ಹಾಸನ ನಗರದ ಸ್ವಚ್ಛತೆಗೆ ನಾಗರಿಕರ ಕರ್ತವ್ಯ ಪ್ರಜ್ಞೆ ಅಗತ್ಯವಿಲ್ಲವೇ?

ಹಾಸನ : ಹಾಸನ ನಗರದ ಸ್ವಚ್ಛತೆಗೆ ಪ್ರತಿಯೊಬ್ಬ ನಾಗರಿಕರು ಗಮನ ಹರಿಸ ಲೇಬೇಕು. ಈ ಕುರಿತು ಸ್ಥಳೀಯ ಸಂಸ್ಥೆ ಗಳನ್ನು ಮಾತ್ರವೇ ಹೊಣೆಗಾರರನ್ನಾಗಿ ಮಾಡುವುದು ಸೂಕ್ತವಾದುದಲ್ಲ. ನಾಗ ರಿಕರ ಕರ್ತವ್ಯವೇನೆಂಬುದನ್ನೂ ಮೊದಲು ತಿಳಿದುಕೊಳ್ಳಬೇಕು. ಹಾಗಾದಾಗ ಮಾತ್ರವೇ ಸುಂದರ ನಗರ ಕಟ್ಟಬಹುದು! ಕೆಲವು ವಾರ್ಡುಗಳಲ್ಲಿ ಕಸವನ್ನು ಹಾಕುವ ಸಲುವಾಗಿಯೇ ತೊಟ್ಟಿಗಳನ್ನು ಇರಿಸಲಾಗಿದೆ. ಆದರೆ ನಮ್ಮ ನಾಗರಿಕರು ಮನೆ ಕಸವನ್ನೂ ಕೂಡ ಅಲ್ಲಿಗೆ ತಂದು ಹಾಕುತ್ತಿಲ್ಲ. ತಮ್ಮ ಮನೆಯ ಆಸು ಪಾಸಿ ನಲ್ಲಿಯೇ ಕಸ ಸುರಿದು ಅನೈರ್ಮಲ್ಯಕ್ಕೆ ಕಾರಣರಾಗುತ್ತಿದ್ದಾರೆ! ಕಸದ ತೊಟ್ಟಿಗೆ ಕಸ ಹಾಕದೆ, ಹೊರಗೆ ಬಿಸಾಡುವ ಕ್ರಮವು ಸರಿ ಯಾದುದಲ್ಲ. ದುರ್ವಾಸನೆ ಬೀರುವ ತಮ್ಮ ಮನೆಯ ಕಸವನ್ನು ಬೇರೆಯವರು ಸಾಗಿಸಬೇಕೆಂದರೆ ಅದೊಂದು ಅಸಹನೀಯ. ಕನಿಷ್ಠ ಕಸ ನಿರ್ವಹಣೆಗೆ ನಾವು ಮನಸ್ಸು ಮಾಡುತ್ತಿಲ್ಲ. ನಾಗರಿಕರಲ್ಲಿ ಬೇಜವಾಬ್ದಾರಿ ಹೆಚ್ಚುತ್ತಿದೆ ಎಂದು ಹೇಳಲೇಬೇಕಿದೆ. ಮಾಧ್ಯಮಗಳೂ ಕೂಡ ಸ್ವಚ್ಛತೆಗೆ ಸಂಬಂಧಿಸಿದಂತೆ ನಗರಸಭೆ ಮತ್ತು ಸ್ಥಳೀಯ ಪ್ರತಿನಿಧಿಗಳ ವಿರುದಟಛಿ ಟೀಕಿಸಿವೆ. ಆದರೆ ನಾಗ ರಿಕರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ನಾಗರಿಕರ ಪಾತ್ರ ಏನು? ಎಂಬುದನ್ನು ತಿಳಿ ಯಪಡಿಸುವುದು ಅಗತ್ಯ. ನಿರ್ಮಲನಗರ ಯೋಜನೆಯಲ್ಲಿ ೨೦ ರಿಂದ ೪೦ ರೂ. ತನಕ ನಾಗರಿಕರಿಂದ ಹಣ ಕಟ್ಟಿಸಿಕೊಳ್ಳಲಾಯಿತು. ಆದರೆ ಶೇ.