ಹಂದಿ ಜ್ವರ ಚಿಕಿತ್ಸೆಗೆ ಆಯುರ್ವೇದ ರಸಾಯನ

ಹಾಸನ : ಹಂದಿಜ್ವರ(ಹೆಚ್‌.೧ ಎನ್‌.೧) ಹೊಸ ರೋಗವೇನೂ ಅಲ್ಲ. ೧೯೧೮ರಲ್ಲಿ ಮೊದಲ ಬಾರಿಗೆ ಕಾಣಿಸಿ ಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ರೋಗ ವಿವಿಧ ಕಾಯಿಲೆ ರೂಪ ಗಳಲ್ಲಿ ಪತ್ತೆಯಾಗಿದೆ ಎಂದು ನಗರದ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಸಹಾಯಕ ಪ್ರೊಫೇಸರ್‌ ಹಾಗೂ μಜಿಷಿಯನ್‌ ಡಾ।। ಎನ್‌.ಸ್ವಾಗತ್‌ ತಿಳಿಸಿದ್ದಾರೆ. ಹಂದಿ ಜ್ವರ ಸಾಂಕ್ರಾಮಿಕ ರೋಗ. ಹೆಚ್‌.೧ ಎನ್‌.೧ ವೈರಾಣುವಿನಿಂದ ಹರಡುತ್ತದೆ. ಜ್ವರದೊಂದಿಗೆ ಶೀತ, ನೆಗಡಿ ರೋಗ ಪ್ರಮುಖ ಲಕ್ಷಣ. ಈ ರೋಗ ಹಂದಿಗಳಲ್ಲಿ ಸರ್ವೆ ಸಾಮಾನ್ಯ ಆದರೆ ಅವುಗಳ ಮಾಂಸ ತಿನ್ನುವುದ ರಿಂದ ಈ ಕಾಯಿಲೆ ಬರದು. ರೋಗದ ವೈರಾಣುವಿನಲ್ಲಿ ಮೂರು ವಿಧದ ಕಾಯಿಲೆಗಳು(ಎನ್ಛ್ಲು ಎನ್ಜ ಎ-ಬಿ-ಸಿ) ಕಂಡು ಬರುತ್ತವೆ. ಎ-ಸಿ ಮನುಷ್ಯನಲ್ಲಿ ಮಾತ್ರ ಕಾಣ ಸಿಗುತ್ತದೆ ಎಂದು ಅವರು ವಿವರಿಸಿದ್ದಾರೆ. ಜ್ವರ, ಕೆಮ್ಮು, ತಲೆ ನೋವು, ಮೂಳೆ ನೋವು, ಸ್ನಾಯು ಸೆಳೆತ, ಗಂಟಲು ಬೇನೆ, ಚಳಿ-ಜ್ವರ, ಆಲಸ್ಯ, ವಾಂತಿ, ಬೇಧಿ ಇವು ರೋಗದ ಮುಖ್ಯ ಲಕ್ಷಣ ಗಳು. ಸಾಮಾನ್ಯವಾಗಿ ೬೫ ವರ್ಷ ಮೇಲ್ಪಟ್ಟ ಹಾಗೂ ಐದು ವರ್ಷ ಒಳಪಟ್ಟವರು ಬೇಗನೆ ಈ ಕಾಯಿಲೆಗೆ ತುತ್ತಾಗುತ್ತಾರೆ. ಅಸ್ತಮಾ, ಸಕ್ಕರೆ ಕಾಯಿಲೆ, ಸ್ಥೂಲ ಕಾಯ ಹೃದ್ರೋಗ, ಹೆಚ್‌.ಐ.ವಿ. ಏಡ್ಸ್‌ನಂತಹ ಇತರೆ ವ್ಯಾಧಿ ಕ್ಷಮತೆಗೆ ಧಕ್ಕೆ ತರುವಂತಹ ಕಾಯಿಲೆಗಳು ಇರುವವರಿಗೆ ಈ ರೋಗ ಬಹುಬೇಗ ಹರಡುತ್ತದೆ ಎಂದು ಅವರು ಹೇಳಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿರು ವವರಲ್ಲಿ ರೋಗ ಕಂಡು ಬರದು. ರೋಗಿಯ ಕೆಮ್ಮು, ಸೀನು ಹಾಗೂ ಆತನ ಕೈಗಳಿಂದ ವೈರಾಣು ಹರಡುತ್ತದೆ. ಆಯುರ್ವೇದದಲ್ಲಿ ಚರಕಾಚರ್ಯರು ವಿಷಮ ಜ್ವರವೆಂದು ಈ ರೋಗದ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಹೆಚ್‌.೧ಎನ್‌.೧ ಸೋಂಕು ತಡೆಗಟ್ಟಲು ರಸಾಯನ ಚಿಕಿತ್ಸೆ ರಾಮ ಬಾಣ ಎಂದು ಅವರು ತಿಳಿಸಿದ್ದಾರೆ. ಸ್ವಚ್ಛತೆ ಕಾಪಾಡುವುದು, ಕೈಗಳನ್ನು ಡೆಟಾಲ್‌ ಅಥವಾ ಸ್ಪಿರಿಟ್‌ನಿಂದ ಸ್ವಚ್ಛ ಮಾಡಿಕೊಳ್ಳುವುದು, ಪ್ರತಿ ದಿನ ೨೦ ನಿಮಿಷ ಯೋಗಾಸನ ಮಾಡುವುದು ರೋಗದ ವಿರುದಟಛಿ ಮುನ್ನೆಚ್ಚರಿಕೆ ಕ್ರಮ ಗಳಾಗಿವೆ ಎಂದು ಅವರು ಹೇಳಿದ್ದಾರೆ. ಹೆಚ್ಚಿನ ವಿವರಗಳಿಗೆ ೯೪೪೮೯೪ ೧೦೮೪ ಸಂಖ್ಯೆಯಲ್ಲಿ ಈ ವೈದ್ಯರನ್ನು ಸಂಪರ್ಕಿಸಬಹುದಾಗಿದೆ.

No Comments to “ಹಂದಿ ಜ್ವರ ಚಿಕಿತ್ಸೆಗೆ ಆಯುರ್ವೇದ ರಸಾಯನ”

add a comment.

Leave a Reply

You must be logged in to post a comment.