ಸುಧಾಕರ್ ರಾಜಿನಾಮೆಗೆ ಒಂದು ವಾರ ಗಡುವು
ಬೆಂಗಳೂರು : ಬ್ಯಾಂಕ್‌ಗೆ ವಂಚಿ ಸಿದ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಡಿ. ಸುಧಾ ಕರ್ ಅವರು ರಾಜಿನಾಮೆ ನೀಡಲು ಒಂದು ವಾರ ಗಡುವು ಕೇಳಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಸೋಮವಾರ ವಿ.ಸೋಮಣ್ಣ ಅವರ ರಾಜೀನಾಮೆ ಪಡೆದ ನಂತರ ಸಚಿವ ಸುಧಾಕರ್ ಅವರು ಕೂಡ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕೆಂದು ಸೂಚಿಸಿದ್ದರು. ರಾಜಿನಾಮೆ ನೀಡಬೇಕೆಂದು ಸೂಚಿಸಿದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಸುಧಾಕರ್ ತಮ್ಮನ್ನು ಭೇಟಿಯಾಗಿ ಮಾತು ಕತೆ ನಡೆಸಿದರು. ಕಾನೂನಿನ ವಿಷಯ ವಾಗಿ ಅವರು ಪ್ರಸ್ತಾಪಿಸಿದ ವಿಷಯಗಳು ಸಮರ್ಪಕವಾಗಿದ್ದು, ಒಂದು ವಾರದ ಸಂಪುಟ ವಿಸ್ತರಣೆ-ಖಾತೆ ಹಂಚಿಕೆ ಸದ್ಯಕ್ಕಿಲ್ಲ : ಯಡಿಯೂರಪ್ಪ ನಂತರವೇ ರಾಜಿನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸುಧಾಕರ್ ಮೇಲಿನ ಆರೋಪ ಗಳಲ್ಲಿ ಕಾನೂನಿನ ತೊಡಕುಗಳಿವೆ. ಈ ವಿಷಯವಾಗಿ ಅವರು ತಮಗೆ ಮನ ವರಿಕೆ ಮಾಡಿಕೊಡಲಿದ್ದಾರೆ. ಈ ಹಿನ್ನಲೆಯಲ್ಲಿ ಒಂದು ವಾರದ ಗಡುವು ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ. ಬಿಬಿಎಂಪಿ ಚುನಾವಣೆಯೇ ನಮ್ಮ ಮುಂದಿನ ಗುರಿಯಾಗಿದೆ ಎಂದು ತಿಳಿಸಿದ ಅವರು, ಸಂಪುಟ ವಿಸ್ತರಣೆ ಅಥವಾ ಖಾತೆ ಹಂಚಿಕೆ ಕುರಿತಂತೆ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಹೇಳಿದರು. ಈ ಹಿನ್ನಲೆಯಲ್ಲಿ ಮಂಗಳವಾರ ವಿದೇಶಕ್ಕೆ ತೆರಳಿ ರುವ ಮುಖ್ಯಮಂತ್ರಿಗಳು ಸೆ.೭ರಂದು ಹಿಂದಿರುಗಲಿದ್ದಾರೆ. ಆ ಬಳಿಕವೇ ಸುಧಾಕರ್ ರಾಜಿನಾಮೆ ನೀಡಲಿದ್ದಾರೆ ಎನ್ನಲಾಗಿದೆ.