ಎಲೆ ಕೋಸಿಗೆ ಭಾರೀ ಬೇಡಿಕೆ : ಬೆಳೆಗಾರರ ಹರ್ಷ

ಹಾಸನ : ಕಳೆದ ವರ್ಷ ಎಲೆ ಕೋಸು ಬೆಳೆದ ರೈತರು ಭಾರೀ ನಷ್ಟ ಅನುಭವಿಸಿ, ಆರ್ಥಿಕವಾಗಿ ವಿಪರೀತ ತೊಂದರೆ ಅನುಭವಿಸಿದ್ದರು. ಆದರೆ ಈ ವರ್ಷ ಎಲೆ ಕೋಸು, ಬೆಳೆಗಾರರ ಕೈ ಹಿಡಿದಿದೆ. ಭಾರೀ ಬೇಡಿಕೆಯಿರುವುದ ರಿಂದ ಬೆಳೆಗಾರರ ಮೊಗದಲ್ಲಿ ಮಂದ ಹಾಸ ಮೂಡಿದೆ. ನೆರೆ ರಾಜ್ಯವಾದ ತಮಿಳುನಾಡು, ಆಂಧ್ರಪ್ರದೇಶದ ಮತ್ತಿತರ ಭಾಗದಲ್ಲಿ ವ್ಯಾಪಕ ಮಳೆಯಿಂದ ಎಲೆ ಕೋಸು ನೆಲಕಚ್ಚಿದೆ. ಹಾಗಾಗಿ ಹಾಸನದ ಸುತ್ತ ಮುತ್ತ ಬೆಳೆದಿರುವ ಎಲೆ ಕೋಸಿಗೆ ಈಗ ಬೇಡಿಕೆ ಸೃಷ್ಟಿಯಾಗಿದೆ. ಬ್ಲೈಟ್‌ ರೋಗ ತಗುಲಿ ಆಲೂಗೆಡ್ಡೆ ಸಂಪೂರ್ಣ ನಾಶವಾಯಿತು. ಇಂತಹ ಆಘಾತಕಾರಿ ಸುದ್ದಿ ನಡುವೆ ಎಲೆ ಕೋಸು ಬೆಳೆ ರೈತರಿಗೆ ಸಮಾಧಾನ ವನ್ನಂತೂ ತಂದಿದೆ. ಪತ್ರಿಕೆ ಸೋಮವಾರ ಹಾಸನ ತಾಲ್ಲೂಕಿನ ದಾಸರಕೊಪ್ಪಲು, ಸಾಲ ಗಾಮೆ, ಕೊಂಡಜ್ಜಿ ಮತ್ತಿತರಭಾಗಗಳಿಗೆ ತೆರಳಿ ಎಲೆ ಕೋಸು ಬೆಳೆಯ ಬಗ್ಗೆ ಮಾಹಿತಿ ಕಲೆ ಹಾಕಿತು. ಎಲೆ ಕೋಸು ಬೆಳೆದಿರುವ ರೈತರೀಗ ಭಾರೀ ಹರ್ಷ ದಿಂದಿದ್ದಾರೆ. ಇವೊತ್ತು ಹೊರ ರಾಜ್ಯದವರು ನೇರವಾಗಿ ರೈತರ ಜಮೀನಿಗೆ ತೆರಳಿ ಎಲೆಕೋಸು ಖರೀದಿಸುತ್ತಿದ್ದಾರೆ. ಈಗ ಒಂದು ಹೆಕ್ಟೇರ್‌ನಲ್ಲಿ ಬೆಳೆದ ಎಲೆ ಕೋಸಿನ ಬೆಲೆ ೧,೧೦,೦೦೦ ರೂ.ನಿಂದ ೧,೩೦,೦೦೦ ರೂ.ವರೆಗೂ ಇದೆ. ಈ ದರದಲ್ಲಿ ರೈತರು ಮಾರಾಟ ಮಾಡು ತ್ತಿದ್ದಾರೆ. ಕಳೆದ ವರ್ಷ ಒಂದು ಹೆಕ್ಟೇರ್‌ ನಲ್ಲಿ ಬೆಳೆದ ಎಲೆಕೋಸಿಗೆ ೭೦ ರಿಂದ ೮೦ ಸಾವಿರ ರೂ. ದರದಲ್ಲಿ ಮಾರಾಟ ವಾಯಿತು. ರೈತರು ನಷ್ಟ ಹೊಂದಿದ್ದರು. ಆದರೆ ಈ ವರ್ಷ ಬೇಡಿಕೆ ಹೆಚ್ಚಿ ಗಲ್‌, ಚನ್ನರಾಯಪಟ್ಟಣ, ಹಿರೀ ಸಾವೆ ಸುತ್ತಮುತ್ತ ಮುಂಗಾರು ಹಂಗಾಮಿನಲ್ಲಿ ಎಲೆ ಕೋಸು ಬೆಳೆಯ ಲಾಗುತ್ತಿದೆ. ಹಿಂಗಾರಿನಲ್ಲಿ ಎಲೆಕೋಸು ಬೆಳೆ ದರೆ ಹೆಚ್ಚಿನ ಇಳುವರಿ ಸಿಗುವ ಸಾಧ್ಯತೆಯೂ ಇದೆ. ಆದರೆ ಹಲವರು ಮುಂಗಾರಿ ನಲ್ಲಿಯೇ ಎಲೆಕೋಸು ಬೆಳೆದು ಕೈತುಂಬಾ ಹಣ ಪಡೆಯುತ್ತಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ ೧ ಸಾವಿರ ಹೆಕ್ಟೇರ್‌ನಲ್ಲಿ ಎಲೆಕೋಸು ಬಿತ್ತನೆ ಯಾಗಿದೆ. ಒಂದು ಹೆಕ್ಟೇರ್‌ನಲ್ಲಿ ಎಲೆ ಕೋಸು ಬೆಳೆಯಲು ೩೦ ರಿಂದ ೩೫ ಸಾವಿರ ರೂ. ಖರ್ಚು ತಗುಲುತ್ತದೆ. ೯೦ ರಿಂದ ೧೦೦ ದಿವಸದಲ್ಲಿ ಎಲೆ ಕೋಸು ಕಟಾವಿಗೆ ಬರುತ್ತದೆ. ಒಂದು ಹೆಕ್ಟೇರ್‌ಗೆ ೩೫ ಸಾವಿರ ರೂ. ಖರ್ಚು ಮಾಡಿದೆವು. ಕನಿಷ್ಠ ಒಂದು ಲಕ್ಷ ಆದಾಯ ಸಿಕ್ಕಿತು ಎಂದು ಕೊಂಡಜ್ಜಿ ರೈತ ಮಹೇಶ್‌ ವಿವರ ಒದಗಿಸಿದರು. ಕಳೆದ ಬಾರಿ ಎಲೆಕೋಸು ಕೈ ಕೊಟ್ಟಿತು. ಈ ವರ್ಷ ಮುಂಗಾರಿನಲ್ಲೇ ಬಿತ್ತನೆ ಮಾಡಿದೆವು. ಎಲೆ ಕೋಸು ನಮ್ಮ ಕೈ ಹಿಡಿದಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

No Comments to “ಎಲೆ ಕೋಸಿಗೆ ಭಾರೀ ಬೇಡಿಕೆ : ಬೆಳೆಗಾರರ ಹರ್ಷ”

add a comment.

Leave a Reply

You must be logged in to post a comment.