ದರ್ಶನ್‌ರ ‘ಅಭಯ್‌’ ಚಿತ್ರೀಕರಣ ಪೂರ್ಣ

ಕಳೆದ ಹಲವು ತಿಂಗಳುಗಳಿಂದ ‘ಅಭಯ್‌’ ಚಿತ್ರದ ಬಗ್ಗೆ ಬರೀ ಅಂತೆ -ಕಂತೆಗಳ ಮಾತು ಕೇಳಿ ಬರುತ್ತಿತ್ತು. ಇದೀಗ ಅವೆಲ್ಲದಕ್ಕೂ ಫುಲ್‌ ಸ್ಟಾಪ್‌ ನೀಡಲು ಮುಂದಾಗಿದ್ದಾರೆ ದರ್ಶನ್‌ ಮತ್ತು ನಿರ್ದೇಶಕ ಮಹೇಶ್‌ ಬಾಬು. ಇವರಿಬ್ಬರು ಜೊತೆಯಾಗಿ ಮಾಡುತ್ತಿರುವ ಚಿತ್ರ ಇದಾಗಿದೆ. ಇದಕ್ಕೆ ಬಾಂಬೆ ಬೆಡಗಿ ಆರತಿ ಠಾಕೂರ್‌ ನಾಯಕಿ. ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಎರಡೆರಡು ಬಾರಿ ವಿದೇಶಕ್ಕೆಲ್ಲಾ ಓಡಾಡಿ ಚಿತ್ರ ಮುಗಿಸಿದ್ದಾರೆ. ಸಿನಿಮಾದ ನಿರ್ಮಾಪಕ ಬಾಬು ರೆಡ್ಡಿ. ಇವೆಲ್ಲಾ ಅದೇಷ್ಟೋ ತಿಂಗಳಿಂದ ಕೇಳಿ ಬರುತ್ತಿತ್ತೇ ವಿನಃ ನಿಖರವಾದ ಮಾಹಿತಿ ಇರಲಿಲ್ಲ. ಚಿತ್ರತಂಡದಲ್ಲಿ ಇರುವ ತಂತ್ರಜ್ಞರು ಹಾಗೂ ತಾರಾ ಬಳಗದಲ್ಲಿ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜನಾರ್ಧನ ಮಹರ್ಷಿಯವರದ್ದು, ನಿರ್ದೇಶನ ಮಾತ್ರ ಮಹೇಶ್‌ ಬಾಬು, ರಮೇಶ್‌ ಬಾಬು ಛಾಯಾಗ್ರಹಣವಿದೆ. ಜಯಂತ್‌ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಸಂಗೀತ ಹರಿಕೃಷ್ಣರದ್ದು. ದರ್ಶನ್‌, ಆರತಿ ಠಾಕೂರ್‌, ಪ್ರದೀಪ್‌ ರಾವುತ್‌, ಓಂ ಪ್ರಕಾಶ್‌ ರಾವ್‌, ಸಲೀಂ ಬೇಗ್‌, ಆರ್ಯಮಾನ್‌ ಮುಂತಾದವರ ತಾರಾಬಳಗವಿದೆ. ಮೈಸೂರು, ಬೆಂಗಳೂರು, ಬ್ಯಾಂಕಾಕ್‌, ಸ್ವಿಜರ್ಲೆಂಡ್‌ಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಮಾಧ್ಯಮದವರನ್ನು ಸ್ವಲ್ಪ ದೂರವೇ ಇಟ್ಟುಕೊಂಡಿದ್ದ ಚಿತ್ರತಂಡ ಇದೀಗ ಮಾಧ್ಯಮದ ಮುಂದೆ ನಿಲ್ಲಲು ಸಿದಟಛಿರಾಗಿದ್ದಾರೆ. ಅದಕ್ಕಾಗಿ ಧ್ವನಿಸುರುಳಿ ಬಿಡುಗಡೆ ಸಮಾರಂಭ ಆಯೋಜಿಸಲು ನಿರ್ಧರಿಸಿದ್ದಾರೆ.

No Comments to “ದರ್ಶನ್‌ರ ‘ಅಭಯ್‌’ ಚಿತ್ರೀಕರಣ ಪೂರ್ಣ”

add a comment.

Leave a Reply

You must be logged in to post a comment.