೨೦ ರಿಂದ ೩೦ ಮಂದಿ ಮಾತ್ರ ಹಣ ಪಾವ ತಿಸಿದರು. ಮನೆಯ ಬಾಗಿಲಿಗೆ ಕಸ ಪಡೆ ಯಲು ಬಂದರೂ ಕನಿಷ್ಠ ೨೦ ರೂ. ಪಾವ ತಿಸಲು ಹಲವರು ತಯಾರಿಲ್ಲ. ನಮ್ಮ ಲ್ಲಿಯೂ ಬೇಜವಾಬ್ದಾರಿ ಪ್ರಜೆಗಳಿದ್ದಾರೆ. ಅನೈರ್ಮಲ್ಯದಿಂದ ಹಂದಿ ಜ್ವರದಂತಹ ಮಾರಣಾಂತಿಕ ಕಾಯಿಲೆಗಳು ಹರಡು ವುದಿಲ್ಲವೇ? ರಾಜಕೀಯ ಪಕ್ಷಗಳು ಕೂಡ ಜನರ ಕರ್ತವ್ಯ ಪ್ರಜ್ಞೆ ಹುಟ್ಟಿಸುವಲ್ಲಿ ಹಿಂದೆ ಬಿದ್ದಿವೆ. ಬಹುತೇಕರು ಎಲ್ಲಾ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ತಮ್ಮ ಕರ್ತವ್ಯ ಏನೆಂಬುದನ್ನು ಮರೆತಿರು ವುದು ಅತ್ಯಂತ ದುರದೃಷ್ಟಕರ. ತಮ್ಮ ಮನೆಯ ಸುತ್ತ ಸ್ವಚ್ಛವಾಗಿರ ಬೇಕು. ಆದರೆ ಊರು- ಬಡಾವಣೆ ಹೇಗಿ ದ್ದರೂ ಅದರ ಗೊಡವೆ ಕೆಲವರಿಗೆ ಬೇಕಾ ಗಿಲ್ಲ. ನಮ್ಮಲ್ಲಿ ಹಲ ವರು ವಿದೇಶ ಗಳ ಬಗ್ಗೆ ಹೇಳುತ್ತಾರೆ. ಅಲ್ಲಿ ಸ್ವಚ್ಛತೆಗೆ ಶ್ರಮ ವಹಿ ಸುತ್ತಾರೆ ಎಂದು ವಿವರಣೆ ನೀಡುತ್ತಾರೆ. ಆದರೆ ತಮ್ಮ ಊರಿನ ಸ್ವಚ್ಛತೆಯ ಬಗ್ಗೆ ನಾಗರಿಕರಿಗೆ ಪ್ರಜ್ಞೆ ಮೂಡಿಸುತ್ತಿಲ್ಲ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸುಂದರ ಪರಿಸರ ಅತ್ಯಗತ್ಯ. ಆದರೆ ಪರಿ ಸರವೂ ವಿನಾಶವಾಗುತ್ತಿದೆ. ಅನೈರ್ಮಲ್ಯವೂ ಹೆಚ್ಚುತ್ತಿದೆ. ಇವೆಲ್ಲದರ ಬಗ್ಗೆ ಸ್ವಾತಂತ್ರೋ ತ್ಸವ ಸಂದರ್ಭದಲ್ಲಾದರೂ ಹಕ್ಕುಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಕರ್ತವ್ಯದ ಬಗ್ಗೆ ಆಲೋಚಿಸೋಣವೇ

No Comments to “ಹಾಸನ ನಗರದ ಸ್ವಚ್ಛತೆಗೆ ನಾಗರಿಕರ ಕರ್ತವ್ಯ ಪ್ರಜ್ಞೆ ಅಗತ್ಯವಿಲ್ಲವೇ?”

add a comment.

Leave a Reply

You must be logged in to post a comment.