ಮಾರುಕಟ್ಟೆಯೊಳಗೊಂದು ಸುತ್ತು…

ಹಾಸನ : ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಇಳಿಕೆಯಾಗಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಗತ್ಯ ವಸ್ತುಗಳು ಕೂಡ ಇದ ಕ್ಕೇನೂ ಹೊರತಲ್ಲ. ದರ ಏರಿಕೆಯಿಂದ ಮಧ್ಯಮ ವರ್ಗದ ಜೀವನಕ್ಕೆ ತೊಂದರೆ ಯಾಗಿದೆ. ಈ ವರ್ಷದ ಆರಂಭದಿಂದಲೂ ದಿನ .ಳಕೆಯ ತರಕಾರಿ, ದಿನಸಿ ಪದಾರ್ಥಗಳ ಧಾರಣೆಗಳು ಗೃಹಿಣಿ ಯರನ್ನು, ಮಧ್ಯಮ, ಸಾಮಾನ್ಯ ವರ್ಗದ ಜನರನ್ನು ಬೆಚ್ಚಿ ಬೀಳಿಸುವಂತೆ ಏರಿಕೆ ಕಾಣುತ್ತಲೇ ಹೋಗಿದ್ದು, ಇದೀಗ ಒಂದು ಹಂತದಲ್ಲಿ ನಿಂತಿದ್ದು, ಒಂದೊಂದು ದಿನವೂ ಏರಿಕೆ, ಇಳಿಕೆಯ ಕ್ರಮದಲ್ಲಿ ಸಾಗುತ್ತಿದೆ. ಪತ್ರಿಕೆ ಮಾರುಕಟ್ಟೆಯೊಳಗೆ ಸುತ್ತು ಹಾಕಿದಾಗ ಬೆಲೆ ಏರಿಳಿತ ಕಂಡು .ಂದಿತು. ನಿಂಬೆಹಣ್ಣಿನ ಬೆಲೆ ಘಿ‘ಚಂದ್ರಘಿ’ನ ಎತ್ತರಕ್ಕೆ ತಲುಪಿದ್ದು, ೧೦ ರೂ.ಗೆ ೩ ನಿಂಬೆಹಣ್ಣುಗಳು ಮಾರಾಟವಾಗು ತ್ತಿದ್ದು, ಸುಮಾರಾಗಿರುವ ನಿಂಬೆಹಣ್ಣು ಗಳು ೧೦ ರೂ.ಗೆ ೪ರಂತೆ ಬಿಕರಿಯಾಗು ತ್ತಿವೆ. ಸೊಪ್ಪಿನ ಬೆಲೆ ಕೇಳುವಂತಿಲ್ಲ. ನಿನ್ನೆ ಮೊನ್ನೆ ೧೦ ರೂ.ಗೆ ೫ ರಿಂದ ೭ ಕಂತೆ ಗಳು ಸಿಗುತ್ತಿದ್ದು, ಇಂದಿನ ಮಾರುಕಟ್ಟೆ ದರದಲ್ಲಿ ೧೦ ರೂ.ಗೆ ೪ ಕಂತೆಗಳಂತೆ ಮಾರಾಟವಾಗುತ್ತಿವೆ. ವೀಳ್ಯೆದೆಲೆ ಬೆಲೆ ಗೌರಿಹಬದಲ್ಲಿ ಏರಿಕೆ ಕಂಡಿದ್ದು, ಇದುವರೆಗೂ ಇಳಿಕೆ ಕಂಡಿಲ್ಲ. ೧ ರೂಪಾಯಿಗೆ ೪ ರಿಂದ ೫ ಎಲೆಗಳು ಸಿಗುತ್ತಿದ್ದು, ಅಡಿಕೆ ಏರಿಳಿತ ವಿಲ್ಲದೆ ಸ್ಥಿರ ಬೆಲೆಯಲ್ಲಿ ಮುಂದುವರೆ ದಿದೆ. ತರಕಾರಿ ಬೆಲೆಗಳಲ್ಲಿಯೂ ಅಂತಹ ವ್ಯತ್ಯಾಸದ .