ವನ್ಯಪ್ರಾಣಿಗಳಿಂದ ಬೆಳೆ ಹಾನಿ : ಪರಿಹಾರ ಮೊತ್ತ ಪರಿಷ್ಕರಣೆ

ಹಾಸನ : ವನ್ಯಪ್ರಾಣಿಗಳಿಂದ ಆಗು ತ್ತಿರುವ ಬೆಳೆ ಹಾನಿಗೆ ರೈತರಿಗೆ ನೀಡ ಲಾಗುವ ಪರಿಹಾರದ ಮೊತ್ತ ವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಈ ಬಗ್ಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಧೀನ ಕಾರ್ಯದರ್ಶಿ ಪಿ.ಆರ್‌.ಕಲಾವತಿ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯ ಪ್ರಾಣಿಗಳಿಂದ ಬೆಳೆ ಮತ್ತು ಜೀವಹಾನಿಯಾಗುತ್ತಿದ್ದು, ಇದಕ್ಕೆ ಸರ್ಕಾರ ನಿಗದಿಪಡಿಸಿರುವ ಪರಿಹಾರ ಸಾಲುತ್ತಿಲ್ಲ. ಇದನ್ನು ಹೆಚ್ಚಿಸುವಂತೆ ರೈತರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರು ವನ್ಯಪ್ರಾಣಿಗಳಿಂದ ಆಗುವ ಬೆಳೆ ಹಾನಿ, ಪ್ರಾಣ ಹಾನಿ, ಜಾನುವಾರುಗಳ ಸಾವು, ಶಾಶ್ವತ ಅಂಗವಿಕಲರಿಗೆ ನೀಡು ತ್ತಿರುವ ಪರಿಹಾರವನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಕೂಡ ಪರಿ ಹಾರಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ವಾಗಿ ಅಧ್ಯಯನ ನಡೆಸಿ, ವರದಿಯನ್ನು ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ನೀಡಿತ್ತು. ಹಾಗಾಗಿ ರಾಜ್ಯ ಸರ್ಕಾರ ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಆದೇಶ ಹೊರ ಡಿಸಿದೆ. ಈ ಪರಿಹಾರದ ಮೊತ್ತ ಹೀಗಿದೆ. ಇದಕ್ಕೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ವಿವಿಧ ಬೆಳೆಗಳಿಗೆ ನಿಗದಿಪಡಿಸಿರುವ ಪರಿ ಹಾರ ಮೊತ್ತದ ವಿವರವನ್ನು ಒದಗಿಸಿದೆ. ೨೫ ಸಾವಿರಕ್ಕಿಂತ ಮೇಲ್ಪಟ್ಟು ಲಕ್ಷ ರೂ.ವರೆಗಿನ ಪರಿಹಾರವನ್ನು ಸಹಾ ಯಕ ಅರಣ್ಯ ಸಂರಕ್ಷಣಾಧಿಕಾರಿ, ಲಕ್ಷ ರೂ. ಗೂ ಮೇಲ್ಪಟ್ಟ ಪರಿಹಾರವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಂಜೂರು ಮಾಡುವ ಅಧಿಕಾರವನ್ನು ನೀಡಲಾಗಿದೆ ಕಾಡು ಪ್ರಾಣಿಗಳು, ಜಾನುವಾರು ಗಳನ್ನು ಹತ್ಯೆ ಮಾಡಿದರೆ ಈ ಮಾಲೀಕ ರಿಗೆ ಎರಡೂವರೆ ಸಾವಿರ ರೂ.ನಿಂದ ಮೂರು ಸಾವಿರ ರೂ. ಪರಿಹಾರ ನೀಡ ಲಾಗುತ್ತದೆ. ಪ್ರಾಣಿಗಳಿಂದ ವ್ಯಕ್ತಿಯ ಹತ್ಯೆಯಾಗಿದ್ದರೆ, ಒಂದೂವರೆ ಲಕ್ಷ ರೂ. ಪರಿಹಾರ ದೊರೆಯುತ್ತದೆ. ೫,೮೦೦ ರೂ.ವರೆಗೆ ಬೆಳೆ ನಾಶ ವಾಗಿದ್ದಲ್ಲಿ ಪೂರ್ಣ ಪ್ರಮಾಣದ ಪರಿ ಹಾರ ದೊರೆಯಲಿದೆ. ೬,೦೦೦ ರೂ. ಮೇಲ್ಪಟ್ಟು ೨೯,೦೦೦ ರೂ.ವರೆಗೆ ಬೆಳೆ ನಾಶವಾಗಿದ್ದರೆ ಗರಿಷ್ಠ ೧೭,೫೦೦ ರೂ., ೨೯,೦೦೦ಕ್ಕೂ ಮೇಲ್ಪಟ್ಟು ಬೆಳೆ ನಾಶ ವಾಗಿದ್ದರೆ ೧೭,೫೦೦ ರೂ.ಗಳಿಂದ ಗರಿಷ್ಠ ೪೫,೦೦೦ ರೂ. ಪರಿಹಾರ ದೊರೆ ಯಲಿದೆ. ವನ್ಯಪ್ರಾಣಿಗಳಿಂದ ಗಾಯಗೊಂಡ ವ್ಯಕ್ತಿಗಳಿಗೆ ೩೫ ಸಾವಿರ ರೂ., ಮನೆ, ಗುಡಿಸಲು, ಪಂಪ್‌ಹೌಸ್‌ ನಷ್ಟವಾದರೆ ೭ ಸಾವಿರ ರೂ.ಗಳನ್ನು ನೀಡಲಿದೆ.

No Comments to “ವನ್ಯಪ್ರಾಣಿಗಳಿಂದ ಬೆಳೆ ಹಾನಿ : ಪರಿಹಾರ ಮೊತ್ತ ಪರಿಷ್ಕರಣೆ”

add a comment.

Leave a Reply

You must be logged in to post a comment.