ಇದು ಉಪೇಂದ್ರನ ಹೊಸ ಅವತಾರ

ಕೊನೆಗೂ ನಿರ್ದೇಶಕ ಉಪೇಂದ್ರ ಅಭಿಮಾನಿಗಳ ಕೈಗೆ ಸಿಗುವ ಸಾಧ್ಯತೆಗಳು ಕಾಣಿಸುತ್ತಿವೆ. ನಟನೆಯಲ್ಲಿ ಮುಳುಗಿ ಎಂದೋ ಕಳೆದುಹೋಗಿದ್ದ ನಿರ್ದೇಶಕನ ಟೋಪಿಗೆ ಮತ್ತೆ ತಲೆ ತೂರಿಸಲು ಅವರೀಗ ನಿರ್ಧರಿಸಿದ್ದಾರೆ. ಜತೆಗೆ ಮತ್ತದೇ ಕ್ಷುಲ್ಲಕ ಗಿಮಿಕ್‌ಗಳನ್ನು ಪ್ರೇಕ್ಷಕರ ಮುಂದಿಡುವ ಮುನ್ಸೂಚನೆ ಅವರಿಂದ ಬಂದಿದೆ. ಅದಕ್ಕೆ ಸಿಕ್ಕಿರುವ ಮೊದಲ ಸಾಕ್ಷಿ ಚಿತ್ರಕ್ಕೆ ಹೆಸರೇ ಇಲ್ಲದಿರುವುದು. ತೋರು ಬೆರಳು ಮತ್ತು ಹೆಬ್ಬೆರಳನ್ನು ಉಂಗುರ ದಂತೆ ಮಡಚಿ ತೋರಿಸುವ ಪ್ಯೂರ್‌ ಅಥವಾ ಸೂಪರ್‌ ಎಂದು ಹೆಸರಿಸ ಬಹುದಾದ ಹಸ್ತವನ್ನಷ್ಟೇ ಚಿತ್ರದ ಜಾಹಿರಾತುಗಳಲ್ಲಿ ತೋರಿಸಲಾಗಿದೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ನಾಯಕಿ, ಸಂಗೀತ ನಿರ್ದೇಶಕ ಸೇರಿದಂತೆ ತಾರಾ ಬಳಗದ ಬಗ್ಗೆ ಮಾಹಿತಿಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಹೊಣೆ ಉಪ್ಪಿಯ ಹೆಗಲಲ್ಲೇ ಇದೆ. ತೆಲುಗಿನಲ್ಲಿ ಈಗಾಗಲೇ ಬೇಕಾದಷ್ಟು ಅಭಿಮಾನಿ ಬಳಗವನ್ನು ಉಪೇಂದ್ರ ಹೊಂದಿದ್ದಾರೆ. ಅವರ ಹಲವು ಡಬ್‌ ಚಿತ್ರಗಳು ಆಂಧ್ರಪ್ರದೇಶದಲ್ಲಿ ಬಿಡುಗಡೆ ಯಾಗಿವೆ. ಟಾಸ್‌, ರಾ, ಸರ್ಪ, ಓಕೆಮಾಟ, ನೀತೋನೆ ವುಂತಾನು, ಕನ್ಯಾದಾನಂ ಮುಂತಾದ ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ತಮಿಳಿನಲ್ಲಿ ಸತ್ಯಂ ಎಂಬ ಚಿತ್ರದಲ್ಲಿ ಅತಿಥಿ ನಟನಾಗಿ ಕಳೆದ ವರ್ಷ ಕಾಣಿಸಿಕೊಂಡು ಉದ್ಯಮದ ಗಮನ ಸೆಳೆದಿದ್ದರು. ಇದನ್ನೇ ಆಧಾರ ವಾಗಿಟ್ಟುಕೊಂಡು ನಾಲ್ಕು ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಹೇಗಿದ್ದ ಹೇಗಾದ ಗೊತ್ತಾ ? ಕಾಶಿನಾಥ್‌ ಗರಡಿಯಲ್ಲಿ ಪಳಗಿದ ಕುಂದಾಪುರದ ಅಪ್ಪಟ ಬ್ರಾಹ್ಮಣ ಹುಡುಗ, ಸಿನಿಮಾ ಹುಚ್ಚು ಬೆಳೆಸಿಕೊಂಡು ಸ್ಲಿಪ್ಪರ್‌ ಸವೆಸಿದ್ದ ಉಪೇಂದ್ರ ಅತ್ಯುತ್ತಮ ತಂತ್ರಜ್ಞ, ನಿರ್ದೇಶಕ, ಬರಹಗಾರ, ಕಥೆಗಾರ, ಉಪ್ಪಿಯ ಚಿತ್ರಗಳಲ್ಲಿನ ಅಶ್ಲೀಲತೆಗಳ ಬಗ್ಗೆ ಟೀಕೆ ಕೇಳಿ ಬರುತ್ತಿರುವುದು ಸಾಮಾನ್ಯ ವಾದರೂ, ಉತ್ಕೃಷ್ಟ ಮಟ್ಟದ ವಿಶಿಷ್ಟ ಚಿತ್ರ ನಿರ್ದೇಶಿಸುವ ತಾಕತ್ತು ಅವರಿಗಿದೆ ಎಂಬುದು ಅಷ್ಟೇ ನಿಜ. ೯೦ ರ ದಶಕದಲ್ಲಿ ಏಕತಾನತೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸಂಪ್ರದಾಯಗಳನ್ನು ಮುರಿದು ಹೊಸ ಭಾಷ್ಯವನ್ನು ಬರೆದ ನಿರ್ದೇಶಕ ಉಪೇಂದ್ರ, ಮಾಮೂಲಿ ಮರ ಸುತ್ತುವ ಮಾತುಗಳೂ ಕೇಳಿ ಬಂದಿದ್ದವು. ಅ ದ ೆ  ನ ೆ  ಇದ್ದರೂ ಮತ್ತೆ ನಿರ್ದೇಶನದತ್ತ ವಾಲಿರುವುದು ಚಿತ್ರರಂಗದ ಗಮನ ಸೆಳೆದಿದೆ. ಮೊದಲ ಚಿತ್ರ ಘಿ‘ತರ್ಲೆ ನನ್ಮಗಘಿ’ ….. ಆರಂಭದಲ್ಲಿ ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕಥೆ ಬರೆಯುತ್ತಿದ್ದ ಉಪ್ಪಿ ನಂತರದ ದಿನಗಳಲ್ಲಿ ತನ್ನ ಉಬ್ಬು ಹಲ್ಲುಗಳನ್ನು ಸರಿಪಡಿಸಿಕೊಂಡು, ಜಿಮ್‌ಗಳಿಗೆ ಹೋಗಿ ದೇಹಕ್ಕೊಂದು ಸಾಧಾರಣ ಶೇಪ್‌ ಕೊಡಿಸಿದ್ದರು. ವಿ. ಮನೋಹರ್‌, ಜಗ್ಗೇಶ್‌ಗಳೆಂಬ ಪೋಲಿಗಳ ಗ್ಯಾಂಗಿನಲ್ಲೇ ಬೆಳೆದದ್ದು. ಪರಿಣಾಮ ಮೊಟ್ಟ ಮೊದಲ ಚಿತ್ರ ಘಿ‘ತರ್ಲೆ ನನ್ಮಗಘಿ’ ದಲ್ಲಿ ಜಗ್ಗೇಶ್‌ ನಾಯಕನಾಗಿದ್ದು, ನಂತರ ಘಿ‘ಶ್‌ಘಿ’ ಎಂಬ ಅದ್ಭುತ ಥ್ರಿಲ್ಲರ್‌ ಚಿತ್ರದಲ್ಲಿ ಕುಮಾರ್‌ ಗೋವಿಂದ್‌ಗೆ, ಭೂಗತ ಜಗತ್ತಿನ ಹಸಿಹಸಿ ಚಿತ್ರಣವನ್ನೊಳಗೊಂಡ ಪ್ರೇಮಕಥೆ ಘಿ‘ಓಂಘಿ’ ನಲ್ಲಿ ಶಿವರಾಜ್‌ ಕುಮಾರ್‌ಗೆ ಲೈಫ್‌ ಕೊಟ್ಟ ಉಪ್ಪಿ ನಿರ್ದೇಶನದಲ್ಲಿ ಕಳೆದುಕೊಂಡದ್ದು ಘಿ‘ಅಪರೇಶನ್‌ ಅಂತಘಿ’ದಲ್ಲಿ ಅನಂತನ ಅವಾಂತರ, ಅಜಗಜಾಂತರ, ಶ್‌, ಅಪರೇಶನ್‌ ಅಂತ ಮುಂತಾದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಬಂದು ಹೋಗಿದ್ದ ಉಪೇಂದ್ರ ಘಿ‘ಎಘಿ’ ಚಿತ್ರದ ಮೂಲಕ ನಾಯಕ ಪಟ್ಟವನ್ನೇರಿದರು. ಚಿತ್ರ ವಿಚಿತ್ರ ಗೆಟಪ್‌ಗಳಲ್ಲಿ ಕಾಣಿಸಿಕೊಂಡು ಕೆಟ್ಟ ಅಭಿನಯ ನೀಡಿದರೂ ಭಿನ್ನ ಜಾಹೀರಾತು, ತಂತ್ರಜ್ಞಾನದ ಬಳಕೆ, ಚಿತ್ರಕಥೆ, ಗುರುಕಿರಣ್‌ ಸಂಗೀತದ ಮೂಲಕ ದಿನ ಬೆಳಗಾಗುವುದರೊಳಗೆ ಉಪೇಂದ್ರ ಸೂಪರ್‌ ಸ್ಟಾರ್‌ ಆಗಿದ್ದರು. ನಂತರ ಪಾತ್ರಕ್ಕೆ ಹೊಂದಾಣಿಕೆಯೇ ಆಗದ ರಾಘವೇಂದ್ರ ರಾಜ್‌ಕುಮಾರ ಗೆ ಘಿ‘ಸ್ವಸ್ತಿಕ್‌ಘಿ’ ಎಂಬ ಚಿತ್ರವನ್ನು ನಿರ್ದೇಶಿಸಿದರೂ ಯಶಸ್ವಿಯಾಗಲಿಲ್ಲ. ಭಯೋತ್ಪಾದನೆ ಕುರಿತ ಕಥೆ, ಅತ್ಯುತ್ತಮ ನಿರ್ದೇಶನದ ಹೊರತಾಗಿಯೂ ಪ್ರೇಕ್ಷಕರಿಗದು ಹತ್ತಿರವಾಗಲಿಲ್ಲ. ಆದರೂ ಪಾರ್ವತಮ್ಮ ರಾಜ್‌ಕುಮಾರ್‌ ತನ್ನ ಮಗನನ್ನು ಘಿ‘ಉಗ್ರಗಾಮಿಘಿ’ ಯನ್ನಾಗಿ ತೋರಿಸಿದ ಎಂದು ಉಪ್ಪಿಯನ್ನು ಅನಗತ್ಯವಾಗಿ ಬೇಕಾಬಿಟ್ಟಿ ಟೀಕಿಸಿದರು. ಮಾನಸಿಕ ತುಮುಲಗಳನ್ನೊಳ ಗೊಂಡ ಕಥೆಗೆ ತನ್ನ ಹೆಸರನ್ನೇ ಶೀರ್ಷಿಕೆಯನ್ನಾಗಿಸಿ, ಮೂರು ಮಂದಿ ನಟಿಯರನ್ನು ಬಳಸಿ ನಿರ್ದೇಶಿಸಿ, ನಟಿಸಿದ ಚಿತ್ರ ಘಿ‘ಉಪೇಂದ್ರಘಿ’ ಸೂಪರ್‌ ಹಿಟ್‌ ಆಯ್ತು. ಚಿತ್ರದಲ್ಲಿನ ಅಶ್ಲೀಲ ಭಾಷೆಗಾಗಿ ತೀವ್ರ ಟೀಕೆಗಳನ್ನೆದುರಿಸಬೇಕಾಯಿ ತಾದರೂ ಪ್ರಯೋಗಶೀಲತೆಯನ್ನು ಬಹುತೇಕ ಮಂದಿ ಒಪ್ಪಿಕೊಂಡರು. ಅದೇ ಕೊನೆ. ಆನಂತರ ಉಪ್ಪಿ ನಿರ್ದೇಶಕನ ಟೋಪಿಯನ್ನು ಧರಿಸಿಲ್ಲ. ಘಿ‘ಪ್ರೀತ್ಸೆಘಿ’, ಘಿ‘ಹೆಚ್‌ಟುಓಘಿ’,ಘಿ‘ಸೂಪರ್‌ ಸ್ಟಾರ್‌ಘಿ’, ಘಿ‘ನಾಗರಹಾವುಘಿ’, ಘಿ‘ನಾನು ನಾನೇಘಿ’, ಘಿ‘ಹಾಲಿವುಡ್‌ಘಿ’, ಘಿ‘ಕುಟುಂಬಘಿ’, ಘಿ‘ರಕ್ತ ಕಣ್ಣೀರುಘಿ’, ಘಿ‘ಗೋಕರ್ಣಘಿ’, ಘಿ‘ಗೌರಮ್ಮಘಿ’, ಘಿ‘ನ್ಯೂಸ್‌ಘಿ’, ಘಿ‘ಆಟೋ ಶಂಕರ್‌ಘಿ’, ಘಿ‘ಉಪ್ಪಿ ದಾದಾ ಎಂಬಿಬಿಎಸ್‌ಘಿ’, ಘಿ‘ತಂದೆಗೆ ತಕ್ಕ ಮಗಘಿ’, ಘಿ‘ಐಶ್ವರ್ಯಾಘಿ’, ಘಿ‘ಪರೋಡಿಘಿ’, ಘಿ‘ಮಸ್ತಿಘಿ’, ಘಿ‘ಅನಾಥರುಘಿ’, ಘಿ‘ಲವಕುಶಘಿ’, ಘಿ‘ಬುದಿಟಛಿವಂತಘಿ’, ಘಿ‘ದುಬೈ ಬಾಬುಘಿ’ ಮುಂತಾದ ಚಿತ್ರಗಳಲ್ಲಿ ಬಹುತೇಕ ತೋಪಾಗಿದ್ದರೂ ಬೇಡಿಕೆ ಕಡಿಮೆಯಾಗಲಿಲ್ಲ. ಹೆಚ್ಚು ಕಡಿಮೆ ರಿಮೇಕ್‌ ಚಿತ್ರಗಳಾಗಿರುವ ಇವುಗಳ ಬಗ್ಗೆ ಮಾತನಾಡದಿರುವುದೇ ಉತ್ತಮ. ಆದರೂ ಉಪ್ಪಿ ನಿರ್ದೇಶನಕ್ಕೆ ವಾಪಸಾಗುವ ಸೂಚನೆ ನೀಡಿದರೂ ಹಿಂದಿನ ಚಾರ್ಮ್‌ ಕಂಡುಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆಗಳೇಳುತ್ತಿವೆ. ಅದೇ ಗಿಮಿಕ್‌ಗಳು ಈಗಲೂ ಪ್ರೇಕ್ಷಕರಿಗೆ ಇಷ್ಟವಾಗದು. ಹೊಸತು ೪೨ ರ ವಯೋಮಾನದ ಉಪೇಂದ್ರನ ತಲೆ ಯಲ್ಲಿ ಮೂಡ ಬಹುದೇ ? ಯೋಗ ರಾಜ್‌ ಭಟ್‌, ಪ್ರೇಮ್‌, ಸೂರಿ, ಶಶಾಂಕ್‌, ಗುರುಪ್ರಸಾದ್‌ರಂತಹ ನಿರ್ದೇಶಕರು ಚಲಾವಣೆಯಲ್ಲಿರುವ ಸಂದರ್ಭದಲ್ಲಿ ಉಪ್ಪಿ ಮ್ಯಾಜಿಕ್‌ ಹೇಗೆ ನಡೆಯಬಹುದು ಎಂಬುದು ಕುತೂಹಲಕಾರಿ.

No Comments to “ಇದು ಉಪೇಂದ್ರನ ಹೊಸ ಅವತಾರ”

add a comment.

Leave a Reply

You must be logged in to post a comment.