ಭಾರತದ ಮಡಿಲಿಗೆ ಕಾಂಪ್ಯಾಕ್ ಕಪ್

ಕೊಲಂಬೋ :ಮಾಸ್ಟರ್ಬ್ಲಾಸ್ಟರ್ ಸಚಿನ್ ತೆಂಡೂ ಲ್ಕರ್ ಅವರ ಆಕರ್ಷಕ ಶತಕ (೧೩೮) ಹಾಗೂ ನಾಯಕ ಧೋನಿ (೫೬), ಉಪ ನಾಯಕ ಯುವರಾಜ್ ಸಿಂಗ್ (ಅಜೇಯ ೫೬) ಅರ್ಧ ಶತಕ ಮತ್ತು ಟರ್ಬನೇಟರ್ ಹರ್ಭಜನ್ ಸಿಂಗ್ ಅವರ ಮಾರಕ ದಾಳಿ (೪/೫೩) ನೆರವಿನಿಂದ ಭಾರತ, ಶ್ರೀಲಂಕಾ ವಿರುದ್ಧ ೪೬ ರನ್ಗಳಿಂದ ಗೆಲುವು ಸಾಧಿಸಿ, ಕಾಂಪ್ಯಾಕ್ ತ್ರಿಕೋಣ ಏಕ ದಿನ ಸರಣಿಯನ್ನು ಗೆದ್ದುಕೊಂಡಿದೆ. ಬಹು ದಿನಗಳ ನಂತರ ಇನ್ನಿಂಗ್ಸ್ ಆರಂಭಿಸಿದ ರಾಹುಲ್ ದ್ರಾವಿಡ್ (೩೯) ಹಾಗೂ ಸಚಿನ್ ಅವರ ಭದ್ರ ಬುನಾದಿ ಹಾಗೂ ಯುವರಾಜ್, ಧೋನಿಯವರ ವೇಗದ ಅರ್ಧ ಶತಕದ ನೆರವಿನಿಂದ ಸವಾಲಿನ ೩೧೯ ರನ್ ಗಳಿಸಿತು. ಶನಿವಾರ ನಡೆದ ಫೈನಲ್ನ ಮೊದಲ ಪಂದ್ಯದಲ್ಲಿ ೧೩೯ ರನ್ ಗಳಿಂದ ಸೋತು, ಜಂಟಿಯಾಗಿ ಏಕ ದಿನ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ವನ್ನು ಒಂದೇ ದಿನದಲ್ಲಿ ಕಳೆದುಕೊಂಡಿತ್ತು. ಈಗೆಲುವಿನಿಂದ ಭಾರತ ಮತ್ತೆ ನಂ.೧ ಸ್ಥಾನಕ್ಕೆ ಏರಿದೆ.

No Comments to “ಭಾರತದ ಮಡಿಲಿಗೆ ಕಾಂಪ್ಯಾಕ್ ಕಪ್”

add a comment.

Leave a Reply

You must be logged in to post a comment.