂರು ರೂ.ಗೆ ಕೆ.ಜಿ. ಅಕ್ಕಿ : ಒಳಿತೋ, ಕೆಡುಕೋ-ಚರ್ಚೆ-೩”

add a comment.

Leave a Reply

You must be logged in to post a comment.