ಶ್ರೇಷ್ಠ ನಟಿ ಉಮಾಶ್ರೀ-ಶ್ರೇಷ್ಠ ನಟ ಪ್ರಕಾಶ್ರೈ
ಮುಂಬೈ : ಸಿನಿಮಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ೨೦೦೭-೦೮ರ ಪಟ್ಟಿ ಬಿಡುಗಡೆ ಗೊಂಡಿದ್ದು, ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಿಫಗುಲಾಬಿ ಟಾಕೀಸ್ಘಿಫನ ಮನೋಜ್ಞ ನಟನೆಗಾಗಿ ಉಮಾಶ್ರೀ ಶ್ರೇಷ್ಠ ನಟಿ ಪ್ರಶಸ್ತಿ ಪಡೆದುಕೊಂಡಿ ದ್ದಾರೆ. ತಮಿಳು ಚಿತ್ರ ಘಿಫಕಾಂಚೀವರಂಘಿಫ ನಟನೆಗಾಗಿ ಕನ್ನಡಿಗ ಪ್ರಕಾಶ್ ರೈ (ಪ್ರಕಾಶ್ ರಾಜ್) ಶ್ರೇಷ್ಠ ನಟ ಪ್ರಶಸ್ತಿ ಯನ್ನು ಗೆಲ್ಲುವ ಮೂಲಕ ಘಿಫತಾರೆ ಜಮೀನ್ಪರ್ಘಿಫ,ಘಿಫಚಕ್ದೇಇಂಡಿಯಾಘಿಫಗಳ ಬಾಲಿವುಡ್ ಖಾನ್ ದಿಗ್ಗಜರಾದ ಅಮೀರ್ ಖಾನ್ ಹಾಗೂ ಶಾರೂಖ್ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಆಂಧ್ರ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ದುರ್ಮರಣದ ಹಿನ್ನಲೆಯಲ್ಲಿ ಮುಂದೂಡಲಾಗಿದ್ದ ಪ್ರಶಸ್ತಿ ಪಟ್ಟಿ ಸೋಮವಾರ ಪ್ರಕಟ ಗೊಂಡಿದ್ದು, ಕನ್ನಡ ಹಾಗೂ ತಮಿಳು ಚಿತ್ರಗಳೆರಡು ರಾಷ್ಟ್ರ ಮಟ್ಟದಲ್ಲಿ ಗುರು ತಿಸಿಕೊಳ್ಳುವ ಮೂಲಕ ಅತ್ಯುತ್ತಮ ನಟ, ನಟಿ ಪ್ರಶಸ್ತಿಗಳೆರಡೂ ದಕ್ಷಿಣ ಭಾರತದ ಪಾಲಾಗಿವೆ. ನಟನೆಗಷ್ಟೇ ಅಲ್ಲೆ, ಶ್ರೇಷ್ಠ ಚಿತ್ರ ವಾಗಿಯೂ ಘಿಫಕಾಂಚೀವರಂಘಿಫ ಹೊರ ಹೊಮ್ಮಿದೆ. ಬಾಲಿವುಡ್ನ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರು ನಿರ್ದೇಶಿಸಿದ ಮೊದಲ ಕಲಾತ್ಮಕ ಚಿತ್ರ ವಿದು. ಬ್ರಿಟಿಷ್ ಇಂಡಿಯಾ ಕಾಲದ ಕಾಂಚೀವರಂನ ರೇಷ್ಮೆ ನೇಯ್ಗೆಕಾರರ ಜೀವನದ ಕಥಾಹಂದರವನ್ನು ಕಾಂಚೀ ವರಂ ಚಿತ್ರ ಒಳಗೊಂಡಿದೆ. ಅನಿಲ್ ಕಪೂರ್ ನಿರ್ಮಾಣದ ಪಿರೋಜ್ ಅಬ್ಬಾಸ್ ಖಾನ್ ಅವರ ಘಿಫಗಾಂಧಿ ಮೈ ಫಾದರ್ಘಿಫ ಚಿತ್ರ ಮೂರು ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಹನಟ ಪ್ರಶಸ್ತಿ (ದರ್ಶನ್ ಝಾರಿ ವಾಲಾ) ಹಾಗೂ ಸ್ಪೆಷಲ್ ಜ್ಯೂರಿ ಪ್ರಶಸ್ತಿಗಳನ್ನು ಈ ಚಿತ್ರ ಗೆದ್ದುಕೊಂಡಿದೆ. ಖಾರೂಖ್ ಖಾನ್ ಅವರ ಬಹು ಚರ್ಚಿತ ಖ್ಯಾತ ಚಿತ್ರ ಘಿಫಚಕ್ ದೇ ಇಂಡಿಯಾಘಿಫ, ಘಿಫಅತ್ಯುತ್ತಮ ಸಂಪೂರ್ಣ ಮನರಂಜನಾ ಚಿತ್ರಘಿಫ ಎಂಬ ಪ್ರಶಸ್ತಿ ಬಾಚಿದೆ.