ದಲಾವಣೆಗಳೇನೂ ಅಗಿಲ್ಲ. ಹಸಿರು ಮೆಣಸಿನಕಾಯಿ ಕೆ.ಜಿ.ಗೆ ೧೬ ರೂ., ಬೀನ್ಸ-೨೦ ರೂ., ಮೂಲಂಗಿ ೧೬ ರೂ., ಕ್ಯಾರೆಟ.-೨೦ ರೂ., ದಪ್ಪ ಮೆಣಸಿನಕಾಯಿ-೨೦ ರೂ. ಗಳು. ಒಟ್ಟಿನಲ್ಲಿ ತರಕಾರಿಗಳ ಬೆಲೆಯಲ್ಲಿ ಹಸಿ .ಟಾಣಿ ಮಾತ್ರ ೩೦-೪೦ ರೂಪಾಯಿಗಳಿಂದ ೫೦-೬೦ ರೂ. ಗಳವರೆಗೆ ಏರಿಕೆ ಕಂಡಿದೆ. ಬೆಲ್ಲದ ಧಾರಣೆಯಲ್ಲಿ ಇತ್ತೀಚೆಗೆ ಅಂತಹ .ದಲಾವಣೆಯೇನೂ ಆಗಿಲ್ಲ. ಕ್ವಿಂಟಾಲ.ಗೆ ೩೫೦೦ ರೂಪಾಯಿಗಳ ಧಾರಣೆ ಕಾಯ್ದುಕೊಂಡಿದ್ದು, ಸಕ್ಕರೆ ಬೆಲೆ ಕ್ವಿಂಟಾಲ.ಗೆ ೩೫೦೦ ರೂ. ಇದ್ದುದು ೧೦೦ ರಿಂದ ೧೨೦ ರೂ.ಗಳವರೆಗೆ ಇಳಿಕೆ ಕಂಡಿದೆ. ಬೆಣ್ಣೆಯ ಬೆಲೆ ಕೆ.ಜಿ.ಗೆ ೨೨೦ ರೂಪಾಯಿಗಳಿಂದ ೨೧೦ ರೂಪಾಯಿ ಗಳಿಗೆ ಕುಸಿದಿದೆ. ದಿನಸಿ ಪದಾರ್ಥಗಳ ಬೆಲೆಯಲ್ಲಿ ಅಂತಹ ವ್ಯತ್ಯಾಸವೇನು ಆಗಿಲ್ಲ ವಾದರೂ ಉದ್ದಿನ ಬೇಳೆ ಧಾರಣೆ ಕ್ವಿಂಟಾಲ.ಗೆ ೬೬೦೦ ರೂ.ಗಳಿಂದ ೬೮೦೦, ೭೦೦೦ ರೂ.ಗಳವರೆಗೆ ಹೆಚ್ಚಾ ಗಿದೆ. ಹೆಸರುಕಾಳು ೫೫೦೦ ರೂ., ಹೆಸರು ಬೇಳೆ ೬೫೦೦ ರೂಪಾಯಿಗಳ ಏರಿಕೆ ಕಂಡಿದೆ. ಮುಂದಿನ ವಾರದಲ್ಲಿ ಮಹಾ ಲಯ ಅಮಾವಸ್ಯೆಯ ಆಚರಣೆಯ ಸಂಭ್ರಮದಲ್ಲಿ ತರಕಾರಿ ಮತ್ತಿತರ ವಸ್ತುಗಳ ಬೆಲೆ ಏರಿಕೆಯ ಸಂಭವವೂ ಇಲ್ಲದಿಲ್ಲ. ಮಹಾಲಯ ಅಮಾವಾಸೆ, ಆಯುಧಪೂಜೆ ಈ ಮಾಸಾಂತ್ಯದಲ್ಲಿ ಆಚರಣೆಯಾಗಲಿದೆ. ಈಗಲೇ ಹಲ ವರು ಹ.್ಬಕ್ಕಾಗಿ ಸಿದ.ತೆ ನಡೆಸುತ್ತಿದ್ದಾರೆ.

No Comments to “ಮಾರುಕಟ್ಟೆಯೊಳಗೊಂದು ಸುತ್ತು…”

add a comment.

Leave a Reply