ಆತ್ಮಹತ್ಯೆ : ತಡೆಗಟ್ಟಲು ಸಾಧ್ಯವೇ ?

ಆತ್ಮಹತ್ಯೆ ಎಂದರೆ ಉದ್ದೇಶ ಪೂರ್ವಕವಾಗಿ ಜೀವನವನ್ನು ಕಳೆದು ಕೊಳ್ಳುವುದು. ವಿಶ್ವದಲ್ಲಿ ಸಂಭವಿಸುವ ಮರಣಗಳಿಗೆ ಕಾರಣಗಳಾದ ಮೊದಲ ಹತ್ತು ಪ್ರಮುಖ ಕಾರಣ ಗಳಲ್ಲಿ ಇದು ಒಂದು ಆಘಾತಕರ ವಿಷಯ. ಏಕೆಂದರೆ, ತಡೆಗಟ್ಟಬಹು ದಾದಂತಹ ಅಕಾಲಿಕ ಮರಣ ಇದಾಗಿರುತ್ತದೆ. ಆತ್ಮಹತ್ಯೆಯಿಂದ ಮರಣ ಹೊಂದುವ ವರಿಗಿಂತ ಇಪ್ಪತ್ತು ಪಟ್ಟು ಹೆಚ್ಚು ವ್ಯಕ್ತಿಗಳು ಆತ್ಮಹತ್ಯೆ ಪ್ರಯತ್ನ ಮಾಡುತ್ತಾರೆ. ಇಂಥ ಹತಾಶ ಪ್ರಯತ್ನಗಳು ಸಹಾಯ ಹಸ್ತವನ್ನು ನಿರೀಕ್ಷಿಸುವ ಪ್ರಯತ್ನಗಳು ಆಗಿರುತ್ತವೆ. ಆತ್ಮಹತ್ಯೆಗೆ ಬಹುತೇಕ ಕಾರಣ ಗಳು ತಿಳಿದಿರುತ್ತವೆ. ಹಾಗೆಯೇ ಈ ದುರಂತಮಯ, ಅಕಾಲಿಕ ಮರಣ ಹಾಗೂ ಅನವಶ್ಯಕ ಆತ್ಮಹತ್ಯೆಯನ್ನು ತಡೆಗಟ್ಟಲೂ ಬಹುದು. ಮಾನಸಿಕ ಖಾಯಿಲೆಗಳಾದ ಮಾನಸಿಕ ಅಸ್ವಸ್ಥತೆ (ಖಿನ್ನತೆ), ಬೈಪೂಲಾರ್‌ ಡಿಸಾಡರ್‌, ಸ್ಕಿಜೋಫೆನಿಯಾ ಮುಂತಾದವುಗಳು ಆತ್ಮಹತ್ಯೆಯ ಗುಣಲಕ್ಷಣಗಳಾಗಿರು ತ್ತವೆ. ಆತ್ಮಹತ್ಯೆಗೆ ಪ್ರಮುಖವಾದ ಅಥವಾ ಬಲವಾದ ಕಾರಣ ಎಂದರೆ ಮನಸ್ಸಿನ ಸ್ಥಿತಿ ಅಥವಾ ಇತರೆ ಮಾನಸಿಕ ಖಾಯಿಲೆ ಗಳು. ಮಿತಿಮೀರಿದ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದಾಗ ಕೆಲವು ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗಲು ಬಯಸುತ್ತಾರೆ. ಉದಾ : ಬಂಧು-ಬಳಗ ಅಥವಾ ಆಪ್ತರ ಸಾವು, ಉದ್ರೇಕ, ಅಪರಾಧಿ ಮನೋ ಭಾವ, ಗಂಭೀರ ದೈಹಿಕ ಖಾಯಿಲೆಗಳು ಕೆಲಸ ಮಾಡುವ ಸ್ಥಳದಲ್ಲಿ ಅಡೆ ತಡೆಗಳು, ಬಡತನ, ಹಣಕಾಸಿನ ತೊಂದರೆ, ಕುಟುಂಬ ಕಲಹಗಳು ಮುಂತಾದವು ಗಳು. ಮದ್ಯಪಾನ ಅಥವಾ ಬೇರೆ ದುಶ್ಚಟ ಗಳಿಂದಲೂ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಮದ್ಯಪಾನದಿಂದ ನೇರವಾಗಿ ಅಥವಾ ಅದರಿಂದಾಗುವ ಆರ್ಥಿಕ ಮತ್ತು ಸಾಮಾಜಿಕ ದುಷ್ಪರಿ ಣಾಮ ಗಳಿಂದಲೂ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಒದಗಬಹುದು. ಎಷ್ಟೋ ಜನ ರೈತರು ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗು ತ್ತಾರೆ. ಸಮಾಜದಲ್ಲಿ ಒಬ್ಬ ಪ್ರಮುಖ ವ್ಯಕ್ತಿ ಸಾವಿಗೀಡಾದಾಗ, ಅವರ ವ್ಯಕ್ತಿತ್ವವನ್ನು ಇಷ್ಟಪಟ್ಟ ಜನರು ತಾವೇ ಆತ್ಮಹತ್ಯೆಗೆ ಶರಣಾದ ಉದಾಹರಣೆ ಗಳು ಇವೆ. ತಾರುಣ್ಯಾವಸ್ಥೆಯಲ್ಲಿರುವವರಲ್ಲಿ ಆತ್ಮಹತ್ಯೆ ಹೆಚ್ಚುತ್ತಿರುವುದು ಒಂದು ಗಮನಾರ್ಹ ವಿಷಯವಾಗಿದೆ. ತಾರುಣ್ಯಾವಸ್ಥೆಯಲ್ಲಿ ಆತ್ಮಹತ್ಯೆಯ ಅಪಾಯದ ಅಂಶಗಳೆಂದರೆ ಮನೆ ಯಲ್ಲಿ/ಸಂಬಂಧಿಕರಲ್ಲಿ ಆತ್ಮಹತ್ಯೆಯ ಪ್ರಕರಣಗಳಿರುವುದು, ಯುವಕ/ ಯುವತಿಯರ ಪ್ರೀತಿಯ ವೈಫಲ್ಯ ಅಥವಾ ಕಿತ್ತಾಟ / ಜಗಳ, ವಿದ್ಯಾಭ್ಯಾಸ ದಲ್ಲಿ ತೊಂದರೆ ಅಥವಾ ವಿಫಲತೆ, ಮನೆಯಲ್ಲಿ ತುಪಾಕಿ/ಬಂದೂಕು ಇರು ವುದು, ಕುಟುಂಬದಲ್ಲಿನ ಹೊಂದಾ ಣಿಕಾ ಸಮಸ್ಯೆ ಮುಂತಾದವುಗಳು. ಆತ್ಮಹತ್ಯೆಯ ವಿಧಾನಗಳು ಯಾವುವೆಂದರೆ : ಹಿಂಸಾತ್ಮಕವಾದ (ಅಂದರೆ ಗುಂಡು ಹಾರಿಸಿಕೊಳ್ಳುವುದು, ನೇಣು ಹಾಕಿ ಕೊಳ್ಳುವುದು) ಮತ್ತು ಅಹಿಂಸಾ ತ್ಮಕವಾದ (ವಿಷ ಸೇವಿಸುವುದು, ಮಿತಿ ಮೀರಿದ ಔಷಧಿ ಸೇವನೆ). ಅಹಿಂಸಾತ್ಮಕ ವಿಧಾನಕ್ಕೆ ಹೋಲಿಸಿ ದರೆ ಹಿಂಸಾತ್ಮಕ ವಿಧಾನದಲ್ಲಿ ಸಂಭವಿಸಬಹುದಾದ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಪುರುಷರಲ್ಲಿ ಈ ವಿಧಾನ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಪುರುಷರಲ್ಲಿ ಆತ್ಮಹತ್ಯೆ ಪ್ರಯತ್ನದಲ್ಲಿ ಸಾವು ಸಂಭವಿಸುವುದು ಹೆಚ್ಚಾಗಿ ಕಂಡು ಬರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಆತ್ಮಹತ್ಯೆಯ ಅಪಾಯ ಇದೆ ಎಂದು ಶಂಕಿಸುವುದು ಹೇಗೆ ? ಮೊದಲನೆಯದಾಗಿ ನಡವಳಿಕೆ ಯಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಊಟ, ನಿದ್ದೆ, ಮುಂತಾದ ವ್ಯಕ್ತಿಯ ದಿನಚರಿಯಲ್ಲಿ ವ್ಯತ್ಯಾಸ, ಮಾನಸಿಕ ಅಸ್ವಸ್ಥತೆ, ಹಠಾತ್ತಾದ ಪ್ರವೃತ್ತಿ ಧೈರ್ಯಹೀನತೆ, ತಪ್ಪಿತಸ್ಥ ಮನೋ ಭಾವ ಇತ್ಯಾದಿಗಳು ಕಾಣಿಸಿ ಕೊಳ್ಳುತ್ತವೆ. ಸಂದಿಗಟಛಿ ಹಾಗೂ ಅಪಾಯಕಾರಿ ಚಿಹ್ನೆಗಳು ಆತ್ಮಹತ್ಯೆ ವಿಚಾರಗಳನ್ನು ವ್ಯಕ್ತ ಪಡಿಸುವುದು ಹಾಗೂ ಯತ್ನಿಸುವುದು, ಅವರ ಅಮೂಲ್ಯ ವಸ್ತುಗಳನ್ನು ಇತರರಿಗೆ ಹಂಚಿಬಿಡುವುದು, ಆತ್ಮಹತ್ಯೆಗೆ ಸಂಬಂಧಿಸಿದಂತೆ ಹತ್ತಿರ ದವರಿಗೆ ಪತ್ರ ಬರೆಯವುದು, ಶೀಘ್ರದಲ್ಲಿ ನಡತೆಯಲ್ಲಿ ಬದಲಾವಣೆ ಕಂಡು ಬರುವುದು (ಉದಾಸೀನ, ಮಾನಸಿಕ ಅಸ್ವಸ್ಥತೆ), ಹಠಾತ್ತನೆ ಮನೆ ಕೆಲಸ/ಶಾಲಾ ಕಾಲೇಜುಗಳು / ಇತರೆ ಚಟುವಟಿಕೆಯಲ್ಲಿ ನಿರುತ್ಸಾಹ ಕಾಣಿಸುವುದು, ಸ್ನೇಹಿತರಲ್ಲಿ ಆಸಕ್ತಿ ಕಡಿಮೆಯಾಗುವುದು. ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಯು ಆತ್ಮಹತ್ಯೆಯ ಪ್ರಯತ್ನ ಪಟ್ಟಾಗ ಅಥವಾ ವ್ಯಕ್ತಪಡಿಸಿದಾಗ ಅದನ್ನು ಉದಾಸೀನ ಮಾಡಬಾರದು, ಅದನ್ನು ಗಂಭೀರವಾಗಿ ಪರಿಗಣಿಸ ಬೇಕು. ಅದು ಕೇವಲ ಗಮನ ಸೆಳೆಯುವುದಕ್ಕೆ ಎಂದು ತಿಳಿಯಬಾರದು. ಆತ್ಮಹತ್ಯೆ ಪ್ರಯತ್ನ ಪಟ್ಟವರಲ್ಲಿ ಮೂರನೆಯ ಒಂದು ಭಾಗ ವ್ಯಕ್ತಿಗಳು ಒಂದು ವರ್ಷದೊಳಗೆ ಪುನಃ ಪ್ರಯತ್ನಿಸುತ್ತಾರೆ. ಇಂಥವರಲ್ಲಿ ಶೇ. ೧೦ ರಷ್ಟು ವ್ಯಕ್ತಿಗಳು ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಮನೋವೈದ್ಯರನ್ನು ಯಾವಾಗ ಸಂಪರ್ಕಿಸಬೇಕು ? ಮೇಲ್ಕಂಡ ಚಿಹ್ನೆಗಳು ಯಾವುದೇ ವ್ಯಕ್ತಿಯಲ್ಲಿ ಕಂಡು ಬಂದಲ್ಲಿ, ಮನೋ ವೈದ್ಯರ ಸಲಹೆಯನ್ನು ಪಡೆಯುವುದು ಉಚಿತ. ಬಹುತೇಕ ವ್ಯಕ್ತಿಗಳು ಆತ್ಮಹತ್ಯೆಯ ಪ್ರಯತ್ನವನ್ನು ಮಾಡುವ ಮೊದಲು ತಮ್ಮ ಮಾತು ಹಾಗೂ ವರ್ತನೆಗಳಲ್ಲಿ ವ್ಯಕ್ತಪಡಿಸುತ್ತಾರೆ. ಹಲವು ಬಾರಿ ವ್ಯಕ್ತಿಯ ಸಮಸ್ಯೆಯನ್ನು ಆಲಿಸುವ ಸಹಾನುಭೂತಿಯುಳ್ಳ ಕೇಳುಗ ರಿಂದಲೂ ಸಹ ಆತ್ಮಹತ್ಯೆ ಪ್ರಯತ್ನವನ್ನು ತಡೆಗಟ್ಟಬಹುದು. ಆತ್ಮಹತ್ಯೆಗೆ ಹಲವಾರು ಕಾರಣ ಗಳಿರುವಂತೆಯೇ, ಪರಿಣಾಮಕಾರಿ ಯಾದ ಆತ್ಮಹತ್ಯೆ ತಡೆಗಟ್ಟುವ ಕ್ರಮಗಳು ವಿವಿಧ ಮಾರ್ಗಗಳ ಮೇಲೆ ಅವ ಲಂಬಿಸಿದೆ. ಈ ದಿಟ್ಟಿನಲ್ಲಿ ವೈದ್ಯಕೀಯ/ ಮನೋವೈದ್ಯಕೀಯ ವಿಭಾಗದ ವಿವಿಧ ಸ್ಥರಗಳಲ್ಲಿರುವ ಸಿಬ್ಬಂದಿಗಳು, ಸ್ವಯಂ ಸೇವಕರು, ಸಂಶೋಧಕರು, ಕುಟುಂಬ ದವರು, ಸರ್ಕಾರದ ನೆರವು, ಧಾರ್ಮಿಕ ಮುಖಂಡರು, ರಾಜಕೀಯ ಧುರೀ ಣರು ಮತ್ತು ಸಮೂಹ ಮಾಧ್ಯಮಗಳು ಸಹಾಯ ವಾಗುತ್ತದೆ. ಮಾಧ್ಯಮಗಳು ಆತ್ಮಹತ್ಯೆ ಪ್ರಕರಣಗಳನ್ನು ಅತಿಶಯ ವಾಗಿ ತೋರಿಸುವ ಬದಲು ಅದನ್ನು ತಡೆ ಗಟ್ಟುವ ಮಾರ್ಗಗಳನ್ನು ಸೂಚಿಸಿದರೆ, ಜನರಲ್ಲಿ ಜಾಗೃತಿ ಮೂಡಲು ಉಪ ಯುಕ್ತವಾಗ ಬಹುದು. ಹಾಗೆಯೇ ಆಧ್ಯಾತ್ಮಿಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳು ವುದರಿಂದ ಸಹಕಾರಿಯಾಗ ಬಹುದು. ಇಂದು ೧೦ ಸೆಪ್ಟೆಂಬರ್‌ ಘಿಫಘಿಫವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಘಿಫಘಿಫ ಎಂದು ಆಚರಿಸಲಾಗುತ್ತಿದೆ. ೨೦೦೯ರ ಈ ದಿನಾಚರಣೆಯ ವಿಷಯ ಘಿಫಘಿಫವಿವಿಧ ಸಂಸ್ಕೃತಿಯಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವುದು ಘಿಫಘಿಫ. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶ.

No Comments to “ಆತ್ಮಹತ್ಯೆ : ತಡೆಗಟ್ಟಲು ಸಾಧ್ಯವೇ ?”

add a comment.

Leave a Reply

You must be logged in to post a comment.