ಹಣವಿಲ್ಲದೆಯೂ ಬದುಕಬಹುದು, ಅನ್ನವಿಲ್ಲದೆ ಬದುಕಲಾಗದು

ಜೀವನದಲ್ಲಿ ಸರಳತೆ ರೂಪಿಸಿ ಕೊಂಡು, ಅರಸಿ ಬಂದ ಸಾಕಷ್ಟು ಅವ ಕಾಶಗಳನ್ನು ತೊರೆದು ಕೃಷಿಯ ವಿಚಾರ ದಲ್ಲೇ ಆಸಕ್ತಿಯಿಂದ, ತೊಡಗಿಸಿಕೊಂಡಿ ರುವ ಡಾ।। ವಿಜಯ್‌ ಅಂಗಡಿ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ಶಿಕ್ಷಣ ವ್ಯವಸ್ಥೆ ಕುರಿತು ತಮ್ಮ ಮನದಾಳದ ಸಂಗತಿಗಳನ್ನು ಅಂಗಡಿಯವರು ತೆರೆದಿಟ್ಟಿದ್ದು ಹೀಗೆ. ಇಂದಿನ ಶಿಕ್ಷಣ ಮುಖ್ಯವಾಗಿ ಗ್ರಾಮೀಣ ಜನರ ಬದುಕಿಗೆ ಹತ್ತಿರ ವಾಗಿಲ್ಲ. ಉದಾಹರಣೆಗೆ ಶಾಲಾ ಪಠ್ಯ ಗಳಲ್ಲಿ ಸ್ವಾತಂತ್ರ್ಯಹೋರಾಟಗಾರರು. ವಿಜ್ಞಾನಿಗಳು, ಸಾಹಿತಿಗಳು ಮುಂತಾ ದವರ ಘಿ‘ಜೀವನಘಿ’ದ ವಿಚಾರಗಳು ಸೇರ್ಪಡೆ ಯಾಗಿವೆ. ಆದರೆ ದುಡಿಮೆಯ ಆದರ್ಶ ಗಳನ್ನು ಪಾಲಿಸುತ್ತಿರುವ ಯಾವ ರೈತನ ಬಗ್ಗೆಯೂ ಪಠ್ಯಗಳಲ್ಲಿ ಉಲ್ಲೇಖವಿಲ್ಲ. ಪಠ್ಯಗಳಲ್ಲಿ ಹಳ್ಳಿ ಬದುಕು, ಕೃಷಿ ವಿಚಾರಗಳ ಪ್ರಸ್ತಾಪವಾಗಬೇಕು. ಶಾಲೆ ಮತ್ತು ಶಾಲಾ ಪರಿಸರ ನಾಲ್ಕು ಗೋಡೆ ಗಳ ನಡುವಿಗಷ್ಟೇ ಸೀಮಿತವಾಗಿರುತ್ತದೆ. ಶಿಕ್ಷಣದಲ್ಲಿ ಶೇ.೫೦ರಷ್ಟು ನಮ್ಮ ಬದುಕಿಗೆ ಅಗತ್ಯವಿರುವ ಕೆಲಸಗಳನ್ನು ಕೈಮುಟ್ಟಿ ಮಾಡುವಂತಹ ಶಿಕ್ಷಣ ಅಳವಡಿಕೆಯಾಗ ಬೇಕು. ಎಲ್ಲಾ ಮಕ್ಕಳು ಪರಿಪೂರ್ಣ ವಿದ್ಯಾವಂತರಾಗಲು ಸಾಧ್ಯವಿಲ್ಲ. ಹಿಂದಿ ನಿಂದಲೂ ಎಸ್‌.ಎಸ್‌.ಎಲ್‌.ಸಿ. ಹಂತದ ಒಳಗೆ ಕಲಿತ, ಓದದೇ ಇರು ವಂತಹವರೇ ಹೆಚ್ಚು ಕೃಷಿಯಲ್ಲಿ ತೊಡ ಗಿಸಿಕೊಂಡವರು. ಬಿ.ಎಸ್ಸಿ ತನಕವೂ ಒಟ್ಟು ಹದಿನೈದು ವರ್ಷಗಳ ಕಲಿಕೆ ಯಲ್ಲೂ ಎಲ್ಲೂ ಮಹತ್ವದ ಸ್ಥಾನ ದೊರೆ ಯುವುದಿಲ್ಲ. ಸಣ್ಣ ವಯಸ್ಸಿನಿಂದಲೂ ಕೃಷಿ ಅಷ್ಟೇ ಅಲ್ಲದೆ, ಗಾರೆ ಕೆಲಸ, ಕಟ್ಟಿಗೆ ಕೆಲಸ, ಕಾರ್ಪೆಂಟರ್‌ ಕೆಲಸ ಹೀಗೆ ಯಾವು ದಾದರೂ ಒಂದು ಬದುಕಿಗೆ ಪೂರಕ ವಾದ ಕೆಲಸವನ್ನು ಕಲಿಯಲು ಹಚ್ಚ ಬೇಕು. ಈ ವಿಚಾರದತ್ತ ಪೋಷಕರಿಗೆ ಹಾಗೂ ಶಿಕ್ಷಕರಿಗೂ ಒಲವಿರಬೇಕು. ಕೇವಲ ಹೇಳಿಕೆಗಳ ಮೂಲಕ ವಿಷಯ ರವಾನಿಸದೆ, ಪ್ರಾಯೋಗಿಕವಾಗಿ ಕಲಿ ಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು. ಹಣ ಇಲ್ಲದೆಯೂ ಬದುಕು ಸಾಧ್ಯ ವಿದೆ. ಆದ್ರೆ ಅನ್ನ ಇಲ್ಲದೆ ಬದುಕ ಲಾಗದು. ಹೀಗಾಗಿ ಬದುಕೆಂದರೆ ಕೃಷಿ, ಸರ್ಕಾರದ ಇಂದಿನ ವ್ಯವಸ್ಥೆಯಲ್ಲಿ ಘಿ‘ಉದ್ಯೋಗಗಳಘಿ’ ಬೇಡಿಕೆ ಕಡಿಮೆ ಆಗು ತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಉದ್ಯೋಗಿ ಗಳಾಗಲು ಸಾಧ್ಯವಿಲ್ಲ. ಹೀಗಾಗಿ ಬೇರೆ ಬೇರೆ ಕಸುಬುಗಳಲ್ಲಿ ತೊಡಗಿಸಿ ಕೊಳ್ಳುವತ್ತ ಯೋಚಿಸಬೇಕು. ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಗತ್ಯವಾಗಿ ಕೃಷಿ ಅಳವಡಿಕೆ ಆಗ ಬೇಕು. ಬದುಕೋದಿಕ್ಕೆ ಅಗತ್ಯವಾದು ದನ್ನು ಕಲಿಸಬೇಕು. ಕೃಷಿ, ಪರಿಸರ ಮತ್ತು ಕರಕುಶಲ ನಮ್ಮ ಶಿಕ್ಷಣದಲ್ಲಿ ಅತ್ಯಗತ್ಯ ವಾಗಿ ಸೇರ್ಪಡೆಯಾಗಬೇಕು. ಕೃಷಿಗೆ ಸಂಬಂಧಿಸಿದಂತೆ ಪ್ರತ್ಯೇಕ ಶಾಲೆಗಳನ್ನು ತೆರೆಯಬಾರದು. ಜೀವನಕ್ಕೆ ಕಲೆ, ಸಂಸ್ಕೃತಿ, ರಾಜಕೀಯ, ಸಾಮಾಜಿಕ ಎಲ್ಲಾ ವಿಚಾರಗಳು ಅಗತ್ಯ. ಹೀಗಾಗಿ ಇವುಗಳಿಂದ ಕೃಷಿಯನ್ನು ಪ್ರತ್ಯೇಕಿಸ ಬಾರದು. ಆದ್ರೆ ಬದುಕಿಗೆ ಬೇಕಾದ ಶಿಕ್ಷಣದ ಅಗತ್ಯ ಇರುವುದರಿಂದ ಕೃಷಿ ಒಂದು ಕಲಿಕೆಯ ವಿಷಯವಾಗಿ ಸೇರ್ಪಡೆ ಆಗಬೇಕು. ಉದ್ಯೋಗ ಗಳನ್ನು ನಂಬಿ ಕೂರುವುದಕ್ಕಿಂತ ಬೇರ್ಯಾ ವುದಾದರೂ ವ್ಯಕ್ತಿಯನ್ನು ತನ್ನದಾಗಿಸಿ ಕೊಳ್ಳಬೇಕು. ಈ ಮಾರ್ಗದಲ್ಲಿ ಚಿಂತನೆ ಗಳಾಗಿ, ಕಸುಬುಗಳನ್ನು ಕಲಿಯದಿದ್ದಾಗ, ಮುಂದೊಂದು ದಿನ ಭಾರೀ ಪ್ರಮಾಣದ ಸಂಕಷ್ಟವನ್ನು ಎದುರಿಸಬೇಕು. ಕೃಷಿ ವಿಶ್ವವಿದ್ಯಾನಿಲಯಗಳಿಂದ ನೇರವಾಗಿ ಕೃಷಿಗೆ ಏನಾದರೂ ಉಪ ಯೋಗವಿದೆಯೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಖಂಡಿತಾ ಇದೆ. ಕೃಷಿ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹೆಚ್ಚಾದಷ್ಟು ಲಾಭ ಇದೆ. ಸ್ಥಳೀಯವಾಗಿ ತಾಲ್ಲೂಕು, ಹೋಬಳಿ ಹಂತಗಳಲ್ಲಿ ಕೃಷಿ ಕಾಲೇಜುಗಳ ಪ್ರಾರಂಭ ಆಗಬೇಕು. ಅಲ್ಲಿ ಕೃಷಿಯ ಹೊರತಾಗಿ, ಮತ್ತೆ ಉದ್ಯೋಗ ಗಳ ಅವಕಾಶಗಳ ಬಗೆಗೆ ಯೋಚಿಸು ವಂತೆ ಆಗಬಾರದಷ್ಟೆ. ಕೃಷಿ ಕಲಿಕೆಯನ್ನು ಕಲಿಯುವಲ್ಲಿ ಕಾಲೇಜುಗಳ ಕೊರತೆ ಸಹ ಅಡಚಣೆಯಾಗುತ್ತಿದೆ.

No Comments to “ಹಣವಿಲ್ಲದೆಯೂ ಬದುಕಬಹುದು, ಅನ್ನವಿಲ್ಲದೆ ಬದುಕಲಾಗದು”

add a comment.

Leave a Reply

You must be logged in to post a comment.