ಮಿತವ್ಯಯಅಣಕ:ತರೂರ್ಗೆಗಂಡಾಂತರ
ನವದೆಹಲಿ : ಘಿ‘ನಮ್ಮೆಲ್ಲ ಪೂಜ ನೀಯ ದನಗಳೊಂದಿಗೆ ಏಕತೆ ಪ್ರದ ರ್ಶಿಸಲು ನಾನೂ ಕೂಡ ದನಗಳ ದರ್ಜೆ ಯಲ್ಲೇ ಪ್ರಯಾಣಿಸುವೆಘಿ’ ಎಂದು ವಿದೇ ಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಇಂತಹ ಹೇಳಿಕೆ ಸ್ವೀಕಾರಕ್ಕೆ ಅರ್ಹವಲ್ಲ ಎಂದು ಕಾಂಗ್ರೆಸ್ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೇ? ಎಂಬ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ಹೇಳಿದೆ. ಸಚಿವರ ಈ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ. ಈ ಹೇಳಿಕೆ ರಾಜಕೀಯ ಅಥವಾ ಇನ್ಯಾವುದೇ ಭಾವನೆಗಳನ್ನು ಗೌರವಿಸುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಟ್ವೆಟರ್ನ ತರೂರ್ ಅವರ ಪುಟ ದಲ್ಲಿ ಓದುಗರೊಬ್ಬರು ಘಿ‘ಸಚಿವರೇ ನೀವು ಮುಂದಿನ ಬಾರಿ ಕೇರಳಕ್ಕೆ ಪ್ರಯಾಣಿಸು ವಾಗ, ದನದ ದರ್ಜೆಯಲ್ಲೇ ಪ್ರಯಾ ಣಿಸುವಿರಾ?ಘಿ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಸಚಿವರು, ಮೇಲಿ ನಂತೆ ಹೇಳಿಕೆ ನೀಡಿದ್ದರು. ವಿಶ್ವಸಂಸ್ಥೆಯ ಮಾಜಿ ರಾಜತಾಂತ್ರಿಕ ರಾಗಿರುವ ತರೂರ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆಗಳು ನಡೆಯು ತ್ತಿವೆ. ತರೂರ್ ಹಾಗೂ ಎಸ್.ಎಂ.ಕೃಷ್ಣ ಪಂಚತಾರಾ ಹೋಟೆಲ್ನಲ್ಲಿ ದಿನ ವೊಂದಕ್ಕೆ ಲಕ್ಷ ರೂ.ಗೂ ಹೆಚ್ಚು ಹಣ ವನ್ನು ತಂಗಲು ವ್ಯಯಿಸುತ್ತಿದ್ದರು. ಈ ವೆಚ್ಚವನ್ನು ತಡೆಯಲು ಪಂಚತಾರಾ ಹೋಟೆಲ್ಗಳನ್ನು ತ್ಯಜಿಸುವಂತೆ ಪಕ್ಷದ ಹೈಕಮಾಂಡ್ ಆದೇಶಿಸಿತ್ತು. ಮಾನ್ ಸಿಂಗ್ ರಸ್ತೆಯ ಹೋಟೆಲ್ ತಾಜ್ ಮಹಲ್ನಲ್ಲಿ ಇರುತ್ತಿದ್ದ ಅವರು, ಇದೀಗ ಭಾರತೀಯ ನೌಕಾಪಡೆಯ ಅತಿಥಿ ಗೃಹಕ್ಕೆ ಸ್ಥಳಾಂತರಗೊಂಡಿದ್ದಾರೆ.