ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ :ಹಾಸನಕ್ಕೆ ಹಾಕಿ, ಖೋ-ಖೋ ಪ್ರಶಸಿ

ಹಾಸನ :ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹಾಸನದ ತಂಡಗಳು ಹಾಕಿ ಮತ್ತು ಖೋ-ಖೋ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆ ಗೊಂಡಿವೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹಾಸನ ಹಾಕಿ ಕ್ಲಬ್ ಹಾಗೂ ಮೈಸೂರು ತಂಡಗಳ ನಡುವೆ ಸೆಣಸಾಟ ನಡೆಯಿತು. ಅತ್ಯಂತ ರೋಮಾಂಚನಕಾರಿ ಯಾಗಿದ್ದ ಈ ಪಂದ್ಯದ ಆರಂಭದಲ್ಲಿ ಮೈಸೂರು ತಂಡ ತೀವ್ರ ಪ್ರತಿರೋಧ ಒಡ್ಡಿತು. ನಂತರ ಹಾಸನ ಹಾಕಿ ಕ್ಲಬ್ ತಂಡದ ಆಟಗಾರರು ಸಮಯೋಚಿತ ಆಟದ ನೆರವಿನಿಂದ ಪಂದ್ಯ ಗೆದ್ದು ಕೊಂಡರು. ಮೈಸೂರು ತಂಡವನ್ನು ೩-೧ರಲ್ಲಿ ಮಣಿಸಿ, ಪ್ರಥಮ ಸ್ಥಾನವನ್ನು ಗಳಿಸಿ ಕೊಂಡರು. ಮತ್ತೊಂದು ಪಂದ್ಯದಲ್ಲಿ ಪುರುಷರ ಖೋ-ಖೋ ಕೂಡ ರೋಮಾಂಚನ ಕಾರಿಯಾಗಿತ್ತು. ಫೈನಲ್ನಲ್ಲಿ ಹಾಸನ ಹಾಗೂ ದಕ್ಷಿಣ ಕನ್ನಡದ ನಡುವೆ ಪಂದ್ಯ ನಡೆಯಿತು. ಹಾಸನ ತಂಡದವರು ಪ್ರಥಮ ಸ್ಥಾನ ಗಳಿಸಿದರು. ಉಳಿದಂತೆ ಮಹಿಳೆಯರ ಹಾಕಿ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ, ಹ್ಯಾಂಡ್ಬಾಲ್ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಹಾಸನ ತಂಡದವರು ಪಡೆದುಕೊಂಡರು. ಪ್ರೇಕ್ಷಕರು ಹಾಸನದ ವಾಲಿಬಾಲ್ ತಂಡಕ್ಕೆ ಹುರಿದುಂಬಿಸಿದರು.ಈಪಂದ್ಯ ದಲ್ಲಿ ಹಾಸನದ ಆಟಗಾರರು ಉತ್ತಮ ವಾಗಿ ಆಡಿದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪುರು ಷರ ಷಟಲ್ ಬ್ಯಾಡ್ಮಿಂಟನ್ ನಲ್ಲಿಯೂ ಹಾಸನ ತಂಡ ಎರಡನೇ ಸ್ಥಾನ ಪಡೆದು ಕೊಂಡಿತು. ಉಳಿದಂತೆ ವಿವರ ಹೀಗಿದೆ. ಹಾಕಿ (ಪುರುಷ ವಿಭಾಗ) : ಹಾಸನ- ೧ನೇ ಸ್ಥಾನ, ಮೈಸೂರು-೨. ಹಾಕಿ (ಮಹಿಳೆಯರ ವಿಭಾಗ) : ಮೈಸೂರು- ೧ನೇ ಸ್ಥಾನ, ಹಾಸನ-೨ನೇ ಸ್ಥಾನ. ಖೋ-ಖೋ(ಪುರುಷ): ಹಾಸನ- ೧ನೇ ಸ್ಥಾನ, ದಕ್ಷಿಣ ಕನ್ನಡ-೨ನೇ ಸ್ಥಾನ. ಖೋ-ಖೋ (ಮಹಿಳೆ) : ಮಂಡ್ಯ- ೧, ಮೈಸೂರು-೨. ಬ್ಯಾಡ್ಮಿಂಟನ್ (ಪುರುಷರ ವಿಭಾಗ) -ಮಂಡ್ಯ-೧ನೇ ಸ್ಥಾನ, ಹಾಸನ-೨ನೇ ಸ್ಥಾನ. ಬ್ಯಾಡ್ಮಿಂಟನ್ (ಮಹಿಳೆ) : ಉಡುಪಿ- ೧, ಮೈಸೂರು-೨. ಥ್ರೋಬಾಲ್ (ಪುರು ಷರ ವಿಭಾಗ):ಮೈಸೂರು-೧, ಮಂಡ್ಯ- ೨. ಥ್ರೋಬಾಲ್ (ಮಹಿಳೆ)- ಮೈಸೂರು- ೧, ದಕ್ಷಿಣ ಕನ್ನಡ-೨. ಫುಟ್ಬಾಲ್ (ಪುರುಷ)-ಮೈಸೂರು- ೧, ಚಿಕ್ಕಮಗ ಳೂರು-೨.

No Comments to “ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ :ಹಾಸನಕ್ಕೆ ಹಾಕಿ, ಖೋ-ಖೋ ಪ್ರಶಸಿ”

add a comment.

Leave a Reply

You must be logged in to post a comment.