logo
Last updated: 2009-09-10 08:29:53
E-Paper
Archives
September 2009
M T W T F S S
« Aug   Oct »
 123456
78910111213
14151617181920
21222324252627
282930  

ಸುಧಾಕರ್‌ಗೆ ಒಂದು ವಾರ ರಿಲೀಫ್‌

ಬೆಂಗಳೂರು : ಬ್ಯಾಂಕ್‌ ವಂಚನೆ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್‌ ಅವರ ವಿಚಾರಣೆಗೆ ಹೈಕೋರ್ಟ್‌ ಮಂಗಳ ವಾರ ಒಂದು ವಾರ ತಡೆಯಾಜ್ಞೆ ನೀಡಿ, ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಬೀಸುವ ದೊಣ್ಣೆಯಿಂದ ಸುಧಾಕರ್‌ ತಾತ್ಕಾಲಿಕವಾಗಿ ಪಾರಾಗಿದ್ದಾರೆ. ಆರೋಪ ಪಟ್ಟಿಯಿಂದ ತಮ್ಮ ಹೆಸರನ್ನು ವಜಾಗೊಳಿಸುವಂತೆ ಕೋರಿ ಸಚಿವ ಸುಧಾಕರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಏಕ ಸದಸ್ಯ ನ್ಯಾಯಪೀಠ ಸಿ.ಬಿ.ಐ. ವಿಶೇಷ ನ್ಯಾಯಾಲಯದ ವಿಚಾರಣೆಗೆ ತಡೆ ಯಾಜ್ಞೆ ಕೊಟ್ಟಿತು. ಸುಧಾಕರ್‌ ಅವರು ಎಸ್‌.ಬಿ.ಎಂ.ಗೆ ಸುಮಾರು ೫.೫ ಕೋಟಿ ರೂ. ವಂಚಿಸಿ ರುವ ಆಪಾದನೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ್ದ ಸಿ.ಬಿ.ಐ., ಕಳೆದ ವರ್ಷ ಎಫ್‌.ಐ.ಆರ್‌. ದಾಖಲಿಸಿತ್ತು.  ವಿಶೇಷ ನ್ಯಾಯಾಲಯಕ್ಕೆ ಆಗಸ್ಟ್‌ ೧೩ ರಂದು ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸುಧಾಕರ್‌ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಯಡಿ ಯೂರಪ್ಪ , ಸುಧಾಕರ್‌ ಅವರಿಂದ ರಾಜಿನಾಮೆ ಕೇಳಿ, ವಾರದ ಗಡುವು ನೀಡಿದ್ದರು.

ಸಚಿವರಿಗೆ ಮುಖ್ಯಮಂತ್ರಿ ಬೆಂಬಲ : ಪ್ರಕರಣಕ್ಕೆ ಸಂಬಂಧಿಸಿದಂತೆ ಕಾದು ನೋಡುವ ತಂತ್ರ ಅನುಸರಿಸಿದ್ದ ಮುಖ್ಯ ಮಂತ್ರಿ ಯಡಿಯೂರಪ್ಪ, ಹೈಕೋರ್ಟ್‌ ತಡೆಯಾಜ್ಞೆ ನೀಡಿದ ನಂತರ ಪ್ರತಿ ಕ್ರಿಯಿಸಿ, ಸುಧಾಕರ್‌ ಅವರ ರಾಜಿನಾಮೆ ಕೇಳುವ ಪ್ರಶ್ನೆಯೇ ಇಲ್ಲ. ಹೈಕೋರ್ಟ್‌ ಅಂತಿಮ ತೀರ್ಪಿನ ನಂತರ ರಾಜಿನಾಮೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಮುಖ್ಯಮಂತ್ರಿ ನಿವಾಸದಲ್ಲಿ ಮಂಗಳವಾರ ರಹಸ್ಯ ಸಭೆ ಕೂಡ ನಡೆಯಿತು ಎನ್ನಲಾಗಿದ್ದು, ಈ ಸಂದರ್ಭ ದಲ್ಲಿ ಸುಧಾಕರ್‌ ರಾಜಿನಾಮೆ ಪತ್ರವನ್ನು ಸಲ್ಲಿಸಿದರೆಂದು ಹೇಳಲಾಗಿದೆ. ಆದರೆ ಹೈಕೋರ್ಟ್‌ ತೀರ್ಮಾನ ದವರೆಗೂ ರಾಜಿನಾಮೆಯನ್ನು ಅಂಗೀ ಕರಿಸದಿರಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.


Thursday, September 10th, 2009 at 8:29 am

SocialTwist Tell-a-Friend

Be the first to write to Editor

Write to the Editor